ರಜನಿಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್!; ಮತ್ತೆ ‘ಬಾಷಾ‘ ರಿ-ರಿಲೀಸ್

‘ಬಾಷಾ‘ ಸಿನಿಮಾವು 1995ರಲ್ಲಿ ಜನವರಿ 12ರಲ್ಲಿ ತೆರೆಕಂಡ ಸಿನಿಮಾ. ಈ ಸಿನಿಮಾವು ಸುಮಾರು ಒಂದುವರೆ ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿತ್ತು.

Harshith AS | news18-kannada
Updated:November 25, 2019, 7:32 AM IST
ರಜನಿಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್!; ಮತ್ತೆ ‘ಬಾಷಾ‘ ರಿ-ರಿಲೀಸ್
ನಟ ರಜನಿಕಾಂತ್​​
  • Share this:
ಸೂಪರ್​ ಸ್ಟಾರ್​ ರಜನಿಕಾಂತ್​​ ಅಭಿಮಾನಿಗಳಿಗೆ ಸಿಹಿ ಸುದ್ದಿ!.  ತಲೈವಾ ರಜನಿಕಾಂತ್​ ಅವರ ಸಿನಿ ಜರ್ನಿಯನ್ನೇ ಬದಲಾಯಿಸಿದ ‘ಬಾಷಾ‘ ಚಿತ್ರ ಮತ್ತೊಮ್ಮೆ ರಿ-ರಿಲೀಸ್​ ಆಗುತ್ತಿದೆ.

ಹೌದು. ರಜನಿಕಾಂತ್​ ಅವರ ಹುಟ್ಟು ಹಬ್ಬದ ಪ್ರಯುಕ್ತ ಡಿಸೆಂಬರ್​ 11 ರಂದು ‘ಬಾಷಾ‘ ಚಿತ್ರ ಮತ್ತೊಮ್ಮೆ ರಿ-ರಿಲೀಸ್​ ಆಗಲಿದೆ. ಡಿಸೆಂಬರ್​ 12 ರಂದು ಅಭಿಮಾನಿಗಳೊಂದಿಗೆ ಕೇಕ್​ ಕಟ್​ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

‘ಬಾಷಾ‘ ಸುರೇಶ್​ ಕೃಷ್ಣ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ. ಈ ಸಿನಿಮಾದಲ್ಲಿ ರಜನಿಕಾಂತ್​ ಅವರಿಗೆ ನಾಯಕಿಯಾಗಿ ಖ್ಯಾತ ನಟಿ ನಗ್ಮಾ ಕಾಣಿಸಿಕೊಂಡಿದ್ದರು.

‘ಬಾಷಾ‘ ಸಿನಿಮಾವು 1995ರಲ್ಲಿ ಜನವರಿ 12ರಲ್ಲಿ ತೆರೆಕಂಡ ಸಿನಿಮಾ. ಈ ಸಿನಿಮಾವು ಸುಮಾರು ಒಂದುವರೆ ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿತ್ತು. ಮಾತ್ರವಲ್ಲದೆ, ರಜಿನಿಕಾಂತ್​ ಅವರ ಸಿನಿ ಜರ್ನಿಯನ್ನೇ ಬದಲಾಯಿಸಿತು. ‘ಬಾಷಾ‘ ಚಿತ್ರಕ್ಕೆ ರಜನಿಕಾಂತ್​ ಅವರಿಗೆ ಫಿಲ್ಮ್​ ಫ್ಯಾನ್​​​ ಅಸೋಷಿಯೇಷನ್​ ಅವಾರ್ಡ್​ ಮತ್ತು ಸಿನಿಮಾ ಎಕ್ಸ್​ಪ್ರೆಸ್​ ಅವಾರ್ಡ್​ ಲಭಿಸಿತು.

ಸದ್ಯ ನಟ ರಜನಿಕಾಂತ್​ ‘ದರ್ಬಾರ್‘​ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ಮುಗಿದಿದೆ. ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದಾರೆ. ಈಗಾಗಲೇ  ಸಿನಿಮಾದ ಮೋಷನ್​ ಪೋಸ್ಟರ್​ ರಿಲೀಸ್​ ಆಗಿದ್ದು, ಮುಂದಿನ ವರ್ಷ ತೆರೆಗೆ ಬರಲಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ಸಿದ್ದರಾಮಯ್ಯ, ಕಾಂಗ್ರೆಸ್, ಶಿವಸೇನಾ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ

First published: November 25, 2019, 7:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading