Rakhi Sawant: ಆದಿಲ್​ಗೆ ಡಿವೋರ್ಸ್ ಕೊಡಲ್ವಂತೆ, ಬೇರೆ ಮದ್ವೆ ಕೂಡ ಆಗಲ್ವಂತೆ ರಾಖಿ!

ರಾಕಿ ಸಾವಂತ

ರಾಕಿ ಸಾವಂತ

ತನ್ನ ಅಕಾಡೆಮಿಯಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಾಲಿವುಡ್, ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವ ಯೋಜನೆಯನ್ನು ನಾನು ಹೊಂದಿದ್ದೇನೆ.

  • Share this:

ಸದಾ ಒಂದಲ್ಲ ಒಂದು ಕಾರಣಕ್ಕೆ ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಸುದ್ದಿಯಲ್ಲಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ ಕಷ್ಟಗಳ ಮೇಲೆ ಕಷ್ಟವನ್ನು ಅನುಭವಿಸಿದ ರಾಖಿ ಮೊದಲು ತನ್ನ ತಾಯಿಯನ್ನು ಕಳೆದುಕೊಂಡಳು ಮತ್ತು ನಂತರದಲ್ಲಿ ಆದಿಲ್ ಖಾನ್ ದುರಾನಿ ಅವರೊಂದಿಗಿನ ವೈವಾಹಿಕ ಜೀವನ ಅಲ್ಲೋಲ ಕಲ್ಲೋಲವಾಯಿತು. ಹೀಗೆ ಗಾಯದ ಮೇಲೆ ಉಪ್ಪು ಸುರಿದಂತೆ ರಾಖಿ ಸಾವಂತ್ ಜೀವನದಲ್ಲಿ ಕಷ್ಟಗಳು ಒಂದರ ನಂತರ ಇನ್ನೊಂದು ಎಂಬಂತೆ ಬಂದಿವೆ ಅಂತ ಹೇಳಬಹುದು. ಈಗ ಖುದ್ದು ರಾಖಿ ಸಾವಂತ್ ಅವರೇ ಇತ್ತೀಚೆಗೆ ತನ್ನ ಜಿಮ್ ಹೊರಗೆ ಫೋಟೋ (Photo) ತೆಗೆಸಿಕೊಂಡು ಮತ್ತು ಮಾಧ್ಯಮದವರೊಂದಿಗೆ ಸುಮಾರು ಹೊತ್ತು ಮಾತನಾಡಿದರು. ಅವರು ದುಬೈನಲ್ಲಿ ತಮ್ಮ ಅಕಾಡೆಮಿಯನ್ನು ಶುರು ಮಾಡಲು ಯೋಜಿಸುತ್ತಿರುವ ಬಗ್ಗೆ, ಅವರ ಮುಂದಿನ ಜೀವನ (Life), ಭವಿಷ್ಯದ ಕನಸುಗಳ ಬಗ್ಗೆ ನಟಿ ಮನಸ್ಸು ಬಿಚ್ಚಿ ಮಾತಾಡಿದ್ದಾರೆ ನೋಡಿ.


ತನ್ನ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಬಾಲಿವುಡ್ ನಲ್ಲಿ ಅವಕಾಶ ಕೊಡಿಸ್ತಾರಂತೆ ರಾಖಿ


“ತನ್ನ ಅಕಾಡೆಮಿಯಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಾಲಿವುಡ್, ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವ ಯೋಜನೆಯನ್ನು ನಾನು ಹೊಂದಿದ್ದೇನೆ.


ರಿಯಾಲಿಟಿ ಶೋಗಳಿಗೆ ಉತ್ತಮ ಗಾಯಕರ ಅಗತ್ಯವಿದೆ ಮತ್ತು ದುಬೈನ ರಾಖಿ ಸಾವಂತ್ ಅಕಾಡೆಮಿ ಉತ್ತಮ ಪ್ರತಿಭೆಗಳನ್ನು ಹೊಂದಿದೆ. ಮುಂಬೈನಲ್ಲಿಯೂ ಸಹ ಅಕಾಡೆಮಿಯನ್ನು ತೆರೆಯುವ ಯೋಜನೆ ಇದೆ” ಎಂದು ರಾಖಿ ಹೇಳಿದರು.


ನಾನು ಕೆಲವು ದಿನಗಳನ್ನು ದುಃಖದಲ್ಲಿ ಕಳೆದಿದ್ದೇನೆ ಆದರೆ ನನ್ನ ಜೀವನದಲ್ಲಿ ಇದೀಗ ಮತ್ತೆ ಸಂತೋಷ ಮರಳುತ್ತಿದೆ. ನಾನು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದೇನೆ.


ನಾನು ನನ್ನ ಅಕಾಡೆಮಿಯನ್ನು ಪ್ರಾರಂಭಿಸುತ್ತೇನೆ. ಆದಿಲ್ ನನ್ನನ್ನು ಸಾಕಷ್ಟು ಅವಮಾನ ಮಾಡಿದ್ದ, ಆದರೆ ದೇವರು, ಅಭಿಮಾನಿಗಳು ಮತ್ತು ಮಾಧ್ಯಮದವರು ನನ್ನನ್ನು ಎಲ್ಲದರಿಂದಲೂ ಹೊರಗೆ ಬರಲು ಸಹಾಯ ಮಾಡಿದವು ಎಂದು ನಟಿ ಹೇಳಿದರು.


ಗಾಡ್ ಮದರ್ ಆಗಲು ಇಷ್ಟಪಡ್ತಾರಂತೆ ರಾಖಿ


“ನಾನು ಈಗಾಗಲೇ ಸತ್ತಿದ್ದೇನೆ, ನಾನು ಒಂದು ನಿರ್ಜೀವ ಆತ್ಮ. ನಿಮ್ಮ ಜೀವನದಲ್ಲಿ ಮಹಿಳೆಯರನ್ನು ಗೌರವಿಸಿ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ.


ನಾನು ಮುಂಬೈಗೆ ಬಂದಾಗ ನನಗೆ ಯಾವುದೇ ರೀತಿಯ ಗಾಡ್ ಫಾದರ್ ಇರಲಿಲ್ಲ. ಆದರೆ ಈಗ ನಾನು ಎಲ್ಲರ ಗಾಡ್ ಮದರ್ ಆಗಲು ಬಯಸುತ್ತೇನೆ. ನಾನು ಪ್ರತಿಭೆಗಳನ್ನು ಬೆಂಬಲಿಸಲು ಬಯಸುತ್ತೇನೆ. ನನ್ನ ಅಕಾಡೆಮಿ ಎಲ್ಲಾ ರೀತಿಯ ಪ್ರತಿಭೆಗಳನ್ನು ಬೆಂಬಲಿಸಲು ಬಯಸುತ್ತದೆ" ಎಂದು ಅವರು ಹೇಳಿದರು.


ಕ್ಯಾನ್ಸರ್ ಆಸ್ಪತ್ರೆ ತೆರೆಯಲು ಮುಂದಾದ ರಾಖಿ


“ನನ್ನ ತಾಯಿ ತನ್ನ ಕೊನೆಯ ಉಸಿರಿರುವವರೆಗೂ ಕ್ಯಾನ್ಸರ್ ರೋಗದ ವಿರುದ್ದ ಹೋರಾಡಿದರು. ನಾನು ಅವಳ ಜೀವವನ್ನು ತೆಗೆದುಕೊಳ್ಳಲು ದೇವರನ್ನು ಪ್ರಾರ್ಥಿಸಿದ್ದೆ, ಏಕೆಂದರೆ ನನಗೆ ಅವಳ ನೋವನ್ನು ನೋಡುವುದಕ್ಕೆ ಸಾಧ್ಯವಾಗಲಿಲ್ಲ.


ಅವಳು ತನ್ನ ಜ್ಞಾಪಕ ಶಕ್ತಿಯನ್ನು ಕಳೆದುಕೊಂಡಿದ್ದಳು, ಅನೇಕ ಔಷಧಿಗಳನ್ನು ಸೇವಿಸುತ್ತಾ ಆಕೆಯ ದೇಹವು ಪಾರ್ಶ್ವವಾಯುವಿಗೆ ಒಳಗಾಗಿತ್ತು. ಅವಳು ನೋವಿನಿಂದ ಮುಕ್ತಳಾಗಬೇಕೆಂದು ನಾನು ಬಯಸಿದ್ದೆ.


ಅಂತಹ ದುಬಾರಿ ಚಿಕಿತ್ಸೆಗಳನ್ನು ಭರಿಸಲು ಸಾಧ್ಯವಾಗದವರಿಗೆ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲು ನನ್ನನ್ನು ಸಾಕಷ್ಟು ಸಮರ್ಥಳನ್ನಾಗಿ ಮಾಡಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.


ಆದಿಲ್ ಬಗ್ಗೆ ರಾಖಿ ಹೇಳಿದ್ದೇನು?


ಆದಿಲ್ ಮೈಸೂರು ಜೈಲಿನಿಂದ ನನಗೆ ಕರೆ ಮಾಡಿ ತಾನು ಹಿಂತಿರುಗಲು ಬಯಸುತ್ತೇನೆ ಎಂದು ಹೇಳಿದನು. ಅವರಿಗೆ ಮತ್ತೊಂದು ಅವಕಾಶ ಬಯಸುತ್ತಾರೆ ಅಂತ ನಾನು ಸಹ ಆದಿಲ್ ಗೆ "ಎಲ್ಲವನ್ನೂ ಬಿಟ್ಟು ನನ್ನೊಂದಿಗೆ ಇರಿ, ನೀವು ನನಗೆ ನನ್ನ ತಾಯಿಯನ್ನು ಮರಳಿ ಕೊಡುತ್ತೀರಾ? ನನ್ನ ಗೌರವವನ್ನು ನೀವು ತಿರುಗಿ ಕೊಡಲು ಸಾಧ್ಯವೇ?" ಅಂತ ಕೇಳಿದರಂತೆ.


ಇದನ್ನೂ ಓದಿ: ಆ್ಯಕ್ಸಿಡೆಂಟ್‌ನಲ್ಲಿ ಗಿರಿಜಾಳನ್ನು ಕೊಂದ ದೀಪಿಕಾ! ನೇಹಾ ಗೌಡ ಪಾತ್ರ ಇಷ್ಟು ಬೇಗ ಅಂತ್ಯವಾಯ್ತಾ?


“ಆದಿಲ್ ನಿಜವಾಗಿಯೂ ಹಿಂತಿರುಗಲು ಬಯಸಿದರೆ, ಅವನು ಎಂದಿಗೂ ನನಗೆ ಮೋಸ ಮಾಡಬಾರದು, ನನ್ನನ್ನು ದೈಹಿಕವಾಗಿ ನಿಂದಿಸಬಾರದು ಮತ್ತು ನನ್ನಿಂದ ತೆಗೆದುಕೊಂಡ ಹಣವನ್ನು ಹಿಂದಿರುಗಿಸುತ್ತಾನೆ ಎಂದು ಲಿಖಿತವಾಗಿ ಬರೆದು ಕೊಡಬೇಕು.


ನನ್ನ ಗೌರವವನ್ನು ನನಗೆ ಹಿಂತಿರುಗಿಸಿ ಮತ್ತು ಈ ಮದುವೆಗೆ ಬದ್ದವಾಗಿರಬೇಕು” ಅಂತೆಲ್ಲಾ ನಾನು ಅವರಿಗೆ ಹೇಳಿದಾಗ, ಅವರು ಅದನ್ನು ಕಾನೂನುಬದ್ಧವಾಗಿ ಲಿಖಿತವಾಗಿ ನೀಡುವುದಿಲ್ಲ ಎಂದು ಹೇಳಿದರು.


ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತು ನನ್ನನ್ನು ಕೊಲ್ಲಲು ಅವನು ಹಿಂತಿರುಗಲು ಬಯಸುತ್ತಾನೆಯೇ? ಅವನು ಹಿಂತಿರುಗಿ ಬಂದು ನನಗೆ ಏನಾದರೂ ಮಾಡಿದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ? ಅಂತ ರಾಖಿ ಕೇಳಿದರು.




ಬೇರೆ ಮದ್ವೆ ಅಗಲ್ವಂತೆ ಮತ್ತು ಆದಿಲ್ ಗೆ ಡಿವೋರ್ಸ್ ಸಹ ಕೊಡಲ್ವಂತೆ ರಾಖಿ..


“ನಾನು ಆದಿಲ್ ಗೆ ವಿಚ್ಛೇದನ ನೀಡುವುದಿಲ್ಲ, ಏಕೆಂದರೆ ಅವನು ಬೇರೆ ಯಾವುದೇ ಮಹಿಳೆಯ ಜೀವನವನ್ನು ಹಾಳು ಮಾಡುವುದನ್ನು ನಾನು ಬಯಸುವುದಿಲ್ಲ.


ನಾನು ಜೀವನದಲ್ಲಿ ಎಂದಿಗೂ ಇನ್ನೊಂದು ಮದುವೆ ಸಹ ಆಗೋದಿಲ್ಲ ಅಥವಾ ಮಕ್ಕಳ ಬಗ್ಗೆ ಸಹ ಯೋಚಿಸುವುದಿಲ್ಲ, ನನ್ನ ವಿದ್ಯಾರ್ಥಿಗಳೇ ನನ್ನ ಮಕ್ಕಳು. ಮದರ್ ತೆರೇಸಾ ಎಂದಿಗೂ ಮದುವೆಯಾಗಲಿಲ್ಲ, ಅವರು ಅಗತ್ಯವಿರುವ ಮಕ್ಕಳನ್ನು ನೋಡಿಕೊಂಡರು” ಎಂದು ರಾಖಿ ಹೇಳಿದರು.

First published: