Valentine’s Day: ಪ್ರೇಮಿಗಳ ದಿನದ ಸಂದರ್ಭದಲ್ಲೇ ಬ್ರೇಕಪ್ ಮಾಡ್ಕೊಂಡ ಬಾಲಿವುಡ್ ಜೋಡಿ

ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಕೊನೆಗೂ ತಮ್ಮ ವಿವಾಹ ಬಂಧನದಿಂದ ಹೊರಗೆ ಬಂದಿದ್ದಾರೆ. ಪ್ರೇಮಿಗಳ ದಿನದ ಮುನ್ನಾ ದಿನವೇ ಈ ಜೋಡಿ ಬೇರೆಯಾಗಿದ್ದು ದುರಾದೃಷ್ಟಕರ

ರಾಖಿ ಸಾವಂತ್ ರಿತೇಶ್

ರಾಖಿ ಸಾವಂತ್ ರಿತೇಶ್

  • Share this:
ಬಾಲಿವುಡ್ ನಟಿ (Bollyood Actress), ಬಿಗ್​ಬಾಸ್ ಖ್ಯಾತಿಯ ರಾಖಿ ಸಾವಂತ್ (Rakhi Sawant) ಹಾಗೂ ಅವರ ಪತಿ ಎನ್ನಲಾಗಿರುವ ರಿತೇಶ್ (Ritesh) ಬೇರೆಯಾಗಿದ್ದಾರೆ. ಆರಂಭದಿಂದಲೂ ವಿವಾದಾತ್ಮಕ ಸಂಬಂಧದಲ್ಲಿದ್ದ ರಾಖಿ ಸಾವಂತ್ ಮದುವೆಯಾಗಿದ್ದಾರೋ (Marriage), ಇಲ್ಲವೋ ಒಂದೂ ಸ್ಪಷ್ಟವಿಲ್ಲ. ಬಿಗ್​ಬಾಸ್ ಸೀಸನ್ 15ರಲ್ಲಿ (Bigg Boss 15) ರಿತೇಶ್ ಎಂಟ್ರಿ ಕೊಟ್ಟಾಗ ವೀಕ್ಷಕರು ಸಿಕ್ಕಾಪಟ್ಟೆ ಕುತೂಹಲದಲ್ಲಿದ್ದರು. ಮದುವೆಯಾಗಿ ರಾಖಿಯ ಜೊತೆಗಿರದೆ ಭಾರತದಲ್ಲಿ ಎಲ್ಲೂ ಕಾಣಿಸದೆ ಇದ್ದ ರಿತೇಶ್ ಈಗಾಗಲೇ ವಿವಾಹಿತ ಹಾಗೂ ಮೊದಲ ಮದುವೆಯಲ್ಲಿ ಮಗುವನ್ನೂ ಹೊಂದಿದ್ದಾನೆ. ಬಿಗ್​ಬಾಸ್ ಶೋನಲ್ಲಿ ರಾಖಿ ಹಾಗೂ ರಿತೇಶ್ ಮಿಂಚುವಾಗ ರಿತೇಶ್ ಮೊದಲ ಪತ್ನಿ ಆತ ತನಗೆ ಡಿವೋರ್ಸ್​ ಕೊಡದೆಯೇ ರಾಖಿಯನ್ನು ವರಿಸಿದ್ದಾನೆ, ಅವನು ನನಗೂ ಗಂಡ ಎಂದು ವಿವಾದ ಶುರು ಮಾಡಿದ್ದರು. ಅಂತೂ ಈಗ ರಾಖಿ ಸಾವಂತ್ ದಾಂಪತ್ಯ ಜೀವನ ಕೊನೆಯಾಗಿದೆ. ಇದನ್ನು ಸ್ವತಃ ನಟಿ ಎನೌನ್ಸ್ ಮಾಡಿದ್ದಾರೆ.

ವ್ಯಾಲೆಂಟೈನ್ಸ್ ಡೇ (Valentine's Day) ಮುನ್ನಾ ದಿನ ಸಂಜೆ ನಟಿ ರಾಖಿ ಸಾವಂತ್ ಸೋಷಿಯಲ್ ಮೀಡಿಯಾ ಮೂಲಕ ತಾವು ಪತಿ ರಿತೇಶ್​ನಿಂದ ಬೇರ್ಪಡುತ್ತಿರುವುದಾಗಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಈ ಸಂಬಂಧ ಹೇಳಿಕೆಯನ್ನೂ ಪೋಸ್ಟ್ ಮಾಡಿದ್ದಾರೆ. ಡಿಯರ್ ಫ್ರೆಂಡ್ಸ್, ನಾನು ಹಾಗೂ ರಿತೇಶ್ ಬೇರೆಯಾಗಲು ನಿರ್ಧರಿಸಿದ್ದೇವೆ.

ಬಿಗ್​ಬಾಸ್ (Bigg Boss) ಶೋ ನಂತರ ಬಹಳಷ್ಟು ಘಟನೆಗಳಾದವು. ಅವುಗಳಲ್ಲಿ ಬಹಳಷ್ಟು ನನ್ನ ನಿಯಂತ್ರಣದಲ್ಲಿರಲಿಲ್ಲ. ನಾವಿ ನಮ್ಮ ಭಿನ್ನಾಭಿಪ್ರಾಯಗಳನ್ನು ಸರಿ ಮಾಡುವ ಪ್ರಯತ್ನ ಮಾಡಿದ್ದೇವೆ. ಆದರೆ ಅದು ಫಲ ಕೊಡಲಿಲ್ಲ. ಹಾಗಾಗಿ ನಾವಿಬ್ಬರೂ ಬೇರೆಯಾಗಿ ನಮ್ಮ ಜೀವನವನ್ನು ಬೇರೆ ಬೇರೆ ಹಾದಿಯಲ್ಲಿ ಜೀವನವನ್ನು ಆನಂದಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ರಿತೇಶ್ ಜೀವನಕ್ಕೆ ಶುಭ ಹಾರೈಸಿದ ನಟಿ

ಇದು ಪ್ರೇಮಿಗಳ ದಿನದ ಮೊದಲು ಆಯಿತು. ಆದರೆ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾನು ನಿಜವಾಗಿಯೂ ದುಃಖಿತಳಾಗಿದ್ದೇನೆ. ನಾನು ರಿತೇಶ್ ಜೀವನದಲ್ಲಿ ಉತ್ತಮವಾಗಲಿ ಎಂದು ಹಾರೈಸುತ್ತೇನೆ. ಆದರೆ ನಾನು ಜೀವನದ ಈ ಹಂತದಲ್ಲಿ ನನ್ನ ಕೆಲಸ ಮತ್ತು ನನ್ನ ಜೀವನದ ಮೇಲೆ ಕೇಂದ್ರೀಕರಿಸಬೇಕು. ನನ್ನನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿರಿಸಿಕೊಳ್ಳಬೇಕು. ಯಾವಾಗಲೂ ನನ್ನನ್ನು ಅರ್ಥಮಾಡಿಕೊಂಡು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ.


ಇದನ್ನೂ ಓದಿ: Rakhi Sawant Honeymoon Pics: ಹನಿಮೂನ್​ ಚಿತ್ರಗಳನ್ನು ಹಂಚಿಕೊಂಡ ವಿವಾದಿತ ನಟಿ ರಾಖಿ ಸಾವಂತ್​..!

ಬಿಗ್ ಬಾಸ್ 15 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ

ತನ್ನ ಪತಿಯಿಂದ ಬೇರ್ಪಡುತ್ತಿರುವುದನ್ನು ಘೋಷಿಸಿದಾಗ ನಟಿ ರಾಖಿ ಸಾವಂತ್ ಅವರು ಸದ್ಯ ತಮ್ಮ ಕೆಲಸ ಮತ್ತು ಜೀವನದ ಮೇಲೆ ಕೇಂದ್ರೀಕರಿಸುವುದಾಗಿ ಹೇಳಿದ್ದಾರೆ. ಅವರ ಅಭಿಮಾನಿಗಳ ಬೆಂಬಲವನ್ನು ಅವರು ಬಯಸಿದ್ದಾರೆ. ರಾಖಿ ತನ್ನ ಪತಿ ರಿತೇಶ್ ಅನ್ನು ಬಿಗ್ ಬಾಸ್ 15 ರಲ್ಲಿ ಅವರ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಅವರು ವೈಲ್ಡ್ ಕಾರ್ಡ್ (Wild card) ಎಂಟ್ರಿ ಪಡೆದು ಶೋಗೆ ಪ್ರವೇಶಿಸಿದ್ದಾರೆ. ಎಲಿಮಿನೇಟ್ (Eliminate) ಆಗುವ ಮೊದಲು ಕೆಲವು ವಾರಗಳ ಕಾಲ ಅಲ್ಲಿಯೇ ಇದ್ದರು ನಟಿ.

ರಾಖಿಗೆ ಅವಕಾಶಗಳ ಕೊರತೆ

ಬಾಲಿವುಡ್​ನ ಬೇಡಿಕೆಯ ನಟಿಯಾಗಿದ್ದ ರಾಖಿ ಸಾವಂತ್ ಅವರಿಗೆ ಈಗ ಅವಕಾಶಗಳ (Chance) ಕೊರತೆ ಇದೆ. ಅವರು ಬಹಳಷ್ಟು ಡ್ಯಾನ್ಸ್ ಶೋಗಳನ್ನು ನೀಡುತ್ತಿರುತ್ತಾರೆ. ಆದರೆ ಬಹುತೇಕ ಪ್ರತಿವರ್ಷ ಬಿಗ್​ಬಾಸ್​ನಲ್ಲಿ ಅವಕಾಶ ಸಿಗುವುದರಿಂದ ಅದನ್ನೂ ಅವರು ಆದಾಯದ ದೊಡ್ಡ ಮೂಲವೆಂದೇ ಪರಿಗಣಿಸಿದ್ದಾರೆ.

ಇದನ್ನೂ ಓದಿ: ಬ್ಯಾಡ ಅಂದ್ರು ಬಿಡ್ಲಿಲ್ಲ.. ಸಾಕು ಅಂದ್ರೂ ಕೇಳ್ಲಿಲ್ಲ, ಪಬ್ಲಿಕ್​ನಲ್ಲೇ ಗಂಡನನ್ನು ಎಳೆದು ಲಿಪ್​ಲಾಕ್​ ಮಾಡೇಬಿಟ್ರು!

ಸಲ್ಮಾನ್ ಖಾನ್​ಗೆ ಫೇವರೇಟ್

ಸಲ್ಮಾನ್ ಖಾನ್ (Salman Khan) ಕಳೆದ ವರ್ಷ ಬಿಗ್​ಬಾಸ್ ಸೀಸನ್ 14ರ ನಂತರ ರಾಖಿ ಸಾವಂತ್​ಗೆ ಅವರ ಅಮ್ಮನ ಚಿಕಿತ್ಸೆಗೆ ನೆರವಾಗಿದ್ದರು. ಇದಕ್ಕೆ ನಟಿ ಸೋಷಿಯಲ್ ಮೀಡಿಯಾ (Media) ಮೂಲಕ ಥ್ಯಾಂಕ್ಸ್ ಕೂಡಾ ಹೇಳಿದ್ದರು. ಈ ಬಾರಿಯ ಸೀಸನ್​ನಲ್ಲಿ ಪತಿಯೊಂದಿಗೆ ಎಂಟ್ರಿ ಕೊಟ್ಟ ರಾಖಿಯ ನಿಜವಾದ ಪತಿ ರಿತೇಶ್ ಹೌದೋ ಅಲ್ಲವೋ ಎನ್ನುವ ಬಗ್ಗೆ ಹೋಸ್ಟ್ ಸಲ್ಮಾನ್ ಸೇರಿ ಎಲ್ಲ ಪ್ರೇಕ್ಷಕರಿಗೂ ಕುತೂಹಲವಿತ್ತು. ಆದರೆ ಈಗ ಜೋಡಿ ಬೇರೆಯಾಗಿದ್ದು ಇದು ಬಹುತೇಕ ನಿರೀಕ್ಷಿತವೇ ಆಗಿತ್ತು.
Published by:Divya D
First published: