ರಜನಿಕಾಂತ್ ಕುರಿತು ಬಯೋಪಿಕ್; ಸೂಪರ್ಸ್ಟಾರ್ ಪಾತ್ರದಲ್ಲಿ ನಟಿಸೋ ಹೀರೋ ಯಾರು ಗೊತ್ತಾ?
ರಜನಿಕಾಂತ್ ಆರಂಭದ ದಿನಗಳಲ್ಲಿ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ನಿಧಾನವಾಗಿ ಸಿನಿಮಾಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ನಂತರ ತಮಿಳುನಾಡಿಗೆ ತೆರಳಿ ಅಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬಯೋಪಿಕ್ಗಳು ಸಿದ್ಧಗೊಳ್ಳುತ್ತಿವೆ. ಸಾಧನೆ ಮಾಡಿದ ವ್ಯಕ್ತಿಗಳ ಹಿಂದಿನ ಕಷ್ಟಗಳು, ಅವರು ಸಾಧನೆ ಮಾಡಿದ ರೀತಿಯ ಬಗ್ಗೆ ನಿರ್ದೇಶಕರು ಅತ್ಯುತ್ತಮವಾಗಿ ಪ್ರೇಕ್ಷಕರ ಎದುರು ಕಟ್ಟಿಡುತ್ತಿದ್ದಾರೆ. ಇದು ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಈಗ ರಜನಿಕಾಂತ್ ಕುರಿತು ಬಯೋಪಿಕ್ ಮಾಡುವ ಬಗ್ಗೆ ನಿರ್ದೇಶಕರೊಬ್ಬರು ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಪಾತ್ರವನ್ನು ಯಾರು ಮಾಡಿದರೆ ಉತ್ತಮ ಎನ್ನುವ ಬಗ್ಗೆಯೂ ಅವರು ಮಾಹಿತಿ ಬಿಚ್ಚಿಟ್ಟಿದ್ದಾರೆ.
ರಜನಿಕಾಂತ್ ಆರಂಭದ ದಿನಗಳಲ್ಲಿ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ನಿಧಾನವಾಗಿ ಸಿನಿಮಾಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ನಂತರ ತಮಿಳುನಾಡಿಗೆ ತೆರಳಿ ಅಲ್ಲಿ ಸೂಪರ್ ಸ್ಟಾರ್ ಆಗಿ ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಈಗ ರಾಜಕೀಯ ಪಕ್ಷವೊಂದನ್ನು ಲಾಂಚ್ ಮಾಡೋಕೆ ಸಿದ್ಧರಾಗಿದ್ದಾರೆ ರಜನಿಕಾಂತ್. ಈಗ ಅವರು ನಡೆದು ಬಂದ ಹಾದಿಯನ್ನು ಕಟ್ಟುಕೊಡೋಕೆ ಮುಂದಾಗಿದ್ದಾರೆ ನಿರ್ದೇಶಕ ಲಿಂಗಸ್ವಾಮಿ.
ಇತ್ತೀಚೆಗೆ ಮಾಧ್ಯಮದ ಜೊತೆ ಮಾತನಾಡಿರುವ ಲಿಂಗಸ್ವಾಮಿ, ರಜನಿಕಾಂತ್ ಬಗ್ಗೆ ಬಯೋಪಿಕ್ ಮಾಡುವ ಇಂಗಿತ ಹೊರಹಾಕಿದ್ದಾರೆ. ನಾನು ರಜನಿಕಾಂತ್ ಅವರ ದೊಡ್ಡ ಫ್ಯಾನ್. ಹೀಗಾಗಿ, ಅವರ ಬಗ್ಗೆ ಬಯೋಪಿಕ್ ಮಾಡಬೇಕು ಎನ್ನುವ ಆಸೆ ನನ್ನದು. ಅವರ ಬಯೋಪಿಕ್ಗೆ ಧನುಷ್ ಅತ್ಯುತ್ತಮ ಚಾಯ್ಸ್ ಎಂದಿದ್ದಾರೆ, ಲಿಂಗಸ್ವಾಮಿ.
ಲಿಂಗಸ್ವಾಮಿ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡಿದ್ದಾರೆ. ರನ್, ಸಂದಕೋಳಿ, ಭೀಮಾ ಸೇರಿ ಸಾಕಷ್ಟು ಚಿತ್ರಗಳನ್ನು ಲಿಂಗಸ್ವಾಮಿ ನಿರ್ದೇಶನ ಮಾಡಿದ್ದಾರೆ. ಅವರು ರಜನಿ ಸಿನಿಮಾ ಬಯೋಪಿಕ್ ಮಾಡ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ