ತಮಿಳಿ(Tamil)ನ ಜನಪ್ರಿಯ ನಟ ಚಿಯಾನ್ ವಿಕ್ರಂ(Chiyaan Vikram) ಮತ್ತು ಅವರ ಮಗ ಧ್ರುವ(Dhruva) ನಟಿಸಿರುವ ತಮಿಳು ಸಿನಿಮಾ 'ಮಹಾನ್'(Mahaan) ಅಮೆಜಾನ್ ಪ್ರೈಂ(Amazon Prime) ವೇದಿಕೆಯಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾದ ಕಥಾ ಹಂದರದ ಕುರಿತು ಮತ್ತು ತಂದೆ ಮಗ ಇಬ್ಬರ ಅಭಿನಯದ ಬಗ್ಗೆ ಅಭಿಮಾನಿ(Fans)ಗಳು ಸಿಕ್ಕಾಪಟ್ಟೆ ಪ್ರಶಂಸೆ ಮಾಡುತ್ತಿರುವುದರಿಂದ, ಸಿನಿಮಾವು ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಚಿಯಾನ್ ವಿಕ್ರಂ ಮತ್ತು ಅವರ ಮಗ ಧ್ರುವ ಅಭಿಮಾನಿಗಳು ಮತ್ತು ವೀಕ್ಷಕರ ಹೊಗಳಿಕೆ ಒಂದೆಡೆಯಾದರೆ, ಇನ್ನೊಂದೆಡೆ ತಮಿಳಿನ ಮೇರು ನಟರೊಬ್ಬರು ಈ ಸಿನಿಮಾವನ್ನು ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಮೇರು ನಟ ಇನ್ಯಾರೂ ಅಲ್ಲ, ಸೂಪರ್ ಸ್ಟಾರ್ ರಜನೀಕಾಂತ್(Super Star Rajinikanth).
ಮಹಾನ್ ಸಿನಿಮಾ ಮೆಚ್ಚಿದ ತಲೈವಾ ರಜನಿಕಾಂತ್!
ಸೂಪರ್ ಸ್ಟಾರ್ ರಜನೀಕಾಂತ್ ಅವರು ತಮ್ಮ ಸಿನಿಮಾವನ್ನು ನೋಡಿ ಮೆಚ್ಚಿದರು ಎಂದರೆ ಯಾರಿಗೆ ಖುಷಿಯಾಗದು ಹೇಳಿ? ಅದೇ ರೀತಿ 'ಮಹಾನ್' ಚಿತ್ರದ ನಿದೇಶಕ ಕಾರ್ತಿಕ್ ಸುಬ್ಬರಾಜ್ ಅವರೂ ಕೂಡ ಈ ಸಂಗತಿಯಿಂದ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ತಾನು ಆರಾಧ್ಯರೆಂದು ಪರಿಗಣಿಸುವ ರಜನೀಕಾಂತ್, ತನ್ನ ನಿರ್ದೇಶನದ ಸಿನಿಮಾವನ್ನು ಮೆಚ್ಚಿರುವುದು ಕಾರ್ತಿಕ್ ಸುಬ್ಬರಾಜ್ ಅವರ ಪಾಲಿಗಂತೂ ಹೆಮ್ಮೆಯ ಸಂಗತಿ.
ಖುಷಿ ಹಂಚಿಕೊಂಡ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್!
ರಜನೀಕಾಂತ್ ಅವರು ಕರೆ ಮಾಡಿ 'ಮಹಾನ್' ಚಿತ್ರವನ್ನು ಶ್ಲಾಘಿಸಿದ ಸಂತಸದ ಸಂಗತಿಯನ್ನು ಕಾರ್ತಿಕ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು ಈ ರೀತಿ, “ಅತ್ಯುತ್ತಮ ಸಿನಿಮಾ. . .ಅದ್ಭುತ ಪ್ರದರ್ಶನ. . .ಅದ್ಭುತ” ಹೌದು. . . ತಲೈವರ್ ಇಷ್ಟಪಟ್ಟಿದ್ದಾರೆ #Mahaan, ನಿಮ್ಮ ಕರೆಗೆ ಧನ್ಯವಾದಗಳು ತಲೈವಾ. . .. ನಾವು ಸಂತಸಗೊಂಡಿದ್ದೇವೆ" #ThalaivarLovedMahaan #MahaanOnPrime #MahaanStreamingNow ಎಂದು ಬರೆದಿದ್ದಾರೆ.
"Excellent movie ... Superb Performances .... Brilliant "
Yes.... Thalaivar loveeeed #Mahaan 😍😍
Thanks for your call Thalaivaaa..... 🙏🏼🙏🏼
We are Elated!!#ThalaivarLovedMahaan#MahaanOnPrime #MahaanStreamingNow pic.twitter.com/xTBjZCI3Oe
— karthik subbaraj (@karthiksubbaraj) February 11, 2022
ಕನ್ನಡದಲ್ಲಿ ‘ಮಹಾಪುರುಷ’ ಟೈಟಲ್ನಲ್ಲಿ ರಿಲೀಸ್!
'ಮಹಾನ್' ಸಿನಿಮಾವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ, ಲಲಿತ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಇದೊಂದು ಗ್ಯಾಂಗ್‍ಸ್ಟರ್ ಸಿನಿಮಾ. ಚಿಯಾನ್ ವಿಕ್ರಂ, ಧ್ರುವ ವಿಕ್ರಂ, ಬಾಬಿ ಸಿಂಹ, ಸಿಮ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸನತ್ , ದೀಪಿಕಾ, ಪರಮೇಶ್ , ವಾಣಿ ಭೋಜನ್ ಮುಂತಾವರ ತಾರಾಗಣವಿದೆ. ಸಂತೋಷ್ ನಾರಾಯಣ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಶ್ರೇಯಸ್ ಕೃಷ್ಣ ಅವರು ಸಿನಿಮಾಟೋಗ್ರಫಿ ಮಾಡಿದ್ದಾರೆ. ಈ ಚಿತ್ರವನ್ನು ಇತರ ಭಾಷೆಗಳಿಗೂ ಡಬ್ ಮಾಡಿದ್ದು, ಮಲಯಾಳಂ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲೂ ಈ ಸಿನಿಮಾ ಲಭ್ಯವಿದೆ. ಕನ್ನಡ ಭಾಷೆಯಲ್ಲಿ ಈ ಚಿತ್ರಕ್ಕೆ ಮಹಾಪುರುಷ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: ಡಿಪ್ಪಿ ಜೊತೆ ಕಿಸ್ ಸೀನ್ ಕಂಡು ಸಿದ್ದಾರ್ಥ್ ಚಿಕ್ಕಪ್ಪ ಕೇಳಿದ್ದೇನು ಅಂತ ಗೊತ್ತಾದ್ರೆ ಸಖತ್ ನಗ್ತೀರಾ!
ಮೊದಲ ಬಾರಿಗೆ ತಂದೆ-ಮಗನ ಜುಗಲ್ಬಂದಿ!
ತಂದೆ – ಮಗ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಒಂದೇ ತೆರೆಯ ಮೇಲೆ ಇಬ್ಬರು ಸ್ಟಾರ್ ನಟರನ್ನು ಜೊತೆಗೆ ತರುವುದು ಸುಲಭದ ಕೆಲಸವಲ್ಲ. ಆದರೆ ಕಾರ್ತಿಕ್ ಸುಬ್ಬರಾಜ್ ಅವರು ಚಿಯಾನ್ ವಿಕ್ರಂ ಮತ್ತು ಧ್ರುವ ವಿಕ್ರಂ ಇಬ್ಬರ ಪಾತ್ರಗಳಿಗೂ ಸಮಾನ ಅವಕಾಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೋಷಕ ಪಾತ್ರಗಳಿಗೂ ಉತ್ತಮ ಅವಕಾಶ ನೀಡಿದ್ದು, ವೈಯುಕ್ತಿಕ ಸ್ವಾತಂತ್ರ್ಯದ ಹುಡುಕಾಟ, ಸಾಹಸಮಯ ಪಯಣ, ಬದುಕಿನ ಹೋರಾಟ, ರೋಮಾಂಚಕತೆ ಮತ್ತು ನಿರೀಕ್ಷೆಯನ್ನು ಮೀರಿದ ಘಟನೆಗಳನ್ನು ಹೊಂದಿರುವ ಸಿನಿಮಾದ ಕಥಾ ಹಂದರವಂತು ಸಿಕ್ಕಾಪಟ್ಟೆ ಚೆನ್ನಾಗಿದೆ ಎಂದು ಹೊಗಳುತ್ತಿದ್ದಾರೆ ಅಭಿಮಾನಿಗಳು.
ಇದನ್ನೂ ಓದಿ: ಇವ್ಳ್ ಅವತಾರ ನೋಡೋಕೆ ಆಗ್ತಿಲ್ಲ.. ವಿಚಿತ್ರ ಕಾಸ್ಟ್ಯೂಮ್ ಕಂಡು ಫ್ಯಾಶನ್ ಡಿಸಾಸ್ಟರ್ ಅಂದ್ರು ನೆಟ್ಟಿಗರು!
ಪೆಟ್ಟಾ ಸಿನಿಮಾ ನಿರ್ದೇಶಿಸಿದ್ದ ಕಾರ್ತಿಕ್ ಸುಬ್ಬರಾಜ್!
ಕಾರ್ತಿಕ್ ಸುಬ್ಬರಾಜ್ ಅವರು ಈ ಮೊದಲು ರಜನೀಕಾಂತ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ರಜನೀಕಾಂತ್ ಅವರ ಬ್ಲಾಕ್‍ಬಸ್ಟರ್ ಸಿನಿಮಾ ಪೆಟ್ಟಾವನ್ನು ನಿರ್ದೇಶನ ಮಾಡಿದ್ದು ಕಾರ್ತಿಕ್ ಸುಬ್ಬರಾಜ್. ಅವರಿಬ್ಬರು ಮತ್ತೆ ಜೊತೆಯಾಗಿ ಸಿನಿಮಾ ಪ್ರಾಜೆಕ್ಟ್ ವೊಂದಕ್ಕೆ ಕೆಲಸ ಮಾಡಲಿದ್ದಾರೆ ಎಂಬ ವದಂತಿಗಳಿವೆ. ಆದರೆ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾರ್ತಿಕ್ ಸುಬ್ಬರಾಜ್ ಈ ವದಂತಿಗಳನ್ನು ತಳ್ಳಿ ಹಾಕಿದ್ದು, “ ಇಲ್ಲ, ಇದು ನಿಜ ಅಲ್ಲ” ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ