ನಟ ಪುನೀತ್ ರಾಜ್‍ಕುಮಾರ್ ನಿಧನಕ್ಕೆ Rajinikanth ಸಂತಾಪ: ಸಿಟ್ಟಿಗೆದ್ದ ನೆಟ್ಟಿಗರು..!

ರಜಿನಿಕಾಂತ್​ ಅವರು ಅಪ್ಪು ಅಗಲಿಕೆಗೆ ಸಂತಾಪ ಸೂಚಿಸಿ ಟ್ವೀಟ್​ ಮಾಡುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಅಷ್ಟಕ್ಕೂ ರಜಿನಿ ಮಾಡಿದ್ದ ಟ್ವೀಟ್​ನಿಂದ ನೆಟ್ಟಿಗರು ಸಿಟ್ಟಿಗೇಳಲು ಕಾರಣವೇನು ಗೊತ್ತಾ..?

ರಜಿನಿಕಾಂತ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನೆಟ್ಟಿಗರು

ರಜಿನಿಕಾಂತ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನೆಟ್ಟಿಗರು

  • Share this:
ಸ್ಯಾಂಡಲ್​ವುಡ್​ ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್ (Power Star Puneeth Rajkumar)​ ಅವರು ಅಗಲಿಗೆ ಇಂದಿಗೆ 13 ದಿನಗಳು ಕಳೆದಿವೆ. ಅಪ್ಪು ಸಾವಿನ ಸುದ್ದಿ ಅಭಿಮಾನಿಗಳ ಪಾಲಿಗೆ ಬರ ಸಿಡಿಲಿನಂತೆ ಬಡಿದಿತ್ತು. ಇನ್ನೂ ಸಹ ಅಪ್ಪು ಜೀವನಂತವಾಗಿ ಇಲ್ಲ ಅನ್ನೋ ಸತ್ಯವನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ. ಇನ್ನು ಪುನೀತ್​ ಅವರ ಅಗಲಿಕೆಗೆ ತುಂಬಾ ಜನರು ಸಂತಾಪ ಸೂಚಿಸುತ್ತಲೇ ಇದ್ದಾರೆ. ಪರಭಾಷಾ ನಟ-ನಟಿಯರು ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಇನ್ನೂ ಸಹ ಸಾಕಷ್ಟು ಮಂದಿ ನಿತ್ಯ ಪುನೀತ್​ ರಾಜ್​ಕುಮಾರ್​ ಅವರ ಸಮಾಧಿ ಬಳಿ ಬಂದಿ ನಮಿಸಿ ಹೋಗುತ್ತಿದ್ದಾರೆ. ಇನ್ನು ಪುನೀತ್​ ಅವರ ಬಗ್ಗೆ ಸೆಲೆಬ್ರಿಟಿಗಳು ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಲೇ ಇದ್ದಾರೆ. ನಟ ರಜಿನಿಕಾಂತ್​  (Rajinikanth) ಸಹ ಪುನೀತ್​ ರಾಜ್​ಕುಮಾರ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ರಾಜ್​ಕುಮಾರ್​ ಅವರ ಕುಟುಂಬಕ್ಕೆ ಹತ್ತಿರವಿರುವ ಸಿನಿ ಸೆಲೆಬ್ರಿಟಿಗಳ ಕುಟುಂಬಗಳಲ್ಲಿ ರಜಿನಿಕಾಂತ್​ ಅವರ ಕುಟುಂಬವೂ ಒಂದು.ಬೆಂಗಳೂರಿಗೆ ಬಂದಾಗ ಆಗಾಗ ಪುನೀತ್​ ರಾಜ್​ಕುಮಾರ್​ ಅವರನ್ನು ಭೇಟಿಯಾಗಿ ಹೋಗುತ್ತಿದ್ದರು. ಪುನೀತ್​ ರಾಜ್​ಕುಮಾರ್​ ಅವರ ಕುಟುಂಬದ ಜೊತೆ ರಜಿನಿ ಇರುವ ಚಿತ್ರಗಳೇ ಇದಕ್ಕೆ ಸಾಕ್ಷಿ. ಆದರೆ, ಪುನೀತ್​ ಅವರ ನಿಧನದ ದಿನ ರಜಿನಿಕಾಂತ್​ ಬರಲು ಸಾಧ್ಯವಾಗಲಿಲ್ಲ. ಕಾರಣ ಅಂದೇ ಅವರ ಆರೋಗ್ಯ ಹದಗೆಟ್ಟು ಅವರೂ ಆಸ್ಪತ್ರೆಯಲಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಂದೇ ಅವರಿಗೆ ಶಸ್ತ್ರ ಚಿಕಿತ್ಸೆ ಸಹ ಮಾಡಲಾಗಿತ್ತು.ಈ ಕಾರಣಕ್ಕೆ ರಜಿನಿಕಾಂತ್​ ಅವರು ಅಪ್ಪು ಅಂತ್ಯಸಂಸ್ಕಾರದಲ್ಲೂ ಭಾಗಿಯಾಗಲು ಆಗಿರಲಿಲ್ಲ.

ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಜಿನಿಕಾಂತ್​ ಅವರು ಸದ್ಯ ಆಸ್ಪತ್ರೆಯಿಂದ ಮನೆಗೆ ಬಂದಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ನಡುವೆ ತಲೈವಾ ರಜಿನಿ ತಮ್ಮ ಟ್ವಿಟರ್​ ಖಾತೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರ ನಿಧನಕ್ಕೆ ಇಂದು ಸಂತಾಪ ಸೂಚಿಸಿದ್ದಾರೆ.

'ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಈ ವಿಷಯ ಗೊತ್ತಾಯಿತು. ತುಂಬ ನೋವಾಯಿತು. ಚಿಕ್ಕ ವಯಸ್ಸಿನಲ್ಲಿ ನಮ್ಮನ್ನ ಅಗಲಿದ್ದಾರೆ. ನನ್ನ ಕಣ್ಣೆದುರಿಗೆ ಬೆಳೆದ ಮಗು. ಒಳ್ಳೆ ಹೆಸರು, ಒಳ್ಳೆ ಯಶಸ್ಸು ಇರುವಾಗಲೇ ಈ ರೀತಿ ಆಗಿದ್ದು ದುಃಖಕರ. ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಈ ಬಗ್ಗೆ ಏನು ಹೇಳಬೇಕೋ ತೋಚುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ' ಎಂದು ವಾಯ್ಸ್​ ನೋಟ್​ನಲ್ಲಿ ಹೇಳಿದ್ದಾರೆ ರಜಿನಿಕಾಂತ್​.

ಇದನ್ನೂ ಓದಿ: Puneeth Rajkumar ಅಂತಿಮ ದರ್ಶನಕ್ಕೆ ಬಂದಿರಲಿಲ್ಲ ಎಂದು ಟ್ರೋಲ್​ ಮಾಡಿದವರಿಗೆ ಉತ್ತರ ಕೊಟ್ಟ Radhika Pandit..!

ಹೌದು, ರಜಿನಿಕಾಂತ್​ ಅವರು ಅಪ್ಪು ಅಗಲಿಕೆಗೆ ಸಂತಾಪ ಸೂಚಿಸಿ ಟ್ವೀಟ್​ ಮಾಡುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಅಷ್ಟಕ್ಕೂ ರಜಿನಿ ಮಾಡಿದ್ದ ಟ್ವೀಟ್​ನಿಂದ ನೆಟ್ಟಿಗರು ಸಿಟ್ಟಿಗೇಳಲು ಕಾರಣವೇನು ಗೊತ್ತಾ..?

ರಜಿನಿಕಾಂತ್​ ಅವರು ಪುನೀತ್​ ರಾಜ್​ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಸೂಪರ್​ ಸ್ಟಾರ್​, ತಮ್ಮ ಟ್ವೀಟ್​ನಲ್ಲಿ ಒಂದು ವಾಯ್ಸ್​ ನೋಟ್​ ಸಹ ಲಿಂಕ್​ ಮಾಡಿದ್ದಾರೆ. ಇದೇ ಕಾರಣದಿಂದ ನೆಟ್ಟಿಗರು ರಜಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: 800 ವರ್ಷ ಹಳೆಯ ಕೋಟೆಯಲ್ಲಿ ನಡೆಯಲಿದೆ Vicky Kaushal-Katrina Kaif ವಿವಾಹ

ಒಂದೇ ಒಂದು ಸಾಲಿನಲ್ಲಿ ಟ್ವೀಟ್​ ಮಾಡುವ ಮೂಲಕ ಅಪ್ಪು ಸಾವಿಗೆ ಸಂತಾಪ ಸೂಚಿಸಿರುವ ರಜಿನಿ, ಮಗಳ ಒಡೆತನದ ಹೂಟ್​ ಆ್ಯಪ್​ನಲ್ಲಿ ವಾಯ್ಸ್​ ನೋಟ್​ ನೀಡಿರುವ ಲಿಂಕ್​ ಅನ್ನೂ ಸೇರಿಸಿದ್ದಾರೆ. ಇಂತಹ ವಿಷಯದಲ್ಲೂ ಮಗಳ ಒಡೆತನ ಆ್ಯಪ್​ನ ಪ್ರಚಾರಕ್ಕೆ ನಿಂತಿದ್ದಾರೆ ಎಂದು ನೆಟ್ಟಿಗರು ಸಿಟ್ಟಾಗಿ ಕಮೆಂಟ್​ ಮಾಡುತ್ತಿದ್ದಾರೆ.
Published by:Anitha E
First published: