Soundarya Rajinikanth: ಮತ್ತೆ ಅಜ್ಜನಾದ ಸಂಭ್ರಮದಲ್ಲಿ ರಜನೀಕಾಂತ್: ಗಂಡು ಮಗುವನ್ನು ಸ್ವಾಗತಿಸಿದ ​ಸೌಂದರ್ಯ- ವಿಶಗನ್‌ ದಂಪತಿ

ಸೌಂದರ್ಯ ಹಾಗೂ ವಿಶಗನ್ ದಂಪತಿಗೆ ಗಂಡು ಮಗು ಜನನವಾಗಿದ್ದು, ಮಗುವಿಗೆ ‘ವೀರ್ ರಜನೀಕಾಂತ್ ವನಂಗಮುಡಿ’ ಎಂದು ನಾಮಕರಣ ಮಾಡಲಾಗಿದೆ. ಭಾನುವಾರ ಪ್ರೆಗ್ನೆನ್ಸಿ ಫೋಟೋಶೂಟ್‌ ನ ಕೆಲವು ಚಿತ್ರಗಳನ್ನು ಮತ್ತು ತಮ್ಮ ಮಗುವಿನ ಕೈಬೆರಳು ಹಿಡಿದುಕೊಂಡಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸೌಂದರ್ಯ ಮತ್ತು ವಿಶಗನ್ ದಂಪತಿಗಳು‌ ಮಗುವಿನ ಆಗಮನದ ಖುಷಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸೌಂದರ್ಯ ರಜನಿಕಾಂತ್ ಮತ್ತು ವಿಶಗನ್ ವನಂಗಮುಡಿ

ಸೌಂದರ್ಯ ರಜನಿಕಾಂತ್ ಮತ್ತು ವಿಶಗನ್ ವನಂಗಮುಡಿ

  • Share this:
ಲೆಜೆಂಡರಿ ನಟ ರಜನೀಕಾಂತ್ (Rajinikanth) ಅವರ ಕಿರಿಯ ಮಗಳು ಸೌಂದರ್ಯ ರಜನೀಕಾಂತ್ (Soundarya Rajinikanth) ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಸೌಂದರ್ಯ ಹಾಗೂ ವಿಶಗನ್ (Vishagan) ದಂಪತಿಗೆ ಗಂಡು ಮಗು ಜನನವಾಗಿದ್ದು, ಮಗುವಿಗೆ ‘ವೀರ್ ರಜನೀಕಾಂತ್ ವನಂಗಮುಡಿ’ ಎಂದು ನಾಮಕರಣ ಮಾಡಲಾಗಿದೆ. ಭಾನುವಾರ ಪ್ರೆಗ್ನೆನ್ಸಿ ಫೋಟೋಶೂಟ್‌ ನ ಕೆಲವು ಚಿತ್ರಗಳನ್ನು ಮತ್ತು ತಮ್ಮ ಮಗುವಿನ ಕೈಬೆರಳು ಹಿಡಿದುಕೊಂಡಿರುವ ಫೋಟೋವನ್ನು (Photos) ಹಂಚಿಕೊಳ್ಳುವ ಮೂಲಕ ಸೌಂ್ದವಿvರ್ಯ ಮತ್ತು ವಿಶಗನ್ ದಂಪತಿಗಳು‌ ಮಗುವಿನ ಆಗಮನದ ಖುಷಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ.

ಸೌಂದರ್ಯ ಮತ್ತು ವಿಶಗನ್ ದಂಪತಿಗೆ ಗಂಡು ಮಗು ಜನನ
ಮಗುವಿಗೆ ದಂಪತಿಗಳು ಈಗಾಗ್ಲೇ ಹೆಸರನ್ನು ಸಹ ಆಯ್ಕೆ ಮಾಡಿದ್ದು, ವೀರ್ ರಜನಿಕಾಂತ್ ವನಂಗಮುಡಿ’ ಎಂದು ನಾಮಕರಣ ಮಾಡಲಾಗಿದೆ ಎಂದು ಸೌಂದರ್ಯ ಬಹಿರಂಗಪಡಿಸಿದ್ದಾರೆ.

ಇನ್‌ ಸ್ಟಾಗ್ರಾನ್‌ ಪೋಸ್ಟ್‌ ನಲ್ಲಿ ಸೌಂದರ್ಯ "ನಾನು, ವಿಶಗನ್ ದೇವರ ದಯೆ ಮತ್ತು ನಮ್ಮ ಹೆತ್ತವರ ಆಶೀರ್ವಾದದಿಂದ ವೇದ್ ಕೃಷ್ಣನ ಕಿರಿಯ ಸಹೋದರನನ್ನು ಸ್ವಾಗತಿಸಿದ್ದೇವೆ" ಎಂದು ಬರೆದುಕೊಂಡು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ಪೋಸ್ಟ್‌ ನಲ್ಲಿ ಮಗುವಿನ ಹೆಸರನ್ನು ಸಹ ಬಹಿರಂಗಪಡಿಸಿರುವ ಸೌಂದರ್ಯ ವೈದ್ಯರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮಗುವಿನ ಮುಖ ಬಹಿರಂಗಪಡಿಸದ ಸೌಂದರ್ಯ
ಸಾಮಾಜಿಕ ಜಾಲತಾಣದಲ್ಲಿ ಸೌಂದರ್ಯ ಪ್ರೆಗ್ನೆನ್ಸಿ ಫೋಟೋ ಶೂಟ್‌ ಮತ್ತು ಮಗುವಿನ ಕೈಬೆರಳನ್ನು ಹಿಡಿದಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಕ್ಲೋಸಪ್ ಚಿತ್ರದಲ್ಲಿ, ಮಗುವಿನ ಬೆರಳನ್ನು ಹಿಡಿದಿರುವ ಫೋಟೋ ಇದ್ದರೆ, ಎರಡನೇ ಫೋಟೋದಲ್ಲಿ ಸೌಂದರ್ಯ ಅವರ ಕುಟುಂಬ ಮತ್ತು ಬೇಬಿ ಬಂಪ್‌ ಫೋಟೋಗಳು ಇವೆ.

ಇದನ್ನೂ ಓದಿ:  Bindas Kavya: 18 ವರ್ಷದ ಯೂಟ್ಯೂಬರ್‌ ಮನೆಯಿಂದ ಮಿಸ್ಸಿಂಗ್, ರೈಲಲ್ಲಿ ಪತ್ತೆ! ಅಸಲಿಗೆ ಬಿಂದಾಸ್‌ ಕಾವ್ಯಾಗೆ ಏನಾಗಿತ್ತು?

ಕೊನೆಯ ಫೋಟೋದಲ್ಲಿ ಸೌಂದರ್ಯ ತನ್ನ ಮಗ ವೇದ್ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ತಮ್ಮ ಮಗುವಿನ ಮುಖವನ್ನು ಇನ್ನೂ ಸೌಂದರ್ಯ ಬಹಿರಂಗಪಡಿಸಿಲ್ಲ. ಆದರೆ ಅಭಿಮಾನಿಗಳು ಮಾತ್ರ ರಜನೀಕಾಂತ್ ಅವರ ನಾಲ್ಕನೇ ಮೊಮ್ಮಗುವಿನ ಮುಖ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ದಂಪತಿಗೆ ಅಭಿನಂದನೆಯ ಕಾಮೆಂಟ್
ಸೌಂದರ್ಯ ಹಾಗೂ ವಿಶಗನ್ ಗೆ ಸಿನಿರಂಗದ ಗಣ್ಯರು ಹಾಗು ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ. ಸೌಂದರ್ಯ ಪೋಸ್ಟ್ ಗೆ ಅಭಿಷೇಕ್ ಬಚ್ಚನ್ ಸೇರಿ ಹಲವಾರು ಕಲಾವಿದರು ಅಭಿನಂದನೆ ತಿಳಿಸಿದ್ದಾರೆ. ನಟ ಅಭಿಷೇಕ್ ಬಚ್ಚನ್ ಕಾಮೆಂಟ್ಸ್ ವಿಭಾಗದಲ್ಲಿ "ಅಭಿನಂದನೆಗಳು" ಎಂದು ಬರೆದಿದ್ದಾರೆ. ಅಭಿಮಾನಿಗಳು ಸಹ ದಂಪತಿಗೆ ಶುಭಾಷಯ ತಿಳಿಸಿದ್ದಾರೆ.



ಸೌಂದರ್ಯ ರಜನೀಕಾಂತ್ ಈ ಹಿಂದೆ ಉದ್ಯಮಿ ಅಶ್ವಿನ್ ಕುಮಾರ್ ಅವರನ್ನು ಮದುವೆಯಾಗಿದ್ದರು. ನಂತರ ಸೌಂದರ್ಯ ರಜನೀಕಾಂತ್, 2019 ರಲ್ಲಿ ಉದ್ಯಮಿ ವಿಶಗನ್ ವನಂಗಮುಡಿ ಅವರನ್ನು ವಿವಾಹವಾಗಿದ್ದು, ಈಗ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಸೌಂದರ್ಯ ರಜನೀಕಾಂತ್ ಮತ್ತು ಅಶ್ವಿನ್ ಕುಮಾರ್ ದಾಂಪತ್ಯಕ್ಕೆ ಸಾಕ್ಷಿಯಾಗಿ ಮೊದಲ ಮಗು ವೇದಕೃಷ್ಣ ಇದ್ದು, ಪ್ರಸ್ತುತ ಮತ್ತೊಂದು ಗಂಡು ಮಗುವಿಗೆ ಸೌಂದರ್ಯ ತಾಯಿಯಾಗಿದ್ದಾರೆ.

ಸಿನಿಮಾರಂಗದಲ್ಲಿ ಸೌಂದರ್ಯ ಸಕ್ರಿಯ
ಸೌಂದರ್ಯಾ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಸಿನಿಲೋಕದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಬಾಬಾ, ಮಜಾ, ಸಂಡಕೋಜಿ ಮತ್ತು ಶಿವಾಜಿಯಂತಹ ಚಲನಚಿತ್ರಗಳಿಗೆ ಗ್ರಾಫಿಕ್ ಡಿಸೈನಿಂಗ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಓಚರ್ ಪಿಕ್ಚರ್ ಪ್ರೊಡಕ್ಷನ್ಸ್ ಅನ್ನು ಸ್ಥಾಪಿಸುವುದರ ಹೊರತಾಗಿ ಅವರು ತಮ್ಮ ತಂದೆಯ ಚಿತ್ರ ಕೊಚಡೈಯಾನ್‌ನೊಂದಿಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: Urvashi Rautela: ಊರ್ವಶಿ ರೌಟೇಲಾ ಕುರಿತು ಕೊನೆಗೂ ಮೌನ ಮುರಿದ ಪಾಕ್​ ಆಟಗಾರ, ಇವರಿಬ್ಬರ ನಡುವಿನ ಸಂಬಂಧ ನಿಜಾನಾ?

ಕಳೆದ ವರ್ಷ, ಸೌಂದರ್ಯ ಅವರು ತಮಿಳು ಮಹಾಕಾವ್ಯವಾದ ಪೊನ್ನಿಯಿನ್ ಸೆಲ್ವನ್‌ನಲ್ಲಿ ಮೂಲ ವೆಬ್ ಸರಣಿಯನ್ನು ನಿರ್ಮಿಸಲು ವೀಡಿಯೊ ಸ್ಟ್ರೀಮಿಂಗ್ ಸೇವೆ MX ಪ್ಲೇಯರ್‌ನೊಂದಿಗೆ ಪಾಲುದಾರಿಕೆ ಹೊಂದಿರುವುದಾಗಿ ಘೋಷಿಸಿದರು. ಮೇ 6 ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸೌಂದರ್ಯ ಅವರು ಸರಣಿಯನ್ನು ನಿರ್ಮಿಸಲಿದ್ದಾರೆ ಮತ್ತು ಅವರ ಸಹಾಯಕ ಸೂರ್ಯಪ್ರತಾಪ್ ವೆಬ್‌ ಸಿರೀಸ್‌ ಅನ್ನು ನಿರ್ದೇಶಿಸಲಿದ್ದಾರೆ.
Published by:Ashwini Prabhu
First published: