ಬೆಂಗಳೂರಿನ ವಿವೇಕನಗರದ ಚರ್ಚ್​ಗೆ ಭೇಟಿ ಕೊಟ್ಟು ಹರಕೆ ತೀರಿಸಿದ Rajinikanth..!

ರಜಿನಿಕಾಂತ್​ ಅವರಿಗೆ ಬೆಂಗಳೂರಿನ ಜೊತೆ ಒಂದು ವಿಶೇಷವಾಗಿ ನಂಟಿದೆ. ಅವರು ಬಸ್​ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗಿನ ನೆನಪುಗಳು ಹಾಗೂ ಅವರು ಆಗ ಭೇಟಿ ಕೊಡುತ್ತಿದ್ದ ಸ್ಥಳಗಳಿಗೆ ಈಗಲೂ ಅವರು ಬಂದು ಹೋಗುತ್ತಾರೆ. ಅಲ್ಲದೆ ಬೆಂಗಳೂರಿನಲ್ಲಿರುವ ಅವರ ಸ್ನೇಹಿತರ ಮನೆಗೂ ಆಗಾಗ ಭೇಟಿ ಕೊಡುತ್ತಿರುತ್ತಾರೆ.

ವಿವೇಕನಗರದ ಚರ್ಚ್​ನಲ್ಲಿ ರಜಿನಿಕಾಂತ್​

ವಿವೇಕನಗರದ ಚರ್ಚ್​ನಲ್ಲಿ ರಜಿನಿಕಾಂತ್​

  • Share this:
ಕಾಲಿವುಡ್​ (Kollywood) ಸೂಪರ್​ ಸ್ಟಾರ್​ ರಜಿನಿಕಾಂತ್  (Rajinikanth) ಅವರು ಇದ್ದಕ್ಕಿದ್ದಂತೆ ಬೆಂಗಳೂರಿಗೆ  (Bengaluru)ಬಂದು, ವಿವೇಕನಗರದ  (Viveknagar Church)ಇನ್​ಫೆಂಟ್ರಿ ಚರ್ಚ್​ಗೆ ಭೇಟಿ ಕೊಟ್ಟಿದ್ದಾರೆ. ತಲೈವ ದಿಢೀರ್​ ಎಂದು ಬೆಂಗಳೂರಿಗೆ ಬರಲು ಬಲವಾದ ಕಾರಣವಿದೆ. ಕೆಲ ತಿಂಗಳ ಹಿಂದೆ ಮಗಳಿಗೆ ಅನಾರೋಗ್ಯವಾಗಿದ್ದಾಗ ರಜಿನಿ ವಿವೇಕ್​ನಗರದ ಚರ್ಚ್​ಗೆ ಭೇಟಿ ಕೊಡುವುದಾಗಿ ಹರಕೆ ಮಾಡಿಕೊಂಡಿದ್ದರಂತೆ. ಕೆಲ ತಿಂಗಳ ಹಿಂದೆ ಮಾಡಿಕೊಂಡಿದ್ದ ಹರಕೆಯನ್ನು ತೀರಿಲಸು ರಜಿನಿಕಾಂತ್​ ಬೆಂಗಳೂರಿಗೆ ಬಂದಿದ್ದಾರೆ. ಸಾಮಾನ್ಯರಂತೆ ಚರ್ಚ್​ಗೆ ಭೇಟಿ ಕೊಟ್ಟಿದ್ದ ತಲೈವ ತಮ್ಮ ಸ್ನೇಹಿತರ ಮನೆಗೂ ಹೋಗಿದ್ದಾರೆ. ನಂತರ ಚೆನ್ನೈಗೆ ಮರಳಿದ್ದಾರೆ. 

ಕಳೆದ ತಿಂಗಳು ಹನುಮಂತನಗರದಲ್ಲಿರುವ ರಜಿನಿಕಾಂತ್ ಅವರ ಸ್ನೇಹಿತ ಕೊನೆಯುಸಿರೆಳೆದಿದ್ದರು. ಆಗ ಕಾರಣಾಂತರಗಳಿಂದಾಗಿ ಸ್ನೇಹಿತನ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಲು ರಜಿನಿ ಅವರಿಗೆ ಆಗಿರಲಿಲ್ಲವಂತೆ. ಅದಕ್ಕೆ ನಿನ್ನೆ ಬೆಳಿಗ್ಗೆ ಬೆಂಗಳೂರಿಗೆ ಬಂದ ತಲೈವ ರಜಿನಿಕಾಂತ್​ ಅವರು ನಿನ್ನೆ ಬೆಳಗ್ಗೆ 9:30ಕ್ಕೆ ಸ್ನೇಹಿತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Super Star Rajinikanth Acted Next Film Annaaththe, Rajanikanth, Darbar, Super Star, Annaaththe, Vishvasam, Siva, Rajanikath Movies, Keerthi suresh, prakash Raj, ಅಣ್ಣಾತೆ, ಸೂಪರ್​ ಸ್ಟಾರ್​ ರಜಿನಿಕಾಂತ್​, ರಜನಿ ನಟನೆಯ 168ನೇ ಚಿತ್ರ ಅಣ್ಣಾತೆ, ಅಣ್ಣಾತೆ ಫಸ್ಟ್​ ಕಾಪಿ, ಅಣ್ಣಾತೆ ಸಿನಿಮಾ ರಿಲೀಸ್​, ದೀಪಾವಳಿಗೆ ಅಣ್ಣಾತೆ ರಿಲೀಸ್​, After watching first copy of Annaatthe Rajinikanth shares his review ae
ತಲೈವ ರಜಿನಿಕಾಂತ್


ನಂತರ ನಿನ್ನೆ ರಾತ್ರಿ 7:30ಕ್ಕೆ ವಿವೇಕನಗರದ ಚರ್ಚ್​ಗೆ ತಲೈವ ಭೇಟಿ ನೀಡಿದ್ದಾರೆ. ಜೊತೆಗೆ ಪ್ರಾರ್ಥನೆಯನ್ನೂ ಸಲ್ಲಿಸಿದ್ದಾರೆ. ನಂತರ ರಾತ್ರಿ 9:30ಕ್ಕೆ ಮತ್ತೆ ಚೆನ್ನೈಗೆ ಮರಳಿದ್ದಾರೆ. ರಜನಿಕಾಂತ್ ಅವರು ವಿವೇಕನಗರದ ಚರ್ಚ್​ಗೆ ಭೇಟಿ ನೀಡಿದ ದೃಶ್ಯಗಳು ಹಾಗೂ ಚಿತ್ರಗಳು ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿವೆ.

ರಜಿನಿಕಾಂತ್​ ಅವರಿಗೆ ಬೆಂಗಳೂರಿನ ಜೊತೆ ಒಂದು ವಿಶೇಷವಾಗಿ ನಂಟಿದೆ. ಅವರು ಬಸ್​ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗಿನ ನೆನಪುಗಳು ಹಾಗೂ ಅವರು ಆಗ ಭೇಟಿ ಕೊಡುತ್ತಿದ್ದ ಸ್ಥಳಗಳಿಗೆ ಈಗಲೂ ಅವರು ಬಂದು ಹೋಗುತ್ತಾರೆ. ಅಲ್ಲದೆ ಬೆಂಗಳೂರಿನಲ್ಲಿರುವ ಅವರ ಸ್ನೇಹಿತರ ಮನೆಗೂ ಆಗಾಗ ಭೇಟಿ ಕೊಡುತ್ತಿರುತ್ತಾರೆ. ಅವರ ಅಣ್ಣ ಸತ್ಯನಾರಾಯಣ ಅವರ ಮನೆಯೂ ಬೆಂಗಳೂರಿನಲ್ಲಿದೆ.

ಕಳೆದ ಡಿಸೆಂಬರ್​ನಲ್ಲಿ ರಜಿನಿಕಾಂತ್ ಅವರು ಅಣ್ಣ ಸತ್ಯನಾರಾಯಣ ಅವರ ಮನೆಗೆ ಭೇಟಿಕೊಟ್ಟಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅಣ್ಣಾತ್ತೆಯ ಮತ್ತೊಂದು ಲಿರಿಕಲ್ ಹಾಡಿನ ವಿಡಿಯೋ ರಿಲೀಸ್ ಆಗಿದೆ.

ಇದನ್ನೂ ಓದಿ: SPB’s Last Song- ಸಂಚಲನ ಮೂಡಿಸುತ್ತಿದೆ ಎಸ್​ಪಿಬಿ ಕಂಠಸಿರಿಯ ಕೊನೆಯ ಹಾಡು ಅಣ್ಣಾತೆ ಅಣ್ಣಾತೆ

ಶನಿವಾರ ರಿಲೀಸ್ ಬಿಡುಗಡೆಯಾಗಿರುವ ಸಾರಾ ಕಾಟ್ರೆ... ಲಿರಿಕಲ್ ಹಾಡಿನಲ್ಲಿ ರಜಿನಿಕಾಂತ್ ಮತ್ತು ನಯನತಾರಾ ಕಾಂಬಿನೇಷನ್ ಸಖತ್ತಾಗಿ ವರ್ಕೌಟ್ ಆಗಿದೆ. ಗಾಯಕರಾದ ಶ್ರೇಯಾ ಘೋಷಾಲ್ ಮತ್ತು ಸಿದ್ ಶ್ರೀರಾಮ್ ಹಾಡಿಗೆ ಜೀವದ ಜೊತೆ ಚೈತನ್ಯ ತುಂಬಿದ್ದಾರೆ.

ಅಕ್ಟೋಬರ್ 4ರಂದು ಅಣ್ಣಾತ್ತೆ ಚಿತ್ರದ ಟೈಟಲ್ ಟ್ರ್ಯಾಕ್ ಔಟ್ ಆಗಿತ್ತು. ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ರಜಿನಿಕಾಂತ್ ಜೋಡಿಯ ಹಾಡಾಗಿತ್ತು. ಎಸ್ಪಿಬಿ ಅವರ ಕಂಠದಿಂದ ಬಂದ ಮಾಸ್ ಹಾಡಿನಲ್ಲಿ ರಜಿನಿಕಾಂತ್ ವೈಟ್ ಆ್ಯಂಡ್ ವೈಟ್ ಪಂಚೆ-ಶರ್ಟ್ ಧರಿಸಿ, ಕನ್ನಡಕ ಧರಿಸಿ ಸಾಂಪ್ರದಾಯಿಕ ಲುಕ್​ನಲ್ಲಿ ಮಾಸ್ ಆಗಿ ಮಿಂಚಿದ್ದರು. ಈ ಹಾಡು ಇದುವರೆಗೂ 70 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಇದನ್ನೂ ಓದಿ: Rajinikanth: ಕೋವಿಡ್​ ಲಸಿಕೆ ಹಾಕಿಸಿಕೊಂಡ ರಜಿನಿಕಾಂತ್​: ಫೋಟೋ ಹಂಚಿಕೊಂಡ ಮಗಳು ಸೌಂದರ್ಯ..!

ಚಿತ್ರದಲ್ಲಿ ನಟಿಯರಾದ ನಯನತಾರಾ ಮತ್ತು ಕೀರ್ತಿಸುರೇಶ್ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಖುಷ್ಬೂ, ಸೂರಿ, ಪ್ರಕಾಶ್ ರೈ, ಜಗಪತಿ ಬಾಬು, ಅಭಿಮನ್ಯು ಸಿಂಗ್ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಚಿತ್ರ ಹೊಂದಿದೆ. ಚಿತ್ರಕ್ಕೆ ಶಿವ ಆ್ಯಕ್ಷನ್ ಕಟ್ ಹೇಳಿದ್ರೆ, ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಚಿತ್ರಕ್ಕೆ ಡಿ.ಇಮ್ಮನ್ ಅವರ ಸಂಗೀತವಿದೆ.
Published by:Anitha E
First published: