ಬೆತ್ತಲಾಗಿ ವಿವಾಹವಾಗುತ್ತಾರಂತೆ ರಾಖಿ ಸಾವಂತ್; ಇದರ ಹಿಂದಿದೆ ಸಾಮಾಜಿಕ ಕಳಕಳಿ!

ನಾವು ಲೈಂಗಿಕ ತೃಷೆಗಾಗಿ ವಿವಾಹವಾಗುತ್ತಿಲ್ಲ. ಮದುವೆಯಾದಮೇಲೆ ನಾವು ಅಣ್ಣ-ತಂಗಿಯಾಗಿರಲು ನಿರ್ಧರಿಸಿದ್ದೇವೆ ಎಂದು ರಾಖಿ ಹೇಳಿಕೊಂಡಿದ್ದಾರೆ.

Rajesh Duggumane | news18
Updated:December 4, 2018, 4:05 PM IST
ಬೆತ್ತಲಾಗಿ ವಿವಾಹವಾಗುತ್ತಾರಂತೆ ರಾಖಿ ಸಾವಂತ್; ಇದರ ಹಿಂದಿದೆ ಸಾಮಾಜಿಕ ಕಳಕಳಿ!
ರಾಖಿ-ಕಿರಣ್​
  • Advertorial
  • Last Updated: December 4, 2018, 4:05 PM IST
  • Share this:
ಮುಂಬೈ (ಡಿ.04): ನಟಿ ರಾಖಿ ಸಾವಂತ್ ನಿತ್ಯ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಡೆದ ಮೀ ಟೂ ಅಭಿಯಾನದಲ್ಲಿ ನಟಿಯರ ವಿರುದ್ಧವೇ ರಾಖಿ ತಿರುಗಿ ಬಿದ್ದಿದ್ದರು. ತಮ್ಮ ಮೇಲೆ ತನುಶ್ರೀ ಅತ್ಯಾಚಾರ ನಡೆಸಿದ್ದಾರೆ ಎಂಬಿತ್ಯಾದಿ ಆರೋಪ ಮಾಡಿದ್ದರು. ಈಗ ಅಚ್ಚರಿ ಎಂಬಂತೆ ರಾಖಿ ತಮ್ಮ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಇದೇ ತಿಂಗಳು ರಾಖಿ ವಿವಾಹ ನೆರವೇರಲಿದ್ದು, ಅವರು ದೀಪಕ್ ಕಲಾಲ್ ಜೊತೆ ಬೆತ್ತಲಾಗಿ ಹಸೆಮಣೆ ಏರಲಿದ್ದಾರಂತೆ!

ಮದುವೆ ದಿನ ವಿವಿಧ ಸೀರೆಗಳನ್ನು ಉಡಬೇಕು, ಚಿನ್ನದ ಆಭರಣ ಹಾಕಿಕೊಳ್ಳಬೇಕು ಎನ್ನುವ ಆಸೆ ಬಹುತೇಕ ಹೆಣ್ಣುಮಕ್ಕಳಿಗೆ ಇರುತ್ತದೆ. ಆದರೆ ರಾಖಿಗೆ ಮದುವೆ ದಿನ ಬಟ್ಟೆ ಹಾಕಬೇಕು ಎನ್ನುವ ಆಸೆಯೇ ಇಲ್ಲವಂತೆ! ಇತ್ತೀಚೆಗೆ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ನಾನು ಹಾಗೂ ದೀಪಕ್ ಬೆತ್ತಲಾಗಿ ಮದುವೆಯಾಗಬೇಕು ಎಂದುಕೊಂಡಿದ್ದೇವೆ. ಇದರಿಂದ ಸೀರೆಗೆ ಖರ್ಚು ಮಾಡುವ ಹಣ ಉಳಿಯುತ್ತದೆ. ಆ ಹಣವನ್ನು ಬಡವರಿಗೆ ದಾನ ಮಾಡುವ ಯೋಚನೆ ಇಟ್ಟುಕೊಂಡಿದ್ದೇವೆ’ ಎಂದಿದ್ದಾರೆ ರಾಖಿ. ಈ ಮೂಲಕ ಮದುವೆಯಲ್ಲೂ ಸಾಮಾಜಿಕ ಕಳಕಳಿ ಮೆರೆಯಲು ಮುಂದಾಗಿದ್ದಾರೆ!

ಇದನ್ನೂ ಓದಿ:  ಮತ್ತೊಮ್ಮೆ ಮದುವೆಗೆ ಸಿದ್ದರಾಗಿದ್ದಾರೆ ಕಿರಿಕ್​ ರಾಣಿ ರಾಖಿ ಸಾವಂತ್​: ಈಗ ವರ ಯಾರು ಗೊತ್ತಾ..?

ಇನ್ನೂ ಕನ್ಯತ್ವ ಕಳೆದುಕೊಂಡಿಲ್ಲ ಎಂಬುದನ್ನು ಸಾಬೀತು ಮಾಡಲು ರಾಖಿ ಪ್ರಮಾಣ ಪತ್ರವನ್ನೂ ಮಾಡಿಸಿದ್ದಾರಂತೆ. ‘ನಾನಿನ್ನೂ ಕನ್ಯತ್ವ ಕಳೆದುಕೊಂಡಿಲ್ಲ. ದೀಪಕ್​ಗೆ ಈ ಬಗ್ಗೆ ತಿಳಿಸುವ ಉದ್ದೇಶದಿಂದಲೇ ನಾನು ವೈದ್ಯರ ಬಳಿ ಪ್ರಮಾಣ ಪತ್ರ ಮಾಡಿಸಿದ್ದೇನೆ. ಬಾಲಿವುಡ್​ನಲ್ಲಿ ಎಲ್ಲರೂ ವಿವಾಹವಾಗುತ್ತಿದ್ದಾರೆ. ಹಾಗಾಗಿ ಮದುವೆಯಾಗಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದ್ದೇನೆ’ ಎನ್ನುತ್ತಾರೆ ಅವರು.

ಮತ್ತೊಂದು ಅಚ್ಚರಿ ಎಂದರೆ ಮದುವೆಯಾದ ಮೇಲೆ ಇವರು ಅಣ್ಣ ತಂಗಿ ರೀತಿ ಇರಲಿದ್ದಾರಂತೆ! ‘ಲೈಂಗಿಕ ಸಂಪರ್ಕ ಹೊಂದಲು ಎಲ್ಲರೂ ಮದುವೆಯಾಗುತ್ತಾರೆ. ಆದರೆ, ನಾವು ಅದಕ್ಕಾಗಿ ವಿವಾಹವಾಗುತ್ತಿಲ್ಲ. ನಾನು ಹಾಗೂ ದೀಪಕ್​ ಮದುವೆಯಾದ ಮೇಲೆ ಅಣ್ಣ-ತಂಗಿಯಾಗಿರಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ: ತನುಶ್ರೀ ಸಲಿಂಗಕಾಮಿ ಎಂದ್ರು ರಾಖಿ ಸಾವಂತ್​!

First published:December 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ