ಇಬ್ಬರು ಸ್ಟಾರ್ನಟರ ಅಭಿಮಾನಿಗಳ ನಡುವೆ ವಾರ್ ಆಗೋದು ಸಾಮಾನ್ಯ. ಇಂತಹ ವಾರ್ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇರುತ್ತದೆ. ನಿಜ ಜೀವನದಲ್ಲಿ ಅಭಿಮಾನಿಗಳ ನಡುವಿನ ಜಗಳ ತಾರಕಕ್ಕೇರಿದರೆ ಏನಾಗಬಹುದು ಎನ್ನುವುದಕ್ಕೆ ತಮಿಳುನಾಡಿನಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮರಕ್ಕಾನಂನಲ್ಲಿ ಇದೇ ತಿಂಗಳ 23ರಂದು ರಜಿನಿಕಾಂತ್ ಹಾಗೂ ವಿಜಯ್ ಅವರ ಫ್ಯಾನ್ಸ್ ನಡುವೆ ಜಗಳವಾಗಿದೆ. ಅದು ಕೊರೋನಾ ವಿರುದ್ಧದ ಹೋರಾಟಕ್ಕೆ ರಜಿನಿ ಹಾಗೂ ವಿಜಯ್ ಅವರಲ್ಲಿ ಯಾರು ಹೆಚ್ಚಾಗಿ ಧನ ಸಹಾಯ ಮಾಡಿದ್ದಾರೆ ಎಂಬ ವಿಷಯಕ್ಕೆ ಗಲಾಟೆ ಆಗಿದೆ.
![Superstar Rajinikanth offers his Raghavendra wedding hall in Chennai for COVID19 patients]()
ರಜನಿಕಾಂತ್
ಈ ಗಲಾಟೆ ತಾರಕಕ್ಕೇರಿದ್ದು, ರಜಿನಿ ಅಭಿಮಾನಿಯಾದ ದಿನೇಶ್ ಬಾಬು ಹಾಗೂ ವಿಜಯ್ ಅಭಿಮಾನಿ ಯುವರಾಜ್ ನಡುವೆ ಈ ಮೇಲೆ ಹೇಳಿದ ವಿಷಯವಾಗಿ ವಾಗ್ವಾದ ನಡೆದಿದೆ. ದಿನೇಶ್ ಹಾಗೂ ಯುವರಾಜ್ ಇಬ್ಬರೂ ಒಳ್ಳೆಯ ಸ್ನೇಹಿತರು. ಆದರೆ ನೆಚ್ಚಿನ ನಟರ ವಿಷಯವಾಗಿ ನಡೆದ ವಾಗ್ವಾದ ಮಿತಿ ಮೀರಿದಾಗ ದಿನೇಶ್ ಬಾಬು ಹಾಗೂ ಯುವರಾಜ್ ಕೈ ಕೈ ಮಿಲಾಯಿಸಿದ್ದಾರೆ. ಆಗ ಕೆಳಗೆ ಬಿದ್ದ ಯುವರಾಜ್ ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಇದರಿಂದ ಗಾಬರಿಗೊಂಡ ದಿನೇಶ್ ತಲೆಮರೆಸಿಕೊಂಡಿದ್ದರು.
ಇದನ್ನೂ ಓದಿ: Mika Singh Viral Photo: ವೈರಲ್ ಆಗುತ್ತಿವೆ ಗಾಯಕ ಮಿಕ ಸಿಂಗ್ ಬೆಡ್ರೂಮ್ ಫೋಟೋಗಳು..!
ಸದ್ಯ ದಿನೇಶ್ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ಕಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೆ ಈ ಘಟನೆ ನಡೆದಾಗ ಇಬ್ಬರೂ ಮದ್ಯಪಾನ ಮಾಡಿದ್ದರು ಎನ್ನಲಾಗಿದ್ದು, ಲಾಕ್ಡೌನ್ನಲ್ಲಿ ಇವರಿಗೆ ಮದ್ಯ ಸಿಕ್ಕ ಕುರಿತಾಗಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿರಹ ವೇದನೆಯಲ್ಲಿ ಮಿಲನಾ ನಾಗರಾಜ್: ನಿಧಿಮಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಡಾರ್ಲಿಂಗ್ ಕೃಷ್ಣ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ