ಬಾಲಿವುಡ್‍ನಲ್ಲಿ ಮತ್ತೊಂದು ಮದುವೆ ಸುದ್ದಿ: ಬಹುಕಾಲದ ಗೆಳತಿಯನ್ನು ರಾಜಸ್ಥಾನದಲ್ಲಿ ವರಿಸಲಿರುವ Rajkumar Rao

ರಾಜ್‍ಕುಮಾರ್ ರಾವ್ ಮತ್ತು ಪತ್ರಲೇಖಾ 8 ವರ್ಷಕ್ಕೂ ಹೆಚ್ಚು ಕಾಲದಿಂದ ಪರಸ್ಪರ ಪ್ರೇಮಿಸುತ್ತಿದ್ದಾರೆ. ಪತ್ರಲೇಖಾ ಕೂಡ ನಟಿಯಾಗಿದ್ದು, ತಮ್ಮ ಚೊಚ್ಚಲ ಚಿತ್ರ ಸಿಟಿಲೈಟ್ಸ್‌ನಲ್ಲಿ ರಾಜ್‌ಕುಮಾರ್‌ ರಾವ್ ಅವರೊಂದಿಗೆ ನಟಿಸಿದ್ದರು.

ಪ್ರೀತಿಸಿದ ಹುಡುಗಿ ಜತೆ ವಿವಾಹವಾಗಲಿರುವ ನಟ ರಾಜ್​ಕುಮಾರ್​ ರಾವ್​

ಪ್ರೀತಿಸಿದ ಹುಡುಗಿ ಜತೆ ವಿವಾಹವಾಗಲಿರುವ ನಟ ರಾಜ್​ಕುಮಾರ್​ ರಾವ್​

  • Share this:
ವಿಕ್ಕಿ ಕೌಶಲ್  (Vicky Kaushal)  ಮತ್ತು ಕತ್ರೀನಾ ಕೈಫ್  (Katrina Kaif) ಮದುವೆಯಾಗುತ್ತಿದ್ದಾರೆ. ಮುಂದಿನ ತಿಂಗಳು ಅವರ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂಬ ಗಾಳಿ ಸುದ್ದಿ ಇತ್ತೀಚೆಗೆ ಬಹಳ ಚರ್ಚೆಯಲ್ಲಿದೆ. ಅದೇ ರೀತಿ ದೀರ್ಘ ಕಾಲದಿಂದ ಪ್ರೇಮಿಗಳಾಗಿರುವ ರಣ್‍ಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್  (Alia Bhatt) ಮದುವೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿಯೂ ಇದೆ. ಈ ಎರಡು ಮದುವೆಯ ಸುದ್ದಿಗಳಲ್ಲದೆ, ಇದೀಗ ಮತ್ತೊಂದು ಮದುವೆಯ ಸುದ್ದಿಯು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಅದು ನಟ ರಾಜ್‍ಕುಮಾರ್ ರಾವ್   (Rajkumar Rao) ಮದುವೆಯದ್ದು. ವರದಿಗಳ ಪ್ರಕಾರ, ರಾಜ್ ಕುಮಾರ್ ರಾವ್ ತಮ್ಮ ಬಹುಕಾಲದ ಗೆಳತಿ ಪತ್ರಲೇಖಾ ಅವರನ್ನು (Patralekaa) ಸದ್ಯದಲ್ಲಿಯೇ ವರಿಸಲಿದ್ದಾರೆ. ರಾಜ್ ಕುಮಾರ್ ರಾವ್‌ ಮದುವೆ ಮುಂದಿನ ವರ್ಷವೋ, ಮುಂದಿನ ತಿಂಗಳೋ ಅಲ್ಲ, ಇದೇ ನವಂಬರ್ 10, 11 ಮತ್ತು 12ರಂದು ನಡೆಯಲಿದೆಯಂತೆ. ಹೊಸ ಮಾಹಿತಿಗಳ ಪ್ರಕಾರ, ರಾಜಸ್ಥಾನದ ಜೈಪುರದಲ್ಲಿ ಸಾಂಪ್ರದಾಯಿಕವಾಗಿ ವಿಧಾನದಲ್ಲಿ ಮದುವೆಯಾಗಬೇಕು ಎಂದು ಈ ಸಿಟಿಲೈಟ್ಸ್ ಸಿನಿಮಾದ ಜೋಡಿ ನಿರ್ಧರಿಸಿದೆ.

“ಅವರಿಬ್ಬರು ಜೈಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಮದುವೆ ಆಗಲಿದ್ದಾರೆ. ಆಹ್ವಾನ ಪತ್ರಿಕೆಗಳು ಈಗಷ್ಟೆ ಹೊರ ಬರುತ್ತಿವೆ ಮತ್ತು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಅವರ ಹತ್ತಿರದ ಸ್ನೇಹಿತರು ಮತ್ತು ಬಂಧುಗಳು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ರಾಜ್‍ಕುಮಾರ್ ರಾವ್ ಮತ್ತು ಪತ್ರಲೇಖಾ 8 ವರ್ಷಕ್ಕೂ ಹೆಚ್ಚು ಕಾಲದಿಂದ ಪರಸ್ಪರ ಪ್ರೇಮಿಸುತ್ತಿದ್ದಾರೆ. ಪತ್ರಲೇಖಾ ಕೂಡ ನಟಿಯಾಗಿದ್ದು, ತಮ್ಮ ಚೊಚ್ಚಲ ಚಿತ್ರ ಸಿಟಿಲೈಟ್ಸ್‌ನಲ್ಲಿ ರಾಜ್‌ಕುಮಾರ್‌ ರಾವ್ ಅವರೊಂದಿಗೆ ನಟಿಸಿದ್ದರು.
ಹಳೆಯ ಸಂದರ್ಶನವೊಂದರಲ್ಲಿ, ಪತ್ರಲೇಖಾ ರಾಜ್‍ಕುಮಾರ್ ರಾವ್ ಅವರನ್ನು ಮೊದಲ ಬಾರಿ ಭೇಟಿಯಾದದ್ದನ್ನು ನೆನಪಿಸಿಕೊಂಡಿದ್ದರು. ಆಕೆ ಮೊದಲು ರಾಜ್‍ಕುಮಾರ್‌ರನ್ನು LSD (ಲವ್ ಸೆಕ್ಸ್ ಔರ್ ಧೋಖಾ) ಸಿನಿಮಾದಲ್ಲಿ ನೋಡಿದ್ದೆ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: Judgemental Hai Kya Trailer: 'ಜಡ್ಜ್​ಮೆಂಟಲ್ ಹೈ ಕ್ಯಾ​' ಸಿನಿಮಾದ ಟ್ರೈಲರ್​ನಲ್ಲಿ ಮಿಂಚಿದ ಕಂಗನಾ-ರಾಜ್​ಕುಮಾರ್ ರಾವ್​..!

ಸಿನಿಮಾದಲ್ಲಿ ಮಾಡಿದ್ದ ವಿಚಿತ್ರ ವ್ಯಕ್ತಿಯ ಪಾತ್ರದಂತೆಯೇ ಆತ ನಿಜವಾಗಿಯೂ ಇದ್ದಾನೆ ಎಂದು ನಾನು ಭಾವಿಸಿದ್ದೆ. ಆತನ ಬಗ್ಗೆ ನನ್ನ ದೃಷ್ಟಿಕೋನ ಆಗಲೇ ಕಳಂಕಿತವಾಗಿತ್ತು. ಆತ ನನ್ನನ್ನು ಮೊದಲು ಒಂದು ಜಾಹಿರಾತಿನಲ್ಲಿ ನೋಡಿದ್ದ ಮತ್ತು ‘ನಾನು ಆಕೆಯನ್ನು ಮದುವೆಯಾಗುತ್ತೇನೆ’ ಎಂದು ಯೋಚಿಸಿದ್ದಾಗಿ ಬಳಿಕ ನನಗೆ ಹೇಳಿದ್ದ. ಅದು ತುಂಬಾ ವಿಡಂಬನಾತ್ಮಕವಾಗಿತ್ತು” ಎಂದು ಆಕೆ ನೆನಪಿಸಿಕೊಂಡಿದ್ದರು.

ಇದನ್ನೂ ಓದಿ: ಮತ್ತೊಮ್ಮೆ‌ ಸಖತ್ ಹಾಟ್ ಲುಕ್​ನಲ್ಲಿ ಡಿಂಪಲ್ ಕ್ವೀನ್ Rachita Ram

ಪತ್ರಲೇಖಾ ಅವರನ್ನು ಭೇಟಿಯಾಗುವ ಮೊದಲು, ಆಕೆಯ ಜಾಹೀರಾತನ್ನು ನೋಡಿದ್ದರು ಮತ್ತು ತನ್ನಷ್ಟಕ್ಕೆ, “ಎಷ್ಟು ಸುಂದರವಾದ ಹುಡುಗಿ, ಈಕೆಯನ್ನು ಮದುವೆಯಾಗಬೇಕು” ಎಂದು ಯೋಚಿಸಿದ್ದರು ಎಂಬ ವಿಷಯವನ್ನು ಇತ್ತೀಚೆಗೆ ಕಪಿಲ್ ಶರ್ಮಾ ಶೋನಲ್ಲಿ, ರಾಜ್‍ಕುಮಾರ್ ರಾವ್‌ ಬಿಚ್ಚಿಟ್ಟರು. ಆ ಕಾಮಿಡಿ ಟಾಕ್ ಶೋನಲ್ಲಿ ನಿರೂಪಕ ಕಪಿಲ್ ಶರ್ಮಾ, “ಇಬ್ಬರು ಪರಸ್ಪರರ ಜಾಹೀರಾತು ಮತ್ತು ಸಿನಿಮಾಗಳನ್ನಷ್ಟೇ ನೋಡುತ್ತಿದ್ದೀರಾ ಅಥವಾ ಇಬ್ಬರೂ ಸೇರಿ ಯಾವುದಾದರೂ ಮನೆಯನ್ನು ಕೂಡ ಹುಡುಕುತ್ತಿದ್ದೀರಾ?” ಎಂದು ತಮಾಷೆಯಾಗಿ ಪ್ರಶ್ನಿಸಿದ್ದರು.

ಆಗ ರಾಜ್‍ಕುಮಾರ್ ರಾವ್ ಅವರು, “ ಇಲ್ಲ, ಮನೆಯನ್ನು ಕೂಡ ನೋಡುತ್ತಿದ್ದೇವೆ” ಎಂದು ಕಪಿಲ್‍ಗೆ ಅಷ್ಟೇ ತಮಾಷೆಯ ಧಾಟಿಯಲ್ಲಿ ಪ್ರತಿ ಉತ್ತರ ನೀಡಿದ್ದರು.
First published: