• Home
  • »
  • News
  • »
  • entertainment
  • »
  • Puneeth Rajkumar: ಯುವರತ್ನನಿಗೆ ಕರ್ನಾಟಕ ರತ್ನ ಪ್ರದಾನ ಮಾಡ್ತಾರಾ ರಜನಿಕಾಂತ್? ರಾಜ್ಯೋತ್ಸವಕ್ಕೆ ಬರುತ್ತಾರಾ ತಲೈವಾ?

Puneeth Rajkumar: ಯುವರತ್ನನಿಗೆ ಕರ್ನಾಟಕ ರತ್ನ ಪ್ರದಾನ ಮಾಡ್ತಾರಾ ರಜನಿಕಾಂತ್? ರಾಜ್ಯೋತ್ಸವಕ್ಕೆ ಬರುತ್ತಾರಾ ತಲೈವಾ?

ರಜನಿಕಾಂತ್ ಮತ್ತು ಪುನೀತ್ ರಾಜ್‌ಕುಮಾರ್

ರಜನಿಕಾಂತ್ ಮತ್ತು ಪುನೀತ್ ರಾಜ್‌ಕುಮಾರ್

ಪ್ರತಿಷ್ಠಿತ 'ಕರ್ನಾಟಕ ರತ್ನ' ಗೌರವವನ್ನು ಮರಣೋತ್ತರವಾಗಿ ಪುನೀತ್‌ಗೆ ಸಮರ್ಪಿಸುವ ಆ ಗೌರವಾನ್ವಿತ ವ್ಯಕ್ತಿ ಯಾರು ಎಂಬ ಪ್ರಶ್ನೆ ಎಲ್ಲೆಡೆ ಎದ್ದಿತ್ತು. ಆ ಪ್ರಶ್ನೆಗೆ ಉತ್ತರವಾಗಿ ಇದೀಗ ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಹೆಸರು ಕೇಳಿ ಬರುತ್ತಿದೆ.

  • News18 Kannada
  • Last Updated :
  • Bangalore, India
  • Share this:

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power Star Puneeth Rajkumar) ದೈಹಿಕವಾಗಿ ನಮ್ಮನ್ನು ಅಗಲಿ ಒಂದು ವರ್ಷಗಳೇ ಆಗುತ್ತಾ ಬಂತು. ಆದರೆ ಕನ್ನಡಿಗರು (Kannadigas) ಅವರನ್ನು ಇನ್ನೂ ಮರೆತಿಲ್ಲ, ಮರೆಯುವುದೂ ಇಲ್ಲ. ಅವರ ಅಭಿಮಾನಿಗಳು (Fans) ಅವರನ್ನು ನೆನೆಸಿಕೊಳ್ಳದ ದಿನಗಳೇ ಇಲ್ಲ. ಇದೀಗ ರಾಜ್ಯಾದ್ಯಂತ ಮತ್ತೆ ಅಪ್ಪು ಉತ್ಸವ ಶುರುವಾಗಿದೆ. ಮೊನ್ನೆ ಮೊನ್ನೆಯಷ್ಟೇ ‘ಪುನೀತ ಪರ್ವ’ (Puneetha Parva) ಹೆಸರಲ್ಲಿ ಪುನೀತ್ ರಾಜ್‌ಕುಮಾರ್ ಉತ್ಸವ ನಡೆದಿತ್ತು. ಸೌತ್ ಸೂಪರ್‌ ಸ್ಟಾರ್‌ಗಳು (South Super Stars) ಆಗಮಿಸಿ ‘ದೊಡ್ಮನೆ ಹುಡುಗ’ನ ನೆನಪನ್ನು ಹಂಚಿ ಕೊಂಡಿದ್ದರು. ಜೊತೆಗೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳೂ ಸಹ ಅಪ್ಪು ಕೊಂಡಿದ್ದಾಡಿದ್ದರು. ಇದೀಗ ಪುನೀತ್ ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ (Karnataka Ratna Award) ಪ್ರದಾನ ಮಾಡುವ ಸಮಯ ಹತ್ತಿರ ಬರುತ್ತಿದೆ. ಈ ಪ್ರತಿಷ್ಠಿತ ಗೌರವವನ್ನು ಮರಣೋತ್ತರವಾಗಿ ಪುನೀತ್‌ಗೆ ಸಮರ್ಪಿಸುವ ಆ ಗೌರವಾನ್ವಿತ ವ್ಯಕ್ತಿ ಯಾರು ಎಂಬ ಪ್ರಶ್ನೆ ಎಲ್ಲೆಡೆ ಎದ್ದಿತ್ತು. ಆ ಪ್ರಶ್ನೆಗೆ ಉತ್ತರವಾಗಿ ಇದೀಗ ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಹೆಸರು ಕೇಳಿ ಬರುತ್ತಿದೆ.


ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಗೌರವ


ನಟ ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ನಿರ್ಧರಿಸಿದೆ. ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ದಿನ ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ವಿಧಾನಸೌಧದ ಮುಂಭಾಗದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.


ಕರ್ನಾಟಕ ಪತ್ನ ಪ್ರಶಸ್ತಿ ಪ್ರದಾನ ಮಾಡುವವರು ಯಾರು?


ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವವರು ಯಾರು ಎಂಬ ಬಗ್ಗೆ ರಾಜ್ಯಾದ್ಯಂತ ಭಾರೀ ಚರ್ಚೆ ಶುರುವಾಗಿತ್ತು. ಈ ಬಗ್ಗೆ ವಿವಿಧ ಕ್ಷೇತ್ರಗಳ ಹಲವು ಖ್ಯಾತನಾಮರ ಹೆಸರುಗಳು ಕೇಳಿ ಬಂದಿದ್ದವು. ವಿಶೇಷ ಮುಖ್ಯ ಅತಿಥಿಗಳು, ಶ್ರೇಷ್ಠ ಸಾಹಿತಿಗಳು, ಖ್ಯಾತ ಚಲನಚಿತ್ರ ನಟರು, ಶಾಸಕರು, ಹಿರಿಯ ಸಾಧಕರು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ಅರ್ಥಪೂರ್ಣವಾದ ಕಾರ್ಯಕ್ರಮವಾಗಿರಲಿದೆ ಅಂತ ಸಿಎಂ ಹೇಳಿದ್ದರು.


ಇದನ್ನೂ ಓದಿ: Puneetha Parva: ಅಪ್ಪು ಹೆಸರಲ್ಲಿ ಆ್ಯಂಬುಲೆನ್ಸ್ ನೀಡುವುದಾಗಿ ಯಶ್ ಘೋಷಣೆ, ಪುನೀತ ಪರ್ವದಲ್ಲಿ ಬಿಗ್‌ ಬಿ, ಕಮಲ್ ಹಾಸನ್ ಸಂದೇಶ


ಯುವರತ್ನನಿಗೆ ಕರ್ನಾಟಕ ರತ್ನ ನೀಡ್ತಾರಾ ರಜನಿಕಾಂತ್?


ಹೌದು, ಇದೀಗ ಸೂಪರ್ ಸ್ಟಾರ್ ರಜಿನಿಕಾಂತ್ ಹೆಸರು ಮುಖ್ಯವಾಗಿ ಕೇಳಿ ಬಂದಿದೆ. ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು ಮಾಡಿದ್ದು, ಮೂಲತಃ ಕನ್ನಡಿಗರೇ. ಅದರಲ್ಲೂ ಬೆಂಗಳೂರಿನೊಂದಿಗೆ, ರಾಜ್ ಫ್ಯಾಮಿಲಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.  ಹೀಗಾಗಿ ಅವರನ್ನೇ ಕರೆದು, ಅವರಿಂದಲೇ ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ನೀಡಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.


ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಹೆಸರೂ ಪ್ರಸ್ತಾಪ?


ಇನ್ನೂ ಬಾಲಿವುಡ್ ನಟಿಯರಾದ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ದೀಪಿಕಾ ಪಡುಕೋಣೆ ಹೆಸರುಗಳೂ ಕೇಳಿ ಬಂದಿವೆ. ಇಬ್ಬರೂ ಕರ್ನಾಟಕ ಮೂಲದವರಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಲ್ಪಟ್ಟವರು ಅಂತ ಅವರ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ. ಆದರೆ ಯಾರ ಹೆಸರನ್ನೂ ಕರ್ನಾಟಕ ಸರ್ಕಾರ ಇದುವರೆಗೂ ಅಧಿಕೃತವಾಗಿ ಘೋಷಿಸಿಲ್ಲ.


10 ದಿನಗಳ ಕಾಲ ಪುನೀತ್ ಕಾರ್ಯಕ್ರಮ?


ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಬೇಕೆಂಬ ಅಭಿಮಾನಿಗಳ ಬೇಡಿಕೆ ಇರುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನವೆಂಬರ್ 1 ರ ನಂತರ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಒಟ್ಟು 3 ಕಾರ್ಯಕ್ರಮಗಳನ್ನು ಸುಮಾರು10 ದಿನಗಳ ಕಾಲ ಆಯೋಜಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.


ಇದನ್ನೂ ಓದಿ: Puneeth Rajkumar: ಹಬ್ಬದ ನಡುವೆಯೂ ಅಪ್ಪು ಸಮಾಧಿ ಬಳಿ ಫ್ಯಾನ್ಸ್ ದಂಡು


ರಾಜ್ಯದ ಪ್ರತಿಷ್ಠಿತ ಗೌರವ ಕರ್ನಾಟಕ ರತ್ನ


ರಾಷ್ಟ್ರ ಮಟ್ಟದಲ್ಲಿ ಭಾರತ ರತ್ನ ಪರಮೋಚ್ಚ ಗೌರವವಾಗಿದೆ. ಹಾಗೆಯೇ ರಾಜ್ಯಮಟ್ಟದಲ್ಲಿ 'ಕರ್ನಾಟಕ ರತ್ನ' ಅತ್ಯುನ್ನತ ಗೌರವವಾಗಿದೆ. ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಗಣ್ಯರಿಗೆ ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡುತ್ತದೆ. 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ಥಾಪನೆ ಮಾಡಲಾಯಿತು. 9 ಸಾಧಕರಿಗೆ ಇದುವರೆಗೂ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. 1992ರಲ್ಲಿ ಡಾ. ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು.

Published by:Annappa Achari
First published: