Rakhi Sawanth: ರಾಖಿ ಸಾವಂತ್​ರ ಗಂಡ ಮಾಧ್ಯಮಗಳ ಮುಂದೆ ಬರದೇ ಇರುವುದಕ್ಕೆ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ..!

Rakhi Sawanth: ರಾಖಿ ವಿವಾಹವಾಗಿ ಇಷ್ಟು ದಿನ ಕಳೆದರೂ ಅವರ ಒಂದು ಫೋಟೋವನ್ನೂ ಸಾರ್ವಜನಿಕವಾಗಿ ಎಲ್ಲೂ ಬಹಿರಂಗಪಡಿಸಿಲ್ಲ. ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದು, ಅದರಲ್ಲಿ ತಮ್ಮ ಗಂಡ ರಿತೇಶ್​ ಕುರಿತಾತ ಆಸಕ್ತಿಕರ ಮಾಹಿತಿಯನ್ನು ಹೊರ ಹಾಕಿದ್ದಾರೆ.

Anitha E | news18
Updated:August 10, 2019, 1:24 PM IST
Rakhi Sawanth: ರಾಖಿ ಸಾವಂತ್​ರ ಗಂಡ ಮಾಧ್ಯಮಗಳ ಮುಂದೆ ಬರದೇ ಇರುವುದಕ್ಕೆ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ..!
ನಟಿ ರಾಖಿ ಸಾವಂತ್​
  • News18
  • Last Updated: August 10, 2019, 1:24 PM IST
  • Share this:
ಸದಾ ವಿವಾದಿತ ಹೇಳಿಕೆಗಳಿಂದಲೇ ಸದ್ದು ಮಾಡುವ ನಟಿ ರಾಖಿ ಸಾವಂತ್​ ಸದ್ದಿಲ್ಲದೆ ವಿವಾಹವಾಗಿದ್ದಾರೆ. ಅಷ್ಟೇ ಅಲ್ಲ ಉದ್ಯಮಿಯಾಗಿರುವ ಅನಿವಾಸಿ ಭಾರತೀಯರೊಬ್ಬರನ್ನು ವಿವಾಹವಾಗಿರುವ ಈ ನಟಿ ಗಂಡನ ಹೆಸರನ್ನು ಮಾತ್ರ ಹೇಳುತ್ತಿದ್ದಾರೆ. ಆದರೆ ಆರ ಯಾರು, ಹೇಗಿದ್ದಾರೆ ಎಂದು ಎಲ್ಲೂ ಬಹಿರಂಗಪಡಿಸಿಲ್ಲ.

ಆದರೆ ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದು, ಅದರಲ್ಲಿ ತಮ್ಮ ಗಂಡ ರಿತೇಶ್​ ಕುರಿತಾತ ಆಸಕ್ತಿಕರ ಮಾಹಿತಿಯನ್ನು ಹೊರ ಹಾಕಿದ್ದಾರೆ. ರಾಖಿ ವಿವಾಹವಾಗಿ ಇಷ್ಟು ದಿನ ಕಳೆದರೂ ಅವರ ಒಂದು ಫೋಟೋವನ್ನೂ ಸಾರ್ವಜನಿಕವಾಗಿ ಎಲ್ಲೂ ಬಹಿರಂಗಪಡಿಸಿಲ್ಲ.

ರಾಖಿ ಸಾವಂತ್​


ಇದಕ್ಕೆ ಕಾರಣಕ್ಕೆ ಇಷ್ಟೆ ರಾಖಿ ಅವರ ಗಂಡ ರಿತೇಶ್​ ಅಮೆರಿಕದ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಜತೆ ಕೆಲಸ ಮಾಡುತ್ತಾರಂತೆ. ಟ್ರಂಪ್​ ಅವರ ತಂಡದಲ್ಲಿ ಬಹುಮುಖ್ಯವಾದ ವ್ಯಕ್ತಿ. ಅಲ್ಲದೆ ಅವರಿಗೆ ಮಾಧ್ಯಮಗಳೆದು ಬರುವುದು ಸುತಾರಾಂ ಇಷ್ಟ ಇಲ್ಲ. ನಾನು ವಿವಾಹವಾಗಿರುವುದು ನನಗಾಗಿ ಹಾಗೂ ನನ್ನ ಕುಟುಂಬದವರಿಗಾಗಿ. ಅವರನ್ನು ಜಗತ್ತಿನ ಮುಂದೆ ತರುವ ಅಗತ್ಯವಿಲ್ಲ ಎಂದಿದ್ದಾರೆ ರಾಖಿ.

'2020ರಲ್ಲಿ ತಾಯಿಯಾಗುವ ಆಲೋಚನೆ ಇದೆ. ಅದಕ್ಕೆ ಪ್ಲಾನ್​ ಮಾಡಿಕೊಂಡಿದ್ದೇವೆ. ರಿತೇಶ್​ ನನ್ನ ಮೊದಲ ಟಿವಿ ಸಂದರ್ಶನವನ್ನು ನೋಡಿದಾಗಲೇ ನನ್ನ ಅಭಿಮಾನಿಯಾದರು. ನಂತರ ಇಬ್ಬರ ಪರಿಚಯವಾಯಿತು, ಆಮೇಲೆ ವಿವಾಹವಾಗುವಂತೆ ತುಂಬಾ ಕೇಳಿಕೊಂಡರು' ಎಂದು ರಾಖಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Sarileru Neekevvaru: ಮಹೇಶ್​ ಬಾಬು ಹುಟ್ಟುಹಬ್ಬಕ್ಕೆ ಸಿಕ್ತು ಭರ್ಜರಿ ಉಡುಗೊರೆ: ಸರಿಲೇರು ನಿಕೆವ್ವರು ಫಸ್ಟ್​ ಲುಕ್​ ಔಟ್​

'ಜುಲೈ 28ಕ್ಕೆ ನನ್ನ ವಿವಾಹವಾಗಿತ್ತು. ಅದು ಕೂಡ ಸ್ಟಾರ್​ ಹೋಟೆಲ್​ನ ರೂಮ್​ನಲ್ಲಿ. ಏನೂ ಭಯದಿಂದ ನನ್ನ ವಿವಾಹದ ವಿಷಯವನ್ನು ಮುಚ್ಚಿಟ್ಟಿದ್ದೆ' ಎಂದು ರಾಖಿ ಮತ್ತೊಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Happy Birthday Mahesh Babu: ಹುಟ್ಟುಹಬ್ಬದ ಸಂಭ್ರಮದಲ್ಲಿ ಮಹೇಶ್​ ಬಾಬು: ಹಬ್ಬ ಆಚರಿಸುತ್ತಿರುವ ಅಭಿಮಾನಿಗಳು
 

 
First published: August 10, 2019, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading