HOME » NEWS » Entertainment » RAJKUMAR ACTED OLD MOVIE BHAGYAVANTHARU SET TO RELEASE WITH NEW TECHNOLOGY ASTV MAK

Bhagyavantharu: ನೂತನ ತಂತ್ರಜ್ಞಾನದ ಜೊತೆ ರಿಲೀಸ್ ಗೆ ಸಜ್ಜಾದ ಡಾ.ರಾಜ್​ ಅಭಿನಯದ ಭಾಗ್ಯವಂತರು ಸಿನಿಮಾ

ನಟ ಸಾರ್ವಭೌಮ, ಕನ್ನಡದ ಕಣ್ಮಣಿ, ಡಾ.ರಾಜ್ ಕುಮಾರ್ ನಟನೆಯ ನಾನೊಬ್ಬ ಕಳ್ಳ, ಆಪರೇಷನ್ ಡೈಮಂಡ್ ರಾಕೆಟ್, ರಾಜ ನನ್ನ ರಾಜ, ದಾರಿ ತಪ್ಪಿದ ಮಗ, ಚಿತ್ರಗಳನ್ನ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಮುನಿರಾಜು ಈಗಾಗಲೇ ರಿಲೀಸ್ ಮಾಡಿದ್ದಾರೆ.  ಯಶಸ್ಸನ್ನ ಸಹ ಸಾಧಿಸಿದ್ದಾರೆ.

news18-kannada
Updated:January 5, 2021, 1:54 PM IST
Bhagyavantharu: ನೂತನ ತಂತ್ರಜ್ಞಾನದ ಜೊತೆ ರಿಲೀಸ್ ಗೆ ಸಜ್ಜಾದ ಡಾ.ರಾಜ್​ ಅಭಿನಯದ ಭಾಗ್ಯವಂತರು ಸಿನಿಮಾ
ಭಾಗ್ಯವಂತರು ಚಿತ್ರದ ಪೋಸ್ಟರ್​.
  • Share this:
ಓಲ್ ಈಸ್ ಗೋಲ್ಡ್ ಅಂತಾರಲ್ಲ ಹಾಗೆ ಅಣ್ಣಾವ್ರ ಹಳೆಯ ಸಿನಿಮಾಗಳು ಯಾವಾಗಲೂ ಗೋಲ್ಡ್.. ಕನ್ನಡ ಕಣ್ಮಣಿ ಡಾ.ರಾಜ್ ಕುಮಾರ್ ಸಿನಿಮಾಗಳನ್ನ ಥಿಯೇಟರ್ ನಲ್ಲಿ ನೋಡೋ ಅವಕಾಶ ಈಗಿನ ಜನರೇಷನ್ ನ ಎಷ್ಟೋ ಚಿತ್ರಪ್ರೇಮಿಗಳಿಗೆ ಸಿಕ್ಕಿಲ್ಲ.. ಕನ್ನಡದ ಸಾರ್ವಭೌಮನ ಚಿತ್ರಗಳಿಗೆ ಸಿಕ್ತಿದ್ದ ಕ್ರೇಜು. ಅವರ ಸಿನಿಮಾಗಳು ಬಂದಾಗ ರೇಸ್ ಕೋರ್ಸ್ ನಲ್ಲಿ ಟಿಕೆಟ್ ಕೊಡ್ತಿದ್ದಿದ್ದನ್ನ ಎಷ್ಟೋ ಸಿನಿ ಪ್ರೇಮಿಗಳು ಕಿವಿಯಲ್ಲಿ ಕೇಳಿನೇ ಥ್ರಿಲ್ಲಾಗಿದ್ದಾರೆ.. ಅಬ್ಬಾ ಅಂತದ್ದೊಂದು ಕಾಲಘಟ್ಟದಲ್ಲಿ ಇದ್ದೋರೆ ಗ್ರೇಟು ಅಂದ್ಕೊತಿರ್ತಾರೆ. ಅಂತಹ ಸಿನಿ ಪ್ರೇಮಿಗಳನ್ನ ಖುಷಿ ಪಡ್ಸೋಕೆ, ಅಣ್ಣಾವ್ರ ಸಿನಿಮಾಗಳನ್ನ ಬೆಳ್ಳಿ ತೆರೆ ಮೇಲೆ ನೋಡಿ ಆನಂದಿಸೋಕೆ ಆಗಾಗ ಅವಕಾಶಗಳನ್ನು ಕಲ್ಪಿಸೋ ಕೆಲಸಗಳನ್ನ ಆಗಾಗ ನಿರ್ಮಾಪಕ ಕಂ ವಿತರಕ ಮುನಿರಾಜು ಎಂಬುವವರು ಮಾಡ್ತಾ ಇರ್ತಾರೆ.

ಅದರಂತೆ ನಟ ಸಾರ್ವಭೌಮ, ಕನ್ನಡದ ಕಣ್ಮಣಿ, ಡಾ.ರಾಜ್ ಕುಮಾರ್ ನಟನೆಯ ನಾನೊಬ್ಬ ಕಳ್ಳ, ಆಪರೇಷನ್ ಡೈಮಂಡ್ ರಾಕೆಟ್, ರಾಜ ನನ್ನ ರಾಜ, ದಾರಿ ತಪ್ಪಿದ ಮಗ, ಚಿತ್ರಗಳನ್ನ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಮುನಿರಾಜು ಈಗಾಗಲೇ ರಿಲೀಸ್ ಮಾಡಿದ್ದಾರೆ.  ಯಶಸ್ಸನ್ನ ಸಹ ಸಾಧಿಸಿದ್ದಾರೆ.

ಈಗ ಅದರ ಮುಂದುವರೆದ ಭಾಗವಾಗಿ ಡಾ.ರಾಜ್ ಕುಮಾರ್ ನಟನೆಯ ಕ್ಲಾಸಿಕಲ್ ಹಿಟ್ ಸಿನಿಮಾ ಅಂತ್ಲೇ ಕರೆಸಿಕೊಳ್ಳೋ, ಬಂಧ ಅನುಬಂಧದ ಮಹತ್ವ ಸಾರುವ ಭಾಗ್ಯವಂತರು ಸಿನಿಮಾವನ್ನ ಹೊಸ ತಂತ್ರಜ್ಞಾನ ಅಳವಡಿಸಿ ಬಿಡುಗಡೆ ಮಾಡೋಕೆ ಪ್ರಯತ್ನ ನಡೀತಾ ಇದೆ. 7.1 ಡಿಐ ಅನ್ನ ಅಳವಡಿಸಿ ಪ್ರೇಕ್ಷಕರ ಎದುರು ತರೋಕೆ ಎಲ್ಲಾ ರೀತಿಯ ಸಕಲ ಸಿದ್ಧತೆಗಳು ನಡೆದಿವೆ..

ಯೆಸ್ ಭಾಗ್ಯವಂತರು ಸಿನಿಮಾವನ್ನ ಫೆಬ್ರವರಿ ಮೊದಲ ವಾರದಲ್ಲಿ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಸಾಹಸ ಮಾಡಲಾಗ್ತಿದೆ.. ಬೆಂಗಳೂರಿನಲ್ಲಿ ನರ್ತಕಿ ಚಿತ್ರಮಂದಿರ ಮೈನ್ ಆಕರ್ಷಣೆಯಾಗಿರಲಿದೆ.. ಅಂದಹಾಗೆ ಭಾಗ್ಯವಂತರು ಸಿನಿಮಾ 1977 ರ ಮಾರ್ಚ್ 16 ರಂದು ತೆರೆಗೆ ಬಂದಿತ್ತು.. ಕರ್ನಾಟಕದ ಕುಳ್ಳ ದ್ವಾರಕೀಶ್ ಈ ಚಿತ್ರದ ನಿರ್ಮಾಪಕರು ಹಾಗೆ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನ ಭಾರ್ಗವ ಹೊತ್ತಿದ್ದರು.

ಇದನ್ನೂ ಓದಿ: ಕೊರೋನಾ ಲಸಿಕೆಯ ನಡುವೆ ಕುಸಿಯುತ್ತಿರುವ ದೇಶದ ಆರ್ಥಿಕತೆ ಬಗ್ಗೆಯೂ ಗಮನವಿರಲಿ; ಸುಬ್ರಮಣ್ಯಂ ಸ್ವಾಮಿ

ಇನ್ನು ಇದು ತಮಿಳಿನ ಧೀರ್ಘ ಸುಮಂಗಲಿ ಎಂಬ ಚಿತ್ರದ ರಿಮೇಕ್ ಸಿನಿಮಾ.. ಡಾ.ರಾಜ್ ಕುಮಾರ್ ಮಾಡಿದ್ದ ಕೆಲವೇ ಕೆಲವು ರಿಮೇಕ್ ಸಿನಿಮಾಗಳಲ್ಲಿ ಇದು ಒಂದಾಗಿತ್ತು.. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಕನ್ನಡದಲ್ಲಿ ಅದಕ್ಕಿಂತ ಒಂದು ಕೈ ಹೆಚ್ಚೇ ಅನ್ನುವಂತೆ ಮೂಡಿಬಂದಿತ್ತು. ಹಾಗೆ ಆ ಕಾಲಕ್ಕೆ ಸಿಲ್ವರ್ ಜ್ಯೂಬಿಲಿ ಹಿಟ್ ಎನಿಸಿಕೊಂಡಿತ್ತು.
ಈಗ ಇಂತಹ ಈ ಸಿನಿಮಾ ನವ ನಾವಿನ್ಯದ ಟಚ್ ನೊಂದಿಗೆ ಫೆಬ್ರವರಿ ಎರಡನೇ ವಾರದಲ್ಲಿ ತೆರೆಗೆ ಬರ್ತಾ ಇದೆ.. ಕೊರೊನಾ ಕಾರಣದಿಂದ ಸದ್ಯ ಯಾವುದೇ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರ್ತಿಲ್ಲ.. ಇಂತಹ ಸಂಧರದಲ್ಲಿ ಡಾ.ರಾಜ್ ಸಿನಿಮಾ ನೋಡೋದೆ ಒಂದು ಸಂಭ್ರಮ ಅಲ್ವೇ.. ಅದಕ್ಕೆ ಸಜ್ಜಾಗಿ.
Published by: MAshok Kumar
First published: January 5, 2021, 1:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories