HOME » NEWS » Entertainment » RAKHI SAWANT ASKS KANGANA RANAUT YOU HAVE CRORES OF RUPEES AND HELP INDIA PROCURE OXYGEN CYLINDERS STG HG

ಕಂಗನಾ ನೀವು ಸುಮ್ಮನೇ ಮಾತನಾಡುವುದಕ್ಕಿಂತ ನಿಮ್ಮ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಆಕ್ಸಿಜನ್ ತಂದು ಕೊಡಿ: ರಾಖಿ ಸಾವಂತ್

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ರಾಖಿ ಡಬಲ್ ಮಾಸ್ಕ್ ಧರಿಸಿ ಕಾರಿನಿಂದ ಇಳಿಯುತ್ತಾರೆ. ಕೈಯಲ್ಲಿ ಸೋಂಕು ನಿವಾರಕ ಸ್ಪ್ರೇ (ಡಿಸ್ ಇನ್ಫೆಕ್ಟೆಡ್ ಸ್ಪ್ರೇ) ಹಿಡಿದುಕೊಂಡು ಪಾಪರಾಜಿಗಳನ್ನು ಹತ್ತಿರ ಬರಬೇಡಿ ಎಂದು ಸ್ಪ್ರೇ ಹೊಡೆದಿದ್ದಾರೆ.

news18-kannada
Updated:April 29, 2021, 7:39 PM IST
ಕಂಗನಾ ನೀವು ಸುಮ್ಮನೇ ಮಾತನಾಡುವುದಕ್ಕಿಂತ ನಿಮ್ಮ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಆಕ್ಸಿಜನ್ ತಂದು ಕೊಡಿ: ರಾಖಿ ಸಾವಂತ್
ರಾಖಿ ಸಾವಂತ್-ಕಂಗನಾ
  • Share this:
ನೀವೇನೇ ಹೇಳಿ! ರಾಖಿ ಸಾವಂತ್ ತಮ್ಮಿಷ್ಟದಂತೆ ಬದುಕೋ ಬಿಂದಾಸ್ ಬಾಲಿವುಡ್ ಸೆಲೆಬ್ರಿಟಿ. ಅದರಲ್ಲೂ ಆಕೆ ದೇಶದಲ್ಲಿ ಏನೇ ಘಟನೆಗಳು ನಡೆಯಲಿ ಅದನ್ನು ತನ್ನದೇ ಆದ ಸೃಜನಾತ್ಮಕ ಶೈಲಿಯಲ್ಲಿ ಅಭಿವ್ಯಕ್ತಪಡಿಸುವುದು ಮೊದಲಿನಿಂದಲೂ ಇದೆ. ಸದ್ಯ ಕೊರೊನಾ ವೈರಸ್ ದೇಶವ್ಯಾಪಿ ಸಾಂಕ್ರಾಮಿಕವಾಗಿ ಹರಡಿ ತನ್ನ ಶಕ್ತಿ ಪ್ರದರ್ಶನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಖಿ ಸಾವಂತ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಕೊರೊನಾ ಎಂಬುದು ಎಷ್ಟು ಭೀಕರವಾಗಿದೆ! ಈ ಸಂದರ್ಭದಲ್ಲಿ ನಾವು ಎಷ್ಟು ಸುರಕ್ಷತಾ ಕ್ರಮವನ್ನು ಅಳವಡಿಸಿಕೊಳ್ಳಬೇಕು ಅನ್ನೋದನ್ನ ತಿಳಿಸಿದ್ದಾರೆ. ಸ್ವತಃ ತಮ್ಮ ಜೀವನ ಶೈಲಿಯಲ್ಲೇ ರಾಖಿ ಈ ಮಾರ್ಪಾಟು ತಂದಿದ್ದಾರೆ. ಅಷ್ಟೇ ಅಲ್ಲ ಮಾಧ್ಯಮಗಳು ನಟಿ ಕಂಗನಾ ಬಗ್ಗೆ ಕೇಳಿದಾಗ ಕಂಗನಾ ನಿಮ್ಮ ಬಳಿ ಇರುವ ಕೋಟಿ ಕೋಟಿ ಹಣವನ್ನು ವ್ಯಯಿಸಿ ಆಕ್ಸಿಜನ್ ಸಿಲಿಂಡರ್ ಖರೀದಿಸುವ ಮೂಲಕ ರಾಷ್ಟ್ರಕ್ಕೆ ಈ ಕಷ್ಟದ ಸಮಯದಲ್ಲಿ ನೆರವಾಗಿ ಎಂದು ಸಲಹೆ ನೀಡಿದ್ದಾರೆ ರಾಖಿ.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ರಾಖಿ ಡಬಲ್ ಮಾಸ್ಕ್ ಧರಿಸಿ ಕಾರಿನಿಂದ ಇಳಿಯುತ್ತಾರೆ. ಕೈಯಲ್ಲಿ ಸೋಂಕು ನಿವಾರಕ ಸ್ಪ್ರೇ (ಡಿಸ್ ಇನ್ಫೆಕ್ಟೆಡ್ ಸ್ಪ್ರೇ) ಹಿಡಿದುಕೊಂಡು ಪಾಪರಾಜಿಗಳನ್ನು ಹತ್ತಿರ ಬರಬೇಡಿ ಎಂದು ಸ್ಪ್ರೇ ಹೊಡೆದಿದ್ದಾರೆ. ಸುಮಾರು ಮೂರು ನಿಮಿಷಗಳ ಈ ವೀಡಿಯೋದಲ್ಲಿ ರಾಖಿ ಕೊರೊನಾ ಎನ್ನುವುದು ಯಾರ ಪ್ರಾಣವನ್ನು ತೆಗೆಯುವುದಕ್ಕೆ ಬಿಡಬಾರದು. ಅದನ್ನು ಸೋಂಕು ನಿವಾರಕ ಸಿಂಪಡಿಸಿ ಹೊಡೆದು ಸಾಯಿಸಿ ಎಂದಿದ್ದಾರೆ. ಅಲ್ಲದೇ ಮತ್ತೆ ಮತ್ತೆ ಪಾಪರಾಜಿಗಳಿಗೆ ವಾರ್ನ್ ಮಾಡುತ್ತಾ ಹತ್ತಿರ ಬರಬೇಡಿ, ದೂರವೇ ನಿಂತು ಮಾತನಾಡಿ ಎಂದು ಹೇಳಿದ್ದಾರೆ.

ಜೊತೆಗೆ ಈ ಕೊರೊನಾ ಹೊಡೆದೊಡಿಸಲು ನೀವು ನನ್ನ ಹಾಗೇ ಎರಡು ಮಾಸ್ಕ್ ಧರಿಸಬೇಕು. ಜೊತೆಗೆ ಪದೇ ಪದೇ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು ಎನ್ನುತ್ತಾ ಕೈಗಳಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಿಕೊಂಡು ತೋರಿಸಿದ್ದಾರೆ. ಅಲ್ಲದೇ ಸಾಂಕ್ರಾಮಿಕ ರೋಗವನ್ನು ತಡೆಯಲು ರಾಖಿ ಯಾವಾಗಲೂ ಸ್ಯಾನಿಟೈಸರ್ ಸ್ಪ್ರೇ, ಮಾಸ್ಕ್ , ಸೋಂಕು ನಿವಾರಕ ಸ್ಪ್ರೇ ತಪ್ಪದೇ ಬಳಸುತ್ತಿದ್ದಾರಂತೆ. ಇನ್ನು ಈ ಕೊರೊನಾ ಬಿಕ್ಕಟ್ಟಿನ ಮಧ್ಯೆ ಕುಟುಂಬಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಲು ರಾಖಿ ಪಾಪರಾಜಿಗಳಿಗೆ ಬುದ್ಧಿವಾದ ಹೇಳಿದ್ದಾರೆ.

ಇದರ ಮಧ್ಯೆ ರಾಖಿಯನ್ನು ನೋಡಲು ಟ್ರಾಫಿಕ್ ಜಾಮ್ ಮಾಡುತ್ತಿದ್ದ ವ್ಯಕ್ತಿಗಳನ್ನು ಚದುರಿಸಿದ ರಾಖಿ, ಟ್ರಾಫಿಕ್ ಜಾಮ್ ಮಾಡಬೇಡಿ ಎನ್ನುತ್ತಾ ಅವರಿಗೂ ದೂರದಿಂದಲೇ ಕೊರೊನಾ ಎಂದು ಸ್ಪ್ರೇ ಹೊಡೆದಿದ್ದಾರೆ. ಇನ್ನು, ನಟಿ ಹೊರಡಲು ಸಿದ್ಧವಾಗಿದ್ದಾಗ, 'ಸದ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡಿ ದೇಶದ ಸ್ಥಿತಿ ಉತ್ತಮವಾಗಿಲ್ಲ, ಆಕ್ಸಿಜನ್ ದೊರಕುತ್ತಿಲ್ಲ ಎಂದು ಕಂಗನಾ ಹೇಳಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?' ಎಂದಿದ್ದಾರೆ ಪಾಪರಾಜಿಗಳು.

ರಾಖಿ ತನ್ನ ಸಹಜ ಶೈಲಿಯಲ್ಲಿ, "ನಹಿ ಮಿಲ್ ರಹಾ? ಓಹ್ ಹೋ! ಕಂಗನಾ ಜಿ ಆಪ್ ದೇಶ್ ಕಿ ಸೇವಾ ಕೀಜಿಯೆ ನಾ, ಹಮ್ ಯೆಹಿ ಕರ್ ರಹೇ ಹೈ (ಏನು ಸಿಕ್ತಿಲ್ವಾ? ಓಹ್ ಹೋ! ಕಂಗನಾ, ದಯವಿಟ್ಟು ರಾಷ್ಟ್ರ ಸೇವೆ ಮಾಡಿ. ಆಮ್ಲಜನಕವನ್ನು ಖರೀದಿಸಿ ಮತ್ತು ಜನರಿಗೆ ವಿತರಿಸಿ) ಎಂದಿದ್ದಾರೆ. ಅಲ್ಲದೇ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸುವ ಬದಲು ನಮ್ಮ ಹಾಗೇ ಆಕ್ಸಿಜನ್ ಸಿಲಿಂಡರ್ ಖರೀದಿಸಿ ಅದನ್ನು ಅಗತ್ಯ ಇರುವವರಿಗೆ ವಿತರಿಸಿ ಎಂದಿದ್ದಾರೆ.
Youtube Video

ಸದ್ಯ ದೇಶದಲ್ಲಿ ಕಾಣಿಸಿಕೊಂಡಿರುವ ಈ ಬಿಕ್ಕಟ್ಟನ್ನು ಹೊಡೆದೋಡಿಸಲು ಸಾಕಷ್ಟು ಸೆಲೆಬ್ರಿಟಿಗಳು ಶ್ರಮಿಸುತ್ತಿದ್ದಾರೆ. ಆರೋಗ್ಯ ರಕ್ಷಣೆಗೆ ಮೂಲಸೌಕರ್ಯ ಒದಗಿಸಲು ರಾಷ್ಟ್ರ ಕಷ್ಟಪಡುತ್ತಿರುವಾಗ ಈ ಸಂಪನ್ಮೂಲಗಳನ್ನು ಒದಗಿಸಲು ಅನೇಕ ಪ್ರಸಿದ್ಧ ವ್ಯಕ್ತಿಗಳು ಮುಂದೆ ಬಂದಿದ್ದಾರೆ. ಹಣವನ್ನು ದಾನ ಮಾಡುವುದರ ಹೊರತಾಗಿ, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಖಾಲಿ ಇರುವ ಆಸ್ಪತ್ರೆ ಹಾಸಿಗೆಗಳಲ್ಲಿ ಏರಿಕೆ ಮಾಡಲು ಸಾಕಷ್ಟು ಬಾಲಿವುಡ್ ಖ್ಯಾತನಾಮರು ಸಾಮಾಜಿಕ ವೇದಿಕೆಯನ್ನು ಬಳಸುತ್ತಿದ್ದಾರೆ. ಸೋನು ಸೂದ್, ಆಲಿಯಾ ಭಟ್, ತಾಪ್ಸಿ ಪನ್ನು ಮತ್ತು ಪ್ರಿಯಾಂಕಾ ಚೋಪ್ರಾ ಇತರರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.
First published: April 29, 2021, 7:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories