Rajinikanth: 12 ವರ್ಷಗಳ ಬಳಿಕ ಒಂದಾಗ್ತಾರಾ `ಎಂದಿರನ್​’ ಜೋಡಿ? ಕಾಲಿವುಡ್​ ಅಂಗಳದಲ್ಲಿ ಏನಿದು ಗುಸುಗುಸು?

ಪ್ರಸ್ತುತ ಕಾಲಿವುಡ್‌ (Kollywood) ಅಂಗಳದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ರಜನಿಕಾಂತ್ ಸಿನಿಮಾದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ನಟಿಸುತ್ತಾರೆ ಎನ್ನಲಾಗುತ್ತಿದೆ.

ರಜನಿಕಾಂತ್​, ಐಶ್ವರ್ಯಾ ರೈ

ರಜನಿಕಾಂತ್​, ಐಶ್ವರ್ಯಾ ರೈ

  • Share this:
ರಜನಿಕಾಂತ್‌(Rajinikanth)ರ ತಲೈವಾರ್ 169 ಸಿನಿಮಾವನ್ನು ಕೆಲವೇ ದಿನಗಳ ಹಿಂದೆ ಘೋಷಣೆ ಮಾಡಲಾಗಿತ್ತು. ಈ ಚಿತ್ರ ಅನೌನ್ಸ್ (Announce) ಆದಲ್ಲಿಂದ ರಜನಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ತಮಿಳು (Tamil) ಚಿತ್ರರಂಗದ ಸ್ಟಾರ್ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ (Nelsan Dilip Kumar) ಇದೇ ಮೊದಲ ಬಾರಿಗೆ ರಜನಿಕಾಂತ್‌ಗೆ ಆ್ಯಕ್ಷನ್ ಕಟ್ (Action Cut) ಹೇಳುತ್ತಿದ್ದಾರೆ. ಹೀಗಾಗಿ ಸಿನಿರಸಿಕರು ರಜನಿ ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ. ಕಳೆದ ವಾರ ಘೋಷಿಸಲಾದ ರಜನಿಕಾಂತ್ ಅವರ ತಲೈವಾರ್ 169 ಚಿತ್ರ ಈಗಾಗಲೇ ಪಾತ್ರವರ್ಗ, ಕಥಾವಸ್ತು ಇತ್ಯಾದಿಗಳ ಬಗ್ಗೆ ಭಾರಿ ಸುದ್ದಿಯನ್ನು ಸೃಷ್ಟಿಸಿದೆ. ಪ್ರಸ್ತುತ ಕಾಲಿವುಡ್‌ (Kollywood) ಅಂಗಳದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ರಜನಿಕಾಂತ್ ಸಿನಿಮಾದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ನಟಿಸುತ್ತಾರೆ ಎನ್ನಲಾಗುತ್ತಿದೆ. ಐಶ್ವರ್ಯಾ ರೈ ರಜನಿಗೆ ನಾಯಕಿಯಾಗಲು ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎಂದು ಕೆಲವು ಬಲವಾದ ಮೂಲಗಳಿಂದ ವರದಿಯಾಗಿದೆ.

ಮತ್ತೆ ಒಂದಾಗ್ತಾರಾ ‘ಎಂದಿರನ್​’ ಜೋಡಿ!

2010 ರಲ್ಲಿ ಐಶ್ವರ್ಯಾ ರೈ ಹಾಗೂ ರಜನೀಕಾಂತ್ ಜೋಡಿಯಾಗಿ ನಟಿಸಿದ್ದ 'ಎಂದಿರನ್' ಚಿತ್ರ ಬಿಡುಗಡೆಯಾಗಿತ್ತು. ತೆಲುಗಿನಲ್ಲಿ ರೋಬೋ ಎಂಬ ಶೀರ್ಷಿಕೆಯ ಚಿತ್ರವು ಬಾಕ್ಸ್ ಆಫೀಸನ್ನು ಚಿಂದಿ ಮಾಡಿತ್ತು. ರಜನೀಕಾಂತ್ ಮತ್ತು ಐಶ್ವರ್ಯಾ ರೈ ಜೋಡಿಯು ಸಿನಿಮಾದಲ್ಲಿ ಫುಲ್ ಕಮಾಲ್ ಮಾಡಿತ್ತು. ಇವರಿಬ್ಬರ ಕೆಮಿಸ್ಟ್ರಿ ಕಂಡು ಇಬ್ಬರ ಅಭಿಮಾನಿಗಳು ಬಹುಪರಾಕ್ ಹೇಳಿದ್ದರು.


12 ವರ್ಷಗಳ ಬಳಿಕ ಜೊತೆಯಾಗ್ತಾರಾ ಹಿಟ್​ ಜೋಡಿ?

'ಎಂದಿರನ್' ಸಿನಿಮಾ ಬಳಿಕ ರಜನಿ ಹಾಗೂ ಐಶ್ವರ್ಯಾ ರೈ ಮತ್ತೆ ಒಟ್ಟಿಗೆ ನಟಿಸಲಿಲ್ಲ. ಈಗ ಬರೋಬ್ಬರಿ 12 ವರ್ಷಗಳ ಬಳಿಕ ರಜನೀಕಾಂತ್ ಸಿನಿಮಾದಲ್ಲಿ ಐಶ್ವರ್ಯಾ ರೈ ಮತ್ತೆ ನಟಿಸಲಿದ್ದಾರೆ ಎನ್ನುವ ಮಾತುಗಳು ಚಿತ್ರರಂಗದಲ್ಲಿ ಕೇಳಿ ಕೇಳಿಬರುತ್ತಿವೆ. ಮತ್ತೆ ಈ ಜೋಡಿಯನ್ನು ತೆರೆಮೇಲೆ ನೋಡಲು ಅಭಿಮಾನಿಗಳಂತೂ ಹಬ್ಬವೇ ಸರಿ. ಆದರೆ, ನಿರ್ದೇಶಕರಾಗಲಿ, ಸಿನಿಮಾ ತಂಡವಾಗಿ ನಾಯಕಿ ಯಾರು ಎಂಬುವುದರ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.

‘ಬೀಸ್ಟ್​​’ ಶೂಟಿಂಗ್​ನಲ್ಲಿ ನೆಲ್ಸನ್​ ಬ್ಯುಸಿ!

ನೆಲ್ಸನ್ ದಿಲೀಪ್‌ಕುಮಾರ್ ಬೀಸ್ಟ್ ಮತ್ತು ಡಾಕ್ಟರ್ ಚಿತ್ರಗಳಿಂದ ಹೆಸರುವಾಸಿಯಾಗಿದ್ದಾರೆ. ನೆಲ್ಸನ್ ಅವರ ದಳಪತಿ ವಿಜಯ್ ನಟಿಸಿದ ‘ಬೀಸ್ಟ್’ ಚಿತ್ರದ ಕೊನೆಯ ಹಂತದ ಕೆಲಸಗಳಲ್ಲಿ ಬ್ಯುಸಿ ಇದ್ದು, ಈ ಸಿನಿಮಾ ಏಪ್ರಿಲ್‌ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ನೆಲ್ಸನ್ ದಿಲೀಪ್ ಅವರು ಈ ಮೊದಲು ‘ಡಾಕ್ಟರ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.

ಇದನ್ನೂ ಓದಿ: ಯಶಸ್ವಿ ವೃತ್ತಿ ಜೀವನದ ಜೊತೆಗೆ ಬಾಲಿವುಡ್ ನ ಹೆಮ್ಮೆಯ ಸಿಂಗಲ್ ಡ್ಯಾಡಿ ಇವರು!

ರಜನಿ ಮುಂದಿನ ಚಿತ್ರಕ್ಕೆ ಇನ್ನೂ ಟೈಟಲ್​ ಫಿಕ್ಸ್​ ಆಗಿಲ್ಲ!

ರಜನಿ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಹೀಗಾಗಿ, ತಾತ್ಕಾಲಿಕವಾಗಿ ‘ಥಲೈವಾರ್ 169’ ಎಂದು ಕರೆಯಲಾಗುತ್ತಿದೆ. ಈ ಮೊದಲು ಚಿತ್ರತಂಡ ಸಿನಿಮಾದ ಬಗ್ಗೆ ಒಂದು ಚಿಕ್ಕ ವಿಡಿಯೋ ತುಣುಕನ್ನು ಹಂಚಿಕೊಂಡಿತ್ತು.. ಈ ವಿಡಿಯೋದಲ್ಲಿ ಮೊದಲಿಗೆ ಅನಿರುದ್ಧ ಅವರನ್ನು ತೋರಿಸಿದರೆ ಆ ಬಳಿಕ ನೆಲ್ಸನ್ ಮತ್ತು ರಜನೀಕಾಂತನ್ನು ತೋರಿಸಲಾಗಿತ್ತು. ‘ಥಲೈವಾರ್ 169’ ಸಿನಿಮಾವು ನೆಲ್ಸನ್ ದಿಲೀಪ್‌ಕುಮಾರ್ ಅವರ ವಿಶಿಷ್ಟವಾದ ಚಲನಚಿತ್ರವಾಗಿದ್ದು, ಚಿತ್ರಕಥೆಯಲ್ಲಿ ಸಾಕಷ್ಟು ಚಮತ್ಕಾರಿ ಅಂಶಗಳು ಇರಲಿವೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: ಫೆ.25ಕ್ಕೆ ಚಿತ್ರಮಂದಿರಗಳಿಗೆ `ಭೀಮ್ಲಾ ನಾಯಕ್’​ ಎಂಟ್ರಿ.. ಪವನ್​ ಕಲ್ಯಾಣ್​ ಫ್ಯಾನ್ಸ್​​ ಫುಲ್​ ದಿಲ್​ಖುಷ್!

ಮೇ ಆರಂಭದಲ್ಲಿ ರಜನಿ ಸಿನಿಮಾ ಶೂಟಿಂಗ್​!

ಏಪ್ರಿಲ್ ಅಂತ್ಯ/ಮೇ ಆರಂಭದಲ್ಲಿ ಚಿತ್ರ ಸೆಟ್ಟೇರಲಿದೆ. ಆ ನಂತರ ಶೂಟಿಂಗ್ ಪೂರ್ಣಗೊಳಿಸಿ, ಮುಂದಿನ ವರ್ಷದ ಸಂಕ್ರಾಂತಿ ವೇಳೆಗೆ ಸಿನಿಮಾ ತೆರೆಗೆ ತರುವ ಆಲೋಚನೆಯಲ್ಲಿ ಚಿತ್ರ ತಂಡ ಇದೆ ಎಂದು ವರದಿ ಆಗಿದೆ. ರಜನೀಕಾಂತ್ ಸಿನಿಮಾ ಯಾವಾಗ ಸೆಟ್ಟೇರುತ್ತೋ ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ. ಮತ್ತು ರಜನಿಗೆ ನಾಯಕಿಯಾಗಿ ಐಶ್ವರ್ಯಾ ರೈ ಬಚ್ಚನ್ ನಟಿಸುತ್ತಾರಾ ಎಂಬ ಎಲ್ಲಾ ಮಾಹಿತಿಯು ಶೀಘ್ರವೇ ಘೋಷಣೆ ಆಗುವ ಸಾಧ್ಯತೆ ಇದೆ.
Published by:Vasudeva M
First published: