HOME » NEWS » Entertainment » RAJKUMAR PHOTO APPEARS IN KOLLYWOOD MOVIE VIKRAM VEDAS STAR CAST LIST RISHAB SHETTY REQUESTED TO REPORT TO GOOGLE AE

Google: ಮತ್ತೆ ಗೂಗಲ್ ಎಡವಟ್ಟು, ತಮಿಳು ಚಿತ್ರದ ಹಾಫ್ ಬಾಯ್ಲ್ ಪಾತ್ರಕ್ಕೆ ಡಾ ರಾಜ್ಕುಮಾರ್ ಚಿತ್ರ ! ಅಭಿಮಾನಿಗಳ ಆಕ್ರೋಶ

Google: ಪುಷ್ಕರ್​ ಗಾಯತ್ರಿ ನಿರ್ದೇಶನದ ವಿಕ್ರಂ ವೇದ ಸಿನಿಮಾ ಹಿಟ್ ಆಗಿತ್ತು. ವಿಜಯ್​ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಜಯ್​ ಸೇತುಪತಿ, ಆರ್​. ಮಾಧವನ್​ ಹಾಗೂ ಶ್ರದ್ಧಾ ಶ್ರೀನಾಥ್ ಜತೆ ರಾಜ್​ಕುಮಾರ್​ ಅವರ ಫೋಟೋ ಸಹ ಸ್ಟಾರ್​ ಕಾಸ್ಟ್ ಪಟ್ಟಿಯಲ್ಲಿ ಕಾಣಿಸುತ್ತದೆ.

Anitha E | news18-kannada
Updated:June 22, 2021, 9:39 AM IST
Google: ಮತ್ತೆ ಗೂಗಲ್ ಎಡವಟ್ಟು, ತಮಿಳು ಚಿತ್ರದ ಹಾಫ್ ಬಾಯ್ಲ್ ಪಾತ್ರಕ್ಕೆ ಡಾ ರಾಜ್ಕುಮಾರ್ ಚಿತ್ರ ! ಅಭಿಮಾನಿಗಳ ಆಕ್ರೋಶ
ವಿಕ್ರಂ ವೇದ ಸ್ಟಾರ್​ ಕಾಸ್ಟ್​ನಲ್ಲಿ ರಾಜ್​ಕುಮಾರ್​ ಫೋಟೋ
  • Share this:
ಇತ್ತೀಚೆಗಷ್ಟೆ ಗೂಗಲ್​ನಲ್ಲಿ 'Ugliest Language of India' ಎಂದು ಟೈಪ್​ ಮಾಡಿದರೆ ಕನ್ನಡ ಎಂದು ತೋರಿಸುತ್ತಿತ್ತು. ಇದರಿಂದಾಗಿ ಕನ್ನಡಿಗರು ಸಿಟ್ಟೆಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದರು.  ಅದಾದ ನಂತರ ಗೂಗಲ್​ ತನ್ನ ತಪ್ಪನ್ನು ಸರಿಪಡಿಸಿಕೊಂಡಿತ್ತು. ಜೊತೆಗೆ ಕನ್ನಡಿಗರ ಬಳಿ ಕ್ಷಮೆಯಾಗಿಸಿತ್ತು. ಈ ಘಟನೆ ಇನ್ನೂ ಮನಸ್ಸಿನಿಂದ ಮಾಸುವ ಮುನ್ನವೇ  ಗೂಗಲ್​ನಿಂದ ಮತ್ತೊಂದು ಎಡವಟ್ಟಾಗಿದೆ. ಪದೇ ಪದೇ ಕನ್ನಡಕ್ಕೆ ಅವಮಾನ ಮಾಡುತ್ತಿದೆ. ಹೌದು, ಈಗ  ಕನ್ನಡದ ಮೇರು ನಟ ಡಾ. ರಾಜ್​ಕುಮಾರ್​ ಅವರ  ಫೋಟೋ ತಮಿಳು ಸಿನಿಮಾದ ತಾರಾಗಣದ ಪಟ್ಟಿಯಲ್ಲಿ ಕಾಣಿಸುತ್ತಿದೆ. ಹೌದು, ತಮಿಳಿನಿ ಸಿನಿಮಾ ವಿಕ್ರಂ ವೇದ ಚಿತ್ರದ ತಾರಾಗಣದ  ಪಟ್ಟಿಯಲ್ಲಿ ಡಾ. ರಾಜ್​ಕುಮಾರ್ ಅವರ ಫೋಟೋ ಸಹ ಕಾಣಿಸಿಕೊಂಡಿದೆ. ಈ ಮೂಲಕ ಕನ್ನಡ ಹಾಗೂ ಡಾ,. ರಾಜ್​ಕುಮಾರ್​ ಅವರಿಗೆ ಅವಮಾನ ಮಾಡಿದೆ ಎಂದು ಕನ್ನಡಿಗರು ಮತ್ತೆ ಸಿಟ್ಟಿಗೆದಿದ್ದಾರೆ. 

ವಿಜಯ್​ ಸೇತುಪತಿ ಹಾಗೂ ಮಾಧವನ್​ ಅಭಿನಯದ ಕಾಲಿವುಡ್​ ಸಿನಿಮಾ ವಿಕ್ರಂ ವೇದ ಚಿತ್ರದ ಸ್ಟಾರ್​ ಕಾಸ್ಟ್​ ಪಟ್ಟಿಯಲ್ಲಿ ಡಾ. ರಾಜ್​ಕುಮಾರ್ ಅವರ ಫೋಟೋ ಇದೆ. ಹಾಫ್ ಬಾಯ್ಲ್​ ಪಾತ್ರದಲ್ಲಿ ಡಾ. ರಾಜ್ ನಟಿಸಿದ್ದಾರೆ ಎಂದು ಗೂಗಲ್​ನಲ್ಲಿ ತೋರಿಸುತ್ತಿದೆ.

Dr.Rajkumar, Rishab Shetty, Dr.Rajkumar Name in Tamil movie, Google mistakes Dr Rajkumar name in Vikram Vedha movie, Rishab Shetty demand report to google, ಡಾ.ರಾಜ್ ಕುಮಾರ್, ವಿಕ್ರಮ್ ವೇದ, ತಮಿಳು ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಹೆಸರು, ಗೂಗಲ್ ನಿಂದ ಮತ್ತೊಂದು ಎಡವಟ್ಟು, ರಿಪೋರ್ಟ್ ಮಾಡಿ ಎಂದ ರಿಷಬ್ ಶೆಟ್ಟಿ, Rajkumar photo appears in Kollywood movie Vikram Vedas star cast list rishab shetty requested to report to google ae
ವಿಕ್ರಂ ವೇದ ಸ್ಟಾರ್​ ಕಾಸ್ಟ್​ನಲ್ಲಿ ರಾಜ್​ಕುಮಾರ್​ ಫೋಟೋ


ಒಂದು ವೇಳೆ ಹಾಫ್​ ಬಾಯ್ಲ್​ ಪಾತ್ರ ಮಾಡಿರುವ ಕಲಾವಿದನ ಹೆಸರೂ ರಾಜ್​ಕುಮಾರ್ ಇರಬಹುದು. ಅದಕ್ಕೆ ಗೂಗಲ್​ನಲ್ಲಿ ಫೋಟೋವನ್ನು ತಪ್ಪಾಗಿ ತೋರಿಸಲಾಗಿದೆ ಎಂದೂ ಕೆಲವರು ಊಹಿಸುತ್ತಿದ್ದಾರೆ.

ಪುಷ್ಕರ್​ ಗಾಯತ್ರಿ ನಿರ್ದೇಶನದ ವಿಕ್ರಂ ವೇದ ಸಿನಿಮಾ ಹಿಟ್ ಆಗಿತ್ತು. ವಿಜಯ್​ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಜಯ್​ ಸೇತುಪತಿ, ಆರ್​. ಮಾಧವನ್​ ಹಾಗೂ ಶ್ರದ್ಧಾ ಶ್ರೀನಾಥ್ ಜತೆ ರಾಜ್​ಕುಮಾರ್​ ಅವರ ಫೋಟೋ ಸಹ ಸ್ಟಾರ್​ ಕಾಸ್ಟ್ ಪಟ್ಟಿಯಲ್ಲಿ ಕಾಣಿಸುತ್ತದೆ.

ಇದನ್ನೂ ಓದಿ: ಮತ್ತೆ ಶುರುವಾಯ್ತು ಜಸ್ಟಿಸ್​ ಫಾರ್​ ರಾಜೀವ್​: ಬಿಗ್​ ಬಾಸ್​ 8ರ ಸ್ಪರ್ಧಿಯ ಹೊಸ ಲುಕ್​ ವೈರಲ್

ನಿರ್ದೇಶಕ ರಿಷಭ್​ ಶೆಟ್ಟಿ ಅವರು ಈ ಕುರಿತಾಗಿ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಎಲ್ಲರಲ್ಲೂ ಒಂದು ಮನವಿ, ವಿಕ್ರಂ ವೇದ ತಮಿಳು ಚಿತ್ರದ ಗೂಗಲ್ ಪುಟದಲ್ಲಿ ನಮ್ಮ ಡಾ. ರಾಜಕುಮಾರ್ ಅವರ ಫೋಟೋ ಬೇರೆ ಹೆಸರಿನಲ್ಲಿ (half boil) ಅಂತ ನಮೂದಿಸಲಾಗಿದೆ, ದಯಮಾಡಿ ಅದನ್ನು ಗೂಗಲ್ ಗೆ report ಮಾಡಿ, ತಪ್ಪು ಸರಿ ಹೋಗಲಿ ಎಂದು ರಿಷಭ್​ ಶೆಟ್ಟಿ ಮನವಿ ಮಾಡಿದ್ದಾರೆ.ರಿಷಭ್​ ಶೆಟ್ಟಿ ಮಾಡಿರುವ ಲೆಟೆಸ್ಟ್​ ಟ್ವೀಟ್​ ಲಿಂಕ್​ ಇಲ್ಲಿದೆ...



ಗೂಗಲ್​ನಲ್ಲಿ ಹೀಗೆ ತಪ್ಪಾಗಿ  ಬೇರೆಯವರ ಫೋಟೋಗಳನ್ನು ಹಾಕುವುದು ಹೊಸದೇನಲ್ಲ. ಈ ಹಿಂದೆಯೂ ಗೂಗಲ್ ಕಡೆಯಿಂದ ಇಂತಹ ಎಡವಟ್ಟಾಗಿದೆ. ಯಾರದ್ದೋ ಹೆಸರಿಗೆ ಯಾರದ್ದೋ ಚಿತ್ರ ತೋರಿಸಿರುವ ಹಲವಾರು ಘಟನೆಗಳು ಸಾಕಷ್ಟು ಸಲ ಬೆಳಕಿಗೆ ಬಂದಿದೆ.

ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ನಿನ್ನೆಯಷ್ಟೆ ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಾನಕ್ಕೆ ಭೇಟಿ ಕೊಟ್ಟಿದ್ದರು. ಮಡದಿ ಹಾಗೂ ಮಗನ ಜೊತೆ ದೇವಿಯ ದರ್ಶನ ಪಡೆದು ಅವರು ಮಗನ ಮಡಿಯನ್ನು ದೇವಿಗೆ ಅರ್ಪಿಸಿದ್ದಾರೆ. ಇನ್ನು ಮಗನಿಗೆ ಗುಂಡು ಹೊಡೆಸಿದ ಚಿತ್ರವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Happy Birthday Revathi Nikhil Kumar: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ ನಿಖಿಲ್​ ಕುಮಾರಸ್ವಾಮಿ

ರಿಷಭ್ ಶೆಟ್ಟಿ ಅವರು ಲಾಕ್​ಡೌನ್​ ಹಂತ ಹಂತವಾಗಿ ತೆರವುಗೊಳ್ಳುತ್ತಿದ್ದಂತೆಯೇ ಸಿನಿಮಾ ಕೆಲಸಗಳನ್ನು ಆರಂಭಿಸಿದ್ದಾರೆ. ಹೌದು, ನಿರ್ದೇಶನ ಹಾಗೂ ಅಭಿನಯ ಸೇರಿದಂತೆ ರಿಷಭ್​ ಶೆಟ್ಟಿ ಅವರ ತುಂಬಾ ಸಿನಿಮಾಗಳಿವೆ.
Published by: Anitha E
First published: June 22, 2021, 8:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories