• Home
  • »
  • News
  • »
  • entertainment
  • »
  • ರಜನಿ ದರ್ಬಾರ್​ ಸಿನಿಮಾಗೆ ಎದುರಾಯ್ತು ಕಂಟಕ; ಲೀಕ್ ಆಯ್ತು ಫುಲ್ ಹೆಚ್​ಡಿ ಮೂವಿ

ರಜನಿ ದರ್ಬಾರ್​ ಸಿನಿಮಾಗೆ ಎದುರಾಯ್ತು ಕಂಟಕ; ಲೀಕ್ ಆಯ್ತು ಫುಲ್ ಹೆಚ್​ಡಿ ಮೂವಿ

rajinikanth-darbar-movie-leak-on-tamilrockers-and-movierulz

rajinikanth-darbar-movie-leak-on-tamilrockers-and-movierulz

ತಮಿಳು ರಾಖರ್ಸ್​ ಮಾತ್ರವಲ್ಲದೆ, ಮೂವಿರೂಲ್ಸ್​, ತಮಿಳುಗನ್​, ಟೆಲಿಗ್ರಾಮ್​ ವೈಬ್​ಸೈಟ್​ಗಳಲ್ಲಿ ದರ್ಬಾರ್​ ಸಿನಿಮಾ ಪೈರಸಿ ಆಗಿದೆ. ಹೆಚ್​ಡಿ ಕ್ವಾಲಿಟಿಯಲ್ಲಿ ದರ್ಬಾರ್​ ಸಿನಿಮಾವನ್ನು ಲೀಕ್​ ಮಾಡಿದೆ. ಹೀಗಾಗಿ ಪೈರಸಿ ಭೂತದಿಂದಾಗಿ ದರ್ಬಾರ್​ ಚಿತ್ರದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಿದೆ.

ಮುಂದೆ ಓದಿ ...
  • Share this:

    ಸೂಪರ್​ ಸ್ಟಾರ್​ ರಜನಿ ಕಾಂತ್​ ಅಭಿನಯದ ‘ದರ್ಬಾರ್‘​ ಸಿನಿಮಾ ಬಿಡುಗಡೆಗೊಂಡು ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಪೊಲೀಸ್​ ಲುಕ್​ನಲ್ಲಿ ರಜನಿ ಮತ್ತೆ ಮಿಂಚಿದ್ದಾರೆ. ಅಭಿಮಾನಿಗಳಿಗೂ ಕೂಡ ರಜನಿ ಅವರ ಅಭಿನಯ ಹುಚ್ಚೆಬ್ಬಿಸುವಂತೆ ಮಾಡಿದೆ. ಎಲ್ಲೆಡೆಯೂ ಈ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಈ ನಡುವೆ ತಲೈವಾನ ‘ದರ್ಬಾರ್‘​ ಸಿನಿಮಾಗೆ ಕಂಟಕ ಎದುರಾಗಿದೆ.

    ರಜನಿ ಕಾಂತ್​ ಅವರ  ‘ದರ್ಬಾರ್​‘ ಸಿನಿಮಾಗೆ ಪೈರಸಿ ಭೂತ ಎದುರಾಗಿದೆ. ಎಕ್ಸ್​ಪೆಕ್ಟೆಡ್​ ಮೂವಿಗಳ ಮೇಲೆ ಕಣ್ಣು ಹಾಕುತ್ತಿರುವ ತಮಿಳು ಲಾಕರ್ಸ್​ ‘ದರ್ಬಾರ್‘​ ಸಿನಿಮಾದ ಮೇಲೂ ಕಣ್ಣೂ ಹಾಕಿದ್ದು, ಬಿಡುಗಡೆಗೊಂಡ  ಕೆಲ ಹೊತ್ತಲ್ಲೇ ಸಿನಿಮಾವನ್ನು ಲೀಕ್​ ಮಾಡಿದೆ.

    ತಮಿಳು ರಾಖರ್ಸ್​ ಮಾತ್ರವಲ್ಲದೆ, ಮೂವಿರೂಲ್ಸ್​, ತಮಿಳುಗನ್​, ಟೆಲಿಗ್ರಾಮ್​ ವೈಬ್​ಸೈಟ್​ಗಳಲ್ಲಿ ದರ್ಬಾರ್​ ಸಿನಿಮಾ ಪೈರಸಿ ಆಗಿದೆ. ಹೆಚ್​ಡಿ ಕ್ವಾಲಿಟಿಯಲ್ಲಿ ದರ್ಬಾರ್​ ಸಿನಿಮಾವನ್ನು ಲೀಕ್​ ಮಾಡಿದೆ. ಹೀಗಾಗಿ ಪೈರಸಿ ಭೂತದಿಂದಾಗಿ ದರ್ಬಾರ್​ ಚಿತ್ರದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಿದೆ.

    ಸಾಕಷ್ಟು ಸಿನಿಮಾಗಳು ಆನ್​ಲೈನ್​ನಲ್ಲಿ ಲೀಕ್​ ಆಗುತ್ತಿವೆ. ಕಳೆದ ಸುಮಾರು ವರ್ಷಗಳಿಂದ ಸಿನಿಮಾಗಳು ಬಿಡುಗಡೆಗೂ ಮುಂಚೆಯೇ ಆನ್​ಲೈನ್​ ಲೀಕ್​ ಆಗಿರುವ ಪ್ರಸಂಗಗಳನ್ನು ನೋಡಿರುತ್ತೇವೆ. ಈ ಬಗ್ಗೆ ಎಷ್ಟೇ ಎಚ್ಚೆತ್ತುಕೊಂಡರು ಸಿನಿಮಾ ಲೀಕ್​ ಆಗುತ್ತಿರುವುದು ತಪ್ಪುತ್ತಿಲ್ಲ.

    ಇದನ್ನೂ ಓದಿ: ಪ್ರಧಾನಿ ಮೋದಿ ಸನ್ಯಾಸಿ ಇದ್ದಂತೆ, ಅವರಿಗೆ ಸ್ವಂತದ್ದು ಅಂತ ಏನೂ ಇಲ್ಲ; ಸಾಹಿತಿ ಎಸ್​.ಎಲ್​ ಭೈರಪ್ಪ

    ಇದನ್ನೂ ಓದಿ: ಮಂಗಳೂರು ಗಲಭೆ ಪೊಲೀಸರ ಸೃಷ್ಟಿ ಎಂದು ಮೊದಲೇ ಹೇಳಿದ್ದೆ; ಸಿದ್ದರಾಮಯ್ಯ

    Published by:Harshith AS
    First published: