Video: 'ಫಸ್ಟ್​ ರ‍್ಯಾಂಕ್​ ರಾಜು' ಈಗ 'ರಾಜು ಜೇಮ್ಸ್​ಬಾಂಡ್': ಬಿಡುಗಡೆಯಾಯಿತು ಸ್ಯಾಂಡಲ್​ವುಡ್​ನ ಬಾಂಡ್​ ಟೀಸರ್​

news18
Updated:August 24, 2018, 1:47 PM IST
Video: 'ಫಸ್ಟ್​ ರ‍್ಯಾಂಕ್​ ರಾಜು' ಈಗ 'ರಾಜು ಜೇಮ್ಸ್​ಬಾಂಡ್': ಬಿಡುಗಡೆಯಾಯಿತು ಸ್ಯಾಂಡಲ್​ವುಡ್​ನ ಬಾಂಡ್​ ಟೀಸರ್​
news18
Updated: August 24, 2018, 1:47 PM IST
ನ್ಯೂಸ್​ 18 ಕನ್ನಡ 

'ಫಸ್ಟ್​ ರ‍್ಯಾಂಕ್​ ರಾಜು', 'ರಾಜು ಕನ್ನಡ ಮೀಡಿಯಂ' ಚಿತ್ರಗಳ ನಂತರ ಗುರುನಂದನ್ ಈಗ ಜೇಮ್ಸ್‍ಬಾಂಡ್ ಅವತಾರ ತಾಳಿದ್ದಾರೆ.  ಹೆಸರಿನಲ್ಲಿ ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ಬರಲಿರೋ 'ರಾಜು ಜೇಮ್ಸ್‍ಬಾಂಡ್' ಸಿನಿಮಾದ ಫಸ್ಟ್​ಲುಕ್ ಟೀಸರ್ ರಿಲೀಸಾಗಿದೆ.



ಒಂದು ನಿಮಿಷ ಮೂರು ಸೆಕೆಂಡ್​ನ ಟೀಸರ್​ ಆರಂಭವಾಗುವುದೇ ಅಣ್ಣಾವರ ಹಳೇ ಸಿನಿಮಾದ ದೃಶ್ಯದಿಂದ. ಚಂದನವನದ ಜೇಮ್ಸ್​ಬಾಂಡ್​ ಅಂದರೆ ಅದು ಡಾ. ರಾಜ್​. ಹೀಗಾಗಿಯೇ ಅವರ ಸಿನಿಮಾಗಳನ್ನು ನೋಡುತ್ತಲೇ ಬೆಳೆಯುವ ಹುಡುಗನ ಕಥೆಯೇ ಈ 'ರಾಜು ಜೇಮ್ಸ್​ಬಾಂಡ್​' ಸಿನಿಮಾ ಎಂದು ಟೀಸರ್​ನಿಂದ ತಿಳಿಯುತ್ತದೆ.

ರಾಜು ಅನ್ನೋ ಹೆಸರು ಗುರುನಂದನ್​ ಅವರಿಗೆ ತುಂಬಾ ಅದೃಷ್ಟ ತಂದು ಕೊಡುವಂತಿದೆ. ಅದಕ್ಕಾಗಿಯೇ ಅವರು ಅಭಿನಯಿಸಿರುವ 'ಫಸ್ಟ್​ ರ‍್ಯಾಂಕ್​ ರಾಜು', 'ರಾಜು ಕನ್ನಡ ಮೀಡಿಯಂ' ಎರಡೂ ಸಿನಿಮಾಗಳೂ ಬಾಕ್ಸಾಫಿಕ್ಸ್​ನಲ್ಲಿ ದೊಡ್ಡ ಹಿಟ್​ ಎಂದೇ ಹೇಳಬಹುದು. ಇನ್ನೂ ಈ ಹೊಸ ಸಿನಿಮಾದಲ್ಲೂ ಗುರುನಂದನ್​ಗೆ ರಾಜು ಅನ್ನೋ ಹೆಸರು ಯಾವ ರೀತಿ ಲಕ್​ ತಂದು ಕೊಡಲಿದೆಯೋ ಕಾದು ನೋಡಬೇಕಷ್ಟೆ.
First published:August 24, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ