ನಟಿ ರಾಖಿ ಸಾವಂತ್ (Rakhi Sawant) ಅವರು ಮೈಸೂರಿನ ಹುಡುಗ ಆದಿಲ್ ಖಾನ್ ದುರಾನಿಯನ್ನು (Adil Khan Durrani) ಮದುವೆಯಾಗಿದ್ದಾರೆ. ಇವರಿಬ್ಬರ ಸೀಕ್ರೆಟ್ ಮದುವೆ ಕೊನೆಗೂ ರಿವೀಲ್ ಆಗಿದೆ. ಆದಿಲ್ ಖಾನ್ ಮದುವೆಯನ್ನು (Marriage) ನಿರಾಕರಿಸಿದ ನಂತರ ನಟಿ ಇಷ್ಟೊಂದು ಸರ್ಕಸ್ ಮಾಡಿ ಫೋಟೊ, ವಿಡಿಯೋಗಳನ್ನು (Videos) ಶೇರ್ ಮಾಡಿ ತನ್ನ ಹಾಗೂ ಆದಿಲ್ ಮದುವೆಯಾಗಿದೆ ಎಂದು ಮಾಧ್ಯಮಗಳ ಮುಂದೆ ಸತ್ಯ ಬಿಚ್ಚಿಟ್ಟಿದ್ದಾರೆ. ಈ ಮೂಲಕ ರಾಖಿ ಮದುವೆ ವಿಚಾರ ಕಳೆದೊಂದು ವಾರದಿಂದ ಚರ್ಚೆಯ ವಿಷಯವಾಗಿ ಬದಲಾಗಿದೆ.
ರಾಖಿ ಮದುವೆ
ರಾಖಿ ಸಾವಂತ್ ತನ್ನ ಗೆಳೆಯ ಆದಿಲ್ ಖಾನ್ ದುರಾನಿ ಜೊತೆ ನಡೆದ ಕೋರ್ಟ್ ಮ್ಯಾರೇಜ್ ಫೋಟೋಸ್ ಶೇರ್ ಮಾಡಿದ್ದಾರೆ. ವಿಡಿಯೋವನ್ನು ಕೂಡಾ ಹಂಚಿಕೊಂಡಿದ್ದು ಇದರಲ್ಲಿ ಇಬ್ಬರೂ ಪರಸ್ಪರ ಹಾರ ಬದಲಾಯಿಸುವುದನ್ನು ಕಾಣಬಹುದು.
ಫೋಟೊಗಳ ಸಾಕ್ಷಿ ಕೊಟ್ಟಿದ್ದ ನಟಿ
ವಿಡಿಯೋ ಪೋಸ್ಟ್ ಮಾಡಿದ ನಂತರ ರಾಖಿ ಸಾವಂತ್ ತಮ್ಮ ಮದುವೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ರಾಖಿ ಹಾಗೂ ಆದಿಲ್ ಕೋರ್ಟ್ ಮದುವೆಯಾಗುತ್ತಿರುವುದನ್ನು ಕಾಣಬಹುದು. ಇಬ್ಬರೂ ಡಾಕ್ಯುಮೆಂಟ್ಗಳಿಗೆ ಸಹಿ ಮಾಡಿದ್ದು ಇಬ್ಬರ ಫೋಟೋಗಳನ್ನು ಕೂಡಾ ಒಟ್ಟಿಗೆ ಲಗತ್ತಿಸಲಾಗಿದೆ.
ಅಲ್ಲಾ ಬಗ್ಗೆ ಕ್ಯಾಪ್ಶನ್
ನಟಿ ತಮ್ಮ ವಿಡಿಯೋಗೆ ಕ್ಯಾಪ್ಶನ್ ಕೊಟ್ಟು ಅಲ್ಲಾನನ್ನು ಹೊಗಳಿದ್ದಾರೆ. ಅಲ್ಲಾ ನಿಮ್ಮ ಕಷ್ಟಗಳನ್ನು ನಿವಾರಿಸಲಿ ಎಂದು ನಟಿ ವಿಡಿಯೋ ಶೇರ್ ಮಾಡುವಾಗ ಬರೆದಿದ್ದಾರೆ.
ಮದುವೆಯಾಗಿಲ್ಲ ಎಂದ ಆದಿಲ್
ಆರಂಭದಲ್ಲಿ ಮದುವೆ ಸುದ್ದಿ ನಿರಾಕರಿಸಿದ್ದ ಆದಿಲ್ ಖಾನ್ ನಂತರ ಈ ಮದುವೆಯನ್ನು ಒಪ್ಪಿಕೊಂಡಿದ್ದಾರೆ. ತಾನೇ ರಾಖಿಯ ಗಂಡ, ಕೆಲವೊಂದು ಸಮಸ್ಯೆಗಳಿಂದಾಗಿ ಸ್ವಲ್ಪ ದಿನ ಈ ಮದುವೆ ವಿಚಾರ ಮುಚ್ಚಿಡಬೇಕಾಯಿತು ಎನ್ನುವುದನ್ನು ತಮ್ಮ ಇನ್ಸ್ಟಗ್ರಾಮ್ ಪೋಸ್ಟ್ನಲ್ಲಿ ರಿವೀಲ್ ಮಾಡಿದ್ದಾರೆ.
View this post on Instagram
ರಾಖಿ ಸಾವಂತ್ ಇತ್ತೀಚೆಗೆ ಶೇರ್ ಮಾಡಿದ ವಿಡಿಯೋದಲ್ಲಿ ನಟಿ ಕೇಸರಿ ಬಣ್ಣದ ಹಿಜಾಬ್ ಧರಿಸಿರುವುದನ್ನು ಕಾಣಬಹುದು. ನಟಿ ಫಾತಿಮಾ ಎಂದು ಹೆಸರು ಬದಲಾಯಿಸಿದ ನಂತರ ಈಗ ಧರ್ಮ ಕೂಡಾ ಬದಲಾಯಿಸಿದ್ದಾರಾ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಹಿಜಾಬ್ ಧರಿಸಿದ್ದ ರಾಖಿ ಸಾವಂತ್ ಹಣೆಯಲ್ಲಿ ಕುಂಕುಮ ಇರಲಿಲ್ಲ.
ಇದನ್ನೂ ಓದಿ: Rakhi Sawant Marriage: ಕೊನೆಗೂ ಮದುವೆ ವಿಷಯ ಅನೌನ್ಸ್ ಮಾಡಿದ ಆದಿಲ್! ರಾಖಿ ಕಮೆಂಟ್ ಏನ್ ಗೊತ್ತಾ?
ನಟಿ ರಾಖಿ ಸಾವಂತ್ ಮೈಸೂರಿನ ಯುವಕ ಆದಿಲ್ ಖಾನ್ನನ್ನು ಮದುವೆಯಾಗಿದ್ದು ಎಲ್ಲರಿಗೂ ಗೊತ್ತು. ಇವರು ಕೋರ್ಟ್ ಮ್ಯಾರೇಜ್ ಆಗಿದ್ದು ಇವರ ಮದುವೆ ಫೋಟೋಗಳು ವೈರಲ್ ಆಗಿದೆ. ಆದರೆ ಈಗಿರೋ ಅಪ್ಡೇಟ್ ಏನಪ್ಪಾ ಅಂದ್ರೆ ನಟಿ ರಾಖಿ ಸಾವಂತ್ ಅವರು ಆದಿಲ್ನನ್ನು ಮದುವೆಯಾಗಿ ತಮ್ಮ ಹೆಸರನ್ನು ಬದಲಾಯಿಸಿದ್ದಾರಂತೆ. ರಾಖಿ ಸಾವಂತ್ ಅವರು ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ಅಪ್ಡೇಟ್ ಹೊರಬಿದ್ದಿದ್ದು ನಟಿ ತಮ್ಮ ಧರ್ಮ ಕೂಡಾ ಬದಲಾಯಿಸಿದ್ದಾರಾ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.
ರಾಖಿ ಹಾಗೂ ಆದಿಲ್ ಡಾಕ್ಯುಮೆಂಟ್ಗಳಿಗೆ ಸಹಿ ಮಾಡುವ ಫೋಟೋ ಓಡಾಡುತ್ತಿದ್ದು ಇವರಿಬ್ಬರೂ ಸ್ವಲ್ಪ ಗ್ರ್ಯಾಂಡ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ರಾಖಿ ಅವರು ರೆಡ್ ಕಲರ್ ಡ್ರೆಸ್ನಲ್ಲಿದ್ದರು. ಮ್ಯಾರೇಜ್ ಸರ್ಟಿಫಿಕೇಟ್ನಲ್ಲಿ ಆದಿಲ್ ಹಾಗೂ ರಾಖಿ ಸಾವಂತ್ ಅವರ ಫೋಟೋವನ್ನು ಕೂಡಾ ಲಗತ್ತಿಸಲಾಗಿದೆ. ಸರ್ಟಿಫಿಕೇಟ್ನಲ್ಲಿ ಆದಿಲ್ ಖಾನ್ ದುರಾನಿ ಎಂದಿದ್ದು, ರಾಖಿ ಹೆಸರು ರಾಖಿ ಅನಂತ್ ಸಾವಂತ್ ಎಂದು ಇದೆ.
ಇದೀಗ ಬಾಲಿವುಡ್ನ ನಟಿಯೊಬ್ಬರು ಹೆಸರನ್ನು ಫಾತಿಮಾ ಎಂದು ಬದಲಾಯಿಸಿದ್ದು ಚರ್ಚೆಯಾಗುತ್ತಿದೆ. ನಟಿ ಸದ್ಯ ತಾಯಿ ಜೊತೆಗಿದ್ದು ಅವರ ತಾಯಿ ಕ್ಯಾನ್ಸರ್ ಹಾಗೂ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದಾರೆ. ಅವಕಾಶಗಳ ಕೊರತೆ ಎದುರಿಸುತ್ತಿರುವ ರಾಖಿ ಸಾವಂತ್ ತಮಗೆ ಸಿಗುವ ಸಣ್ಣ ಕೆಲಸದ ಆಫರ್ ಕೂಡಾ ಬಿಡುತ್ತಿಲ್ಲ. ನಟಿ ತಾಯಿಯ ಚಿಕಿತ್ಸೆ ವೆಚ್ಚಕ್ಕಾಗಿಯೂ ಕಷ್ಟಪಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ