ರಜನಿಗೆ ವಯಸ್ಸಾಯ್ತು ಎಂದವರಾರು?; ಮಗಳ ಮದುವೆಯಲ್ಲಿ ಸ್ಟೆಪ್ ಹಾಕಿದ ಸೂಪರ್​ಸ್ಟಾರ್​

ಹಾಡು ಹಾಕುತ್ತಿದ್ದಂತೆ ರಜನಿಕಾಂತ್​ ನಿಧಾನವಾಗಿ ಸ್ಟೆಪ್​ ಹಾಕಲು ಆರಂಭಿಸಿದ್ದರು. ನಂತರ ಸಂಪೂರ್ಣ ಜೋಶ್​ನಲ್ಲಿ ರಜನಿ ಡ್ಯಾನ್ಸ್​ ಮಾಡಲು ಆರಂಭಿಸಿದರು. ಈ ವೇಳೆ ನೆರೆದಿದ್ದವರು ರಜನಿಗೆ ಸಾತ್​ ನೀಡಿದರು. ಇನ್ನೂ ಕೆಲವರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Rajesh Duggumane | news18
Updated:February 11, 2019, 8:59 AM IST
ರಜನಿಗೆ ವಯಸ್ಸಾಯ್ತು ಎಂದವರಾರು?; ಮಗಳ ಮದುವೆಯಲ್ಲಿ ಸ್ಟೆಪ್ ಹಾಕಿದ ಸೂಪರ್​ಸ್ಟಾರ್​
ರಜನಿ ಜೊತೆ ಸೌಂದರ್ಯಾ
Rajesh Duggumane | news18
Updated: February 11, 2019, 8:59 AM IST
‘ಸೂಪರ್​ ಸ್ಟಾರ್​’ ರಜನಿಕಾಂತ್​ ವಯಸ್ಸು 68. ಇಷ್ಟಾದರೂ ಅವರ ಉತ್ಸಾಹ ಮಾತ್ರ ಸ್ವಲ್ಪವೂ ಕುಗ್ಗಿಲ್ಲ. ಇಳಿ ವಯಸ್ಸಿನಲ್ಲೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಜಕೀಯದಲ್ಲೂ ತೊಡಗಿಕೊಂಡಿದ್ದಾರೆ. ಹಾಗಾಗಿ ಅವರಿಗೆ ವಯಸ್ಸಾಗಿದೆ ಎಂದು ಹೇಳುವುದು ಕಷ್ಟವೇ ಸರಿ. ಈ ವಿಚಾರ ಈಗ ಮತ್ತೊಮ್ಮೆ ಸಾಬೀತಾಗಿದೆ. ಮಗಳು ಸೌಂದರ್ಯಾ ಮದುವೆ ಪೂರ್ವ ಆರತಕ್ಷತೆಯಲ್ಲಿ ರಜನಿ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸೌಂದರ್ಯಾ ರಜನಿಕಾಂತ್​ ಅವರು ವಿಷಗನ್​ ವನಂಗಮುಡಿ ಜೊತೆ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ. ಇದಕ್ಕೂ ಮೊದಲು ಚೆನ್ನೈನಲ್ಲಿ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ಭರ್ಜರಿಯಾಗಿಯೇ ಈ ಕಾರ್ಯಕ್ರಮ ನೆರವೇರಿತ್ತು. ಈ ವೇಳೆ ಸಂಗೀತ ಕಾರ್ಯಕ್ರಮ ಕೂಡ ನೆರವೇರಿದೆ.

ಹಾಡು ಹಾಕುತ್ತಿದ್ದಂತೆ ರಜನಿಕಾಂತ್​ ನಿಧಾನವಾಗಿ ಸ್ಟೆಪ್​ ಹಾಕಲು ಆರಂಭಿಸಿದ್ದರು. ನಂತರ ಸಂಪೂರ್ಣ ಜೋಶ್​ನಲ್ಲಿ ರಜನಿ ಡ್ಯಾನ್ಸ್​ ಮಾಡಿದ್ದಾರೆ. ಈ ವೇಳೆ ನೆರೆದಿದ್ದವರು ರಜನಿಗೆ ಸಾತ್​ ನೀಡಿದರು. ಇನ್ನೂ ಕೆಲವರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ರಜನಿ ಜೋಶ್​ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

Loading...
View this post on Instagram
 

Thalaivar dancing in wedding party ❤ . . . follow our new page 🤘 #pettapongal2019 #pettapongal #petta #pettapongalparaak #pettaparaak #thalaivarpongal #thalaivar #rajini #rajinikanth #vjs #trisha #simran #ks #jan10


A post shared by Thalaivar Fans 🕶 (@thalaivar__fans) on


ಇಂದು ಸೌಂದರ್ಯಾ ಹಾಗೂ ವಿಷಗನ್​ ವಿವಾಹ ನೆರವೇರಲಿದೆ. ಸೌಂದರ್ಯಾ ರಜಿನಿಕಾಂತ್ 2010ರ ಸೆಪ್ಟೆಂಬರ್-3ರಂದು ಅಶ್ವಿನ್ ಕುಮಾರ್ ಜೊತೆ ಮದುವೆಯಾಗಿದ್ದರು. 6 ವರ್ಷಗಳ ಕಾಲ ಅಶ್ವಿನ್ ಜೊತೆ ದಾಂಪತ್ಯ ನಡೆಸಿದ್ದ ಸೌಂದರ್ಯಾ 2016ರ ಸೆಪ್ಟೆಂಬರ್​ನಲ್ಲಿ ಸಂಬಂಧ ಕಳೆದುಕೊಳ್ಳುವುದಾಗಿ ಹೇಳಿದ್ದರು. 2017ರ ಜುಲೈ ತಿಂಗಳಲ್ಲಿ ಅಧಿಕೃತವಾಗಿ ಅಶ್ವಿನ್‍ರಿಂದ ವಿಚ್ಛೇಧನ ಪಡೆದಿದ್ದರು.
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...