ಸೂಪರ್ ಸ್ಟಾರ್ (Super Star) ರಜನಿಕಾಂತ್ (Rajinikanth) ಮಗಳು ಐಶ್ವರ್ಯಾ (Aishwarya Rajinikanth) ಬಾಳಲ್ಲಿ ಬಿರುಗಾಳಿಯೇ ಎದ್ದಿದೆ. ಟಾಲಿವುಡ್ ಖ್ಯಾತ ನಟ ಧನುಷ್ (Dhanush) ಜೊತೆಗಿನ ಬಾಂಧವ್ಯಕ್ಕೆ ಐಶ್ವರ್ಯಾ ತಿಲಾಂಜಲಿ ಇಟ್ಟಿದ್ದಾಳೆ. ಐಶ್ವರ್ಯಾ ಹಾಗೂ ಧನುಷ್ 18 ವರ್ಷಗಳ ವೈವಾಹಿಕ ಜೀವನ ಡಿವೋರ್ಸ್’ನಲ್ಲಿ (Divorce) ಮುಗಿದು ಹೋಗಿದೆ. ಇದರಿಂದ ರಜನಿಕಾಂತ್ ಫ್ಯಾಮಿಲಿಯಲ್ಲಿ ಒಂತರಾ ಬೇಸರದ ಛಾಯೆ ಆವರಿಸಿದೆ. ಸಂಕ್ರಾಂತಿಯ (Pongal) ಸಂಭ್ರಮದ ಹಿಂದೆಯೇ ವಿಚ್ಛೇದನದ ಸುದ್ದಿ ರಜನಿ ಫ್ಯಾಮಿಲಿಯಿಂದ ಬಂದಿದೆ.
ಅಳಿಯನೆಂದರೆ ರಜನಿಗೆ ಪ್ರೀತಿ
ಐಶ್ವರ್ಯಾ ಹಾಗೂ ಧನುಷ್ ಮದುವೆ ವಿಚಾರದಲ್ಲಿ ಈ ಹಿಂದೆಯೇ ಕೆಲ ವಿವಾದಗಳು ಹರಿದಾಡುತ್ತಿದ್ದವು. ಆದರೆ ಡಿವೋರ್ಸ್ ನಿಂದಾಗಿ ಇವೆಲ್ಲ ನಿಜ ಅನ್ನೋದು ಸಾಬೀತಾಗಿದೆ. ಈ ನಡುವೆ ಐಶ್ವರ್ಯಾ ತಂದೆ ಅಂದರೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಧನುಷ್ ನಡುವಿನ ಬಾಂಧವ್ಯ ಹೇಗಿತ್ತು ಅನ್ನೋ ಬಗ್ಗೆ ಚರ್ಚೆಯೂ ಶುರುವಾಗಿದೆ.
ಧನುಷ್ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಪ್ರೀತಿ, ಅಭಿಮಾನ ಇತ್ತು ಎನ್ನಲಾಗಿದೆ. ಕೆಲ ವೇದಿಕೆಗಳಲ್ಲಿ ಧನುಷ್ ಬಗ್ಗೆ ರಜನಿ ಒಳ್ಳೆ ಮಾತನಾಡಿದ್ದೂ ಇದೆ.
ಧನುಷ್’ಗೆ ರುದ್ರಾಕ್ಷಿ ಕೊಟ್ಟಿದ್ದ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ಧನುಷ್ 2004ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಂದು ಅಳಿಯನಿಗೆ ರಜನಿಕಾಂತ್ ವಿಶೇಷ ಉಡುಗೊರೆಯೊಂದನ್ನು ನೀಡಿದ್ದರು. ಅದೇನು ಅಂದರೆ ಹಿಮಾಲಯದಿಂದ ತಂದಿರೋ ರುದ್ರಾಕ್ಷಿ.
ಇದನ್ನೂ ಓದಿ: Dhanush-Aishwarya Rajinikanth: ‘ನನ್ನ ಮಗ-ಸೊಸೆ ಬೇರೆಯಾಗಿಲ್ಲ‘, ಅಚ್ಚರಿ ಹೇಳಿಕೆ ಕೊಟ್ಟ ಧನುಷ್ ತಂದೆ
ರಜನಿಕಾಂತ್ ಆಗಾಗ ಹಿಮಾಲಯಕ್ಕೆ ಹೋಗೋದು, ಅಲ್ಲಿ ಧಾನ್ಯದಲ್ಲಿ ಮಗ್ನರಾಗೋದು ಹೊಸದೇನೂ ಅಲ್ಲ. ಹೀಗೆ ಹಿಮಾಲಯಕ್ಕೆ ಹೋಗಿದ್ದಾಗ ಅಪರೂಪದ ರುದ್ರಾಕ್ಷಿಯನ್ನು ತಂದಿದ್ದರಂತೆ. ಅದನ್ನು ನೆಕ್ ಬ್ಯಾಂಡ್ ಮಾಡಿಸಿ, ಅಳಿಯನಿಗೆ ಉಡುಗೊರೆ ಕೊಟ್ಟಿದ್ರಂತೆ ರಜನಿಕಾಂತ್. “ಧನುಷ್ ಶಿವ ಭಕ್ತ. ಅವನು ಆಗಾಗ್ಗೆ ಓಂ ನಮಃ ಶಿವಾಯ ಎಂದು ಪಠಿಸುತ್ತಾನೆ ಅಂತ ರಜನಿಯೇ ಹೊಗಳಿದ್ದರು ಅಂತ ಕುಟುಂಬಸ್ಥರು ಹೇಳ್ತಿದ್ದಾರೆ.
ಹಳೆಯ ವಿಡಿಯೋ ವೈರಲ್
ಇನ್ನು ನಟ ಧನುಷ್ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಈ ಹಿಂದೆ ಹೊಗಳಿದ್ದ ಹಳೆಯ ವಿಡಿಯೋ ಈಗ ವೈರಲ್ ಆಗಿದೆ. ಸಮಾರಂಭವೊಂದರಲ್ಲಿ ಧನುಷ್ ಬಗ್ಗೆ ರಜನಿ ಹೊಗಳಿದ್ದರು. ಡಿವೋರ್ಸ್ ಆಗುತ್ತಿದ್ದಂತೆ ಆ ವಿಡಿಯೋಗಳನ್ನೆಲ್ಲ ಧನುಷ್ ಅಭಿಮಾನಿಗಳು ಹೊರತೆಗೆಯುತ್ತಿದ್ದಾರೆ. ಹಳೆ ವಿಡಿಯೋ, ಫೋಟೋಗಳನ್ನೆಲ್ಲ ವೈರಲ್ ಮಾಡುತ್ತಿದ್ದಾರೆ.
Apart From Trolls. Feeling sad For Rajini. Stay Strong 🙏 #Dhanush #DhanushDivorce #Divorce @dhanushkraja#Beast #Thalapathy66 @actorvijay pic.twitter.com/3brl7XYWNu
— பாண்டி💙❤💚 (@PandiyanKpm) January 18, 2022
ಧನುಷ್ ತಂದೆ ವಿಚ್ಛೇದನ ಸುಳ್ಳು ಅಂತಿದ್ದಾರೆ
ಇನ್ನು ಧನುಷ್ ಅವರ ತಂದೆ, ತಮಿಳು ಚಲನಚಿತ್ರ ನಿರ್ಮಾಪಕ ಕಸ್ತೂರಿ ರಾಜಾ ಅವರು ತಮ್ಮ ಮಗನ ವಿಚ್ಛೇದನದ ಬಗ್ಗೆ ಕೆಲವು ಆಸಕ್ತಿದಾಯಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಧನುಷ್ ಮತ್ತು ಐಶ್ವರ್ಯಾ ಅಗಲಿಕೆ ಕೇವಲ ಕೌಟುಂಬಿಕ ಕಲಹ ಅಷ್ಟೇ ಎಂದಿದ್ದಾರೆ. ಮತ್ತೊಂದೆಡೆ ಧನುಷ್ ಹಾಗೂ ಐಶ್ವರ್ಯಾ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದು ಯಾರು ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ. ಧನುಷ್ ಜೊತೆ ತಮಿಳಿನ ಖ್ಯಾತ ನಟಿಯೋರ್ವಳ ಸಲುಗೆಯೇ ವಿವಾಹ ವಿಚ್ಛೇದನಕ್ಕೆ ಕಾರಣವಾಯ್ತ ಎಂಬ ಬಗ್ಗೆಯೂ ಗುಸು ಗುಸು ಶುರುವಾಗಿದೆ.
ಇದನ್ನೂ ಓದಿ: Dhanush ಮತ್ತು ಐಶ್ವರ್ಯಾ ವಿಚ್ಛೇದನದ ಬಗ್ಗೆ ಆಪ್ತ ಗೆಳೆಯ ಹೇಳಿದ ಶಾಕಿಂಗ್ ಸುದ್ದಿ!
ಅವೆಲ್ಲ ಏನೇ ಇರಲಿ ಐಶ್ವರ್ಯಾ ಧನುಷ್ ಬೇರೆ ಬೇರೆಯಾಗಬಾರದಿತ್ತು ಅಂತ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯ ಮುಗಿದು, ಮತ್ತೆ ಒಂದಾಗಲಿ, ಡಿವೋರ್ಸ್ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸ್ತಿದ್ದಾರೆ.
ವರದಿ: ಅಣ್ಣಪ್ಪ ಆಚಾರ್ಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ