ಪ್ರೇಕ್ಷಕರನ್ನು ಮತ್ತೊಮ್ಮೆ ಬೆಚ್ಚಿಬೀಳಿಸಲು ಬರುತ್ತಿದ್ದಾಳೆ ನಾಗವಲ್ಲಿ!

Chandramukhi: ಈ ಸಿನಿಮಾ ಮೊದಲಿಗೆ ತೆರೆಕಂಡಿದ್ದು  ಮಾಲಿವುಡ್​ನಲ್ಲಿ. ಮಲಯಾಳಂನಲ್ಲಿ ‘ಮಣಿಚಿತ್ರ ತಾರಂ‘ ಟೈಟಲ್​ನಲ್ಲಿ ಈ ಸಿನಿಮಾ ತೆರೆ ಕಂಡು ಆನಂತರ ಕನ್ನಡ, ತಮಿಳು, ತೆಲುಗಿಗೂ ರಿಮೇಕ್​ ಆಯಿತು.  1993 ಡಿಸೆಂಬರ್​ 23 ರಂದು ಈ ಸಿನಿಮಾ ಬಿಡುಗಡೆಯಾಯಿತು. ಮಧು ಮತ್ತಣ್ಣ ಬರೆದ ಕಥೆಗೆ ಫಾಝಿಲ್​ ಆ್ಯಕ್ಷನ್​ ಕಟ್​ ಹೇಳಿದ್ದರು.  ನಟ ಮೊಹನ್​ಲಾಲ್​,ಶೋಭನ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 

news18-kannada
Updated:March 10, 2020, 9:52 PM IST
ಪ್ರೇಕ್ಷಕರನ್ನು ಮತ್ತೊಮ್ಮೆ ಬೆಚ್ಚಿಬೀಳಿಸಲು ಬರುತ್ತಿದ್ದಾಳೆ ನಾಗವಲ್ಲಿ!
ಜ್ಯೋತಿಕಾ
  • Share this:
ಸ್ಯಾಂಡಲ್​ವುಡ್​ನ ಎವರ್​ಗ್ರೀನ್​ ಸಿನಿಮಾಗಳಲ್ಲಿ ಒಂದಾದ 'ಆಪ್ತಮಿತ್ರ' ತಮಿಳಿನಲ್ಲಿ 'ಚಂದ್ರಮುಖಿ' ಹೆಸರಿನಲ್ಲಿ ರಿಲೀಸ್​ ಆಗಿತ್ತು. ಕನ್ನಡದಲ್ಲಿ ನಟ ಡಾ.ವಿಷ್ಣುವರ್ಧನ್​, ಸೌಂದರ್ಯ, ರಮೇಶ್​ ಅರವಿಂದ್​, ಪ್ರೇಮ, ದ್ವಾರಕೀಶ್​, ಅವಿನಾಶ್​ ನಟಿಸಿದ್ದರೆ, ತಮಿಳಿನಲ್ಲಿ ಸೂರ್​ ಸ್ಟಾರ್​​ ರಜನಿಕಾಂತ್​, ಜ್ಯೋತಿಕಾ, ಪ್ರಭು ನಟಿಸಿದ್ದರು. ಇನ್ನು ಈ ಸಿನಿಮಾದಲ್ಲಿದ್ದ ನಾಗವಲ್ಲಿ ಕ್ಯಾರೆಕ್ಟರ್​ ಅಂತೂ ಆ ಕಾಲಕ್ಕೆ ಸಿನಿ ಪ್ರೇಕ್ಷಕರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ಮತ್ತೆ ಅದೇ ಸೀಕ್ವೆಲ್​ನಲ್ಲಿ ಸಿನಿಮಾ ಮಾಡೋಕೆ ಚಿತ್ರತಂಡವೊಂದು ಸಿದ್ಧತೆ ಮಾಡಿಕೊಂಡಿದೆಯಂತೆ.

ನಿರ್ದೇಶಕ ಪಿ.ವಾಸು ತಮಿಳಿನಲ್ಲಿ ಇಂತಹದೊಂದು ಸಿನಿಮಾವನ್ನು ಮತ್ತೊಮ್ಮೆ ತೆರೆ ಮೇಲೆ ತರಲು ಸಿದ್ಧತೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ಕಥೆ, ಚಿತ್ರಕಥೆ ಕೂಡ ಸಿದ್ಧವಾಗಿದೆಯಂತೆ. ಇನ್ನು ಸೂಪರ್​ ಸ್ಟಾರ್​ ರಜನಿಕಾಂತ್​ ಬಳಿ ಸ್ಕ್ರಿಪ್​​ ಒಪ್ಪಿಸುವ ಕೆಲಸವಷ್ಟೇ ಆಗಬೇಕಿದೆ. ರಜನಿಕಾಂತ್​ ಒಪ್ಪಿದರೆ ಆದಷ್ಟು ಬೇಗ ಸಿನಿಮಾ ಶೂಟಿಂಗ್​ ಪ್ರಾರಂಭಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ಇನ್ನು ಈ ಸಿನಿಮಾ ಮೊದಲಿಗೆ ತೆರೆಕಂಡಿದ್ದು  ಮಾಲಿವುಡ್​ನಲ್ಲಿ. ಮಲಯಾಳಂನಲ್ಲಿ ‘ಮಣಿಚಿತ್ರ ತಾರಂ‘ ಟೈಟಲ್​ನಲ್ಲಿ ಈ ಸಿನಿಮಾ ತೆರೆ ಕಂಡು ಆನಂತರ ಕನ್ನಡ, ತಮಿಳು, ತೆಲುಗಿಗೂ ರಿಮೇಕ್​ ಆಯಿತು.  1993 ಡಿಸೆಂಬರ್​ 23 ರಂದು ಈ ಸಿನಿಮಾ ಬಿಡುಗಡೆಯಾಯಿತು. ಮಧು ಮತ್ತಣ್ಣ ಬರೆದ ಕಥೆಗೆ ಫಾಝಿಲ್​ ಆ್ಯಕ್ಷನ್​ ಕಟ್​ ಹೇಳಿದ್ದರು.  ನಟ ಮೊಹನ್​ಲಾಲ್​,ಶೋಭನ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ನಂತರ ಈ ಸಿನಿಮಾವನ್ನು ಕನ್ನಡದಲ್ಲಿ ಆಪ್ತಮಿತ್ರ ಟೈಟಲ್​​ನಡಿಯಲ್ಲಿ ರಿಮೇಕ್​ ಮಾಡಲಾಯಿತು. ಕನ್ನಡದಲ್ಲೂ ಡಾ.ವಿಷ್ಣು ವರ್ಧನ್​ ಮತ್ತು ನಟಿ ಸೌಂದರ್ಯ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಅದಾದ ಬಳಿಕ ತಮಿಳಿನಲ್ಲಿ 2005ರಂದು  ‘ಚಂದ್ರಮುಖಿ‘ಯಾಗಿ  ತೆರೆಕಂಡಿತು. ಈ ಸಿನಿಮಾದಲ್ಲಿ ರಜನಿ ಕಾಂತ್​ ಮತ್ತು ಜ್ಯೋತಿಕಾ ಪ್ರಭು ನಟನೆ ಅಂದಿಗೆ ವೀಕ್ಷಕರನ್ನು ಮೂಕವಿಸ್ಮಿತಗೊಳಿಸಿತ್ತು. ಮಾತ್ರವಲ್ಲದೆ ಬ್ಲಾಕ್​ ಬಸ್ಟರ್​ ಹಿಟ್​ ಸಿನಿಮಾವಾಗಿ ಹೊರಹೊಮ್ಮಿತು.

ಇದೀಗ 15 ವರ್ಷಗಳ ನಂತರ ನಿರ್ದೇಶಕ ಪಿ.ವಾಸು ಮತ್ತೆ ಚಂದ್ರಮುಖಿ ಸೀಕ್ವೆಲ್​ ಇಟ್ಟುಕೊಂಡು ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ.
First published: March 10, 2020, 9:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading