ಮುಂಬೈ: ಸದಾ ಒಂದಲ್ಲ ಒಂದು ಕಾರಣದಿಂದಾಗಿ ಸುದ್ದಿಯಲ್ಲಿರುವ ನಟಿಯರ ಪೈಕಿ ಬಾಲಿವುಡ್ ನಟಿ ರಾಖಿ ಸಾವಂತ್ (Bollywood Actress Rakhi Sawant) ಮೊದಲ ಸಾಲಿನಲ್ಲಿ ಇರುತ್ತಾರೆ ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಹೌದು, ಇತ್ತೀಚೆಗೆ ತಮ್ಮ ತಾಯಿಯನ್ನು ಕಳೆದುಕೊಂಡು ಮತ್ತು ನಂತರದಲ್ಲಿ ತಮ್ಮ ವೈವಾಹಿಕ ಜೀವನದಲ್ಲಿ (Married Life) ಎದ್ದ ಬಿರುಗಾಳಿಯಿಂದ ಸುದ್ದಿಯಲ್ಲಿದ್ದ ರಾಖಿ ಈಗ ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿ ಇದ್ದಾರೆ ನೋಡಿ. ಈ ರಂಜಾನ್ (Ramdan) ಸಮಯದಲ್ಲಿ ರಾಖಿ ಸಾವಂತ್ ಉಮ್ರಾಗೆ (Umrah) ಹೋಗುವ ನಿರೀಕ್ಷೆಯಲ್ಲಿದ್ದಾರೆ. ಪತಿ ಆದಿಲ್ ಖಾನ್ (Rakhi Husband Adil Khan) ದುರಾನಿ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ನಟಿ, ಮಾರ್ಚ್ 13 ರ ಬೆಳಗ್ಗೆ ಉಮ್ರಾಗೆ ಹೋಗುವ ಬಯಕೆಯನ್ನು ಬಹಿರಂಗಪಡಿಸಿದ್ದಾರೆ.
ತಾನು ವೀಸಾ ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ, ಆದರೆ ಅದು ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ತನಗೆ ಖಚಿತವಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ತನ್ನೆಲ್ಲಾ ನೋವುಗಳಿಗೆ ಗುಡ್ ಬೈ ಹೇಳ್ತಾರಂತೆ ರಾಖಿ
ರಾಖಿ ತನ್ನ ಹಳೆಯ ನೋವುಗಳನ್ನು ಮರೆತು ಜೀವನದಲ್ಲಿ ಮುಂದೆ ಸಾಗಲು ಬಯಸುತ್ತೇನೆ ಎಂದು ಹೇಳಿದರು. ನಾನು ಮೊದಲಿನಂತೆ ಸಂತೋಷವಾಗಿರಲ ಬಯಸುತ್ತೇನೆ, ನಾನು ಇನ್ನು ಮುಂದೆ ಅಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಜೀವನವು ಸುಂದರವಾಗಿರುವುದರಿಂದ ನಾನು ಮತ್ತೆ ನನ್ನ ಕಾಲುಗಳ ಮೇಲೆ ನಿಲ್ಲಲು ಪ್ರಯತ್ನಿಸುತ್ತಿದ್ದೇನೆ. ಬಿಟ್ಟು ಹೋದವರ ಬಗ್ಗೆ ಅಳುವ ಅಗತ್ಯವಿಲ್ಲ. ಜೀವನವನ್ನು ನಾನು ಹೊಸದಾಗಿ ಪ್ರಾರಂಭಿಸಲು ಬಯಸುತ್ತೇನೆ ಎಂದು ರಾಖಿ ಹೇಳಿದರು.
ರಂಜಾನ್ ತಿಂಗಳಲ್ಲಿ ಏನೆಲ್ಲಾ ಮಾಡ್ತಾರಂತೆ ನೋಡಿ ರಾಖಿ?
ಪವಿತ್ರ ತಿಂಗಳ ಯೋಜನೆಗಳನ್ನು ಹಂಚಿಕೊಂಡ ರಾಖಿ "ರಂಜಾನ್ ತಿಂಗಳು ಶುರುವಾದಾಗ ನಾನು ಒಂದು ತಿಂಗಳ ಕಾಲ ತುಂಬಾನೇ ಜಾಗರೂಕಳಾಗಿರುತ್ತೇನೆ ಮತ್ತು ಜಿಮ್ ಗೆ ಬರುವುದಿಲ್ಲ. ಏಕೆಂದರೆ ನೀವು ಇಡೀ ದಿನ ಹಸಿವಿನಿಂದ ಇರಬೇಕು ಮತ್ತು ನಮಾಜ್ ಮಾಡಬೇಕು ಎಂದು ಹೇಳಿದರು.
ರಾಖಿ ಅವರು ಉಮ್ರಾಗೆ ಹೋಗಲು ಅಫಿಡವಿಟ್ ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಹಂಚಿಕೊಂಡಿದ್ದಾರೆ. "ನನ್ನ ಖಾಲಿದ್ ಮಾಮು, ವಾಹಿದ್ ಭಾಯ್, ಜಾಮಾ ಮಸೀದಿಯಲ್ಲಿ ನನ್ನ ಅಫಿಡವಿಟ್ ಅನ್ನು ವೀಸಾಗಾಗಿ ತಯಾರಿ ಮಾಡುತ್ತಿದ್ದಾರೆ, ಆದ್ದರಿಂದ ನಾನು ಉಮ್ರಾಗೆ ಹೋಗಬಹುದು.
ನನ್ನ ಪಾಪಗಳು ತೊಳೆದು ಹೋಗುವಂತೆ ರೋಜಾವನ್ನು ಸರಿಯಾಗಿ ಇಡಲು ನಾನು ಬಯಸುತ್ತೇನೆ. ರಂಜಾನ್ ಸಮಯದಲ್ಲಿ ನಾನು ಉಮ್ರಾಗೆ ಹೋದರೆ, ನನ್ನ ಅದೃಷ್ಟ ಬದಲಾಗುತ್ತದೆ ಎಂದಿದ್ದಾರೆ.
ಆದರೆ ನಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೂ ನನಗೆ ಅಫಿಡವಿಟ್ ಸಿಗುತ್ತದೆ ಎಂದು ನನಗೆ ತಿಳಿದಿಲ್ಲ. ನಾನು ಹೇಳುವುದೇನೆಂದರೆ, ದೇವರಿಗೆ ನಾನು ಉಮ್ರಾಗೆ ಹೋಗುವುದಕ್ಕೆ ಇಷ್ಟವಿದ್ದರೆ, ಖಂಡಿತವಾಗಿಯೂ ನನ್ನನ್ನು ಅಲ್ಲಿಗೆ ಕಳುಹಿಸುತ್ತಾನೆ ಎಂದು ರಾಖಿ ಹೇಳಿದರು.
ಆಸ್ಕರ್ ಪ್ರಶಸ್ತಿ ಪಡೆದಿದ್ದಕ್ಕೆ ಆರ್‌ಆರ್‌ಆರ್ ಚಿತ್ರ ತಂಡಕ್ಕೆ ಅಭಿನಂದಿಸಿದ ರಾಖಿ
ದೊಡ್ಡ ಪ್ರಶಸ್ತಿ ಪಡೆದಿದ್ದಕ್ಕೆ ರಾಖಿ ಆರ್‌ಆರ್‌ಆರ್ ಚಿತ್ರ ತಂಡವನ್ನು ಅಭಿನಂದಿಸಿದರು. 'ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ತುಂಬಾನೇ ಖುಷಿಯಾಗಿದೆ. ಇದು ನನ್ನ ನೆಚ್ಚಿನ ಹಾಡು ಸಹ ಆಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಈ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದರು.
ಇದನ್ನೂ ಓದಿ: Rakhi Sawant: ಆದಿಲ್ಗೆ ಡಿವೋರ್ಸ್ ಕೊಡಲ್ವಂತೆ, ಬೇರೆ ಮದ್ವೆ ಕೂಡ ಆಗಲ್ವಂತೆ ರಾಖಿ!
ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಈ ಹಾಡನ್ನು ಪ್ರಸ್ತುತಪಡಿಸಿದ ಬಾಲಿವುಡ್ ಸುಂದರಿ ದೀಪಿಕಾ ಪಡುಕೋಣೆ ಅವರನ್ನು ರಾಖಿ ತುಂಬಾನೇ ಶ್ಲಾಘಿಸಿದರು. "ದೀಪಿಕಾ ಅವರ ಭಾಷಣವೂ ಅದ್ಭುತವಾಗಿತ್ತು ಎಂದು ಹೇಳಲು ನಾನು ತುಂಬಾನೇ ಹೆಮ್ಮೆ ಪಡುತ್ತೇನೆ. ಆಸ್ಕರ್ ನ ಪ್ಲಾಟ್ ಫಾರ್ಮ್ ನಲ್ಲಿ ದೀಪಿಕಾ ಅದ್ಭುತವಾಗಿ ಕಾಣುತ್ತಿದ್ದರು" ಎಂದು ರಾಖಿ ಹೇಳಿದರು.
ನೀವೂ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಹೋಗುತ್ತಿರಾ ಅಂತ ಕೇಳಿದ್ದಕ್ಕೆ ರಾಖಿ ಹೇಳಿದ್ದೇನು?
"ಈ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ, ಆರ್‌ಆರ್‌ಆರ್ ಆಸ್ಕರ್ ಸಿಕ್ಕರೆ, ದೇವರು ಬಯಸಿದರೆ, ನಾನು ಸಹ ಒಂದು ದಿನ ಅದನ್ನು ಪಡೆಯುತ್ತೇನೆ. ಆಸ್ಕರ್ ಪ್ರಶಸ್ತಿ ಪಡೆಯುವುದು ಕಷ್ಟ ಅಂತಾರೆ, ಆದರೆ ಈಗ ಭಾರತೀಯ ಹಾಡಿಗೆ ಸಿಕ್ಕಿತಲ್ಲ. ದೇವರ ಮುಂದೆ ಅಸಾಧ್ಯವಾದುದು ಯಾವುದೂ ಇಲ್ಲ" ಎಂದು ಹೇಳಿದರು ರಾಖಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ