ಅಕ್ಷಯ್ ಕುಮಾರ್‌ಗೆ ‘ಖಿಲಾಡಿ’ ಹೆಸ್ರು ಬೇಡ ಅಂದಿದ್ರಂತೆ ಅವ್ರ ಮಾವ: ಯಾಕೆ ಅಂತ ಇಲ್ಲಿದೆ ನೋಡಿ..

1990ರ ದಶಕದಲ್ಲಿ, ಅಕ್ಷಯ್ ಕುಮಾರ್ ‘ಖಿಲಾಡಿ’ ಶೀರ್ಷಿಕೆಯಿರುವ ಚಲನಚಿತ್ರಗಳಲ್ಲಿ ನಟಿಸಿದರು. ಇವುಗಳಲ್ಲಿ 1992ರ ‘ಖಿಲಾಡಿ’ ಯೂ ಸೇರಿತ್ತು. ಇದು ಅಕ್ಷಯ್‌ಗೆ ಬಾಲಿವುಡ್ ನಲ್ಲಿ ಸಿಕ್ಕಿದ ಮೊದಲ ಯಶಸ್ಸು ಎಂದು ಹೇಳಬಹುದು.

ಅಕ್ಷಯ್​ ಕುಮಾರ್​, ರಾಜೇಶ್​ ಖನ್ನಾ

ಅಕ್ಷಯ್​ ಕುಮಾರ್​, ರಾಜೇಶ್​ ಖನ್ನಾ

  • Share this:
ನೀವು 1990ರ ದಶಕದಲ್ಲಿ ಬಾಲಿವುಡ್(Bollywood) ನಟ ಅಕ್ಷಯ್ ಕುಮಾರ್(Akshay Kumar) ಚಿತ್ರಗಳನ್ನು ನೋಡಿದ್ದರೆ ಅದರಲ್ಲಿ ‘ಖಿಲಾಡಿ’(Khiladi) ಎಂಬುದು ಚಿತ್ರದ ಶೀರ್ಷಿಕೆಯಲ್ಲಿ ನೋಡಿರುತ್ತೀರಿ. ತುಂಬಾ ಜನರು ಈ ಖಿಲಾಡಿ ಶೀರ್ಷಿಕೆಯ ಚಿತ್ರಗಳಿಂದಲೇ ಅಕ್ಷಯ್ ಕುಮಾರ್ ಅಭಿಮಾನಿಯಾಗಿದ್ದು ಎಂದರೆ ಸುಳ್ಳಲ್ಲ. ಆದರೆ ಅಭಿಮಾನಿಗಳಿಗೆ ಇಷ್ಟೊಂದು ಇಷ್ಟವಾದ ಚಿತ್ರಗಳನ್ನು ಮಾಡುವುದನ್ನು ನಿಲ್ಲಿಸಿ ಎಂದು ಅವರ ಮಾವ ಬಾಲಿವುಡ್‌ ಹಿರಿಯ ನಟರಲ್ಲಿ ಒಬ್ಬರಾದ ರಾಜೇಶ್ ಖನ್ನಾ(Rajesh Khanna) ಒಮ್ಮೆ ತಮ್ಮ ಅಳಿಯನಿಗೆ ಹೇಳಿದ್ದರಂತೆ ಎಂದು ಹೇಳಲಾಗುತ್ತಿದೆ. ಒಮ್ಮೆ ರಾಜೇಶ್ ಖನ್ನಾ ತಮ್ಮ ಅಳಿಯ ಮತ್ತು ನಟ ಅಕ್ಷಯ್ ಕುಮಾರ್ ಆಯ್ಕೆ ಮಾಡುತ್ತಿದ್ದ ಚಲನಚಿತ್ರ(Movie) ಮತ್ತು ಪಾತ್ರಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದರು. ಅಕ್ಷಯ್ ಚಲನಚಿತ್ರಗಳಲ್ಲಿ 'ಉತ್ತಮ ಕೆಲಸ' ಮಾಡುತ್ತಿದ್ದಾರೆ. ಆದರೆ ಅವರು ‘ಖಿಲಾಡಿ’ ಶೀರ್ಷಿಕೆಯಿರುವ ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದರು.

ಖಿಲಾಡಿ ಹೆಸರಿನ ಸಿನಿಮಾಗಳಲ್ಲಿ ನಟಿಸಿದ್ದ ಅಕ್ಷಯ್​

1990ರ ದಶಕದಲ್ಲಿ, ಅಕ್ಷಯ್ ಕುಮಾರ್ ‘ಖಿಲಾಡಿ’ ಶೀರ್ಷಿಕೆಯಿರುವ ಚಲನಚಿತ್ರಗಳಲ್ಲಿ ನಟಿಸಿದರು. ಇವುಗಳಲ್ಲಿ 1992ರ ‘ಖಿಲಾಡಿ’ ಯೂ ಸೇರಿತ್ತು. ಇದು ಅಕ್ಷಯ್‌ಗೆ ಬಾಲಿವುಡ್ ನಲ್ಲಿ ಸಿಕ್ಕಿದ ಮೊದಲ ಯಶಸ್ಸು ಎಂದು ಹೇಳಬಹುದು. ಆನಂತರ ‘ಮೈನ್ ಖಿಲಾಡಿ ತು ಅನಾರಿ’, ‘ಸಬ್ಸೆ ಬಡಾ ಖಿಲಾಡಿ’, ‘ಖಿಲಾಡಿಯೋ ಕಾ ಖಿಲಾಡಿ’, ‘ಮಿಸ್ಟರ್ ಅಂಡ್ ಮಿಸೆಸ್ ಖಿಲಾಡಿ’ ಮತ್ತು ‘ಇಂಟರ್ ನ್ಯಾಷನಲ್ ಖಿಲಾಡಿ’ ಹೀಗೆ ಅನೇಕ ಸಿನೆಮಾಗಳಲ್ಲಿ ಇವರು ಅಭಿನಯಿಸಿದರು.

ಆದರೆ 2009ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ರಾಜೇಶ್ ಖನ್ನಾ ಅಕ್ಷಯ್ ಅವರು ಉತ್ತಮ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಡ್ಯಾನ್ಸ್ ಮಾಡಬೇಕು, ಮನರಂಜನೆ ನೀಡಬೇಕು, ಉತ್ತಮ ಆ್ಯಕ್ಷನ್ ಸಿನಿಮಾಗಳನ್ನು ಮಾಡಬೇಕು ಎಂದು ಮಾವ ಅಳಿಯನಿಗೆ ಸಲಹೆ ನೀಡಿದ್ದರು. ಆದರೆ ಒಟ್ಟಾರೆಯಾಗಿ ಮಾವ ತನ್ನ ಅಳಿಯನಿಗೆ ‘ಖಿಲಾಡಿ’ ಶೀರ್ಷಿಕೆಯ ಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲು ಹೇಳಿದ್ದರಂತೆ.

ಖಿಲಾಡಿ ಶೀರ್ಷಿಕೆ ಕೈಬಿಟ್ಟಿದ್ದ ಅಕ್ಷಯ್​!

ನಂತರ ಅಕ್ಷಯ್ ಈ ಖಿಲಾಡಿ ಶೀರ್ಷಿಕೆಯ ಚಿತ್ರಗಳಿಂದ ದೂರ ಸರಿದರು ಮತ್ತು ವಿಭಿನ್ನವಾದ ಚಲನಚಿತ್ರಗಳನ್ನು ಮಾಡಲು ಪ್ರಾರಂಭಿಸಿದರು. ಅವರು ಇಂದು ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಅದೇ ಸಂದರ್ಶನದಲ್ಲಿ, ರಾಜೇಶ್ ತಮ್ಮ ಕುಟುಂಬದ ಬಗ್ಗೆ ಹೆಮ್ಮೆ ಪಡುತ್ತೇನೆ ಮತ್ತು ಅವರ ಮೊಮ್ಮಗ ಆರವ್ ಬಾಲಿವುಡ್‌ನ ಮುಂದಿನ ಸೂಪರ್ ಸ್ಟಾರ್ ಆಗುತ್ತಾನೆಂದು ನನಗೆ ನಿರೀಕ್ಷೆ ಇದೆ ಎಂದು ಹೇಳಿದ್ದರು.

ಇದನ್ನು ಓದಿ : ಮನಿ ಹೈಸ್ಟ್ ಮುಗಿಯಿತೇ..? 6ನೇ ಸರಣಿ ಬರಲಿದೆಯೇ..? ಇಲ್ಲಿದೆ ನೋಡಿ ವಿವರ..

‘ನಾನು ಇಂದು ಸಾರ್ವಜನಿಕವಾಗಿ ಇದನ್ನು ಹೇಳುತ್ತಿದ್ದೇನೆ, ರಾಜೇಶ್ ಖನ್ನಾ ನಂತರ ಸೂಪರ್ ಸ್ಟಾರ್ ಆಗುವುದು ನನ್ನ ಮೊಮ್ಮಗ ಆರವ್. ಇವನು ಅಕ್ಷಯ್ ಕುಮಾರ್ ಅವರ ಮಗ ಎಂದು ನಾನಿದನ್ನು ಹೇಳುತ್ತಿಲ್ಲ. ನಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರ ಪ್ರತಿಭೆ, ಸಮರ್ಪಣೆ ಮತ್ತು ತ್ಯಾಗ ಗಮನದಲ್ಲಿಟ್ಟುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ. ಆರವ್ ಭಾರತೀಯ ಚಲನಚಿತ್ರೋದ್ಯಮದ ಮುಂದಿನ ಸೂಪರ್ ಸ್ಟಾರ್ ಆಗಲಿದ್ದಾರೆ" ಎಂದು ಹೇಳಿದ್ದರು.

ಇದನ್ನು ಓದಿ: ದೇಶ ತೊರೆಯುತ್ತಿದ್ದ ನಟಿ ಜಾಕ್ವೆಲಿನ್​​ಗೆ ತಡೆ: ಏರ್​​ಪೋರ್ಟ್​​ನಲ್ಲೇ ವಶಕ್ಕೆ ಪಡೆದ ಅಧಿಕಾರಿಗಳು

ಅಕ್ಷಯ್ ಕುಮಾರ್ 2001ರಲ್ಲಿ ರಾಜೇಶ್ ಖನ್ನಾ ಮಗಳು ಮತ್ತು ನಟಿ ಟ್ವಿಂಕಲ್ ಖನ್ನಾರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಆರವ್ ಪ್ರಸ್ತುತ ಯುಕೆಯಲ್ಲಿ ಉನ್ನತ ಅಧ್ಯಯನ ಮಾಡುತ್ತಿದ್ದಾರೆ. ಇವರ ಒಬ್ಬಳೇ ಮಗಳ ಹೆಸರು ನಿತಾರಾ.
Published by:Vasudeva M
First published: