• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Naandi Cinema: ತೆರೆ ಮೇಲೆ ಕಲ್ಪನಾ ಜೊತೆ ರಾಜ್ ಕೆಮೆಸ್ಟ್ರಿ ಹೇಗಿತ್ತು? ಕನ್ನಡದ ನಾಂದಿ ಮೊದಲ Offbeat ಸಿನಿಮಾ!

Naandi Cinema: ತೆರೆ ಮೇಲೆ ಕಲ್ಪನಾ ಜೊತೆ ರಾಜ್ ಕೆಮೆಸ್ಟ್ರಿ ಹೇಗಿತ್ತು? ಕನ್ನಡದ ನಾಂದಿ ಮೊದಲ Offbeat ಸಿನಿಮಾ!

ರಾಜ್ ನಟನೆ "ನಾಂದಿ" ಯಾಕೆ ಸ್ಪೆಷಲ್ ಗೊತ್ತೇ?

ರಾಜ್ ನಟನೆ "ನಾಂದಿ" ಯಾಕೆ ಸ್ಪೆಷಲ್ ಗೊತ್ತೇ?

ನಾಂದಿ ಚಿತ್ರದಲ್ಲಿ ಡಾಕ್ಟರ್ ರಾಜಕುಮಾರ್ ಒಬ್ಬ ಶಾಲಾ ಮಾಸ್ತರ ಪಾತ್ರದಲ್ಲಿ ಅಭಿನಯಿಸಿದ್ದರು. ಮೊದಲ ಪತ್ನಿ ಪಾತ್ರದಲ್ಲಿ ಕಲ್ಪನಾ ಅಭಿನಯಿಸಿದ್ದರು. ಎರಡನೇ ಪತ್ನಿಯ ಪಾತ್ರದಲ್ಲಿ ಹರಿಣಿ ನಟಿಸಿ ಕಿವುಡು-ಮೂಗಿಯಾಗಿಯೇ ಕಾಣಿಸಿಕೊಂಡಿದ್ದರು.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ರಾಜಣ್ಣ ಅಭಿನಯದ ನಾಂದಿ ಸಿನಿಮಾ (Naandi Movie Untold Stories) ಸಾಕಷ್ಟು ಮೊದಲುಗಳಿಗೆ ಸಾಕ್ಷಿ ಆಗಿದೆ.1964 ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ರಾಜ್​ಕುಮಾರ್ ಅಭಿನಯದ ಈ ಚಿತ್ರ (Sandalwood Special Cinema) ಒಂದಷ್ಟು ಪ್ರಯೋಗವನ್ನ ಕೂಡ ಮಾಡಿತ್ತು. ಕನ್ನಡ ಚಿತ್ರರಂಗದಲ್ಲಿಯೇ ಈ ಚಿತ್ರದ ಪ್ರಯೋಗ ಫಸ್ಟ್ ಅನ್ನೋ ಸತ್ಯವು ಇತಿಹಾಸ (Naandi Sandalwood First Offbeat Movie) ಪುಟದಲ್ಲಿ ದಾಖಲಾಗಿವೆ. ಹಾಗೆ ತಯಾರಾದ ಈ ಚಿತ್ರ ರಾಜಕುಮಾರ್ ಚಿತ್ರ ಜೀವನದ ಸ್ಪೆಷಲ್ ಸಿನಿಮಾ ಆಗಿದೆ. ಇದಕ್ಕೂ ಹೆಚ್ಚಾಗಿ ಈ ಚಿತ್ರದಲ್ಲಿ ಇನ್ನೂ ಒಂದಷ್ಟು (Naandi Movie Interesting Facts) ವಿಶೇಷತೆಗಳಿವೆ. ಅವುಗಳನ್ನ ಇಲ್ಲಿ ಹೇಳಿದ್ದೇವೆ ಒಮ್ಮೆ ಓದಿ.


ರಾಜ್ ನಟನೆ "ನಾಂದಿ" ಯಾಕೆ ಸ್ಪೆಷಲ್ ಗೊತ್ತೇ?


ರಾಜಕುಮಾರ್ ಅಭಿನಯದ ಸಿನಿಮಾಗಳು ಸಮಾಜಮುಖಿಯಾಗಿಯೇ ಇರುತ್ತಿದ್ದವು. ಪ್ರತಿ ಚಿತ್ರದಿಂದಲೂ ಏನೋ ಒಂದು ಸಂದೇಶ ಇರುತ್ತಿತ್ತು. ಸಿನಿಮಾ ನೋಡಿ ಹೊರ ಬರುವ ಪ್ರೇಕ್ಷಕ ತನ್ನ ಮನದಲ್ಲಿ ಒಂದಷ್ಟು ಒಳ್ಳೆ ವಿಷಯಗಳನ್ನ ಇಟ್ಟುಕೊಂಡು ಹೋಗುತ್ತಿದ್ದ ಅನ್ನೋದು ಅಷ್ಟೇ ಸತ್ಯ.


Rajkumar Acted Naandi Movie is the First Offbeat Kannada Cinema
ಕನ್ನಡದ ನಾಂದಿ ಮೊದಲ Offbeat ಸಿನಿಮಾ


ಅಷ್ಟು ಒಳ್ಳೆ ಚಿತ್ರಗಳಲ್ಲಿ ಅಭಿನಯಿಸೋ ಮೂಲಕ ರಾಜ್, ಅಭಿಮಾನಿ ದೇವರುಗಳಿಗೆ ಒಳ್ಳೆ ವಿಷಯಗಳನ್ನ ಕೊಟ್ಟು ಹೋಗಿದ್ದಾರೆ. ಹಾಗೆ ನಾಂದಿ ಚಿತ್ರದಲ್ಲೂ ರಾಜಕುಮಾರ್ ಅತ್ಯುತ್ತಮ ವಿಷಯವನ್ನ ತಿಳಿಸಿದ್ದಾರೆ. ಶ್ರವಣ ಸಮಸ್ಯೆ ಕುರಿತ ವಿಷಯವನ್ನ ಈ ಚಿತ್ರದಲ್ಲಿ ತಿಳಿಸಿರೋದು ಕೂಡ ಅಷ್ಟೇ ವಿಶೇಷವಾಗಿದೆ.




ಕನ್ನಡದ ನಾಂದಿ ಹಲವು ಮೊದಲುಗಳಿಗೆ ಸಾಕ್ಷಿಯಾದ ಸಿನಿಮಾ


ಚಿತ್ರದ ಮೊದಲುಗಳ ಬಗ್ಗೆ ಹೇಳೋದಾದರೆ, ರಾಜ್ ಅಭಿನಯದ ಈ ಚಿತ್ರದಲ್ಲಿ ಕನ್ನಡದ ಮೊಟ್ಟ ಮೊದಲ ಆಫ್ಬೀಟ್‌ ಸಿನಿಮಾ ಆಗಿದೆ. ಅಲ್ಲಿವರೆಗೂ ಬರ್ತಾಯಿದ್ದ ರಾಜ್‌ ಸಿನಿಮಾಗಳು ಬೇರೆ ಬೇರೆ ರೀತಿಯಲ್ಲಿಯೇ ಇರುತ್ತಿದ್ದವು. ಆದರೆ ಈ ನಾಂದಿ ಸಿನಿಮಾ ವಿಶೇಷವಾದ ವಿಷಯದ ಮೇಲೆ ಬೆಳಕು ಚೆಲ್ಲಿತ್ತು. ಹಾಗಾಗಿಯೇ ಇದು ಆಫ್ಬೀಟ್ ಕ್ಯಾಟಗರಿಗೆ ಸೇರಿತ್ತು.


ನಾಂದಿ ಸಿನಿಮಾದ ನಿರ್ದೇಶಕರಾದ ಎನ್. ಲಕ್ಷ್ಮೀನಾರಾಯಣ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದರು. ಇದೇ ಚಿತ್ರದಲ್ಲಿಯೇ ಹಾಸ್ಯ ನಟ ದಿನೇಶ್ ಒಬ್ಬ ಪೋಷಕ ಕಲಾವಿದರಾಗಿ ಅಭಿನಯಸಿದ್ದರು.


ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಮೊದಲ ಸಿನಿಮಾ


ಕನ್ನಡದ ಈ ನಾಂದಿ ಸಿನಿಮಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಈ ಮೂಲಕ ಇದುವೇ ಇಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಇನ್ನು ಈ ಚಿತ್ರ International Film Festival of India ನಲ್ಲೂ ಈ ಚಿತ್ರವನ್ನ 1992 ರಲ್ಲಿ ಪ್ರದರ್ಶಿಸಲಾಗಿದೆ.


ನಾಂದಿ ಚಿತ್ರದಲ್ಲಿ ಡಾಕ್ಟರ್ ರಾಜಕುಮಾರ್ ಒಬ್ಬ ಶಾಲಾ ಮಾಸ್ತರ ಪಾತ್ರದಲ್ಲಿ ಅಭಿನಯಿಸಿದ್ದರು. ಮೊದಲ ಪತ್ನಿ ಪಾತ್ರದಲ್ಲಿ ಕಲ್ಪನಾ ಅಭಿನಯಿಸಿದ್ದರು. ಎರಡನೇ ಪತ್ನಿಯ ಪಾತ್ರದಲ್ಲಿ ಹರಿಣಿ ನಟಿಸಿ ಕಿವುಡು-ಮೂಗಿಯಾಗಿ ಕಾಣಿಸಿಕೊಂಡಿದ್ದರು.


Rajkumar Acted Naandi Movie is the First Offbeat Kannada Cinema
ಕನ್ನಡದ ನಾಂದಿ ಹಲವು ಮೊದಲುಗಳಿಗೆ ಸಾಕ್ಷಿಯಾದ ಸಿನಿಮಾ


ಸರಳ ಜೀವನದ ಮಾಸ್ತರ ಕಥೆಯಲ್ಲಿ ಕಿವುಡು-ಮೂಗರ ಸಮಸ್ಯೆ


ಈ ಮೂಲಕ ಶಾಲೆಯ ಮಾಸ್ತರೊಬ್ಬರ ಸರಳ ಜೀವನದಲ್ಲಿ ಕಿವುಡು-ಮೂಗರ ಸಮಸ್ಯೆಯನ್ನ ಕೂಡ ಹೇಳಲಾಗಿದೆ. ಹಾಗಾಗಿಯೇ ಈ ಸಿನಿಮಾ ಒಂದು ವಿಶೇಷ ಆಫ್ಬೀಟ್ ಸಿನಿಮಾ ಆಗಿಯೇ ಎಲ್ಲರಿಗೂ ಕಂಡಿತ್ತು. ವಿಮರ್ಶಕರೂ ಈ ಒಂದು ಮಾತನ್ನ ಎತ್ತಿ ಹೇಳಿದ್ದರು. ಹೀಗೆ ರಾಜ್ ಸಿನಿಮಾ ಜೀವನದಲ್ಲಿ ನಾಂದಿ ಹೊಸ ರೀತಿಯ ಸಿನಿಮಾನೇ ಆಗಿತ್ತು.


ಇದನ್ನೂ ಓದಿ: Chota Champion: ಜೀ ಕನ್ನಡದಲ್ಲಿ ಶೀಘ್ರದಲ್ಲೇ ಛೋಟಾ ಚಾಂಪಿಯನ್, ವಾವ್ ಸಖತ್ ಆಗಿದೆ ಪ್ರೊಮೋ!

top videos


    ಆರ್.ಎನ್.ಕೆ. ಪ್ರಸಾದ್ ಈ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡಿದ್ದರು. ವಿಜಯ್ ಭಾಸ್ಕರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ನಟ-ನಿರ್ಮಾಪಕ ವಾದಿರಾಜ್ ಈ ಚಿತ್ರಕ್ಕೆ ದುಡ್ಡುಹಾಕಿದ್ದರು. ಹಾಗೇನೆ ಈ ಸಿನಿಮಾ ರಾಜ್ ಸಿನಿಮಾ ಲಿಸ್ಟ್‌ನಲ್ಲಿ ವಿಶೇಷವಾಗಿಯೇ ನಿಲ್ಲುತ್ತದೆ.

    First published: