• Home
  • »
  • News
  • »
  • entertainment
  • »
  • Raju Srivastava: ಹಾಸ್ಯನಟ ರಾಜು ಶ್ರೀವಾಸ್ತವ್​ಗೆ ಹೃದಯಾಘಾತ; ಜಿಮ್​ನಲ್ಲಿ ಕುಸಿದು ಬಿದ್ದ ನಟ

Raju Srivastava: ಹಾಸ್ಯನಟ ರಾಜು ಶ್ರೀವಾಸ್ತವ್​ಗೆ ಹೃದಯಾಘಾತ; ಜಿಮ್​ನಲ್ಲಿ ಕುಸಿದು ಬಿದ್ದ ನಟ

ನಟ ರಾಜು ಶ್ರೀವಾಸ್ತವ್​

ನಟ ರಾಜು ಶ್ರೀವಾಸ್ತವ್​

ಸ್ಟ್ಯಾಂಡ್-ಅಪ್​ ಕಮೇಡಿಯನ್​ (stand-up comedian) ಆಗಿರುವ ರಾಜು ಶ್ರೀವಾಸ್ತವ್​​ ನಿನ್ನೆ ರಾತ್ರಿ ಜಿಮ್​​ನಲ್ಲಿ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ಏಮ್ಸ್‌ಗೆ​ ದಾಖಲು ಮಾಡಲಾಗಿದೆ.

  • Share this:

ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್ (Comedian Raju Srivastava)​ ಅವರಿಗೆ ಹೃದಯಾಘಾತವಾಗಿದೆ (Heart Attack). ಅವರನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ (AIIMS Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿಯ ಜಿಮ್​​​ನಲ್ಲಿ ವರ್ಕ್​​ಔಟ್ (Workout) ಮಾಡ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ಪ್ರಜ್ಞಾಹೀನರಾಗಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೃದಯವನ್ನು (Heart) ಪುನಶ್ಚೇತನಗೊಳಿಸಲು 2 ಬಾರಿ ಸಿಪಿಆರ್ (CPR) ನೀಡಲಾಯಿತು. ಸದ್ಯ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.


ಸ್ಟ್ಯಾಂಡ್-ಅಪ್ ಕಾಮಿಡಿಯನ್


ಹಾಸ್ಯನಟ ಸುನಿಲ್ ಪಾಲ್ ಅವರು ರಾಜು ಶ್ರೀವಾಸ್ತವ್ ಅವರ ಆರೋಗ್ಯದ ಬಗ್ಗೆ ನವೀಕರಣವನ್ನು ನೀಡಿದರು ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಈಗ ಉತ್ತಮವಾಗಿದ್ದಾರೆ ಎಂದು ಬಹಿರಂಗಪಡಿಸಿದರು. ನಿನ್ನೆ ರಾತ್ರಿ ಅವರ ಆರೋಗ್ಯ ಹದಗೆಟ್ಟಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ.


ಜಿಮ್​ನಲ್ಲಿ ವರ್ಕ್​ ಔಟ್​ ಮಾಡುವಾಗ ಕುಸಿದು ಬಿದ್ರು

ಸ್ಟ್ಯಾಂಡ್-ಅಪ್​ ಕಮೇಡಿಯನ್​(stand-up comedian) ಆಗಿರುವ ರಾಜು ಶ್ರೀವಾಸ್ತವ್​​ ನಿನ್ನೆ ರಾತ್ರಿ ಜಿಮ್​​ನಲ್ಲಿ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ಏಮ್ಸ್‌ಗೆ​ ದಾಖಲು ಮಾಡಲಾಗಿದೆ. ಡಾ.ನಿತೀಶ್ ನ್ಯಾಯ್ ನೇತೃತ್ವದ ಹೃದ್ರೋಗ ಮತ್ತು ತುರ್ತು ವಿಭಾಗದ ಎಐಐಎಂಎಸ್ ತಂಡ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಈ ಕುರಿತಂತೆ ರಾಜು ಶ್ರೀವಾಸ್ತವ್​ ಸಹೋದರ ಆಶಿಶ್ ಶ್ರೀವಾಸ್ತವ್​ ಮಾಹಿತಿ ನೀಡಿದರು.





UP ಚಲನಚಿತ್ರ ಮಂಡಳಿ ಅಧ್ಯಕ್ಷರಾಗಿ ಸೇವೆ

ಮೂಲತಃ ಕಾನ್ಪುರ ಮೂಲದವರಾಗಿರುವ ಇವರು, ಉತ್ತರ ಪ್ರದೇಶ ಚಲನಚಿತ್ರ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕೆಲಸ ನಿಮಿತ್ತ ದೆಹಲಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Cardiac Arrest: ಎದೆ ನೋವು, ಉಸಿರಾಟದ ತೊಂದರೆ, ಆಯಾಸ ಕಂಡುಬಂದರೆ ನಿರ್ಲಕ್ಷಿಸಬೇಡಿ!


 ಇನ್ಸ್ಟಾಗ್ರಾಂನಲ್ಲಿ ಪೋಸ್ಟ್​


ರಾಜು ಶ್ರೀವಾಸ್ತವ ಅವರು ಹೃದಯಾಘಾತಕ್ಕೆ ಒಳಗಾಗುವ ಕೆಲವೇ ಗಂಟೆಗಳ ಮೊದಲು, ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯ ವಿಡಿಯೋ ಹಂಚಿಕೊಂಡಿದ್ದರು. ವೀಡಿಯೊದಲ್ಲಿ, ಅವರು ಫೋನ್‌ಗಳಲ್ಲಿ ಕಾಲರ್ ಟ್ಯೂನ್ ಮೂಲಕ ಕೋವಿಡ್ 19 ನಲ್ಲಿ ಹರಡುವ ಮಾಹಿತಿಗೆ ಕುರಿತು ಅವರು ಮಾಡಿದ ಕಾಮಿಡಿ ಸಖತ್​ ವೈರಲ್​ ಆಗಿತ್ತು. ಕೆಲವು ಹಿರಿಯ ನಟರನ್ನು ಅನುಕರಿಸುವ ಶ್ರೀವಾಸ್ತವ, ವಿನೋದ್ ಖನ್ನಾ, ಶಶಿ ಕಪೂರ್ ಅವರ ಧ್ವನಿಯಲ್ಲಿ ಮಿಮಿಕ್ರಿ ಮಾಡುತ್ತಿದ್ದರು.




ಇದನ್ನೂ ಓದಿ: Vikram: ಹಾರ್ಟ್ ಅಟ್ಯಾಕ್​ ಬಗ್ಗೆ ನಟ ವಿಕ್ರಮ್​ ಫಸ್ಟ್​ ರಿಯಾಕ್ಷನ್​! ಎದೆ ಮೇಲೆ ಕೈ ಇಟ್ಟು ನಕ್ಕು ಸುಮ್ಮನಾಗಿದ್ದೇಕೆ ಚಿಯಾನ್?


ಬಿಗ್​ಬಾಸ್​ನಲ್ಲೂ ಭಾಗವಹಿಸಿದ್ದ ರಾಜು ಶ್ರೀವಾಸ್ತವ


ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್‌ನಲ್ಲಿ ಭಾಗವಹಿಸುವ ಮೂಲಕ ಹೆಚ್ಚು ಜನಪ್ರಿಯರಾದ್ರು. ಬಳಿಕ ರಾಜು ಶ್ರೀವಾಸ್ತವ ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.  ಬಾಂಬೆ ಟು ಗೋವಾ ಮತ್ತು ಆಮ್ದಾನಿ ಅತ್ತನ್ನಿ ಖರ್ಚು ರೂಪಯ್ಯ ಮುಂತಾದ ಚಿತ್ರಗಳಲ್ಲಿ  ಅಭಿನಯಿಸಿದ್ದಾರೆ. ಜೊತೆಗೆ ಹಿಂದಿ ಬಿಗ್ ಬಾಸ್ ಸೀಸನ್​ 3ರಲ್ಲಿ ಭಾಗವಹಿಸಿದ್ದರು. ರಾಜು ಶ್ರೀವಾಸ್ತವ ಅವರು ಉತ್ತರ ಪ್ರದೇಶ ಚಲನಚಿತ್ರ ವಿಭಾಗ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

Published by:Pavana HS
First published: