Rakhi Sawant: ಲಲಿತ್ ಮೋದಿ - ಸುಶ್ಮಿತಾ ಸೇನ್ ಸಂಬಂಧದ ಬಗ್ಗೆ ಹೀಗಂದ್ರಾ ರಾಕಿ ಸಾವಂತ್? ಹೊಸ ಬಾಂಬ್ ಸಿಡಿಸಿದ ಕಾಂಟ್ರವರ್ಸಿ ಕ್ವೀನ್!

Sushmita Sen: ಲಲಿತ್ ಮೋದಿ ಅವರು ಸುಶ್ಮಿತಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿರುವುದಾಗಿ ಟ್ವೀಟ್‌ನಲ್ಲಿ ತಿಳಿಸಿದ ನಂತರ ಅದು ಹಾಟ್ ಟಾಪಿಕ್ ಆಗಿತ್ತು. ಎಲ್ಲೆಡೆ ಚರ್ಚೆ ಆರಂಭವಾಗಿತ್ತು.

ಸುಶ್ಮಿತಾ ಸೇನ್​

ಸುಶ್ಮಿತಾ ಸೇನ್​

  • Share this:
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit Modi) ಟ್ವಿಟರ್‌ನಲ್ಲಿ ಸುಶ್ಮಿತಾ ಸೇನ್ (Sushmita Sen) ಅವರೊಂದಿಗೆ ಹೊಸ  ಜೀವನದ ಆರಂಭವನ್ನು ಘೋಷಿಸಿದ್ದಾರೆ. ಇಬ್ಬರೂ ಕೇವಲ ಡೇಟಿಂಗ್ ಅಷ್ಟನ್ನೇ ಮಾಡುತ್ತಿದ್ದೇವೆ (Lalit Modi Dates With Sushmita Sen) ಎಂದು ಐಪಿಎಲ್ ಮಾಜಿ ಬಾಸ್ ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಬಾಲಿವುಡ್​ನ ಕಾಂಟ್ರವರ್ಸಿಯಲ್​ ಕ್ವೀನ್​ ರಾಖಿ ಸಾವಂತ್ ಈ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ್ದು, ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ದುಡ್ಡಿಗಾಗಿ ಹುಡುಗರ ಹಿಂದೆ ಹೋಗುತ್ತಾರೆ

ಸುಶ್ಮಿತಾ ಸೇನ್ ಬಗ್ಗೆ ಸ್ವಲ್ಪ ವಿಚಿತ್ರವಾಗಿ ಕಾಮೆಂಟ್​ ಮಾಡಿರುವ ರಾಖಿ ಕೆಲವರು ಸೌಂದರ್ಯಕ್ಕಾಗಿ ಅಲ್ಲ, ದುಡ್ಡಿಗಾಗಿ ಹುಡುಗರ ಹಿಂದೆ ಹೋಗುತ್ತಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ರಾಖಿ ಸಾವಂತ್ ಯಾವಾಗಲೂ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಬಹಳ ಫೇಮಸ್​. ಈ ಬಾರಿ ಹೊಸ ಜೋಡಿಯ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.



ಸುಶ್ಮಿತಾ ಸೇನ್​ ಹಾಗೂ ಲಲಿತ್ ಮೋದಿಯ ನಡುವಿನ ವಯಸ್ಸಿನ ಅಂತರದ ಬಗ್ಗೆ ಸಹ ಮಾತನಾಡಿರುವ ಅವರು, ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ ಅವರನ್ನು ನಾನು ಲವರ್ಸ್ ಎಂದು ಕರೆಯುವುದಿಲ್ಲ, ಅವರಿಬ್ಬರದ್ದು ತಂದೆ ಮಗಳ ಸಂಬಂಧ ಎಂದಿದ್ದಾರೆ. ಅಲ್ಲದೇ, ಸುಶ್ಮಿತಾ ಅವರು ಲಲಿತ್ ಮೋದಿಯ ಸೌಂದರ್ಯ ನೋಡಿ ಇಷ್ಟಪಟ್ಟಿಲ್ಲ, ಅವರು ನೋಡಿದ್ದು ಬರೀ ದುಡ್ಡು ಎಂದು ಕಾಮೆಂಟ್​ ಮಾಡಿದ್ದಾರೆ.



ಇದನ್ನೂ ಓದಿ: ಹೊಸ ಸಿನಿಮಾ ಬಗ್ಗೆ ಅಪ್​ಡೇಟ್​ ಕೊಟ್ಟ ಮೇಘನಾ ರಾಜ್, ಚಿರು ಕನಸು ನನಸು ಮಾಡಿದ ಗೆಳೆಯರು

ಅಲ್ಲದೇ ಇದೇ ವೇಳೆ ದೇಶದ ಪ್ರಧಾನ ಮಂತ್ರಿ ಅವರ ಬಗ್ಗೆಯೂ ಮಾತಾನಾಡಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ‘ಲಲಿತ್ ಮೋದಿ, ವಿಜಯ್ ಮಲ್ಯರಂತಹವರು ದೇಶದಿಂದ ಹಣವನ್ನು ಕೊಳ್ಳೆ ಹೊಡೆದು ವಿದೇಶಕ್ಕೆ ಹೋಗಿ ತಲೆ ಮರೆಸಿಕೊಂಡು ಇದ್ದಾರೆ. ಅಂತಹವರ ಬಗ್ಗೆ ಯಾಕೆ ಏನೂ ಮಾಡಿಲ್ಲ‘ ಎಂದು ಕೇಳಿದ್ದಾರೆ. ಇದಲ್ಲದೇ 'ಮೋದಿಜೀ ನೀವೇಕೆ ಏನೂ ಮಾಡುತ್ತಿಲ್ಲ? ಎಂದು ಹೇಳುವ ಮೂಲಕ ಇಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.



ಪ್ರತಿಕ್ರಿಯೆ ನೀಡಿದ್ದ ಸುಶ್ಮಿತಾ ಸೇನ್​

ಲಲಿತ್ ಮೋದಿ ಅವರು ಸುಶ್ಮಿತಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿರುವುದಾಗಿ ಟ್ವೀಟ್‌ನಲ್ಲಿ ತಿಳಿಸಿದ ನಂತರ ಅದು ಹಾಟ್ ಟಾಪಿಕ್ ಆಗಿತ್ತು. ಎಲ್ಲೆಡೆ ಚರ್ಚೆ ಆರಂಭವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಶ್ಮಿತಾ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳ ಫೋಟೋ ಪೋಸ್ಟ್ ಮಾಡುವ ಮೂಲಕ ಲಲಿತ್ ಮೋದಿ ಅವರೊಂದಿಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಮದುವೆಯೂ ಇಲ್ಲ, ಎಂಗೇಜ್ ಮೆಂಟ್ ಕೂಡ ಆಗಿಲ್ಲ.ನಾನು ಸಂತೋಷವಾಗಿದ್ದೇನೆ ಎಂದು ಬರೆದುಕೊಂಡಿದ್ದರು.



ಇದನ್ನೂ ಓದಿ: ಇಸ್ಮಾರ್ಟ್​ ಜೋಡಿಯಲ್ಲಿ ಮಸ್ತ್ ಮಜಾ ಮಾಡಲಿದ್ದಾರೆ ಈ ದಂಪತಿಗಳು, ಇಲ್ಲಿದೆ ನೋಡಿ ಲಿಸ್ಟ್

ಈ ಎಲ್ಲಾ ಬೆಳವಣಿಗಳು ನಡೆಯುತ್ತಿದ್ದ ಬೆನ್ನಲ್ಲೇ ಲಲಿತ್ ಮೋದಿ ತಮ್ಮ ಇನ್ಸ್ಟಾಗ್ರಾಂ ಫೋಟೋವನ್ನು ಬದಲಿಸಿದ್ದಾರೆ. ಸುಶ್ಮಿತಾ ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಅವರು, ‘ಅಂತಿಮವಾಗಿ ಹೊಸ ಜೀವನದ ಆರಂಭ, ನನ್ನ ಪ್ರೀತಿಯ ಸುಶ್ಮಿತಾ ಸೇನ್ ಅವರೊಂದಿಗೆ‘ ಎಂದು ಬರೆದುಕೊಂಡಿದ್ದಾರೆ. 1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಸುಶ್ಮಿತಾ ಸೇನ್ 1996 ರ ದಸ್ತಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಅವರು ಬಿವಿ ನಂ 1, ಮೈನೆ ಪ್ಯಾರ್ ಕ್ಯೂನ್ ಕಿಯಾ, ಮೈ ಹೂ ನಾ ಮತ್ತು ನೋ ಪ್ರಾಬ್ಲಂ ಚಿತ್ರಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.
Published by:Sandhya M
First published: