ಹಿಂದಿಯ ಬಾಲಿಕಾ ವಧು ಎಂಬ ಧಾರಾವಾಹಿ ಕಿರುತೆರೆಯಲ್ಲಿ ಯಶಸ್ವಿ ಪ್ರದರ್ಶನ ಕಂಡ ನಂತರ ಅದನ್ನು ಕನ್ನಡ ಹಾಗೂ ತೆಲುಗಿನಲ್ಲೂ ಪ್ರಸಾರ ಮಾಡಲಾಯಿತು. ತೆಲುಗಿನಲ್ಲಿ ಈ ಧಾರಾವಾಹಿಯಮನ್ನು ಡಬ್ ಮಾಡಿದರೆ, ಕನ್ನಡದಲ್ಲಿ 'ಪುಟ್ಟ ಗೌರಿ ಮದುವೆ' ಎಂಬ ಹೆಸರಿನಲ್ಲಿ ಹೊಸದಾಗಿ ನಿರ್ಮಿಸಲಾಯಿತು.
ಈ ಧಾರಾವಾಹಿಯಿಂದಲೇ ಬಾಲಿಕಾ ವಧು ಎಂಬ ಹೆಸರಿನಂತೆ ಪಟ್ಟ ಗೌರಿ ಎಂಬ ಹೆಸರೂ ಖ್ಯಾತಿ ಪಡೆದುಕೊಂಡಿತು. ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದ ನಟಿಗೆ ಈಗ ದೆವ್ವದ ಕಾಟ ಆರಂಭವಾಗಿದೆ.
![Raju Gari Gadi 3 first look released and Avika Gor looks terrifying as ghost]()
ನಟಿ ಅವಿಕಾ ಗೋರ್
ಹೌದು, ಕಲರ್ಸ್ನಲ್ಲಿ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ಬಾಲ್ಯದಲ್ಲೇ ವಿವಾಹವಾಗಿದ್ದ ಬಾಲಕಿಯ ಪಾತ್ರದಲ್ಲಿ ಅವಿಕಾ ಗೋರ್ ಅಭಿನಯಿಸಿದ್ದರು. ಇವರೇ ತೆಲುಗಿನಲ್ಲೂ 'ಚಿನ್ನಾರಿ ಪೆಳ್ಳಿ ಕೂತುರು' ಎಂಬ ಹೆಸರಿನಲ್ಲಿ ಚಿರಪರಿಚಿತರಾದರು.
ಇಂತಹ ನಟಿ ಅವಿಕಾ ತೆಲುಗಿನಲ್ಲಿ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರಾದರೂ, ಅದರಿಂದ ಅವರಿಗೆ ಅಷ್ಟು ಹೆಸರು ಬರಲಿಲ್ಲ. ಇದರಿಂದಾಗಿ ಅವಿಕಾ ಮತ್ತೆ ಹಿಂದಿ ಧಾರಾವಾಹಿಗಳತ್ತ ಮುಖ ಮಾಡಿದ್ದರು.
ಇದನ್ನೂ ಓದಿ: ಮೊದಲ ಬಾರಿಗೆ ಸಿನಿಮಾಗೆ ಹಾಡಿದ ಲಹರಿ ವೇಲು: ಸಾಫ್ಟ್ವೇರ್ ದಂಪತಿಗಳ ಕಷ್ಟ ಕುರಿತ ಗೀತೆ ವೈರಲ್..!
ಆದರೆ ಪುಟ್ಟ ಗ್ಯಾಪ್ನ ನಂತರ ಅವಿಕಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದೂ ಸಹ ಟಾಲಿವುಡ್ನಲ್ಲಿ ಅವಿಕಾಗೆ ದೆವ್ವ ಹಿಡಿದಿರುವುದೇ ಈಗ ದೊಡ್ಡ ಸುದ್ದಿ. ಅದರಲ್ಲೂ ಅವಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಒಂದು ಚಿತ್ರದಿಂದ ಈ ಸುದ್ದಿ ಸದ್ದು ಮಾಡುತ್ತಿದೆ.
ಅವಿಕಾ 'ರಾಜು ಗಾರಿ ಗದಿ 3' ಸಿನಿಮಾದ ಮೂಲಕ ಮತ್ತೆ ಟಾಲಿವುಡ್ಗೆ ಕಾಲಿಟ್ಟಿದ್ದಾರೆ. ಹಾರರ್ ಕಾಮಿಟಿ ಜಾನರ್ ಇರುವ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅವಿಕಾ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ.
ನಿರ್ದೇಶಕ ಓಂಕಾರ್ ಅವರು ಮೊದಲು ಪುಟ್ಟ ಸಿನಿಮಾವಾಗಿ ತೆಗೆದ 'ರಾಜು ಗಾರಿ ಗದಿ' ಬಾಕ್ಸಾಫಿಸ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನಂತರ ಇದರ ಸೀಕ್ವೆಲ್ ಆಗಿ 'ರಾಜು ಗಾರಿ ಗದಿ 2' ಚಿತ್ರವನ್ನು ನಾಗಾರ್ಜುನ ಹಾಗೂ ಸಮಂತಾ ಕಾಂಬಿನೇಷನ್ನಲ್ಲಿ ಮಾಡಲಾಯಿತು. ಈಗ ಇದರ ಮೂರನೇ ಭಾಗ ಸಹ ಸೆಟ್ಟೇರಿದೆ.
ಇದನ್ನೂ ಓದಿ: ಗಣಪನ ಮುಂದೆ ತಮಟೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದ ದೊಡ್ಮನೆ ಹುಡುಗರು !
'ಉಯ್ಯಾಲ ಜಂಪಾಲ', 'ಸಿನಿಮಾ ಚೂಪಿಸ್ತಾ ಮಾಮ' ಹಾಗೂ 'ಎಕ್ಕಡಿಕಿ ಪೋತಾವೋ ಚಿನ್ನವಾಡ' ಎಂಬ ತೆಲುಗು ಸಿನಿಮಾಗಳಲ್ಲಿ ಅವಿಕಾ ನಟಿಸಿದ್ದಾರೆ.
ಸಿನಿಮಾಗಿಂತ ಹೆಚ್ಚಾಗಿ ಹಾಟ್ ಫೋಟೋಗಳಿಂದಲೇ ಸುದ್ದಿಯಲ್ಲಿರುವ ನಟಿ ಇವರು..!