• Home
  • »
  • News
  • »
  • entertainment
  • »
  • Rajinikanth: ರಜನಿಕಾಂತ್ ಮೇಲೆ ಹಣದ ಹೊಳೆ ಸುರಿಸಲು ಅಭಿಮಾನಿ ಪ್ಲಾನ್​; ತಲೈವಾಗಾಗಿ ಕಾದು ಕುಳಿತ ಫ್ಯಾನ್​

Rajinikanth: ರಜನಿಕಾಂತ್ ಮೇಲೆ ಹಣದ ಹೊಳೆ ಸುರಿಸಲು ಅಭಿಮಾನಿ ಪ್ಲಾನ್​; ತಲೈವಾಗಾಗಿ ಕಾದು ಕುಳಿತ ಫ್ಯಾನ್​

ರಜನಿಕಾಂತ್​

ರಜನಿಕಾಂತ್​

ರಜನಿಕಾಂತ್ ಅವರನ್ನು ನೋಡಲೇಬೇಕು ಎಂದು ಅಭಿಮಾನಿಯೊಬ್ಬ ಬಂದಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್​ ಎದುರು ಕಾದು ಕುಳಿತಿದ್ದಾರೆ. ತಮ್ಮ ನೆಚ್ಚಿನ ನಟನ ಮೇಲೆ 50 ಸಾವಿರ ರೂಪಾಯಿ ಸುರಿಯಬೇಕು ಎಂಬ ಆಸೆ ಹೊತ್ತು ಬಂದಿದ್ದಾರೆ.

  • News18 Kannada
  • Last Updated :
  • Karnataka, India
  • Share this:

 ಬೆಂಗಳೂರು (ನ.01): ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಮರಣೋತ್ತರ  ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಪ್ರದಾನ ಮಾಡಲಾಗ್ತಿದೆ. ಕಾರ್ಯಕ್ರಮಕ್ಕೆ ಸೂಪರ್​ ಸ್ಟಾರ್​ ರಂಜನಿಕಾಂತ್​ ಆಗಮಿಸಿದ್ದು, ರಂಜನಿಕಾಂತ್ ಅಭಿಮಾನಿಗಳು ಸಹ ನೆಚ್ಚಿನ ನಟರನ್ನು ನೋಡಲು ಕಾತುರದಿಂದ ಕಾಯ್ತಿದ್ದರು. ಮೂಲತಃ ಕರ್ನಾಟಕದವರಾದ (Karnataka) ರಜನಿಕಾಂತ್​ ಅವರು ರಾಜ್ಯದಲ್ಲಿ ಅಪಾರ ಅಭಿಮಾನಿ (Fans) ಬಳಗ ಹೊಂದಿದ್ದಾರೆ.


ತಲೈವಾ ನೋಡಲು ಬಂದ ಅಭಿಮಾನಿ


ಇಡೀ ದೇಶದಲ್ಲಿ ತಲೈವಾ ಫ್ಯಾನ್ಸ್​ ಹವಾ ಜೋರಾಗಿದೆ. ಅಭಿಮಾನಿಗಳಿಗೆ ಒಮ್ಮೆಯಾದ್ರು ರಜನಿಕಾಂತ್​ ನೋಡಬೇಕು ಎನ್ನುವ ಆಸೆ ಅನೇಕರಿಗಿದೆ. ಇಂತಹ ಅಭಿಮಾನಿಯೊಬ್ಬ ರಜನಿಕಾಂತ್ ಅವರನ್ನು ನೋಡಲೇಬೇಕು ಎಂದು ಬಂದಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್​ ಎದುರು ಕಾದು ಕುಳಿತಿದ್ದಾರೆ. ತಮ್ಮ ನೆಚ್ಚಿನ ನಟನ ಮೇಲೆ 50 ಸಾವಿರ ರೂಪಾಯಿ ಸುರಿಯಬೇಕು ಎಂಬ ಆಸೆ ಹೊತ್ತು ಬಂದಿದ್ದಾರೆ.




50 ಸಾವಿರ ತಂದು ಕಾದು ಕುಳಿತ ಅಭಿಮಾನಿ


ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ತಮ್ಮ ಅಭಿಮಾನ ತೋರಿಸುತ್ತಾರೆ. ಕೆಲವೊಮ್ಮೆ ನಾಯಕರಿಗೆ ಅದು ಅತಿರೇಕ ಎನಿಸುತ್ತದೆ. ಆದ್ರೂ ಅಭಿಮಾನಿ ತಮ್ಮ ಪ್ರೀತಿಯನ್ನು ವಿಭಿನ್ನವಾಗಿಯೇ ತೋರಿಸಿರುತ್ತಾರೆ. ನಟರ ಹುಟ್ಟುಹಬ್ಬಕ್ಕೆ ಇಡೀ ದಿನ ಅಭಿಮಾನಿಗಳು ವಿಶ್​ ಮಾಡ್ತಾರೆ. ಇನ್ನು ನಟರ ಕಟೌಟ್​ಗಳಿಗೆ ಹಾಲಿನ ಅಭಿಷೇಕ ಮಾಡಿ ತಮ್ಮ ಪ್ರೀತಿ ಮರೆಯುತ್ತಾರೆ. ಈ ಅಭಿಮಾನಿ ಒಂದು ಸ್ಟೆಪ್ ಮುಂದೆ ಹೋಗಿ ರಜನಿಕಾಂತ್ ಮೇಲೆ ನೋಟಿನ ಸುರಿಮಳೆಗೈಲು ಕಾದು ಕುಳಿತಿದ್ದಾನೆ.


ಅಪ್ಪು ಕೊಂಡಾಡಿದ ರಜನಿಕಾಂತ್ 


ಕರ್ನಾಟಕದವರೇ ಆದ ಸೂಪರ್ ಸ್ಟಾರ್ ರಜನಿಕಾಂತ್ ಕರುನಾಡು ಮತ್ತು ಕನ್ನಡದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ರಜನಿ ಮನ ದುಂಬಿ ಹಾರೈಸಿದ್ದಾರೆ. “ಅಪ್ಪು ದೇವರ ಮಗು, (Appu is Gods Child) ಆತ ಎಲ್ಲೂ ಹೋಗಿಲ್ಲ, ನಮ್ಮ ನಡುವೆಯೇ ಇದ್ದಾರೆ” ಅಂತ ರಜನಿಕಾಂತ್ ಸ್ಮರಿಸಿಕೊಂಡಿದ್ದಾರೆ. ಡಾ. ರಾಜ್‌ಕುಮಾರ್ (Dr. Rajkumar) ಹಾಗೂ ಅವರ ಕುಟುಂಬಸ್ಥರ ಬಗ್ಗೆಯೂ ರಜನಿ ಹೊಗಳಿಕೆಯ ಮಾತನ್ನಾಡಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರಜನಿಕಾಂತ್, ಅಪ್ಪು ಜೊತೆಗಿನ ಒಡನಾಟ ನೆನಪಿಸಿಕೊಂಡರು.


ಇದನ್ನೂ ಓದಿ: Puneeth Rajkumar: ನಗು ಮುಖದಲ್ಲೇ ಇಡೀ ರಾಜ್ಯ ಗೆದ್ದ ರಾಜ ಅಪ್ಪು, ಗೆಳೆಯನ ನೆನೆದು Jr NTR ಭಾವುಕ!


ಬಾಲ್ಯದಿಂದಲೂ ನಾನು ಪುನೀತ್‌ರನ್ನು ಬಲ್ಲೆ

 ಹಿಂದೆ ಡಾ. ರಾಜ್‌ಕುಮಾರ್ ಹಾಗೂ ಅವರ ಸಂಗಡಿಗರು ಅಯ್ಯಪ್ಪ ಸ್ವಾಮಿ ಯಾತ್ರೆಗೆ ಹೋಗುತ್ತಿದ್ದರು. ಆಗ ಪುನೀತ್‌ ರಾಜ್‌ಕುಮಾರ್‌ಗೆ 4 ವರ್ಷ ಆಗಿತ್ತು. ನಾನು ಮೊದಲು ನೋಡಿದಾಗ ಪುಟ್ಟ ಮಗುವಾಗಿದ್ದ ಅಪ್ಪು, ರಾಜ್‌ ಜೊತೆಯೇ ಇದ್ದರು ಅಂತ ಸ್ಮರಿಸಿಕೊಂಡರು.




ಅಪ್ಪು ಸಿನಿಮಾ ನೋಡಿ ಆಶೀರ್ವಾದ ಮಾಡಿದ್ದೆ


ಅಪ್ಪು ಸಿನಿಮಾ ಬಂದಾಗ ನಾನು ಡಾ, ರಾಜ್‌ಕುಮಾರ್‌ ಅವರ ಮನೆಗೆ ಹೋಗಿದ್ದೆ. ಆಗ ರಾಜ್‌ ಕುಮಾರ್ ಕೇಳಿದ್ರು, ನನ್ನ ಮಗ ಹೀಗೊಂದು ಸಿನಿಮಾ ಮಾಡಿದ್ದಾನೆ. ನೀವು ನೋಡ್ತೀರಾ ಅಂತ ಕೇಳಿದ್ರು. ನಾನು ಖಂಡಿತ ನೋಡ್ತೀನಿ ಅಂತ ಹೇಳಿದ್ದೆ, ಸಿನಿಮಾ ನೋಡಿದ್ದೆ ಕೂಡ. ಡ್ಯಾನ್ಸ್, ಫೈಟ್, ಅಭಿನಯ ಎಲ್ಲಾ ಚೆನ್ನಾಗಿ ಮಾಡಿದ್ದಾನೆ. 100 ಡೇಸ್ ಪಕ್ಕಾ ಅಂತ ನಾನು ಆಗಲೇ ಭವಿಷ್ಯ ನುಡಿದಿದ್ದೆ ಅಂತ ರಜನಿಕಾಂತ್ ಹೇಳಿದ್ದಾರೆ.


ಇದನ್ನೂ ಓದಿ: Puneeth Rajkumar: ರಾಜರತ್ನನ ಮುಕುಟಕ್ಕೆ ಕರ್ನಾಟಕ ರತ್ನ, ರಜನಿಕಾಂತ್​ ಸಮ್ಮುಖದಲ್ಲಿ ಗೌರವ


ಅಪ್ಪು ಸಿನಿಮಾ 100 ಡೇಸ್ ಸೆಲಬ್ರೇಷನ್‌ಗೆ ನಾನೇ ಬಂದಿದ್ದೆ


ಅಂದೇ ಡಾ ರಾಜ್‌ಕುಮಾರ್ ನನಗೆ ಹೇಳಿದ್ದರು. ಅಪ್ಪು ಸಿನಿಮಾ 100 ದಿನ ಓಡಿದ್ರೆ ಸೆಲಬ್ರೇಷನ್‌ಗೆ ನೀವೇ ಬರಬೇಕು ಅಂತ ರಾಜ್‌ಕುಮಾರ್ ಹೇಳಿದ್ದರು. ಖಂಡಿತಾ ಬರ್ತೀನಿ ಅಣ್ಣ ಅಂತ ಹೇಳಿದ್ದೆ. ಅದರಂತೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ 100 ದಿನದ ಸಂಭ್ರಮಾಚರಣೆಗೆ ಬಂದು, ಪುನೀತ್‌ ರಾಜ್‌ಕುಮಾರ್ ಅವರನ್ನು ಆಶೀರ್ವದಿಸಿದ್ದಾಗಿ ರಜನಿಕಾಂತ್ ನೆನಪಿಸಿಕೊಂಡರು.


Published by:ಪಾವನ ಎಚ್ ಎಸ್
First published: