Rakhi Sawanth: ಮತ್ತೆ ಪ್ರೀತಿಯಲ್ಲಿ ಮೋಸ ಹೋದ್ರಾ ರಾಖಿ ಸಾವಂತ್? ಆದಿಲ್ ಕೇವಲ ನನ್ನವನು ಎಂದಿದ್ದು ಯಾರಿಗೆ?

Bollywood Gossips: ಆದಿಲ್ ಕೂಡ ಮೈಸೂರಿಗೆ ಸೇರಿದವರಾಗಿದ್ದ, ರಾಖಿ ಸಾವಂತ್‌ಗೆ ಮೈಸೂರಿನ ರೋಶಿನಾ ದೆಲಾವರಿ ಎಂಬ ಹುಡುಗಿಯಿಂದ ಕರೆ ಬಂದಿದೆ. ಆ ಒಂದು ಕರೆ ಎಲ್ಲಾವನ್ನು ಬದಲಿಸಿದೆ ಎನ್ನಲಾಗುತ್ತಿದೆ.

ನಟಿ ರಾಖಿ ಸಾವಂತ್

ನಟಿ ರಾಖಿ ಸಾವಂತ್

  • Share this:
ರಾಖಿ ಸಾವಂತ್ (Rakhi Sawanth) ಯಾವಾಗಲೂ ಸುದ್ದಿಯಲ್ಲಿರುವ ನಟಿಯರಲ್ಲಿ ಒಬ್ಬರು. ಒಂದೆಲ್ಲ ಒಂದು ಕಾರಣಕ್ಕೆ ಪ್ರಚಾರದಲ್ಲಿರಲು ಅವರಿಗೆ ಇಷ್ಟ ಎಂದರೆ ತಪ್ಪಾಗಲಾರದು. ಅಲ್ಲದೇ ಪತಿ ವಿಚ್ಛೇದಿತ ಪತಿ ರಿತೇಶ್ ಸಿಂಗ್‌ನಿಂದ (Ritesh Singh)  ಬೇರ್ಪಡುವುದಾಗಿ ಘೋಷಿಸಿದಾಗಿನಿಂದ ರಾಖಿ ಸಾವಂತ್ ಸುದ್ದಿಯಲ್ಲಿದ್ದಾರೆ. ನಂತರ ಕೂಡ ಮತ್ತೊಬ್ಬ ವ್ಯಕ್ತಿಯ ಜೊತೆ ಪ್ರೀತಿಯಲ್ಲಿರುವುದಾಗಿ ಹೇಳಿದ್ದಲ್ಲದೇ, ಹೊಸ ಗೆಳೆಯ ಆದಿಲ್ ಖಾನ್ (Adil Khan)  ದುರಾನಿಯನ್ನು ಸಹ ಜನರಿಗೆ ಪರಿಚಯ ಮಾಡಿಸಿದ್ದರು. ಈ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ಇದೀಗ ಈ ಬಗ್ಗೆ ಪಾಪರಾಜಿಗಳ ಜೊತೆ ಅವರು ಮಾತನಾಡಿದ್ದು, ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಮೊದಲ ಭೇಟಿಯಾದ ಕೇವಲ ಒಂದು ತಿಂಗಳೊಳಗೆ ಆದಿಲ್ ತನಗೆ ಪ್ರಪೋಸ್ ಮಾಡಿದ್ದನ್ನು ಅವರು ಬಹಿರಂಗಪಡಿಸಿದ್ದು. ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ಮತ್ತು ಮಲೈಕಾ ಅರೋರಾ-ಅರ್ಜುನ್ ಕಪೂರ್ ಅವರ ಉದಾಹರಣೆಗಳನ್ನು ನೀಡಿ ತಮ್ಮ ಮತ್ತು ಆ ಹುಡುಗನ ನಡುವಿನ ವಯಸ್ಸಿನ ಅಂತರದ ಬಗ್ಗೆ ಹೇಳಿದ್ದಾರೆ. ರಾಖಿ ಜೀವನದಲ್ಲಿ ಈ ಹುಡುಗ ಬಂದಿದ್ದರಿಂದ ಬಹಳ ಸಂತೋಷವವಾಗಿದ್ದೇನೆ ಎಂದು ಸಹ ಹೇಳಿದ್ದರು. ಆದರೆ ಕೆಲ ಮೂಲಗಳ ಪ್ರಕಾರ ಈ ಖುಷಿ ಕೇವಲ ಕೆಲ ದಿನಗಳಾದ್ದಾಗಿದೆ ಎನ್ನಲಾಗುತ್ತಿದೆ.

ಮೈಸೂರಿನಿಂದ ರಾಕಿಗೆ ಬಂದಿತ್ತು ಒಂದು ಕಾಲ್ 

ಆದಿಲ್ ಕೂಡ ಮೈಸೂರಿಗೆ ಸೇರಿದವರಾಗಿದ್ದ, ರಾಖಿ ಸಾವಂತ್‌ಗೆ ಮೈಸೂರಿನ ರೋಶಿನಾ ದೆಲಾವರಿ ಎಂಬ ಹುಡುಗಿಯಿಂದ ಕರೆ ಬಂದಿದೆ. ಆ ಒಂದು ಕರೆ ಎಲ್ಲಾವನ್ನು ಬದಲಿಸಿದೆ ಎನ್ನಲಾಗುತ್ತಿದೆ. ಆದಿಲ್ ತನ್ನನ್ನು 4 ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ರೋಶಿನಾ ರಾಖಿಗೆ ತಿಳಿಸಿದ್ದಾರೆ. ರೋಶಿನಾ ಅವರು ಆದಿಲ್ ಜೊತೆ ಕಳೆದ ಸಮಯವನ್ನು ರಾಖಿಗೆ ತಿಳಿಸಿದ್ದು, ಇದು ರಾಖಿ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ ಎಂದು ಈ ಟೈಮ್ಸ್ ವರದಿ ಮಾಡಿದೆ.

ರಾಖಿಗೆ ಆದಿಲ್‌ನಿಂದ ದೂರ ಇರುವಂತೆ ಹೇಳಲು ಕರೆ ಬಂದಿತ್ತು ಎನ್ನಲಾಗಿದೆ. ಈ ಬಗ್ಗೆ ರಾಖಿ ಆದಿಲ್ ಜೊತೆ ಮಾತನಾಡಿ, ಪ್ರಶ್ನಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೇ ಆದಿಲ್ ರಾಖಿಗೆ ರೋಷಿನಾ ತನ್ನ ಮಾಜಿ ಗೆಳತಿ ಎಂದು ಹೇಳಿದ್ದಾರೆ, ಅಲ್ಲದೇ ರೋಶಿನಾ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಆದಿಲ್ ಜೊತೆಗಿನ ಫೋಟೋಗಳು ಸಹ ಇದ್ದು, ರಾಖಿ ಮತ್ತು ಆದಿಲ್ ಸಂಬಂಧದ ಬಗ್ಗೆ ಹಲವಾರು ಊಹಾಪೋಹಾಗಳು ಹರಿದಾಡುತ್ತಿವೆ. ಇನ್ನು ಈ ಬಗ್ಗೆ ರೋಶಿನಾ ಅವರನ್ನು ಪ್ರಶ್ನೆ ಮಾಡಲಾಗಿತ್ತು. ಆದರೆ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಸಂಜನಾ ಮಡಿಲು ತುಂಬಿದ ಕಂದಮ್ಮ ಈಗ ಮನೆ ತುಂಬಿತು! ಈ ವಿಡಿಯೋ ನೋಡಿ ನೀವೂ ಮನ ತುಂಬಿ ಹಾರೈಸಿ

ನನ್ನ ಆದಿಲ್ ಮದುವೆಯಾಗುತ್ತದೆ ಅಂದ್ರು ರಾಖಿ

ಆದರೆ ರಾಖಿ ಸಾವಂತ್ ತಮಗೆ ರೋಶಿನಾ ಅವರಿಂದ ಕರೆ ಬಂದಿರುವುದನ್ನು ಖಚಿತಪಡಿಸಿದ್ದಾರೆ. ರಾಖಿ, "ರೋಶಿನಾ ಅವರ ಅವರು ಹೇಳಿದ ಮಾತುಗಳಲ್ಲಿ ಯಾವುದೇ ಸತ್ಯವಿಲ್ಲ. ಅವರು ನನಗೆ ಕರೆ ಮಾಡಿದ್ದು ಸತ್ಯ, ಆದರೆ ಆದಿಲ್ ತನನ್ವರು ಮಾತ್ರ (ಸಿರ್ಫ್ ಮೇರಾ ಹೈ). ಅವಳು ಅವನ ಮಾಜಿ ಗೆಳತಿ. ಮತ್ತು, ಆದಿಲ್ ಮತ್ತು ನಾನು ಮದುವೆಯಾಗಲಿದ್ದೇವೆ ಎಂದು ಹೇಳಿದ್ದಾರೆ.

ಇದೊಂದು ರೀತಿ ಅರ್ಥವಾಗದ ವಿಚಾರವಿರಬಹುದು ಆದರೆ ಕುತೂಹಲಕಾರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ರಾಖಿ ಅಭಿಮಾನಿಗಳು, ರಾಖಿ ಮದುವೆಯಾಗುತ್ತಾ? ಇಲ್ಲವಾ ಎಂದು ಕಾದು ಕುಳಿತಿದ್ದಾರೆ.

ಇದನ್ನೂ ಓದಿ: ಸಖತ್ ಸ್ಟೆಪ್​ ಹಾಕಿದ ಉರ್ಫಿ, ರಾಖಿ - ನಟಿಮಣಿಯರ ಡ್ಯಾನ್ಸ್​ ನೋಡಿ

ಬಾಲಿವುಡ್ ಚಲನಚಿತ್ರೋದ್ಯಮದ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ತಮ್ಮ ದಿಟ್ಟ ಮತ್ತು ಮುಕ್ತ ಸ್ವಭಾವದಿಂದ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ರಾಖಿ ಹಲವು ಬಾರಿ ಹೇಳಿಕೆ ನೀಡುತ್ತಿರುತ್ತಾರೆ. ಅವರು ಹಾಕುವ ವಿಭಿನ್ನ ರೀತಿಯ ಬಟ್ಟೆಗಳು ಸಹ ಯಾವಾಗಲು ಟ್ರೋಲ್ ಆಗುತ್ತದೆ. ಬಿಗ್ಬಾಸ್ ಮನೆಗೆ ಹೋಗಿದ್ದ ರಾಖಿ ಅಲ್ಲಿ ಸಹ ಗಂಡನ ವಿಚಾರವಾಗಿ ಸುದ್ದಿಯಾಗಿದ್ದರೂ, ನಂತರ ಸಹ ಸೆಟ್ ಹೊರಗೆ ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡು, ಟ್ರೋಲ್ ಪೇಜ್ಗಳಿಗೆ ಆಹಾರವಾಗಿದ್ದರು.
Published by:Sandhya M
First published: