Jailer Poster Release: ಜೈಲರ್ ಪೋಸ್ಟರ್ ರಿಲೀಸ್, ಬೆಂಗಳೂರಲ್ಲಿ ರಜನಿ ವೈಬ್ಸ್

Jailer Poster Release: ಜೈಲರ್ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಬೆಂಗಳೂರಿನ ಶ್ರೀರಾಮಪುರಂ ರಜನಿ ಫ್ಯಾನ್ಸ್ ಹಬ್ಬವನ್ನೇ ಆಚರಿಸಿಬಿಟ್ಟಿದ್ದಾರೆ. ಟ್ವಟರ್​ನಲ್ಲಿ ರಜನಿ ವೈಬ್ಸ್ ಸದ್ದು ಮಾಡುತ್ತಿದೆ.

ಜೈಲರ್ ಪೋಸ್ಟರ್

ಜೈಲರ್ ಪೋಸ್ಟರ್

  • Share this:
ರಜನೀಕಾಂತ್ (Rajinikanth) ಅಭಿನಯದ ಜೈಲರ್ (Jailer) ಸಿನಿಮಾ ಪೋಸ್ಟರ್  (Poster) ಎಲ್ಲಾ ಕಡೆಗಳಲ್ಲಿ ಸದ್ದು ಮಾಡುತ್ತಿದೆ. ಸೀರಿಯಸ್ ಲುಕ್​ನಲ್ಲಿ ಕೈಗಳನ್ನು ಹಿಂದಕ್ಕೆ ಕಟ್ಟಿ ನಡೆದು ಬರುವ ಪೋಸ್​​ನಲ್ಲಿರುವ ರಜನಿ ಪೋಸ್ಟರ್  (Rajnikanth Poster)ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ನೆಲ್ಸನ್ ದಿಲೀಪ್‌ಕುಮಾರ್ ಅವರ ಜೈಲರ್ ಚಿತ್ರದ ಚಿತ್ರೀಕರಣವನ್ನು ರಜನಿಕಾಂತ್ ಈಗಾಗಲೇ ಪ್ರಾರಂಭಿಸಿದ್ದು, ಸೂಪರ್‌ಸ್ಟಾರ್ ಸೂಪರ್ ಆಗಿ ಕಾಣುವ ಫಸ್ಟ್ ಲುಕ್ (First Look) ಪೋಸ್ಟರ್ ಅನ್ನು ಅನಾವರಣಗೊಳಿಸಲಾಗಿದೆ. ಜೈಲರ್ ಅಕಾ ತಲೈವರ್ 169 ನಲ್ಲಿ ರಮ್ಯಾ ಕೃಷ್ಣನ್ ಕೂಡ ನಟಿಸಿದ್ದಾರೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ರಜನಿಕಾಂತ್ ಅವರು ಗಂಭೀರವಾದ, ಸೀರಿಯಸ್ ಅವತಾರದಲ್ಲಿ ಕಂಡುಬಂದಿದ್ದಾರೆ.

ಚಿತ್ರದಲ್ಲಿ ತನ್ನ ಪಾತ್ರಗಳಿಗಾಗಿ ವಿಶೇಷ ಲುಕ್​ಗೆ ಬದಲಾದಾಗ ಸೂಪರ್‌ಸ್ಟಾರ್ ಎಂದಿಗೂ ಪ್ರೇಕ್ಷಕರನ್ನು ನಿರಾಸೆಗೊಳಿಸಿಲ್ಲ. ಒಂದೊಂದು ಸಿನಿಮಾಗಳಲ್ಲಿಯೂ ಅದ್ಭುತ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಹೈದರಾಬಾದ್‌ನ ಫಿಲ್ಮ್ ಸಿಟಿಯಲ್ಲಿ ನಿರ್ಮಿಸಲಾದ ಸೆಟ್‌ನಲ್ಲಿ ಚಿತ್ರದ ಹೆಚ್ಚಿನ ಭಾಗವನ್ನು ಚಿತ್ರೀಕರಿಸಲಾಗುತ್ತದೆ. ಸ್ಯಾಂಡಲ್​ವುಡ್ ನಟ ಶಿವರಾಜ್‌ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಜೈಲರ್‌ನಲ್ಲಿ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಐಶ್ವರ್ಯಾ ರೈ ಪ್ರಮುಖ ಪಾತ್ರದಲ್ಲಿ

ರಜನಿಕಾಂತ್ ಅಭಿನಯದ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಯೋಗಿ ಬಾಬು ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಚಿತ್ರದ ಸಂಪೂರ್ಣ ತಾರಾಗಣ ಮತ್ತು ಸಿಬ್ಬಂದಿಯನ್ನು ಇನ್ನೂ ಎನೌನ್ಸ್ ಮಾಡಿಲ್ಲ. ಚಿತ್ರದ ಸಂಗೀತಕ್ಕೆ ಅನಿರುದ್ಧ್ ರವಿಚಂದ್ರ ಕೆಲಸ ಮಾಡಿದ್ದಾರೆ. ಜೈಲರ್ 2023 ರ ಬೇಸಿಗೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪೆಟ್ಟಾ, ದರ್ಬಾರ್ ಬಳಿಕ ಮೂರನೇ ಬಾರಿಗೆ ರಜನಿಕಾಂತ್ ಸಿನಿಮಾಕ್ಕೆ ಸಂಗೀತ ನೀಡುವ ಅವಕಾಶವನ್ನು ಅನಿರುದ್ಧ್‌ ಗಿಟ್ಟಿಸಿಕೊಂಡಿದ್ದಾರೆ.

ಥಲಪತಿ ವಿಜಯ್ ಅವರ ಬೀಸ್ಟ್‌ಗಾಗಿ ನೆಲ್ಸನ್ ಅವರು ಕೊನೆಯಬಾರಿ ಕೆಲಸ ಮಾಡಿದ್ದರು. ಸನ್ ಪಿಕ್ಚರ್ಸ್‌ನಿಂದ ಬಂಡವಾಳ ಹೂಡಲ್ಪಟ್ಟ ಸಿನಿಮಾದ ಅರೇಬಿಕ್ ಕುತ್ತು ಹಾಡು ಎಲ್ಲೆಡೆ ಅಪಾರವಾದ ಬಜ್ ಅನ್ನು ಸೃಷ್ಟಿಸಿತು.

ಅಣ್ಣಾತ್ತೆಯಲ್ಲಿ ಕಾಣಿಸಿಕೊಂಡಿದ್ದ ರಜನಿ

ಮತ್ತೊಂದೆಡೆ, ತಲೈವಾ ಕೊನೆಯದಾಗಿ ಅಣ್ಣಾತ್ತೆಯಲ್ಲಿ ಕಾಣಿಸಿಕೊಂಡರು. ಶಿವಾ ನಿರ್ದೇಶಿಸಿದ ಅಣ್ಣಾತ್ತೆ, ನೆಗೆಟಿವ್ ವಿಮರ್ಶೆಗಳನ್ನು ಪಡೆದರೂ, ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಚಿತ್ರದಲ್ಲಿ ನಯನತಾರಾ, ಕೀರ್ತಿ ಸುರೇಶ್, ಜಗಪತಿ ಬಾಬು, ಅಭಿಮನ್ಯು ಸಿಂಗ್, ಸೂರಿ, ಬಾಲಾ, ಪ್ರಕಾಶ್ ರಾಜ್, ಖುಷ್ಬು ಮತ್ತು ಮೀನಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಪೋಸ್ಟರ್ ರಿಲೀಸ್; ಹೇಗಿರುತ್ತೆ ಶಿವಣ್ಣ ಲುಕ್?

ರಜನಿಕಾಂತ್‌ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಜೊತೆಗೆ ಇಂದಿನಿಂದಲೇ (ಆ.22) 'ಜೈಲರ್‌' ಸಿನಿಮಾದ ಶೂಟಿಂಗ್ ಕೂಡ ಆರಂಭಗೊಂಡಿದೆ. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರು ಕೂಡ ನಟಿಸುತ್ತಾರೆ ಅನ್ನೋದು ಮತ್ತೊಂದು ವಿಶೇಷ. ಜೈಲರ್' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರು ಕೂಡ ಬಣ್ಣ ಹಚ್ಚುವುದು ಖಚಿತವಾಗಿದೆ. ಅವರ ಲುಕ್ ಹೇಗಿರಲಿದೆ ಅನ್ನೋ ಕುತೂಹಲ ಶಿವಣ್ಣನವರ ಫ್ಯಾನ್ಸ್‌ಗೆ ಇದೆ. ಮೊದಲ ಬಾರಿಗೆ ಶಿವಣ್ಣ ಮತ್ತು ರಜನಿಕಾಂತ್‌ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವುದು ಸಿನಿಪ್ರಿಯರಿಗೆ ಸಖತ್ ಥ್ರಿಲ್ ನೀಡಿದೆ.

ಇದನ್ನೂ ಓದಿ: Rajinikanth: ಸೂಪರ್ ಸ್ಟಾರ್ 169 ನೇ ಚಿತ್ರದ ಟೈಟಲ್ ರಿವೀಲ್, ತಲೈವಾ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ ಪೋಸ್ಟರ್

ಜೈಲುಗಳಲ್ಲಿ ಸುಧಾರಣೆ ತರುವ ಜೈಲರ್ ಪಾತ್ರದಲ್ಲಿ ರಜನಿಕಾಂತ್ ನಟಿಸಲಿದ್ದಾರಂತೆ. ಈ ಹಿಂದೆ ಎನ್.ಟಿ.ಆರ್ ನಾಯಕನಾಗಿ ನಟಿಸಿದ್ದ ‘ಮಾ ದೈವಂ’ ಸಿನಿಮಾದ ಶೈಲಿಯಲ್ಲಿ ಈ ಸಿನಿಮಾ ಮೂಡಿಬರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಅರ್ಧ ಲಾಂಗ್ ರಕ್ತದಲ್ಲಿ ಮುಳುಗಿದೆ. ಈ ಪೋಸ್ಟರ್ ಮೂಲಕ ನಿರ್ದೇಶಕ ನೆಲ್ಸನ್ ದಿಲೀಪ್ ಅವರು ರಜನಿಕಾಂತ್ ಜೊತೆ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ ಎನ್ನುವುದನ್ನು ಗೊತ್ತಾಗಿದೆ.
Published by:Divya D
First published: