Aishwarya-Dhanush ವಿಚ್ಛೇದನದಿಂದ ನೊಂದ ರಜನಿಕಾಂತ್, ದಂಪತಿ ಮನವೊಲಿಸುವ ಪ್ರಯತ್ನ ಮಾಡ್ತಿದ್ದಾರೆ ತಲೈವಾ

ನಟ ಧನುಷ್ ಅವರೊಂದಿಗೆ ಐಶ್ವರ್ಯಾ ವೈವಾಹಿಕ ಜೀವನವನ್ನು ಸರಿ ಪಡಿಸಬೇಕೆಂದು ರಜನೀಕಾಂತ್ ಬಯಸುತ್ತಾರೆ ಎಂದು ಹೇಳಲಾಗಿದೆ.

ರಜನಿಕಾಂತ್​, ಐಶ್ವರ್ಯಾ, ಧನುಷ್​

ರಜನಿಕಾಂತ್​, ಐಶ್ವರ್ಯಾ, ಧನುಷ್​

  • Share this:
ಕಳೆದ ವಾರವಷ್ಟೆ ಹಿರಿಯ ನಟ ರಜನೀಕಾಂತ್ ಅವರ ಪುತ್ರಿ ಐಶ್ವರ್ಯಾ(Aishwarya) ಮತ್ತು ತಮಿಳು ನಟ ಧನುಷ್ (Dhanush) ತಮ್ಮ ವೈವಾಹಿಕ ಜೀವನದಿಂದ ಹೊರ ಬಂದಿರುವ ಬಗ್ಗೆ ಘೋಷಿಸಿದರು. (Announced) ಈ ಗಂಡ ಮತ್ತು ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಈ ದಂಪತಿಗಳ ಇಬ್ಬರು ಮಕ್ಕಳು ಆ ನೋವನ್ನು ಅನುಭವಿಸುತ್ತಿದ್ದರೆ, ಇಲ್ಲಿ ಇನ್ನೊಬ್ಬರು ಈ ವಿಷಯ ಕೇಳಿ ತುಂಬಾ ನೋವು ಅನುಭವಿಸುತ್ತಿರುವುದು ನಟ ರಜನೀಕಾಂತ್ (Actor Rajinikanth) ಅಂತೆ ಎಂದು ವರದಿಗಳು ಹೇಳುತ್ತಿವೆ.ಐಶ್ವರ್ಯಾ ಮತ್ತು ನಟ ಧನುಷ್ ಇಬ್ಬರೂ 17 ವರ್ಷಗಳಿಂದ ಒಟ್ಟಿಗೆ ಸಂಸಾರ ಮಾಡಿ ಇದೀಗ ಪರಸ್ಪರ ಬೇರೆ ಬೇರೆ ಆಗಲು ನಿರ್ಧರಿಸಿ ತಮ್ಮ ಬೇರ್ಪಡುವಿಕೆಯನ್ನು ದೃಢೀಕರಿಸುವ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು.

ಕುಟುಂಬದ ಜಗಳ
ಇವರಿಬ್ಬರು ಬೇರ್ಪಟ್ಟ ಸುದ್ದಿಯನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿರುವ ಪುಟದಲ್ಲಿ "ಸ್ನೇಹಿತರಾಗಿ, ದಂಪತಿಗಳಾಗಿ, ಹೆತ್ತವರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳ ಒಗ್ಗಟ್ಟಿನ ಪ್ರಯಾಣವು ಇಲ್ಲಿಗೆ ಕೊನೆಗೊಳ್ಳಲಿದೆ. ಇಂದು ನಾವಿಬ್ಬರೂ ನಮ್ಮ ನಮ್ಮ ದಾರಿಗಳನ್ನು ಹುಡುಕಿಕೊಂಡು ಹೋಗುವ ಹಂತಕ್ಕೆ ಬಂದು ನಿಂತಿದ್ದೇವೆ. ನಾವು ದಂಪತಿಗಳಾಗಿ ಬೇರ್ಪಡಲು ನಿರ್ಧರಿಸಿದ್ದೇವೆ ಮತ್ತು ವ್ಯಕ್ತಿಗಳಾಗಿ ನಮ್ಮನ್ನು ನಾವು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ" ಎಂದು ಬರೆದುಕೊಂಡಿದ್ದರು.

ಈ ಸುದ್ದಿಯಿಂದ ಅಭಿಮಾನಿಗಳಿಗೆ ತುಂಬಾನೇ ನೋವಾಗಿತ್ತು ಮತ್ತು ಇತ್ತ ನಟ ಧನುಷ್ ಅವರ ತಂದೆ ಕಸ್ತೂರಿ ರಾಜಾ ಅವರು ಐಶ್ವರ್ಯಾ ಮತ್ತು ಧನುಷ್ ಅವರ ಬೇರ್ಪಡುವಿಕೆಯನ್ನು "ಕುಟುಂಬದ ಜಗಳ" ಎಂದು ಪರಿಗಣಿಸಿದ್ದಾರೆ. ಈಗ, ಐಶ್ವರ್ಯಾ ಮತ್ತು ಧನುಷ್ ಬೇರ್ಪಡುವ ನಿರ್ಧಾರದಿಂದ ರಜನೀಕಾಂತ್ ತೀವ್ರವಾಗಿ ಪ್ರಭಾವಿತರಾಗಿದ್ದಾರೆ ಎಂದು ಹೊಸ ವರದಿಯೊಂದು ಹೇಳಿದೆ.

ಇದನ್ನೂ ಓದಿ: Dhanush-Aishwarya Rajinikanth: ‘ನನ್ನ ಮಗ-ಸೊಸೆ ಬೇರೆಯಾಗಿಲ್ಲ‘ ಅಚ್ಚರಿ ಹೇಳಿಕೆ ಕೊಟ್ಟ ಧನುಷ್ ತಂದೆ

ವೈವಾಹಿಕ ಜೀವನ ಸರಿ ಪಡಿಸಲು ರಜನಿ ಯತ್ನ
ರಜನೀಕಾಂತ್ ಅವರು ತಮ್ಮ ಮಗಳು ತನ್ನ ಗಂಡನಿಂದ ಬೇರ್ಪಡುವ ವಿಚಾರ ಕೇಳಿ ತುಂಬಾನೇ ಬೇಸರ ಮಾಡಿಕೊಂಡಿದ್ದಾರಂತೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ನಟ ಧನುಷ್ ಅವರೊಂದಿಗೆ ಐಶ್ವರ್ಯಾ ವೈವಾಹಿಕ ಜೀವನವನ್ನು ಸರಿ ಪಡಿಸಬೇಕೆಂದು ರಜನೀಕಾಂತ್ ಬಯಸುತ್ತಾರೆ ಎಂದು ಹೇಳಲಾಗಿದೆ. ಧನುಷ್ ಅವರ ಕುಟುಂಬವು ದಂಪತಿಗಳನ್ನು ಹೊಂದಾಣಿಕೆ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿದೆ ಎಂದು ವರದಿ ಹೇಳಿದೆ.

'ಈ ದಂಪತಿಗಳ ನಡುವಿನ ಜಗಳಗಳು ಸಾಮಾನ್ಯವಲ್ಲ' ಎಂದು ಕುಟುಂಬದ ಒಳಗಿನವರು ಹೇಳಿದ್ದಾರೆ. ಧನುಷ್ ಮತ್ತು ಐಶ್ವರ್ಯಾ ತುಂಬಾನೇ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಆದರೂ,ಇವರಿಬ್ಬರು ಜಗಳವಾಡಿದಾಗಲೆಲ್ಲಾ ರಜನೀಕಾಂತ್ ಅವರೇ ಸ್ವತಃ ಇವರಿಬ್ಬರಿಗೂ ಒಟ್ಟಿಗೆ ಇರಲು ಅವರನ್ನು ಮನವೊಲಿಸಿ ಕಳುಹಿಸುತ್ತಿದ್ದರು ಎಂದು ಹೇಳಲಾಗಿದೆ.

ಬಹಿರಂಗ ಹೇಳಿಕೆ
ಈ ಮಧ್ಯೆ, ಐಶ್ವರ್ಯಾ ಮತ್ತು ಧನುಷ್ ಅವರ ಪ್ರತ್ಯೇಕತೆಯ ಬಗ್ಗೆ ನಟ ರಜನೀಕಾಂತ್ ಇನ್ನೂ ಯಾವುದೇ ಬಹಿರಂಗ ಹೇಳಿಕೆಯನ್ನು ನೀಡಿಲ್ಲ. ಪ್ರತ್ಯೇಕತೆಯ ಹೇಳಿಕೆಯು ಸುದ್ದಿಯಲ್ಲಿ ಬರುವ 2 ದಿನಗಳ ಮುಂಚೆ ಹಿರಿಯ ನಟ ಮಕರ ಸಂಕ್ರಾಂತಿ ಹಬ್ಬದಂದು ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮದ ಮೂಲಕ ಶುಭಾಶಯಗಳನ್ನು ತಿಳಿಸಿದ್ದರು. ಆನಂತರ ಅವರು ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Dhanush Divorce: ಧನುಷ್, ಐಶ್ವರ್ಯಾ ಡಿವೋರ್ಸ್​ ಬಗ್ಗೆ ಕಿಂಡಲ್​ ಮಾಡಿದ ಫ್ಯಾನ್ಸ್​, ಇಲ್ಲಿ ಸಮಂತಾ ಹೆಸ್ರು ಬಂದಿದ್ದಾದ್ರೂ ಯಾಕೆ?

ಮಾಜಿ ದಂಪತಿಗಳು ತಮ್ಮ ಬೇರ್ಪಡುವಿಕೆಯ ಹಿಂದಿನ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಧನುಷ್ ಅವರ ಕೆಲಸ ಮಾಡುವ ಪರಿಯೇ ಅವರ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.

ಐಶ್ವರ್ಯಾ ಮತ್ತು ಧನುಷ್ ಈಗಾಗಲೇ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಐಶ್ವರ್ಯಾ ಪ್ರಸ್ತುತ ಹೈದರಾಬಾದ್‌ನಲ್ಲಿದ್ದು, ವ್ಯಾಲೆಂಟೈನ್ಸ್ ಡೇ ಸಂಗೀತ ವಿಡಿಯೋವೊಂದನ್ನು ನಿರ್ದೇಶಿಸುತ್ತಿದ್ದಾರೆ. ಧನುಷ್ ಕೂಡ ತಮ್ಮ ಮುಂಬರುವ ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಎಂದು ಸುದ್ದಿ ಮಾಧ್ಯಮದ ವರದಿಯೊಂದು ಹೇಳಿದೆ. ಇಷ್ಟಾದರೂ ಇವರಿಬ್ಬರು ಒಂದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ ಎಂದು ಇತ್ತೀಚಿನ ವರದಿಯೊಂದರಲ್ಲಿ ಹೇಳಲಾಗಿತ್ತು.
Published by:vanithasanjevani vanithasanjevani
First published: