ಬಾಲಿವುಡ್ ಕಾಂಟ್ರವರ್ಸಿ ನಟಿ ಎಂದು ಕರೆಯಲಾಗುವ ರಾಖಿ ಸಾವಂತ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ರಾಖಿ ಸಾವಂತ್, ಸುಶಾಂತ್ ಸಿಂಗ್ ನನ್ನ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರುತ್ತಾನೆ ಎಂದಿದ್ದಾರೆ.
ರಾಖಿ ಸಾವಂತ್ ಕನಸಿನಲ್ಲಿ ಸುಶಾಂತ್ ಸಿಂಗ್ ರಜಪೂತ್ ಬಂದಿದ್ದರಂತೆ. ಈ ವಿಚಾರವನ್ನು ವಿಡಿಯೋದಲ್ಲಿ ಹೇಳುವ ಮೂಲಕ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಸ್ನೇಹಿತರೆ ನಾನು ನಿಮಗೊಂದು ಗುಡ್ನ್ಯೂಸ್ ಹೇಳುತ್ತೇನೆ, ನಾನು ನಿನ್ನೆ ರಾತ್ರಿ ಮಲಗಿದ್ದಾಗ ಕನಸು ಬಿತ್ತು. ತಕ್ಷಣ ಎಚ್ಚರ ಆಯ್ತು. ನನ್ನ ಕನಸಿನಲ್ಲಿ ಸುಶಾಂತ್ ಸಿಂಗ್ ಬಂದಿದ್ದರು. ನೀವು ನಾನು ಹೇಳುತ್ತಿರುವ ಈ ಮಾತನ್ನು ನಂಬೋದಿಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ.
![ರಾಖಿ ಸಾವಂತ್]()
ರಾಖಿ ಸಾವಂತ್
ನಾನು ಈ ಕನಸಿನಿಂದ ಬೆವತುಬಿಟ್ಟೆ. ಸುಶಾಂತ್ ಸಿಂಗ್ ನೀನು ಮದುವೆಯಾದರೆ ನಿನ್ನ ಹೊಟ್ಟೆಯಲ್ಲಿ ನಾನು ಮತ್ತೆ ಹುಟ್ಟಿ ಬರುತ್ತೇನೆ. ನನ್ನ ಅಭಿಮಾನಿಗಳಿಗೆ ಈ ವಿಷಯ ತಿಳಿಸು. ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗು ಸುಶಾಂತ್ ಆಗಿರುತ್ತಾನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ
ನನಗೆ ಸುಶಾಂತ್ ಸಿಂಗ್ ಒಳ್ಳೆಯ ಸ್ನೇಹಿತ, ಸಹೋದರ ಆಗಿದ್ದಾನೆ. ಈ ಚಿತ್ರರಂಗ ನನಗೆ ತುಂಬ ಕಷ್ಟ ಕೊಟ್ಟಿದೆ. ಬಾಲಿವುಡ್ ನನಗೆ ಎಷ್ಟು ಕೊಟ್ಟಿದೆಯೋ ಅಷ್ಟೇ ಕಿತ್ತುಕೊಂಡಿದೆ. ಪಾರ್ಟಿಗಳಿಗೆ ಬಾಯ್ಕಟ್ ಹೇಳಿತ್ತು. ಕಂಗನಾ ರಣಾವತ್, ರಾಖಿ ಸಾವಂತ್ ನನಗೆ ಪ್ರೋತ್ಸಾಹ ನೀಡಿದ್ದಾರೆ. ಇವರಿಗೆ ನನ್ನ ಧನ್ಯವಾದಗಳು ಎಂದು ನನ್ನ ಬಳಿ ಹೇಳಿದ್ದಾರೆ' ಎಂದು ರಾಖಿ ಸಾವಂತ್ ಹೇಳಿದ್ದಾರೆ.
ನನಗೆ ಯಾವಾಗಲೂ ತುಂಬ ಮೋಸ ಆಗುತ್ತಿತ್ತು. ಕರಣ್ ಜೋಹರ್ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇತ್ತು, ಸಲ್ಮಾನ್ ಖಾನ್ ಸಿನಿಮಾದಲ್ಲಿ ಅಭಿನಯಿಸುವ ಕನಸಿತ್ತು. ನನ್ನ ಮೇಲೆ ಸಿಕ್ಕಾಪಟ್ಟೆ ಆರೋಪ ಮಾಡಿದ್ದಾರೆ. ನನ್ನ ಮಾನಸಿಕ ಸಮತೋಲನ ಸರಿ ಇಲ್ಲ ಎಂದು ಆರೋಪ ಮಾಡಿದ್ದಾರೆ. ನನ್ನ ಮೇಲೆ ಆರೋಪ ಮಾಡಿದವರನ್ನು ನಾನು ನೋಡಿಕೊಳ್ಳುತ್ತೇನೆ. ನನ್ನ ದೇಹ ಇಲ್ಲ, ಆದರೆ ಆತ್ಮವಿದೆ. ಈ ಮೂಲಕ ನಾನು ಸೇಡು ತೀರಿಸಿಕೊಳ್ಳುತ್ತೇನೆ. ನಾನು ನಟಿಸಬೇಕಾದ ಹಲವು ಸಿನಿಮಾಗಳಿವೆ. ಅವುಗಳಲ್ಲಿ ರಾಖಿ ಸಾವಂತ್ ಐಟಂ ಡಾನ್ಸ್, ಸನ್ನಿ ಲಿಯೋನ್ ಡಾನ್ಸ್ ಕೂಡ ಹಾಕಿಕೊಳ್ಳಿ ಎಂದು ಸುಶಾಂತ್ ಕನಸಿನಲ್ಲಿ ಹೇಳಿದ್ದಾರೆ' ಎಂದು ರಾಖಿ ಹೇಳಿದ್ದಾರೆ.
ರಾಖಿ ಸಾವಂತ್ ಮಾತು ಕೇಳಿ ಅನೇಕರು ಸಿಟ್ಟಾಗಿದ್ದಾರೆ. ಕೆಲವರು ಈ ರೀತಿ ಹೇಳಿದ್ದಕ್ಕಾಗಿ ಬೈಗುಳದ ಸುರಿಮಳೆ ಸುರಿಸಿದ್ದಾರೆ. ಇನ್ನು ಕೆಲವು ಟ್ರೋಲ್ ಪೇಜ್ ರಾಖಿ ಸಾವಂತ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ