Rajinikanth: ಆದಾಯ ತೆರಿಗೆ ಇಲಾಖೆಯಿಂದ ರಜನಿಕಾಂತ್​ಗೆ ಸನ್ಮಾನ, ತಂದೆಯ ಪರವಾಗಿ ಪ್ರಶಸ್ತಿ ಪಡೆದ ಐಶ್ವರ್ಯಾ

Rajinikanth: ಐಶ್ವರ್ಯಾ ಸುದ್ದಿಯನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ರಜನಿಕಾಂತ್ ಅವರನ್ನು ಕಾಮೆಂಟ್​ನಲ್ಲಿ ಅಭಿನಂದಿಸಿದ್ದಾರೆ.

ರಜನೀಕಾಂತ್

ರಜನೀಕಾಂತ್

  • Share this:
ನಟ ರಜನಿಕಾಂತ್ (Rajinikanth) ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸದ್ಯ ಒಂದು ಒಳ್ಳೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು, ನಿಯಮಿತವಾಗಿ ತೆರಿಗೆ (Tax)  ಪಾವತಿಸುತ್ತಿರುವ ನಟ ರಜನಿಕಾಂತ್ ಅವರನ್ನು ಆದಾಯ ತೆರಿಗೆ ಇಲಾಖೆ (Income Tax Department)  ಚೆನ್ನೈನಲ್ಲಿ ಸನ್ಮಾನಿಸಿದೆ. ಭಾನುವಾರ, ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್, Instagram ನಲ್ಲಿ ರಜನಿಕಾಂತ್ ಅಭಿಮಾನಿಗಳೊಂದಿಗೆ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. 

ಪ್ರಶಸ್ತಿ ಸ್ವೀಕರಿಸಿದ ಐಶ್ವರ್ಯಾ 

ಭಾನುವಾರ ಚೆನ್ನೈನಲ್ಲಿ ಆದಾಯ ತೆರಿಗೆ ದಿನವನ್ನು ಆಚರಿಸಲಾಯಿತು. ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಐಶ್ವರ್ಯಾ ತನ್ನ ತಂದೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. "ಹೆಚ್ಚಿನ ಮತ್ತು ತ್ವರಿತ ತೆರಿಗೆದಾರನ ಹೆಮ್ಮೆಯ ಮಗಳು. #incometaxday2022 #onbehalfofmyfather ರಂದು ಅಪ್ಪಾ ಅವರನ್ನು ಗೌರವಿಸಿದ್ದಕ್ಕಾಗಿ ತಮಿಳುನಾಡು ಮತ್ತು ಪುದುಚೇರಿಯ ಆದಾಯ ತೆರಿಗೆ ಇಲಾಖೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದು, ಜೊತೆಗೆ ಸಮ್ಮಾನ್ ಪತ್ರವನ್ನು ಸ್ವೀಕರಿಸುತ್ತಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಐಶ್ವರ್ಯಾ ಸುದ್ದಿಯನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ರಜನಿಕಾಂತ್ ಅವರನ್ನು ಕಾಮೆಂಟ್​ನಲ್ಲಿ ಅಭಿನಂದಿಸಿದ್ದಾರೆ. "ತಲೈವರ್ ಅಭಿಮಾನಿಯಾಗಲು ಹೆಮ್ಮೆಪಡುತ್ತೇನೆ" ಎಂದು ‘ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. "ತಲೈವರ್‌ಗೆ ಅಭಿನಂದನೆಗಳು. ರಜನಿಕಾಂತ್ ಸರ್ ಖಂಡಿತವಾಗಿಯೂ ಜವಾಬ್ದಾರಿಯುತ ನಾಗರಿಕ" ಎಂದು ಮತ್ತೊಬ್ಬರು ಬರೆದುಕೊಂಡು, ವಿಶ್​ ಮಾಡಿದ್ದಾರೆ.

ಇದನ್ನೂ ಓದಿ: ವಿಕ್ರಾಂತ್ ರೋಣ ಸಂಭ್ರಮಾಚರಣೆ ಶುರು, ಸಿನಿಮಾ ಬಿಡುಗಡೆ ಮೊದಲೇ ಥಿಯೇಟರ್ ಸಿಂಗಾರ ಮಾಡಿದ ಫ್ಯಾನ್ಸ್

ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ ನಟ

ರಜನಿಕಾಂತ್ ಅವರು ಸದ್ಯ ನಿರ್ಮಾಪಕ ನೆಲ್ಸನ್ ದಿಲೀಪ್‌ಕುಮಾರ್ ಅವರೊಂದಿಗೆ ಜೈಲರ್ ಎಂಬ ಹೊಸ ಸಿನಿಮಾ ಮಾಡುತ್ತಿದ್ದು, ಕನ್ನಡದ ನಟ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಈ ಸಿನಿಮಾ ಸದ್ಯದಲ್ಲಿಯೇ ಸೆಟ್ಟೇರಲಿದೆ. ವರದಿಗಳ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ  ಎಂದಿರನ್'  ಎಂಬ ಬ್ಲಾಕ್‌ಬಸ್ಟರ್ ಸಿನಿಮಾದಲ್ಲಿ  ಒಟ್ಟಿಗೆ ಕೆಲಸ ಮಾಡಿದ್ದ ಈ ಜೋಡಿಯು 11 ವರ್ಷಗಳ ನಂತರ ಒಂದಾಗುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನು 2021 ರಲ್ಲಿ ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗಿದ್ದ ಅಣ್ಣತ್ತೆ ರಜನಿಕಾಂತ್ ಅವರು ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾವಾಗಿದೆ.

ಇನ್ನು ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಅವರಿಗೆ ಸಹ ಆದಾಯ ತೆರಿಗೆ ಇಲಾಖೆ ಸಮ್ಮಾನ್​ ಪ್ರಶಸ್ತಿ ನೀಡಿದೆ. ಹೆಚ್ಚು ತೆರಿಗೆ ಪಾವತಿಸುವವರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸದ್ಯ ಅಕ್ಷಯ್​ಗೆ ನೀಡಿರುವ ಸಮ್ಮಾನ್ ಪ್ರತ್ರದ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಇದನ್ನೂ ಓದಿ: ನಟಿ ರಮ್ಯಾ ಡ್ರಾಮಾ ಕ್ವೀನ್ ಅಂತೆ, ಸ್ಯಾಂಡಲ್​ವುಡ್​ ಪದ್ಮಾವತಿಗೆ ಹೀಗಂದಿದ್ಯಾರು?

ನಟ ಅಕ್ಷಯ್ ಕುಮಾರ್​ಗೆ ಭಾರತೀಯ ಆದಾಯ ತೆರಿಗೆ ಇಲಾಖೆಯು ಸಮ್ಮಾನ್ ಪತ್ರ ನೀಡಿ ಗೌರವಿಸಿದೆ. ಈ ಬಾರಿ 29.5 ಕೋಟಿ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 5 ವರ್ಷಗಳಲ್ಲಿ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರರ ಪೈಕಿ ನಿರಂತರವಾಗಿ ನಟ ಅಕ್ಷಯ್‌ಗೆ ಈ ಗೌರವವನ್ನು ನೀಡಿರುವುದು ಇದೇ ಮೊದಲ ಬಾರಿಯಲ್ಲ.
Published by:Sandhya M
First published: