• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Dr Rajkumar: ರಾಜ್ ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ; ಸವಿನೆನಪು ಹಂಚಿಕೊಂಡ್ರು ಅಣ್ಣಾವ್ರ ಮುದ್ದಿನ ಸೊಸೆ ಅಶ್ವಿನಿ

Dr Rajkumar: ರಾಜ್ ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ; ಸವಿನೆನಪು ಹಂಚಿಕೊಂಡ್ರು ಅಣ್ಣಾವ್ರ ಮುದ್ದಿನ ಸೊಸೆ ಅಶ್ವಿನಿ

ರಾಜ್​ಕುಮಾರ್, ಅಶ್ವಿನಿ ಪುನೀತ್ ರಾಜ್​ಕುಮಾರ್

ರಾಜ್​ಕುಮಾರ್, ಅಶ್ವಿನಿ ಪುನೀತ್ ರಾಜ್​ಕುಮಾರ್

ಡಾ.ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಅಶ್ವಿನಿ ಪುನೀತ್ ರಾಜ್ ಕುಮಾರ್​, ಮಾವನ ಸರಳತೆಯನ್ನು ಮೆಲುಕು ಹಾಕಿದ್ದಾರೆ.

  • Share this:

ನಟಸಾರ್ವಭೌಮ ಡಾ.ರಾಜ್ ಕುಮಾರ್ (Dr. Rajkumar) ಅವರ 94ನೇ ಜನ್ಮದಿನವನ್ನು (Birthday) ನಾಡಿನಾದ್ಯಂತ ಅಭಿಮಾನಿಗಳು  ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ (Kantheerava Studio) ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಬೆಳಗ್ಗೆಯಿಂದ ಅಭಿಮಾನಿಗಳ ದಂಡೇ ಹರಿದು ಬರ್ತಿದೆ. ರಾಜ್​ ಕುಟುಂಬ ಸದಸ್ಯರು ಕೂಡ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು. ರಾಜ್ ಕುಮಾರ್ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳು ಕೂಡ ನಾನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.  


ರಕ್ತದಾನ, ಅನ್ನದಾನ ಕಾರ್ಯಕ್ರಮ


ಬೆಳಗ್ಗೆಯಿಂದಲೇ ಸ್ಮಾರಕಕ್ಕೆ ಅಭಿಮಾನಿಗಳ ದಂಡು ಹರಿದು ಬಂದಿದೆ. ಸ್ಮಾರಕದ ಮುಂದೆಯೇ ಅನ್ನಸಂತರ್ಪಣೆ, ಕೇಕ್ ಕತ್ತರಿಸಿದ್ದಾರೆ. ಡಾ. ರಾಜ್​​ಕುಮಾರ್ ಹೆಸರಿನಲ್ಲಿ ರಕ್ತದಾನ, ಅನ್ನದಾನ ಹಾಗೂ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಅರ್ಥಪೂರ್ಣವಾಗಿ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಆಚರಿಸುತ್ತಿದ್ದಾರೆ.
ವರನಟನ ನೆನಪು ಅಮರ 


ಸೋಶಿಯಲ್ ಮೀಡಿಯಾ ಮೂಲಕ ಅನೇಕ ಸಿನಿಮಾ ಹಾಗೂ ಇತರೆ ಕ್ಷೇತ್ರದ ಗಣ್ಯರು ಕೂಡ  ವರನಟ ಡಾ.ರಾಜ್​ ಕುಮಾರ್​ ಅವರ ನೆನಪನ್ನು ಮೆಲುಕು ಹಾಕಿದ್ದಾರೆ. ಕುಟುಂಬಸ್ಥರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ರಾಜ್​ ತೋರಿಸಿದ ಹಾದಿಯಲ್ಲಿ ದೊಡ್ಮನೆ ಕುಡಿಗಳು


ಡಾ.ರಾಜ್ ಕುಮಾರ್​ ತೋರಿಸಿದ ದಾರಿಯಲ್ಲಿ ಬದುಕುತ್ತಿರುವ ಅವರ ಮಕ್ಕಳಾದ ಶಿವರಾಜ್​ ಕುಮಾರ್​ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸೋಶಿಯಲ್​ ಮೀಡಿಯಾದಲ್ಲಿ ತಂದೆಯ ಫೋಟೋ ಹಂಚಿಕೊಂಡರು. ಅಷ್ಟೇ ಅಲ್ಲದೇ ಕರುನಾಡಿನ ಪವರ್ ಸ್ಟಾರ್ ಪುನೀತ್ ರಾಜ್​ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಕೂಡ ಮಾವನ ಫೋಟೋ ಜೊತೆ ಉತ್ತಮ ಬಹರ ಪೋಸ್ಟ್ ಮಾಡಿದ್ದಾರೆ.
ವಿಶೇಷವಾಗಿ ಶುಭಕೋರಿದ ಅಶ್ವಿನಿ


ಡಾ.ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಅಶ್ವಿನಿ ಪುನೀತ್ ರಾಜ್ ಕುಮಾರ್​, ಪ್ರೀತಿಯ ಮಾವನ ಸರಳತೆ ಹಾಗೂ ಅಭಿಮಾನಿಗಳ ಮೇಲಿನ ಪ್ರೀತಿಯನ್ನು ಮೆಲುಕು ಹಾಕಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ​


ರಾಜ್‌ಕುಮಾರ್ ಸಿನಿ ಜೀವನದ ಸ್ಪೆಷಲ್ ಸಿನಿಮಾಗಳು


ಕನ್ನಡದಲ್ಲಿ ಬಂದ ಆಫ್ ಬೀಟ್ ಸಿನಿಮಾಗಳಲ್ಲಿ ನಾಂದಿ ಸಿನಿಮಾನೇ ಮೊದಲ ಸಿನಿಮಾ ಆಗಿತ್ತು. ರಾಜ್‌ಕುಮಾರ್ ಅಭಿನಯದ ಬಾಂಡ್ ಸಿನಿಮಾಗಳೂ ಏನು ಕಮ್ಮಿ ಇದ್ದವೇ? ದೊರೈ-ಭಗವಾನ್ ನಿರ್ದೇಶನದ ಈ ಬಾಂಡ್ ಸರಣಿ ಸಿನಿಮಾಗಳು ಅಣ್ಣಾವ್ರಗೆ ಭಾರೀ ದೊಡ್ಡ ಹೆಸರನ್ನ ತಂದುಕೊಟ್ಟಿವೆ. ಇಂಡಿಯನ್ ಸಿನಿಮಾರಂಗದಲ್ಲಿಯೇ ರಾಜ್ ಮೊದಲ ಬಾಂಡ್ ಸಿನಿಮಾ ಹೀರೋ ಅನ್ನೋ ಮಟ್ಟವನ್ನ ತಂದುಕೊಟ್ಟಿವೆ.
ರಾಜ್‌ಕುಮಾರ್ ಸಿನಿಮಾ ಜೀವನದಲ್ಲಿ ಕಸ್ತೂರಿ ನಿವಾಸ ನಿಜಕ್ಕೂ ಗ್ರೇಟ್ ಸಿನಿಮಾ ಆಗಿದೆ. ಹೊಸ ಸ್ಪರ್ಶದಿಂದ ಮತ್ತೊಮ್ಮೆ ರಿಲೀಸ್ ಆದಾಗಲೂ ಕಸ್ತೂರಿ ನಿವಾಸ ಸೂಪರ್ ಹಿಟ್ ಆಗಿತ್ತು. ಬಂಗಾರದ ಮನುಷ್ಯ ಯಾರಿಗೆ ಗೊತ್ತಿಲ್ಲ ಹೇಳಿ?


ಬಂಗಾರದ ಮನುಷ್ಯನ ಬಂಗಾರದಂತಹ ಅಭಿಮಾನಿಗಳು


ಈ ಸಿನಿಮಾ ರಾಜ್ ಜೀವನದ ವಿಶೇಷ ಸಿನಿಮಾ ಆಗಿದೆ. ಈ ಚಿತ್ರ ಬಂದಾಗ, ಅನೇಕರು ವಾಪಸ್ ತಮ್ಮ ಹಳ್ಳಿಗೆ ಹೋಗಿ ವ್ಯವಸಾಯ ಮಾಡಿರೋ ಸತ್ಯ ಈಗಲೂ ಇತಿಹಾಸ ಪುಟದಲ್ಲಿ ಹೊಳೆಯುತ್ತದೆ. ಅಷ್ಟು ವಿಶೇಷವಾದ ಸಿನಿಮಾಗಳನ್ನ ಕೊಡುತ್ತಲೇ ರಾಜ್‌ ಕುಮಾರ್ ಅಜರಾಮರ ಆಗಿದ್ದಾರೆ.


ಇದನ್ನೂ ಓದಿ: Rajkumar Birthday: ಅಣ್ಣಾವ್ರ 95ನೇ ಜಯಂತೋತ್ಸವ, ಅಪ್ಪಟ ಬಂಗಾರ ನಮ್ಮ 'ರಾಜಕುಮಾರ'


ರಾಜ್‌ಕುಮಾರ್ ಅವರ ಜನ್ಮದಿನ ಬಂತು ಅಂದ್ರೇ ಅಂದು ಕಂಠೀರವ ಸ್ಟುಡಿಯೋ ಆವರಣದಲ್ಲಿರೋ ರಾಜ್ ಸಮಾಧಿ ಬಳಿ ಹಬ್ಬದ ವಾತಾವರಣ ನಿರ್ಮಾಣ ಆಗಿರುತ್ತದೆ. ರಾಜ್‌ಕುಮಾರ್ ಅವರನ್ನ ದೇವರ ರೀತಿಯಲ್ಲಿ ಆರಾಧಿಸೋ ಅಭಿಮಾನಿಗಳು ತಮ್ಮ ದೇವರಿಗೆ ತಮ್ಮದೇ ರೀತಿಯಲ್ಲಿ ಗೌರವ ಸಲ್ಲಿಸುತ್ತಾರೆ.

First published: