Lal Salaam ಸಿನಿಮಾದಲ್ಲಿ ರಜನಿ ಕಾಂತ್​ ಜೊತೆಗೆ ಕಪಿಲ್​ ದೇವ್​ ನಟಿಸ್ತಾರಾ?

ಕಪಿಲ್ ದೇವ್ ಮತ್ತು ರಜನಿಕಾಂತ್

ಕಪಿಲ್ ದೇವ್ ಮತ್ತು ರಜನಿಕಾಂತ್

ಕಪಿಲ್ ದೇವ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡ ರಜನಿಕಾಂತ್ ಅವರು "ಲೆಜೆಂಡರಿ, ಅತ್ಯಂತ ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿ ಕಪಿಲ್ ದೇವ್ ಜಿ ಅವರೊಂದಿಗೆ ಕೆಲಸ ಮಾಡುವುದು ನನ್ನ ಗೌರವ ಅಂತ ಭಾವಿಸುತ್ತೇನೆ” ಅಂತ ಶೀರ್ಷಿಕೆಯನ್ನು ಸಹ ಫೋಟೋ ಪೋಸ್ಟ್ ಗೆ ಬರೆದಿದ್ದಾರೆ.

  • Share this:

ನಟ ರಜನಿಕಾಂತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಪೋಸ್ಟ್ ಗಳನ್ನು ಹಾಕುವುದು ಮಾಡುತ್ತಾರೆ. ಅದರಲ್ಲೂ ಅವರು ತಮ್ಮ ನೆಚ್ಚಿನ ವ್ಯಕ್ತಿಯೊಂದಿಗೆ ತೆಗೆಸಿಕೊಂಡ ಫೋಟೋಗಳನ್ನು ಹೆಚ್ಚಾಗಿ ಪೋಸ್ಟ್ ಮಾಡುತ್ತಾರೆ. ಗುರುವಾರದಂದು ಸಹ ನಟ ರಜನಿಕಾಂತ್ (Rajinikanth) ಅವರು ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರೊಂದಿಗೆ ತಮ್ಮ ಮುಂಬರುವ ತಮಿಳು ಚಿತ್ರ ಲಾಲ್ ಸಲಾಮ್ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಒಟ್ಟಿಗೆ ತೆಗೆಸಿಕೊಂಡ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವಿಟ್ (Tweet) ಪ್ರಕಾರ, ರಜನಿಕಾಂತ್ ಅವರ ಮಗಳು ಐಶ್ವರ್ಯಾ ರಜನೀಕಾಂತ್ (Aishwarya Rajinikanth) ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಕಪಿಲ್ ಸಹ ನಟಿಸಲಿದ್ದಾರಂತೆ ಎಂದು ತೋರುತ್ತದೆ. ಚಿತ್ರದ ಚಿತ್ರೀಕರಣಕ್ಕಾಗಿ ಇವರು ಇತ್ತೀಚೆಗೆ ಮುಂಬೈಗೆ ಬಂದಿಳಿದರು.


ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಒಟ್ಟಿಗೆ ಫೋಟೋ ತೆಗೆಸಿಕೊಂಡ ರಜನಿ ಮತ್ತು ಕಪಿಲ್


ಕಪಿಲ್ ದೇವ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡ ರಜನಿಕಾಂತ್ ಅವರು "ಲೆಜೆಂಡರಿ, ಅತ್ಯಂತ ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿ ಕಪಿಲ್ ದೇವ್ ಜಿ ಅವರೊಂದಿಗೆ ಕೆಲಸ ಮಾಡುವುದು ನನ್ನ ಗೌರವ ಅಂತ ಭಾವಿಸುತ್ತೇನೆ” ಅಂತ ಶೀರ್ಷಿಕೆಯನ್ನು ಸಹ ಫೋಟೋ ಪೋಸ್ಟ್ ಗೆ ಬರೆದಿದ್ದಾರೆ.


ಈ ಫೋಟೋದಲ್ಲಿ, ಇಬ್ಬರೂ ಪರಸ್ಪರ ಮಾತನಾಡುವುದರಲ್ಲಿ ಮಗ್ನರಾಗಿರುವಂತೆ ತೋರುತ್ತದೆ. ಸಂಭಾಷಣೆಯ ಮಧ್ಯದಲ್ಲಿ ಈ ಫೋಟೋವನ್ನು ಬೇರೆ ಯಾರೋ ಕ್ಲಿಕ್ ಮಾಡಿರುವಂತೆ ತೋರುತ್ತದೆ.


ಇದನ್ನೂ ಓದಿ: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ


ಕಪಿಲ್ ದೇವ್ ಬಿಳಿ ಪೊಲೊ ಟೀ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿಕೊಂಡು ತುಂಬಾನೇ ಕ್ಯಾಶುಯಲ್ ಲುಕ್ ನಲ್ಲಿ ಕಾಣಿಸಿಕೊಂಡರೆ, ಹಿರಿಯ ನಟ ರಜನಿಕಾಂತ್ ಅವರು ಸಂಪೂರ್ಣ ಬಿಳಿ ಬಣ್ಣದ ಉಡುಪನ್ನು ಧರಿಸಿದ್ದನ್ನು ಈ ಫೋಟೋದಲ್ಲಿ ನಾವು ನೋಡಬಹುದು ಮತ್ತು ಈ ಕಾಸ್ಟ್ಯುಮ್ ಚಿತ್ರದಲ್ಲಿನ ಅವರ ಪಾತ್ರದ ಒಂದು ಭಾಗವೆಂದು ತೋರುತ್ತದೆ.


ಲಾಲ್ ಸಲಾಂ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳಿದ ಐಶ್ವರ್ಯಾ


ಲಾಲ್ ಸಲಾಂ ಚಿತ್ರದ ಮೂಲಕ ಐಶ್ವರ್ಯಾ ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಕ್ರಿಕೆಟ್ ಮತ್ತು ಕಮ್ಯುನಿಸಂ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.



ಕಳೆದ ವಾರ, ಚಿತ್ರದ ತಯಾರಕರು ರಜನಿಕಾಂತ್ ಅವರ ಪಾತ್ರದ ಹೆಸರಿನೊಂದಿಗೆ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಹ ಅನಾವರಣಗೊಳಿಸಿದರು. ಪೋಸ್ಟರ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿತು, ಏಕೆಂದರೆ ಕೆಲವರು ಇದು ಉತ್ತಮವಾಗಿರಬೇಕು ಎಂದು ಗಮನಸೆಳೆದರು.


ಇದನ್ನೂ ಓದಿ: ಅಯ್ಯೋ ಏನಮ್ಮಾ ಅವತಾರ? ಬಿಕಿನಿ ಧರಿಸಿದ ಸೀತಾ ರಾಮಂ ನಟಿ ಟ್ರೋಲ್!


ಲೈಕಾ ಪ್ರೊಡಕ್ಷನ್ಸ್ ಟ್ವಿಟ್ಟರ್ ನಲ್ಲಿ ಫಸ್ಟ್‌ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿತು. ಟ್ವೀಟ್ ನಲ್ಲಿ "ಎಲ್ಲರ ನೆಚ್ಚಿನ ಭಾಯ್ ಮುಂಬೈಗೆ ಮರಳಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಸ್ವಾಗತಿಸಿ ಮತ್ತು ದಾರಿ ಮಾಡಿಕೊಡಿ” ಅಂತ ಬರೆದುಕೊಂಡಿದ್ದಾರೆ.


tamil cinema,tamil film,kollywood,tamil cinema news,tamil cinema update,tamil cinema update news,latest tamil cinema news and gossips,tamil movie updates,tamil cinema news latest,tamil movie reviews,latest tamil cinema news,tamil film news latest,tamil latest movie news,today tamil cinema news, kannada news, ಕನ್ನಡ ನ್ಯೂಸ್​, ಕಪಿಲ್​ ದೇವ್​ ಮತ್ತು ರಜಿನಿಕಾಂತ್​ ಒಟ್ಟಿಗೆ ಫೋಟೋ, ವೈರಲ್​ ಫೋಟೋ, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಫೋಟೋ, ಮನರಂಜನೆ ನ್ಯೂಸ್​, ಟ್ವಿಟ್ಟರ್​ನಲ್ಲಿ ವೈರಲ್​ ಆದ ನ್ಯೂಸ್​
ವೈರಲ್​ ಪೋಸ್ಟರ್​!


ಪೋಸ್ಟರ್ ಪ್ರಕಾರ, ರಜನಿಕಾಂತ್ ಮೊಯಿದ್ದೀನ್ ಭಾಯ್ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರ ಪಾತ್ರದ ಭಾಗವನ್ನು ಸಂಪೂರ್ಣವಾಗಿ ಮುಂಬೈ ನಗರದಲ್ಲಿಯೇ ಚಿತ್ರೀಕರಿಸಲಾಗುವುದು.


ಈ ಲಾಲ್ ಸಲಾಮ್ ಚಿತ್ರದಲ್ಲಿ ರಜನಿಕಾಂತ್ ವಿಸ್ತೃತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂಡವು ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣವನ್ನು ಸಹ ಪೂರ್ಣಗೊಳಿಸಿದೆಯಂತೆ.


ಈ ಚಿತ್ರಕ್ಕೆ ಎ ಆರ್ ರೆಹಮಾನ್ ಅವರು ಸಂಗೀತ ನೀಡಿದ್ದಾರಂತೆ..


ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಅವರು ಸಂಗೀತ ನೀಡಿದ್ದಾರೆ. ಈ ಯೋಜನೆಯ ಕೆಲಸವನ್ನು ಪ್ರಾರಂಭಿಸುವ ಮೊದಲು, ಅವರು ಕಡಪಾ ದರ್ಗಾಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ರಜನಿಕಾಂತ್ ಅವರನ್ನು ಸೇರಿಕೊಂಡರು.


top videos



    ಲಾಲ್ ಸಲಾಮ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ, ರಜನಿಕಾಂತ್ ಅವರು ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ಅವರೊಂದಿಗೆ ತಮ್ಮ ಮುಂದಿನ ಇನ್ನೂ ಹೆಸರಿಡದ ತಮಿಳು ಚಿತ್ರದ ಕೆಲಸವನ್ನು ಪ್ರಾರಂಭಿಸಲಿದ್ದಾರೆ.

    First published: