Rakhi Sawant: ಇನ್ಮುಂದೆ ಬಾಯ್​ಫ್ರೆಂಡ್​ ಹೇಳಿದ ಹಾಗೆ ಕೇಳೋದಂತೆ ರಾಖಿ, ಬಾಲಿವುಡ್​ ಬಗ್ಗೆ ಹೀಗಂದ್ರಾ ನಟಿ?

Rakhi Sawant And Adil Khan: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಖಿ ತಮ್ಮ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ರಾಖಿ ಸಾವಂತ್ ಮೈಸೂರು ಮೂಲದ ಆದಿಲ್ ಖಾನ್​ ಎನ್ನುವ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

ರಾಖಿ ಸಾವಂತ್

ರಾಖಿ ಸಾವಂತ್

  • Share this:
ರಾಖಿ ಸಾವಂತ್ (Rakhi Sawanth) ಈ ಹೆಸರನ್ನು ಕೇಳಿರದವರು ಯಾರೂ ಇಲ್ಲ. ಒಂದೆಲ್ಲಾ ಒಂದು ಕಾರಣಗಳಿಂದ ಸುದ್ದಿಯಲ್ಲಿರುವ ಈ ಬಾಲಿವುಡ್​ (Bollywood) ನಟಿಗೆ ವಿವಾದಗಳು ಎಂದರೆ ಬಹಳ ಇಷ್ಟ. ಅವರ ಬಟ್ಟೆ ಹಾಗೂ ಹೇಳಿಕೆಗಳು ಮಾತ್ರ ವಿವಾದಕ್ಕೆ ಕಾರಣವಾಗುವುದಿಲ್ಲ. ಅವರ ವೈಯಕ್ತಿಕ ಜೀವನ ಕೂಡ ಬಹಳ ಸದ್ದು ಮಾಡುತ್ತದೆ. ಯಾವಾಗಲೂ ತುಂಡುಡುಗೆಯಲ್ಲಿರುವ ರಾಖಿ ಈಗ ಸ್ವಲ್ಪ ಬದಲಾಗಿದ್ದಾರೆ. ತಮ್ಮ ಬಟ್ಟೆ ಹಾಗೂ ಜೀವನದ ಬಗ್ಗೆ ಮಾತನಾಡಿರುವ ಅವರು ಬಾಲಿವುಡ್​ ತುಂಡುಡುಗೆಯನ್ನು ಬೇಡುತ್ತದೆ ಎಂದಿದ್ದಾರೆ.  

ಆದಿಲ್ ಹೇಳಿದ್ದಂತೆ ಕೇಳ್ತಾರಂತೆ ರಾಖಿ

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಖಿ ತಮ್ಮ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ರಾಖಿ ಸಾವಂತ್ ಮೈಸೂರು ಮೂಲದ ಆದಿಲ್ ಖಾನ್​ ಎನ್ನುವ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಆದಿಲ್ ಅವರ ಬದುಕಿಗೆ ಪ್ರವೇಶವಾದ ಮೇಲೆ ಅವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಿದೆಯಂತೆ. ಇದನ್ನು ಸ್ವತಃ ರಾಖಿ ಹೇಳಿಕೊಂಡಿದ್ದಾರೆ.

ಈ ಹುಡುಗ ಸಿಕ್ಕ ಮೇಲೆ ನನಗೆ ಆಶ್ಚರ್ಯವಾಗುವಷ್ಟು ನಾನು ಬದಲಾಗಿದ್ದೇನೆ. ನನ್ನ ಹುಡುಗನಿಗೆ ಹೇಗೆ ಬೇಕೋ ಹಾಗೆಯೇ ನಾನು ಬದುಕುವುದು. ಅವರಿಗಾಗಿ ಇನ್ನೂ ಬದಲಾಗುತ್ತೇನೆ. ಇನ್ಮುಂದೆ ತನ್ನ ಹುಡುಗ ಹೇಗೆ ಹೇಳುತ್ತಾನೋ ಹಾಗೆಯೇ ನಾನು ಕೇಳುತ್ತೇನೆ ಎಂದಿದ್ದಾರೆ ರಾಖಿ.  ನನ್ನ ಜೀವನದಲ್ಲಿ ಆದಿಲ್ ಖಾನ್ ಬಂದ ಮೇಲೆ ಎಲ್ಲವೂ ಬದಲಾಗಿದೆ. ನಾನು ಯಾವ ಕಾರ್ಯಕ್ರಮ್ಕಕೆ ಯಾವ ರೀತಿ ಬಟ್ಟೆ ಹಾಕಬೇಕು, ಹೇಗೆ ರೆಡಿಯಾಗಬೇಕು ಎಂಬುದನ್ನ ಆದಿಲ್ ಡಿಸೈಡ್​ ಮಾಡುತ್ತಾರೆ. ನಾನು ಯಾವಾಗಲೂ ಅರೆಬರೆ ಬಟ್ಟೆ ಹಾಕುತ್ತಿದ್ದೆ. ಆದರೆ ಆದಿಲ್ ಹಾಗೂ ಅವರ ಕುಟಂಬದವರಿಗೆ ಈ ರೀತಿ ಬಟ್ಟೆ ಧರಿಸುವುದು ಇಷ್ಟವಾಗುವುದಿಲ್ಲ. ಹಾಗಾಗಿ ನಾನು ಪೂರ್ತಿ ಮೈ ಮುಚ್ಚುವಂತಹ ಬಟ್ಟೆಗಳನ್ನು ಧರಿಸುತ್ತೇನೆ. ಅವರ ಕುಟಂಬ ನಾನು ಹೇಗಿರಬೇಕು ಅನ್ನುತ್ತದೆಯೋ ಅದೇ ರೀತಿ ಇರುತ್ತೇನೆ ಎಂದು ರಾಖಿ ಹೇಳಿಕೊಂಡಿದ್ದಾರೆ.

ಸಿನಿರಂಗ ತುಂಡುಡುಗೆಯನ್ನು ಬೇಡುತ್ತೆ ಎಂದ ನಟಿ

ಇನ್ನು ಬಟ್ಟೆಯ ವಿಚಾರವಾಗಿ ಸಹ ರಾಖಿ ಈ ವಿಡಿಯೋದಲ್ಲಿ ಮಾತನಾಡಿದ್ದು, ಯಾವ ಹುಡುಗಿಯೂ ತನ್ನ ಎದೆ ಸೀಳು ಕಾಣುವಂತೆ ಯಾವಾಗಲೂ ಬಟ್ಟೆ ಹಾಕಲು ಇಷ್ಟಪಡುವುದಿಲ್ಲ. ಆದರೆ ಸಿನಿಮಾ ರಂಗವೇ ಈ ರೀತಿ ಬಟ್ಟೆ ಹಾಕಲು ಒತ್ತಾಯಿಸುತ್ತದೆ. ಆ ರೀತಿ ಬಟ್ಟೆ ಹಾಕದಿದ್ದರೆ  ಸಿನಿಮಾದಲ್ಲಿ ಅವಕಾಶ ಸಿಗುವುದಿಲ್ಲ. ನಮಗೆಲ್ಲಾ ಸಿನಿಮಾ ರಂಗದಲ್ಲಿ ಗಾಡ್​ ಫಾದರ್ ಇಲ್ಲ. ಹಾಗಾಗಿ ಚಿತ್ರರಂಗಕ್ಕೆ ಹೇಗೆ ಬೇಕೋ ಹಾಗೆ ಇರಬೇಕಾಗುತ್ತದೆ. ಅದು ನಮಗೆ ಅನಿವಾರ್ಯ ಎಂದಿದ್ದಾರೆ. ಆದರೆ ನಾನು ಈಗ ಬದಲಾಗಿದ್ದೇನೆ. ಇನ್ಮುಂದೆ ಹೀಗೆಲ್ಲಾ ಇರಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕೂಡ ರಾಖಿ ನಾನು ಇನ್ಮುಂದೆ ಗ್ಲಾಮರಸ್​ ಬಟ್ಟೆ ಹಾಕಲ್ಲ ಎಂದಿದ್ದರು. ಆದಿಲ್​ಗಾಗಿ ರಾಖಿ ಬಹಳ ಬದಲಾಗುತ್ತಿದ್ದು, ಈ ಇಬ್ಬರೂ ಚೆನ್ನಾಗಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.  ಇನ್ನು ಆದಿಲ್ ರಾಖಿಗೆ ದುಬೈನಲ್ಲಿ ದುಬಾರಿ ಗಿಫ್ಟ್​ ನೀಡಿ ಸುದ್ದಿಯಾಗಿದ್ದರು. ಆದಿಲ್ ದುಬೈನಲ್ಲಿ ರಾಖಿಗೆ ದುಬಾರಿ ಮನೆ ಖರೀದಿಸಿ ಗಿಫ್ಟ್ ಮಾಡಿದ್ದು, ರಾಕಿ ಫುಲ್ ಖುಷಿಯಲ್ಲಿ ತೇಲುತ್ತಿದ್ದಾರೆ.

ಬಾಲಿವುಡ್ ಚಲನಚಿತ್ರೋದ್ಯಮದ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ತಮ್ಮ ದಿಟ್ಟ ಮತ್ತು ಮುಕ್ತ ಸ್ವಭಾವದಿಂದ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ರಾಖಿ ಹಲವು ಬಾರಿ ಹೇಳಿಕೆ ನೀಡುತ್ತಿರುತ್ತಾರೆ. ಅವರು ಹಾಕುವ ವಿಭಿನ್ನ ರೀತಿಯ ಬಟ್ಟೆಗಳು ಸಹ ಯಾವಾಗಲು ಟ್ರೋಲ್ ಆಗುತ್ತದೆ. ಬಿಗ್ಬಾಸ್ ಮನೆಗೆ ಹೋಗಿದ್ದ ರಾಖಿ ಅಲ್ಲಿ ಸಹ ಗಂಡನ ವಿಚಾರವಾಗಿ ಸುದ್ದಿಯಾಗಿದ್ದರೂ, ನಂತರ ಸಹ ಸೆಟ್ ಹೊರಗೆ ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡು, ಟ್ರೋಲ್ ಪೇಜ್ಗಳಿಗೆ ಆಹಾರವಾಗಿದ್ದರು.
Published by:Sandhya M
First published: