ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಟ್ರೋಲ್
(Troll) ಆಗುತ್ತಿರಬಹುದು. ಪ್ರತಿದಿನ ಇವರು ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಇವರ ನೆರವಿನ ಗುಣ ಬಹಳಷ್ಟು ಸಲ ಹೈಲೈಟ್ ಆಗಿದೆ. ಇತ್ತೀಚೆಗೆ ರಾಖಿ ಸಾವಂತ್ ಅವರು ರಸ್ತೆ ಬದಿ ಫುಟ್ಪಾತ್ನಲ್ಲಿ (Footpath) ಬಡ ಕುಟುಂಬವೊಂದಕ್ಕೆ ಸಹಾಯ ಮಾಡುತ್ತಿರುವುದು ಕಂಡುಬಂತು. ಘಟನೆಯ ವಿಡಿಯೋ (Video) ಈಗ ವೈರಲ್ (Viral) ಆಗಿದ್ದು ರಾಖಿ ಅವರ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಪುಟ್ಟ ಬಾಲಕಿಯನ್ನು ಕರೆದುಕೊಂಡು ಚಿಕಿತ್ಸೆ ಕೊಡಲು ಹೋಗುತ್ತಿದ್ದ ಮಹಿಳೆಯ ಖಾತೆಗೆ ಅವರ ನಂಬರ್ ಕೇಳಿ 5 ಸಾವಿರ ಕಳುಹಿಸಿದ್ದಾರೆ ರಾಖಿ ಸಾವಂತ್. ಚಿಕಿತ್ಸೆಗೆ ಕುಟುಂಬದ ಕೈಯಲ್ಲಿ ಅಗತ್ಯ ಹಣ ಇರದ ಕಾರಣ ರಾಖಿ ಸಾವಂತ್ ನೆರವಾಗಿದ್ದಾರೆ.
ಬಾಲಕಿಗೆ ಶೀಘ್ರ ಚಿಕಿತ್ಸೆ ಕೊಡಿಸಬೇಕು. ಆಕೆಗೆ ದಿನವೂ ಹಣ ಕಳುಹಿಸುವುದಾಗಿ ರಾಖಿ ಸಾವಂತ್ ಹೇಳಿದ್ದಾರೆ. ನೀವು ಒಬ್ಬಂಟಿ ಎಂದು ಭಾವಿಸಬೇಡಿ ಎಂದು ರಾಖಿ ಮಹಿಳೆಗೆ ಧೈರ್ಯ ಹೇಳಿದರು. ರಾಖಿ ಕಾರ್ಯಕ್ಕೆ ಕ್ಯಾಮೆರಾಮೆನ್ಗಳು ಕ್ಲಾಪ್ ಹೊಡೆದು ಪ್ರೋತ್ಸಾಹಿಸಿದರು.
View this post on Instagram
ನಾನು ಯಾವಾಗಲೂ ಸಮಾಜಕ್ಕೆ ಹಿಂದಿರುಗಿಸಿ ಕೊಡುವುದರಲ್ಲಿ ನಂಬಿಕೆ ಇಟ್ಟಿದ್ದೇನೆ. ನಾಳೆ ನಾನು ಬದುಕಿರದಿದ್ದರೆ, ಬೇಡ 2 ಗಂಟೆ ಬಿಟ್ಟು ನಾನು ಬದುಕಿರದಿದ್ದರೆ ಆಗ ಜಗತ್ತು ನಾನು ಬಿಟ್ಟು ಹೋದ ಆಸ್ತಿ ಹಿಂದೆ ಬೀಳುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Reeshma Nanaiah: KD ಲೇಡಿ ಮಚ್ ಲಕ್ಷ್ಮಿ ಮಸ್ತ್ ಮಸ್ತ್ ಡ್ಯಾನ್ಸ್! ಹಳೆ ಹಾಡು ಹೊಸ ಕುಣಿತ, ವಿಡಿಯೋ ಸಖತ್ ವೈರಲ್
ದೇವರು ಪ್ರತಿಯೊಬ್ಬರನ್ನು ಪರೀಕ್ಷಿಸುತ್ತಾರೆ. ದೇವರು ಆ ಪುಟ್ಟ ಬಾಲಕಿ ರೂಪದಲ್ಲಿಯೇ ಬಂದಿರಬಹುದು. ನಿಷ್ಠೆ ಪರೀಕ್ಷಿಸಲು ಬಂದಿರಬಹುದು. ತಾನು ದುಡಿಯುವುದನ್ನು ಅಗತ್ಯ ಇರುವವರಿಗೆ ಹಾಗೂ ಬಡವರಿಗೆ ನೀಡುವುದಲ್ಲಿ ನಾನು ನಂಬಿಕೆ ಇಡುತ್ತೇನೆ ಎಂದದ್ದಾರೆ ನಟಿ. ನಾನು ನನ್ನ ಸಂಪತ್ತನ್ನು ಮುಂದಿನ ತಲೆಮಾರಿಗೆ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ.
ರಾಖಿ ಸಾವಂತ್ ಶರಾಬಿ ಹಾಡಿನಲ್ಲಿ ಕೊನೆಯಬಾರಿಗೆ ಕಾಣಿಸಿಕೊಂಡಿದ್ದರು. ಕಂಗನಾ ರಣಾವತ್ ಅವರ ಲಾಕಪ್ 2ನಲ್ಲಿ ರಾಖಿ ಸಾವಂತ್ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಬಂದಿತ್ತು. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನಿಂದ ಬಾಲಿವುಡ್ ಸಲ್ಲೂ ಭಾಯ್ಗೆ ಕೊಲೆ ಬೆದರಿಕೆ ಬಂದಿರುವುದು ನಟನ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ. ಸಲ್ಮಾನ್ ಖಾನ್ ಮಾತ್ರವಲ್ಲದೆ ನಟಿ, ಸೋಷಿಯಲ್ ಮೀಡಿಯಾ ಸೆನ್ಸೇಷನ್ ರಾಖಿ ಸಾವಂತ್ ಅವರಿಗೂ ಬೆದರಿಕೆ ಬಂದಿದೆ. ಸಲ್ಮಾನ್ ಖಾನ್ ಅವರನ್ನು ಸಪೋರ್ಟ್ ಮಾಡುತ್ತಿರುವುದಕ್ಕೆ ನಟಿಗೆ ವಾರ್ನಿಂಗ್ ನೀಡಲಾಗಿದೆ.
ನಟಿ ರಾಖಿ ಸಾವಂತ್ ಅವರಿಗೇ ಈ ಮೇಲ್ ಕಳುಹಿಸಲಾಗಿದ್ದು ಗ್ಯಾಂಗ್ಸ್ಟರ್ ಪಟ್ಟಿಯಲ್ಲಿ ನಟಿಯ ಹೆಸರೂ ಇರುವುದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಬಿಷ್ಣೋಯ್ ಗ್ಯಾಂಗ್ ಸದಸ್ಯರು ಈ ವಿಷಯದಿಂದ ನೀನು ದೂರ ಇರು ಎಂದು ವಾರ್ನ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ