ಮುಂಬೈ : ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಈ ಹೆಸರು ಕೇಳಿದ್ರೆ ಇವತ್ತೇನ್ ಹೊಸ ರಗಳೆ ಎಂದು ಮೂಗು ಮುರಿಯುವಷ್ಟು ಫೇಮಸ್. ರಾಖಿ ಸಿನಿಮಾಗಳಿಂದ (Rakhi Sawant Cinema) ಸುದ್ದಿ ಮಾಡಿದ್ದಕ್ಕಿಂತಲೂ ಆಕೆಯ ಕಾಂಟ್ರವರ್ಸಿಗಳೇ ಆಕೆಗೆ ಖ್ಯಾತಿ ನೀಡಿವೆ. ಇನ್ನೂ ರಾಖಿ ಸಾವಂತ್ ಮದುವೆಯಾದ (Rakhi Sawant Marriage) ದಿನದಿಂದಲೂ ಸಾಮಾಜಿಕ ಜಾಲತಾಣದಲ್ಲಿ (Social Media) ನಿರಂತರ ಸುದ್ದಿಯಲ್ಲಿದ್ದಾರೆ. ಈಗ ಮತ್ತೆ ನಮಾಜ್ ಮಾಡುವ ವಿಡಿಯೋ (Namaz Video) ಬಿಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಂಜಾನ್ ಹಿನ್ನೆಲೆಯಲ್ಲಿ ನಮಾಜ್
ರಾಖಿ ಆದಿಲ್ರನ್ನು ಮದುವೆಯಾದ ಬಳಿಕ ಹೃದಯದಿಂದಲೇ ಮೆಚ್ಚಿ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅದೇ ಪ್ರಕಾರವಾಗಿ ಈಗ ರೋಜಾ ಆಚರಣೆಯಲ್ಲಿದ್ದಾರೆ. ಇಸ್ಲಾಂ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ನಿತ್ಯವೂ ತಪ್ಪದೇ ನಮಾಜ್ ಮಾಡುತ್ತಿದ್ದಾರೆ.
ತುಂಡುಗೆಯುಟ್ಟು ನಮಾಜ್
ಇನ್ನೂ ರಾಖಿ ಹಿಜಾಬ್, ಕಪ್ಪು ಬಣ್ಣದ ಕುರ್ತಿ, ತ್ರೀ ಫೋರ್ಥ್ ಲೆಗ್ಗಿನ್ಸ್ ಧರಿಸಿ ನಮಾಜ್ ಮಾಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಕೆಲವರು ಈ ವಿಡಿಯೋ ನೋಡಿ ಮೆಚ್ಚುಗೆ ಸೂಚಿಸಿದರೇ ಮತ್ತೆ ಕೆಲವರು ಕೆಂಡ ಕಾರಿದ್ದಾರೆ. 'ರಾಖಿ ನಮಾಜ್ ಮಾಡಲು ನಿಮ್ಮ ಉಡುಗೆ ಬಹಳ ಚಿಕ್ಕದಾಗಿದೆ, ಪ್ರಾರ್ಥನೆಗಿಂತ ಮುಂಚೆ ಮೂಲಭೂತ ನಿಯಮಗಳನ್ನು ಕಲಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ' ಎಂದಿದ್ದಾರೆ.
ಉಗುರಿನ ಬಣ್ಣ ಏತಕ್ಕೆ?
ಮೊದಲನೆಯದಾಗಿ 'ನೀವು ಲೆಗ್ಗಿನ್ಸ್ ಬಹಳ ಎತ್ತರದಲ್ಲಿ ಧರಿಸಿದ್ದೀರಿ. ಇದು ಸೂಕ್ತವಲ್ಲ. ಅಲ್ಲದೇ ನೀವು ಉಗುರಿನ ಬಣ್ಣವನ್ನು ಹಚ್ಚಿಕೊಂಡಿದ್ದೀರಿ. ಇದು ಕೂಡ ನಿಷೇಧಿಸಲಾಗಿದೆ ಎನ್ನುವ ಅರಿವು ನಿಮಗಿಲ್ಲವೇ?'ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮೊದಲು ನಿಯಮ ಕಲಿಯಿರಿ
'ನೀವು ನಮಾಜ್ ಓದುತ್ತಿದ್ದರೆ ಅದನ್ನು ನಿಮ್ಮ ದೇಹ ಮುಚ್ಚಿಕೊಂಡು ಓದಿ. ಇಷ್ಟು ಚಿಕ್ಕ ಪ್ಯಾಂಟ್ ಧರಿಸಿ ನೀವು ನಮಾಜ್ ಮಾಡಲು ಸಾಧ್ಯವಿಲ್ಲ. ನೀವು ಇದನ್ನು ಗೇಲಿ ಮಾಡಿದಂತಾಗುತ್ತದೆ. ಮೊದಲು ನಿಯಮಗಳನ್ನು ಕಲಿತುಕೊಳ್ಳಿ' ಎಂದು ಬಹುತೇಕರು ಧ್ವನಿ ಒಗ್ಗೂಡಿಸಿದ್ದಾರೆ.
ನಮಾಜ್ ಸಮರ್ಪಣೆ ಬಗ್ಗೆ ಮಾತನಾಡಿದ ರಾಖಿ
ಇನ್ನೂ ರಾಖಿ ಇತ್ತಿಚೆಗಷ್ಟೇ ಇಸ್ಲಾಂ ಧರ್ಮ ಸ್ವೀಕರಿಸಿರುವ ಬಗ್ಗೆ ಹೇಳಿದ್ದರು. ಪತಿ ಆದಿಲ್ನಿಂದ ಆರಂಭವಾಗಿ ಇದು ಅವರ ಜೀವನದ ಭಾಗವೇ ಆಗಿದೆ ಎಂದಿದ್ದಾರೆ.
ಜೊತೆಗೆ ನಮಾಜ್ ಮಾಡುವುದು ಹೇಗೆ ಅರ್ಪಿಸುವುದು ಎನ್ನುವುದನ್ನು ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆಯ ಕಾರಣ ಬಗ್ಗುವುದು ಕಷ್ಟ ಎಂದು ಹೇಳಿಕೊಂಡಿದ್ದಾರೆ.
ಮೆಕ್ಕಾಗೆ ಹೋಗಲು ವೀಸಾ ಸಿಗಲಿಲ್ಲ
ರಾಖಿ ಮೆಕ್ಕಾ ಮತ್ತು ಮದೀನಾಗೆ ಹೋಗುವುದಕ್ಕೆ ಉತ್ಸುಕರಾಗಿದ್ದರು. ಆದರೆ ವೀಸಾ ಸಿಗದ ಕಾರಣ ಅವರಿಗೆ ಈ ಧಾರ್ಮಿಕ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ.
3 ಧರ್ಮಗಳ ಸಂಗಮ ರಾಖಿ
ಇನ್ನೂ ರಾಖಿ ಮೂಲತಃ ಹಿಂದೂವಾಗಿದ್ದು, ಅವರ ತಾಯಿ ಕ್ರಿಶ್ವಿಯನ್ ಆದ ಕಾರಣ ಕ್ರೈಸ್ತ ಧರ್ಮವನ್ನೂ ಅನುಸರಿಸುತ್ತಿದ್ದರು. ಈಗ ಅವರ ಪತಿ ಆದಿಲ್ ಇಸ್ಲಾಂ ಧರ್ಮದವರಾದ್ದರಿಂದ ಅಲ್ಲಿನ ಆಚರಣೆಗಳನ್ನು ಇಷ್ಟಪಟ್ಟು ಅಭ್ಯಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಇಫ್ತಾರ್ ಕೂಟವನ್ನು ರಾಖಿ ಆಯೋಜಿಸಿದ್ದರು.
View this post on Instagram
ರಾಖಿ ಸಾವಂತ್ ನಿರಂತರವಾಗಿ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಾರೆ. ಈ ನಿಟ್ಟಿನಲ್ಲಿ ವೈಯಕ್ತಿಕ ಮತ್ತು ವೃತ್ತಿ ಬದುಕನ್ನು ತೆರೆದ ಪುಸ್ತಕದಂತೆ ಇರಿಸಿದ್ದಾರೆ ರಾಖಿ. ಸದಾ ಒಂದಿಲ್ಲೊಂದು ವಿಷಯದ ಬಗ್ಗೆ ಕಾಂಟ್ರವರ್ಸಿ ಮಾಡುವುದು ಅವರಿಗೆ ಹೊಸದೇನಲ್ಲ.
ಇದನ್ನೂ ಓದಿ: Rakhi Sawant: ಆದಿಲ್ ಖಾನ್ ನಾನು ಇಸ್ಲಾಂ ಸ್ವೀಕರಿಸುವಂತೆ ಮಾಡಿದ! ರಾಖಿ ಗಂಭೀರ ಆರೋಪ
ರಾಖಿಯ ರೀಸೆಂಟ್ ಕಿರಿಕ್ಗಳು
ಪತಿ ಆದಿಲ್ ವಿಚಾರದಲ್ಲಿ ಮೈಸೂರಿನಲ್ಲಿ ಸಾಕಷ್ಟು ಅತ್ತು ಕರೆದು ರಂಪ ಮಾಡಿದ್ದರು. ಆ ನಂತರ ಪ್ರಿಯಾಂಕ ಚೋಪ್ರಾ ಸಂದರ್ಶನವೊಂದರಲ್ಲಿ ಬಾಲಿವುಡ್ನ ಒಳರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ರಾಖಿ ಕೆಂಡಮಂಡಲರಾಗಿದ್ದಾರೆ.
ಇಲ್ಲಿ ಇರುವಾಗ ಎಲ್ಲವನ್ನೂ ಪಡೆದುಕೊಂಡು ಹಾಲಿವುಡ್ನಲ್ಲಿದ್ದೀರಿ. ಈಗ ಈ ಬಗ್ಗೆ ಮಾತನಾಡಿದ್ದು ಸರಿ ಇಲ್ಲ ಎಂದಿದ್ದಾರೆ. ಇದಿಷ್ಟೇ ಅಲ್ಲದೇ ಶೆರ್ಲಿನ್ ಚೋಪ್ರಾ ಅವರ ವಿಡಿಯೋ ಲೀಕ್ ವಿಚಾರದಲ್ಲೂ ರಾಖಿ ಸಾವಂತ್ ಸಂಕಷ್ಟ ಎದುರಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ