ರಾಖಿ ಸಾವಂತ್ (Rakhi Sawanth) ಯಾವಾಗಲೂ ಸುದ್ದಿಯಲ್ಲಿರುವ ನಟಿಯರಲ್ಲಿ ಒಬ್ಬರು. ಒಂದೆಲ್ಲ ಒಂದು ಕಾರಣಕ್ಕೆ ಪ್ರಚಾರದಲ್ಲಿರಲು ಅವರಿಗೆ ಇಷ್ಟ ಎಂದರೆ ತಪ್ಪಾಗಲಾರದು. ಅಲ್ಲದೇ ಪತಿ ವಿಚ್ಛೇದಿತ ಪತಿ ರಿತೇಶ್ ಸಿಂಗ್‌ನಿಂದ (Ritesh Singh) ಬೇರ್ಪಡುವುದಾಗಿ ಘೋಷಿಸಿದಾಗಿನಿಂದ ರಾಖಿ ಸಾವಂತ್ ಸುದ್ದಿಯಲ್ಲಿದ್ದಾರೆ. ನಂತರ ಕೂಡ ಮತ್ತೊಬ್ಬ ವ್ಯಕ್ತಿಯ ಜೊತೆ ಪ್ರೀತಿಯಲ್ಲಿರುವುದಾಗಿ ಹೇಳಿದ್ದಲ್ಲದೇ, ಹೊಸ ಗೆಳೆಯ ಆದಿಲ್ ಖಾನ್ (Adil Khan) ದುರಾನಿಯನ್ನು ಸಹ ಜನರಿಗೆ ಪರಿಚಯ ಮಾಡಿಸಿದ್ದರು. ಈ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ಇದೀಗ ಅವರು ಮತ್ತೆ ಸಾರ್ವಜನಿಕವಾಗಿ ಕಾಂಡೋಮ್ ಬಗ್ಗೆ ಮಾತನಾಡಿದ್ದು, ಇದು ಕೂಡ ಸುದ್ದಿಯಾಗಿದೆ.
ಹೌದು, ಸದ್ಯ ಮೈಸೂರಿನ ಬಾಯ್ ಫ್ರೆಂಡ್ ಆದಿ ಖಾನ್ ಜೊತೆ ಟ್ರಿಪ್ , ಸಿನಿಮಾ, ಶಾಪಿಂಗ್ ಎಂದು ಬ್ಯುಸಿ ಇದ್ದು, ಇತ್ತೀಚೆಗೆ ಆದಿಲ್ ಜೊತೆ ಒಂದು ಸಿನಿಮಾ ನೊಡಲು ಹೋಗಿದ್ದಾರೆ. ‘ಜನಹಿತ್ ಮೇನ್ ಜಾರಿ’ ಎನ್ನುವ ಸಾಮಾಜಿಕ ಕಳಕಳಿ ಹೊಂದಿರುವ ಸಿನಿಮಾವನ್ನು ನೋಡಲು ರಾಖಿ ಹೋಗಿದ್ದು, ಚಿತ್ರದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಡೋಮ್ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಮಾತುಗಳನ್ನು ಆಡಿದ್ದಾರೆ.
ಕಾಂಡೋಮ್ ಬಗ್ಗೆ ಅರಿವು ಮೂಡಿಸಿದ ರಾಖಿ
ನಟ ಆದಿಲ್ ದುರ್ನಾನಿ ಅಭಿನಯದ ‘ಜನಹಿತ್ ಮೇನ್ ಜಾರಿ’ ಸಿನಿಮಾದಲ್ಲಿ ಸುರಕ್ಷಿತ ಲೈಂಗಿಕತೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದ್ದು, ಜೊತೆಗೆ ಕಾಂಡೋಮ್ ಬಳಸುವ ಕುರಿತಾಗಿಯೂ ಜಾಗೃತಿ ಮೂಡಿಸಿದ್ದು, ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಸಿನಿಮಾ ಇದಾಗಿದೆ.
ಇದನ್ನೂ ಓದಿ: ಹೊಸ ಚಿತ್ರ ಒಪ್ಪಿಕೊಂಡ ಶ್ರುತಿ ಹರಿಹರನ್, 3 ಕಥೆಗಳ ವಿಭಿನ್ನ ಸಿನಿಮಾವಂತೆ ಇದು
ಇನ್ನು ಈ ಸಿನಿಮಾವನ್ನು ರಾಖಿ ಬಾಯ್ ಫ್ರೆಂಡ್ ಆದಿಲ್ ಜೊತೆ ನೋಡಲು ಹೋಗಿದ್ದು, ಸಿನಿಮಾ ಮುಗಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ಚಿತ್ರವನ್ನು ಹೊಗಳಿರುವ ರಾಖಿ, ಕಾಂಡೋಮ್ ಬಗ್ಗೆ ಜನರ ಮನಸ್ಸರಲ್ಲಿರುವ ಭಾವನೆಗಳ ಬಗ್ಗೆ ಸಹ ಮಾತನಾಡಿದ್ದಾರೆ. ‘ಜನರ ಮನಸ್ಸು ತುಂಬಾ ವಿಚಿತ್ರವಾಗಿದೆ. ಮದ್ಯವನ್ನು ಖರೀದಿಸಲು ಅವರು ಗಂಟೆಗಟ್ಟಲೇ ರಸ್ತೆಯಲ್ಲಿ ಕ್ಯೂ ನಿಲ್ಲಲು ಅವರಿಗೆ ಆಗುತ್ತದೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್ ಖರೀದಿಸಲು ಮುಜುಗರ ಪಡುತ್ತಾರೆ’ ಎಂದು ಆದಿಲ್ ನೋಡಿಕೊಂಡು ರಾಖಿ ಈ ಮಾತನ್ನು ಹೇಳಿದ್ದಾರೆ. ಸುದ್ದಿ ಇದಲ್ಲ, ಇದಕ್ಕೆ ಅವರ ಬಾಯ್ಫ್ರೆಂಡ್ ಕೊಟ್ಟ ರಿಯಾಕ್ಷನ್.
ರಾಖಿ ಹೇಳಿಕೆ ನೋಡಿ ಶಾಕ್ ಆದ ಆದಿಲ್
ರಾಖಿಯ ಈ ಮಾತುಗಳನ್ನು ಕೇಳುತ್ತಿದ್ದ ಆದಿಲ್ ಆದಿಲ್ ಕಣ್ಣು ಮಿಟುಗಿಸದೇ ರಾಖಿಯನ್ನೇ ನೋಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ವಿಚಿತ್ರ ಕಾಮೆಂಟ್ಗಳನ್ನು ಮಾಡಿದ್ದಾರೆ. ಅಲ್ಲದೇ ಆದಿಲ್ ರಿಯಾಕ್ಷನ್ ಹೇಗಿತ್ತು ಎಂದರೆ ಅವರಿಗೆ ರಾಖಿ ಈ ಮಾತುಗಳನ್ನು ಯಾರಿಗೆ ಹೇಳುತ್ತಿದ್ದಾರೆ ಎಂಬುದು ತಿಳಿಯದೇ ಕಕ್ಕಾಬಿಕ್ಕಿಯಾಗಿ ನಿಂತಿದ್ದಾರೆ. ಅವರ ಮುಖ ಹೇಗಿತ್ತು ಎಂದರೆ ರಾಖಿ ನನಗೆ ಹೇಳಿದ್ದಾ ಎಂದು ಅವರೇ ಪ್ರಶ್ನೆ ಮಾಡಿಕೊಂಡ ರೀತಿ ಇತ್ತು. ಇದನ್ನು ನೋಡಿದ ನೆಟ್ಟಿಗರು ಪಾಪ ಆದಿಲ್ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಈ ಸಲ ಬಟ್ಟೆ ಬೇಡ, ಜೇಡರ ಬಲೆಯೇ ಸಾಕು ಎಂದು ಅದನ್ನೇ ತೊಟ್ಟ ಉರ್ಫಿ, ನೀವೂ ನೋಡ್ಬಿಡಿ
ರಾಖಿ ಏನೇ ಮಾಡಿದರೂ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಆದಿಲ್ ಆದಿಲ್ ದುಬೈನಲ್ಲಿ ರಾಖಿಗೆ ದುಬಾರಿ ಮನೆ ಖರೀದಿಸಿ ಗಿಫ್ಟ್ ಮಾಡಿದ್ದು, ರಾಕಿ ಫುಲ್ ಖುಷಿಯಲ್ಲಿ ತೇಲುತ್ತಿದ್ದಾರೆ. ಮೊನ್ನೆಯಷ್ಟೇ ರಾಖಿ ಹಾಗೂ ಆದಿಲ್ ದುಬೈ ಹೋಗುವಾಗ ಮತ್ತು ಬರುವಾಗ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದು, ಪಾಪರಾಜಿಗಳಿಗೆ ಪೋಸ್ ಮಾಡಲು ಆದಿಲ್ ನಾಚಿಕೊಂಡಿದ್ದಾರೆ. ಇನ್ನು ಆದಿಲ್ ಗಿಫ್ಟ್ ಕೊಟ್ಟಿರುವ ಬಗ್ಗೆ ರಾಖಿಯೇ ಹೇಳಿಕೊಂಡಿದ್ದು, ನನಗೆ ಆದಿಲ್ ಸಿಕ್ಕಿದ್ದು ನನ್ನ ಪುಣ್ಯ ಎಂದಿದ್ದಾರೆ. ಹಾಗೆಯೇ ಆದಿಲ್ ಸಹ ರಾಖಿ ಸ್ವಲ್ಪ ಗ್ಲಾಮರಸ್ ಬಟ್ಟೆ ಹಾಕುವುದನ್ನ ಕಡಿಮೆ ಮಾಡಬೇಕು ಎಂದು ಹೇಳುತ್ತೀನಿ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ