ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಅವರ ಸಹೋದರ ಮತ್ತು ನಟರಾದ ರಾಜೀವ್ ಸೇನ್ (Rajeev Sen) ಅವರು ಮತ್ತು ಅವರ ಪತ್ನಿ ಚಾರು ಅಸೋಪಾ ಅವರ ವೈವಾಹಿಕ ಜೀವನವು ಅಷ್ಟೊಂದು ಚೆನ್ನಾಗಿಲ್ಲ ಅಂತ ಈಗಾಗಲೇ ಬಹುತೇಕರಿಗೆ ಗೊತ್ತಾಗಿದೆ. ಇವರಿಬ್ಬರ ದಾಂಪತ್ಯ ಜೀವನದಲ್ಲಿ ಮನಸ್ತಾಪಗಳು ಮತ್ತು ನಂಬಿಕೆ ವಿಶ್ವಾಸಗಳ ವಿಚಾರವಾಗಿ ಜಗಳವಾಗಿದ್ದೂ ಇದೆ. ಇನ್ನೇನು ಜೊತೆಗೆ ಇರಲು ಸಾಧ್ಯವೇ ಇಲ್ಲ ಅಂತ ಹೇಳಿ ಮತ್ತೆ ಒಂದೇ ಪಾರ್ಟಿಯಲ್ಲಿ, ಮದುವೆ (Marriage) ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದೂ ಇದೆ.
ಚಾರು ಮಾತ್ರ ತಮ್ಮ ಗಂಡನ ಜೊತೆ ಜಗಳವಾಡಿದ್ರು, ತಮ್ಮ ಅತ್ತೆ ಮಾವನೊಂದಿಗೆ ಮತ್ತು ರಾಜೀವ್ ಸಹೋದರಿ ಸುಶ್ಮಿತಾ ಸೇನ್ ಅವರೊಟ್ಟಿಗೆ ತುಂಬಾ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಅಂತ ಹೇಳಬಹುದು.
ಚಾರುಗಿದೆಯಂತೆ ರಾಜೀವ್ ಪೋಷಕರ ಮತ್ತು ಸಹೋದರಿಯ ಬೆಂಬಲ
ಆದರೆ ಇವರಿಬ್ಬರು ಈಗಾಗಲೇ ತಮ್ಮ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರ ವಿಚ್ಛೇದನ ಪ್ರಕ್ರಿಯೆಗಳು ಪ್ರಾರಂಭವಾದಾಗಿನಿಂದ, ರಾಜೀವ್ ಸೇನ್ ಅವರ ಸಹೋದರಿ ಸುಶ್ಮಿತಾ ಸೇನ್ ಮತ್ತು ಅವರ ಪೋಷಕರು ಇಬ್ಬರ ನಡುವಿನ ಜಗಳದಲ್ಲಿ ಚಾರು ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ವರದಿಗಳು ಕೇಳಿ ಬಂದಿವೆ.
ಈಗ, ರಾಜೀವ್ ಈ ವರದಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ವಿಚ್ಛೇದಿತ ಪತ್ನಿಯನ್ನು ಬೆಂಬಲಿಸಲು ತಮ್ಮ ಕುಟುಂಬಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಪೋಷಕರು ಮತ್ತು ಸಹೋದರಿ ಚಾರುಗೆ ಬೆಂಬಲಿಸುತ್ತಿರುವ ಬಗ್ಗೆ ಏನ್ ಹೇಳ್ತಾರೆ ರಾಜೀವ್?
ಹೊಸ ಸಂದರ್ಶನವೊಂದರಲ್ಲಿ, ರಾಜೀವ್ ತಮ್ಮ ಕುಟುಂಬವು ಚಾರುಗೆ ಹತ್ತಿರವಾಗಿರುವುದು ಅವರ ವಿಚ್ಛೇದನೆ ನಿರ್ಧಾರ ಬದಲಾಯಿಸುವುದಿಲ್ಲ ಎಂದು ಹೇಳಿದರು.
ಚಾರು ಅವರೊಂದಿಗಿನ ಈ ಜಗಳದಲ್ಲಿ ಅವರ ಕುಟುಂಬವು ಅವರ ವಿರುದ್ಧವಾಗಿರುವುದಕ್ಕೆ ಪ್ರತಿಕ್ರಿಯಿಸಿದ ರಾಜೀವ್ ಚಾರು ನನ್ನ ತಾಯಿ, ತಂದೆ ಮತ್ತು ಸಹೋದರಿಯೊಂದಿಗೆ ಅದ್ಭುತ ಸಂಬಂಧವನ್ನು ಹೊಂದಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದಿದ್ದಾರೆ.
ನಾನು ಅದರಿಂದ ಏಕೆ ಪ್ರಭಾವಿತನಾಗುತ್ತೇನೆ? ಇದು ನನ್ನ ಕುಟುಂಬದೊಂದಿಗಿನ ನನ್ನ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ. ನಮ್ಮದು ತುಂಬಾ ನಿಕಟವಾದ ಕುಟುಂಬ ಮತ್ತು ಇಂತಹ ವಿಷಯಗಳು ನನ್ನನ್ನು ನಗಿಸುವುದನ್ನು ಬಿಟ್ಟು ಬೇರೆ ಏನು ಮಾಡುವುದಿಲ್ಲ” ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ರಾಜೀವ್ ನನ್ನ ಬಿಟ್ಟು ಚಾರುನ ಫಾಲೋ ಮಾಡ್ತಿದ್ದಾರೆ ಸುಶ್ಮಿತಾ
ಕೆಲವು ಇನ್ಸ್ಟಾಗ್ರಾಮ್ ಬಳಕೆದಾರರು ಸುಶ್ಮಿತಾ ಇನ್ಸ್ಟಾಗ್ರಾಮ್ ನಲ್ಲಿ ಚಾರು ಅವರನ್ನು ಫಾಲೋ ಮಾಡುತ್ತಾರೆ ಮತ್ತು ತಮ್ಮ ಸ್ವಂತ ಸಹೋದರ ರಾಜೀವ್ ಅನ್ನು ಫಾಲೋ ಮಾಡುವುದಿಲ್ಲ ಎಂಬುದರ ಬಗ್ಗೆ ರಾಜೀವ್ ಅವರ ಗಮನವನ್ನು ಸೆಳೆದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜೀವ್ ತನ್ನ ಸಹೋದರಿ ಇನ್ಸ್ಟಾಗ್ರಾಮ್ ನಲ್ಲಿ ತನ್ನನ್ನು ಎಂದಿಗೂ ಫಾಲೋ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ನನ್ನ ಸಹೋದರಿ ಕೂಡ ಒಬ್ಬ ಸೆಲೆಬ್ರಿಟಿ, ಆಕೆ ತುಂಬಾ ಜನರನ್ನು ಫಾಲೋ ಮಾಡುತ್ತಾಳೆ. ಮೊದಲಿಂದಲೂ ಅವಳು ನನ್ನನ್ನು ಫಾಲೋ ಮಾಡಿಲ್ಲ. ಎಂದಿಗೂ ಮಾಡಿಲ್ಲ ಎಂದಿದ್ದಾರೆ.
ಅವಳು ಟ್ವಿಟ್ಟರ್ ನಲ್ಲಿ ಮಾತ್ರ ನನ್ನನ್ನು ಫಾಲೋ ಮಾಡುತ್ತಾಳೆ. ನಾನು ಇದನ್ನು ಮೊದಲೇ ಹೇಳಿದ್ದೇನೆ ಮತ್ತು ನಾನು ಇದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ.
ಇದನ್ನೂ ಓದಿ: Rajeev Sen-Charu Asopa: ಮನೆಯಲ್ಲಿ ಸಿಸಿಟಿವಿ! ಹೆಂಡ್ತಿ ಮೇಲೆ ವಿಪರೀತ ಸಂಶಯ, ಸುಶ್ಮಿತಾ ಸಹೋದರನ ವಿರುದ್ಧ ಆರೋಪ
ಇದು ತುಂಬಾ ಬಾಲಿಶವಾದ ವಿಷಯ. ಇದಲ್ಲದೆ, ಅವಳು ನನ್ನನ್ನು ಅಥವಾ ಬೇರೆ ಯಾರನ್ನಾದರೂ ಫಾಲೋ ಮಾಡುತ್ತಿದ್ದರೆ, ಅದು ನನಗೆ ಹೇಗೆ ಮುಖ್ಯವಾಗುತ್ತದೆ” ಎಂದು ಕೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ರಾಜೀವ್ ಮತ್ತು ಚಾರು ತಮ್ಮ ಮಗಳು ಜಿಯಾನಾ ಅವರೊಂದಿಗೆ ಸೇನ್ ಮದುವೆಯಲ್ಲಿ ಒಟ್ಟಿಗೆ ಭಾಗವಹಿಸಿದ್ದರು.
ಮದುವೆ ಸಮಾರಂಭದಲ್ಲಿ ಅವರು ರೊಮ್ಯಾಂಟಿಕ್ ಹಾಡಿಗೆ ಒಟ್ಟಿಗೆ ಡ್ಯಾನ್ಸ್ ಸಹ ಮಾಡಿದರು. ಕುಟುಂಬದ ಸಮಾರಂಭದಲ್ಲಿ ಭಾಗವಹಿಸಿದ ನಂತರ, ಚಾರು ತಮ್ಮ ಮಗಳು ಜಿಯಾನಾಗಾಗಿ ರಾಜೀವ್ ಅವರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಲು ಬಯಸುವುದಾಗಿ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ