ಬಿಗ್ಬಾಸ್ (Big Boss)..ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ (Reality Show). ಈ ಕಾರ್ಯಕ್ರಮ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಒಂದೇ ಮನೆಲಿ 12 ರಿಂದ 13 ಸೆಲೆಬ್ರಿಟಿ (Celebrity)ಗಳು 100 ದಿನ ಜೊತೆಯಾಗಿರುಗ ಈ ಶೋ, ನೋಡೋಕೆ ಒಂದು ಥ್ರಿಲ್. ಎಲ್ಲ ಭಾಷೆಗಳಲ್ಲೂ ಬಿಗ್ ಬಾಸ್ ಶೋ ಬಂದಿದೆ. ಇದೀಗ ತಮಿಳು ಬಿಗ್ಬಾಸ್ ಸೀಸನ್ 5 ಮುಗಿದಿದೆ. 100 ದಿನ ದೊಡ್ಡ ಮನೆಯಲ್ಲಿದ್ದು ಒಬ್ಬರು ವಿನ್ನರ್ (Winner) ಆಗಿದ್ದಾರೆ. ತಮಿಳು ಬಿಗ್ಬಾಸ್ ಸೀಸನ್ 05 ನಿನ್ನೆಯಷ್ಟೆ ಅಂತ್ಯವಾಗಿದ್ದು, ರಾಜು ಜಯಮೋಹನ್(Raju Jeyamohan) ಈ ಸೀಸನ್ನ ವಿಜೇತರಾಗಿದ್ದಾರೆ. ಬರೋಬ್ಬರಿ 50 ಲಕ್ಷ ರುಪಾಯಿ ಬಹುಮಾನವನ್ನು ಟ್ರೋಫಿಯೊಂದಿಗೆ ಪಡೆದುಕೊಂಡಿದ್ದಾರೆ ರಾಜು ಜಯಮೋಹನ್. ತಮಿಳಿನಲ್ಲಿ ಕಮಲ್ ಹಾಸನ್ ಅವರು ಬಿಗ್ ಬಾಸ್ ನಿರೂಪಕನಾಗಿ ಜನಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಈಗ ತಮಿಳು ಬಿಗ್ ಬಾಸ್ 5ನೇ ಸೀಸನ್ (Tamil Bigg Boss 5) ಮುಕ್ತಾಯ ಆಗಿದೆ. ಕೊವಿಡ್ ಆತಂಕದ ನಡುವೆಯೂ ಯಶಸ್ವಿಯಾಗಿ ಈ ಸೀಸನ್ ಪೂರ್ಣಗೊಂಡಿದೆ. ಈ ಬಾರಿಯ ವಿನ್ನರ್ ಆಗಿ ರಾಜು ಜಯಮೋಹನ್ ಹೊರಹೊಮ್ಮಿದ್ದಾರೆ. ಜ.16ರ ಭಾನುವಾರ ರಾತ್ರಿ ಬಿಗ್ ಬಾಸ್ ಫಿನಾಲೆ ಅದ್ದೂರಿಯಾಗಿ ನಡೆಯಿತು. ಐವರು ಫೈನಲಿಸ್ಟ್ಗಳ ಪೈಕಿ ಅತಿ ಹೆಚ್ಚು ವೋಟ್ ಪಡೆಯುವ ಮೂಲಕ ರಾಜು ಜಯಮೋಹನ್ (Raju Jeyamohan) ಅವರು ಬಿಗ್ ಬಾಸ್ ವಿನ್ನರ್ ಪಟ್ಟಕ್ಕೆ ಏರಿದರು.
ಐವರು ಫೈನಲಿಸ್ಟ್ಗಳ ಪೈಕಿ ಗೆದ್ದು ಬೀಗಿದ ರಾಜು ಜಯಮೋಹನ್!
ರಾಜು ಜಯಮೋಹನ್ ಜೊತೆಗೆ ಪ್ರಿಯಾಂಕಾ ದೇಶಪಾಂಡೆ, ಪಾವನಿ ರೆಡ್ಡಿ, ನಿರೂಪ್ ನಂದಕುಮಾರ್ ಹಾಗೂ ಆಮಿರ್ ಅವರು ಫೈನಲಿಸ್ಟ್ಗಳಾಗಿದ್ದರು. ಎಲ್ಲರ ನಡುವೆ ಟಫ್ ಸ್ಪರ್ಧೆ ಏರ್ಪಟ್ಟಿತ್ತು. ಫಿನಾಲೆ ವೇದಿಕೆ ಮೇಲೆ ರಂಗುರಂಗಿನ ಕಾರ್ಯಕ್ರಮಗಳು ಕೂಡ ನಡೆದವು. ಭರ್ಜರಿ ಮನರಂಜನೆ ನೀಡುವುದರ ಜೊತೆ ಕಮಲ್ ಹಾಸನ್ ಅವರು ವಿನ್ನರ್ ಹೆಸರು ಘೋಷಿಸಿದರು. ಪ್ರಿಯಾಂಕಾ ದೇಶಪಾಂಡೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಎಲ್ಲಾ ಸೀಸನ್ಗಳಂತೆ, ಈ ಸೀಸನ್ ಕೂಡ ಸಾಕಷ್ಟ ಕುತೂಹಲದಿಂದ ಕೂಡಿತ್ತು. ವಿನ್ನರ್ ಹೆಸರು ಘೋಷಣೆಯಾಗುತ್ತಿದ್ದಂತೆ ರಾಜು ಜಯಮೋಹನ್ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಮಗಳೊಂದಿಗೆ ಟೈಂ ಸ್ಪೆಂಡ್ ಮಾಡ್ತಿರೋ ಶ್ರಿಯಾ ಶರಣ್.. ಕ್ಯೂಟ್ ಫೋಟೋಗಳು ವೈರಲ್!
ಟ್ರೋಫಿ ಜೊತೆ 50 ಲಕ್ಷ ಹಣ ಗೆದ್ದ ರಾಜು!
ರಾಜು ಜಯಮೋಹನ್ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಈ ಸೀಸನ್ನ 2ನೇ ಸ್ಪರ್ಧಿಯಾಗಿ ರಾಜು ಜಯಮೋಹನ್ ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ತಮ್ಮ ಪ್ರತಿಭೆಯ ಮೂಲಕ ಎಲ್ಲರನ್ನೂ ಸೆಳೆದುಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಸ್ಟ್ಯಾಂಡಪ್ ಕಾಮಿಡಿಯನ್ ಆದ ಅವರಿಗೆ ಬಹುಬೇಗ ಜನಾಕರ್ಷಣೆ ಸಿಕ್ಕಿತು. ಮಿಮಿಕ್ರಿ ಕಲೆಯಿಂದ ಎಲ್ಲರನ್ನೂ ರಂಜಿಸುತ್ತಿದ್ದರು.ಈ ಸೀಸನ್ನಲ್ಲಿ 5 ಬಾರಿ ರಾಜು ಜಯಮೋಹನ್ ಅವರು ನಾಮಿನೇಟ್ ಆಗಿದ್ದರು. ಆದರೂ ಕೂಡ ಜನರ ವೋಟ್ ಪಡೆಯುವ ಮೂಲಕ ಅವರು ಸೇವ್ ಆಗುತ್ತಲೇ ಬಂದರು.
ಇದನ್ನು ಓದಿ: ಹ್ಯಾಪಿ ಬರ್ತ್ಡೇ ವಿಜಯ್ ಸೇತುಪತಿ.. `ಮಕ್ಕಳ್ ಸೆಲ್ವನ್’ಗೆ ಹೆಸ್ರು ತಂದುಕೊಟ್ಟ ಪಾತ್ರಗಳಿವು..
ಕನ್ನಡದಲ್ಲೂ ರೆಡಿಯಾಗ್ತಿದೆ ಬಿಗ್ ಬಾಸ್ ನ್ಯೂ ಸೀಸನ್!
ಹೌದು, ಕನ್ನಡದಲ್ಲಿ ಬಿಗ್ಬಾಸ್ ಸೀಸನ್ 9 ಶುರು ಮಾಡುವುದಕ್ಕೆ ವೇದಿಕೆ ರೆಡಿಯಾಗುತ್ತಿದೆ. ಬಿಗ್ ಬಾಸ್ ನ ಒಂಬತ್ತನೇ ಸೀಸನ್ ಫೆಬ್ರವರಿಯಲ್ಲಿ ಪ್ರೀಮಿಯರ್ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ.ಬಾಸ್ ಕನ್ನಡ ಸೀಸನ್ 8 ರ ಎರಡನೇ ಇನ್ನಿಂಗ್ಸ್ ಜೂನ್ 23 ರಂದು ಸ್ಥಗಿತಗೊಂಡ ಸ್ಥಳದಿಂದ ಪುನರಾರಂಭವಾಗಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 8 ಅಂತಿಮವಾಗಿ ಮಂಜು ಪಾವಗಡ ಅವರನ್ನು ವಿಜೇತರಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ