ದೊಡ್ಮನೆಯಲ್ಲಿ ಸಂಭ್ರಮ: ಯುವ ರಾಜ್​ಕುಮಾರನ ಬಾಳಿಗೆ ಕಾಲಿಟ್ಟ ಶ್ರೀದೇವಿ!

news18
Updated:July 5, 2018, 2:03 PM IST
ದೊಡ್ಮನೆಯಲ್ಲಿ ಸಂಭ್ರಮ: ಯುವ ರಾಜ್​ಕುಮಾರನ ಬಾಳಿಗೆ ಕಾಲಿಟ್ಟ ಶ್ರೀದೇವಿ!
news18
Updated: July 5, 2018, 2:03 PM IST
ನ್ಯೂಸ್​ 18 ಕನ್ನಡ 

ದೊಡ್ಮನೆ ಮಂದಿಗೆಲ್ಲ ಇಂದು ಸಂಭ್ರಮವೋ ಸಂಭ್ರಮ. ಇಡಿ ರಾಜ್​ಕುಮಾರ್ ಕುಟುಂಬ ಇವತ್ತು ಶುಭ ಕಾರ್ಯವೊಂದರಲ್ಲಿ ಫುಲ್ ಮಿಂಚಿಂಗೋ ಮಿಂಚಿಂಗು. ಹೀಗಾಗಿಯೇ ನಿನ್ನೆಯೇ ಅಣ್ಣಾವರ ಮನೆಯವರೆಲ್ಲರೂ ಮೈಸೂರಿಗೆ ತೆರಳಿದ್ದರು.  ರಾಘವೇಂದ್ರರಾಜ್​ಕುಮಾರ್​ ಅವರ ಎರಡನೇ ಮಗ ಯುವರಾಜ್​ಕುಮಾರ್​ (ಗುರು) ಅವರ ನಿಶ್ಚಿತಾರ್ಥ ಮೈಸೂರಿನ ಹೋಟೆಲ್​ನಲ್ಲಿ ಅದ್ದೂರಿಯಾಗಿ ನೆರವೇರಿತು. ಇದರಲ್ಲಿ ಪವರ್​ಸ್ಟಾರ್ ಪುನೀತ್, ಶಿವಣ್ಣ ಮಗನ ನಿಶ್ಚಿತಾರ್ಥದಲ್ಲಿ ಲವಲವಿಕೆಯಿಂದ ಓಡಾಡಿಕೊಂಡಿದ್ದರು.

ಪ್ರೀತಿಯ ಸಂಕೇತವಾಗಿರುವ ಕೆಂಪು ಗುಲಾಬಿಗಳಿಂದ ಸಿಂಗಾರಗೊಂಡು ಮಿರ ಮಿರ ಮಿಂಚುತ್ತಿರೋ ಮಂಟಪ ಒಂದು ಕಡೆ. ಮತ್ತೊಂದು ಕಡೆ ನಾನಾ ಖಾದ್ಯಗಳ  ಘಮ ಘಮ ಸುವಾಸನೆ. ಅತ್ತಿಂದಿತ್ತ ಓಡಾಡುತ್ತಿದ್ದ ರಾಜ್​ ಕುಟುಂಬದ ಸದಸ್ಯರು. ಅಷ್ಟಕ್ಕು ಇದೆಲ್ಲ ಕಂಡು ಬಂದಿದ್ದು, ದೊಡ್ಮನೆ ಮೊಮ್ಮಗ ಯುವ ರಾಜ್​ಕುಮಾರ್ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ.

ರಾಘವೇಂದ್ರ ರಾಜ್​ಕುಮಾರ್ ಅವರ 2ನೇ ಮಗ ಯುವರಾಜ್​ಕುಮಾರ್​ ಇವತ್ತು ಮೈಸೂರಿನ ಶ್ರೀದೇವಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಪರಸ್ಪರ ಉಂಗುರ ಬದಲಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಮೊದಲ ಹೆಜ್ಜೆ ಇಟ್ಟರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ನಿಶ್ಚಿತಾರ್ಥ ಬಹಳ ಅದ್ಧೂರಿಯಾಗಿ ನಡೆದಿದ್ದು, 11.30ರ ಶುಭ ಘಳಿಗೆಯಲ್ಲಿ ಯುವರಾಜ್​ಕುಮಾರ್-ಶ್ರೀದೇವಿ ಉಂಗುರ ಬದಲಿಸಿಕೊಂಡರು.

ಯುವರಾಜ್​ಕುಮಾರ್​ ಬೂದು ಬಣ್ಣದ ಸೂಟ್ ತೊಟ್ಟು ಮಿಂಚಿದರೆ, ಶ್ರೀದೇವಿ ಹಸಿರು ಬಣ್ಣದ ಸೀರೆ ಮತ್ತು ಆಭರಣಗಳನ್ನ ತೊಟ್ಟು ಕಾರ್ಯಕ್ರಮದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಈ ನಿಶ್ಚಿತಾರ್ಥಕ್ಕೆ ಬಗೆ ಬಗೆಯ ಭೋಜನ ಸಹ ಸಿದ್ಧವಾಗಿತ್ತು.

'ಮೈಸೂರಿನ‌ ಮಗಳು ನಮ್ಮ ಮನೆ ಸೇರಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ.
ಶ್ರೀದೇವಿ-ಯುವನಿಗೆ ಒಳ್ಳೆಯದಾಗಲಿ. ಮೈಸೂರಿಗೆ ಯುವ‌ರಾಜ್‌ಕುಮಾರ್ ರಾಜ್‌ ಕುಟುಂಬದ ಎರಡನೇ ಅಳಿಯ. ಹಾಗಾಗಿ ಮೈಸೂರಿಗೆ ಬರೋದೆಂದರೆ ನಮಗೆಲ್ಲ ಖುಷಿ. ನಮ್ಮ ಹಾಗೂ ಅಪ್ಪಾಜಿ ಸಿನಿಮಾಗಳು ಇಲ್ಲೇ ಚಿತ್ರೀಕರಣಗೊಳ್ಳುತ್ತಿದ್ದವು. ಜೊತೆಗೆ ನಮಗೆ ದಸರಾ ನೋಡಲು ತುಂಬಾ ಖುಷಿಯಾಗುತ್ತೆ. ಇದೀಗ ಮೈಸೂರಿನ ಮಗಳು ನಮ್ಮ ಮನೆಗೆ ಬರುತ್ತಿದ್ದಾರೆ ಇದು ಖುಷಿಯ ಸಂಗತಿ' ಎಂದು ಶಿವಣ್ಣ ಮೈಸೂರಿನಲ್ಲಿ ಹೇಳಿದ್ದಾರೆ.
Loading...

ಆಪ್ತ ಸ್ನೇಹಿತರು ಹಾಗೇ ದೊಡ್ಮನೆ ಕುಟುಂಬದವರಿಗೆ ಮಾತ್ರ ನಿಶ್ಚಿತಾರ್ಥಕ್ಕೆ  ಆಹ್ವಾನ ನೀಡಲಾಗಿತ್ತು. ಅಂಬರೀಷ-ಸುಮಲತಾ ಹಾಗೂ ರಾಕ್​ಲೈನ್​ ವೆಂಕಟೇಶ್​ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.​ ಇನ್ನೊಂದೆರಡು ದಿನಗಳಲ್ಲಿ ಮದುವೆ ಎಲ್ಲಿ, ಯಾವಾಗ ಹಾಗೂ ಯಾರೆಲ್ಲ ಬರುತ್ತಾರೆ ಅನ್ನೊ ವಿವರಗಳು ಹೊರಬೀಳಲಿದೆ.

 

 

 
First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ