• Home
  • »
  • News
  • »
  • entertainment
  • »
  • Entertainment: ಮುಗಿಯದ ನಟಿ ಚಾರು ಸಂಸಾರದ ಜಗಳ, ನಟ ಕರಣ್ ಮೆಹ್ರಾ ಜೊತೆ ಹೆಂಡತಿಗೆ ಸಂಬಂಧ ಎಂದ ರಾಜೀವ್ ಸೇನ್

Entertainment: ಮುಗಿಯದ ನಟಿ ಚಾರು ಸಂಸಾರದ ಜಗಳ, ನಟ ಕರಣ್ ಮೆಹ್ರಾ ಜೊತೆ ಹೆಂಡತಿಗೆ ಸಂಬಂಧ ಎಂದ ರಾಜೀವ್ ಸೇನ್

ರಾಜೀವ್ ಮತ್ತು ಚಾರು

ರಾಜೀವ್ ಮತ್ತು ಚಾರು

Rajeev Sen Accuses wife Charu Asopa: ಇವರಿಬ್ಬರ ಮಧ್ಯೆ ಆರೋಪ ಪ್ರತ್ಯಾರೋಪಗಳು ಎಷ್ಟರ ಮಟ್ಟಿಗೆ ಬೆಳೆದಿವೆ ಎಂದರೆ ಇವರಿಬ್ಬರು ಮತ್ತೆ ಒಂದಾಗೋ ಲಕ್ಷಣಗಳು ತುಂಬಾನೇ ಕಡಿಮೆ ಅನ್ನೋ ಹಾಗಿದೆ.

  • Share this:

ಕಳೆದ ಕೆಲವು ತಿಂಗಳುಗಳಿಂದ ಬಾಲಿವುಡ್ (Bollywood) ನಟಿ ಸುಶ್ಮಿತಾ ಸೇನ್ (Actress Sushmita Sen)  ಅವರ ಸಹೋದರ ರಾಜೀವ್ ಸೇನ್ (Rajeev sen) ಮತ್ತು ಅವರ ಹೆಂಡತಿ ಚಾರು ಅಸೋಪಾ (Charu) ಮಧ್ಯೆ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದು, ಆಗಾಗ್ಗೆ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗುತ್ತಿರುವುದು ನಮಗೆಲ್ಲಾ ಗೊತ್ತೇ ಇದೆ. ಇತ್ತೀಚೆಗೆ ಚಾರು ತನ್ನ ಗಂಡ ರಾಜೀವ್ ಮೇಲೆ ವ್ಯಭಿಚಾರದ ಆರೋಪ ಹೊರಿಸಿದರೆ, ಇತ್ತ ರಾಜೀವ್ ಅವರು ಚಾರು ಮೊದಲನೇ ಮದುವೆ ಬಗ್ಗೆ ವಿಷಯವನ್ನು ಮರೆ ಮಾಚಿದ್ದಾರೆ ಅಂತ ಆರೋಪಿಸಿದ್ದರು. ಇವರಿಬ್ಬರ ಮಧ್ಯೆ ಆರೋಪ ಪ್ರತ್ಯಾರೋಪಗಳು ಎಷ್ಟರ ಮಟ್ಟಿಗೆ ಬೆಳೆದಿವೆ ಎಂದರೆ ಇವರಿಬ್ಬರು ಮತ್ತೆ ಒಂದಾಗೋ ಲಕ್ಷಣಗಳು ತುಂಬಾನೇ ಕಡಿಮೆ ಅನ್ನೋ ಹಾಗಿದೆ.


ಈಗಾಗಲೇ ಇಬ್ಬರು ಅನೇಕ ಬಾರಿ ತಾವು ವೈವಾಹಿಕ ಜೀವನದಿಂದ ಹೊರ ಬರುವ ಮಾತುಗಳನ್ನು ಆಡಿದ್ದಾರೆ. ಚಾರು ಸಹ ರಾಜೀವ್ ಅವರ ಬಗ್ಗೆ ದೈಹಿಕ ನಿಂದನೆ ಮತ್ತು ವ್ಯಭಿಚಾರದ ಆರೋಪ ಸೇರಿದಂತೆ ಕೆಲವು ಆಘಾತಕಾರಿ ಸಂಗತಿಗಳನ್ನು ಸಹ ಈ ಹಿಂದೆ ಬಹಿರಂಗಪಡಿಸಿದ್ದರು.


ರಾಜೀವ್ ಮತ್ತು ಚಾರು ಮಾಡಿದ ಆರೋಪಗಳೇನು?


ಇತ್ತೀಚೆಗೆ ಮನರಂಜನಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ತಾನು ಗರ್ಭಿಣಿಯಾಗಿದ್ದಾಗ ರಾಜೀವ್ ತನಗೆ ಮೋಸ ಮಾಡಿದ್ದಾನೆ ಎಂದು ಚಾರು ಆರೋಪಿಸಿದ್ದರು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ರಾಜೀವ್, ಚಾರು ಮಹಿಳೆ ಎಂಬ ಕರುಣೆಯನ್ನು ಗಿಟ್ಟಿಸಲು ನಾಟಕವಾಡುತ್ತಿದ್ದಾಳೆ ಎಂದು ಕಿಡಿಕಾರಿದ್ದರು.


ಇದನ್ನೂ ಓದಿ: ರೋಚಕ ತಿರುವು ಕಂಡ ಪುಟ್ಟಕ್ಕನ ಮಕ್ಕಳು! ಕಂಠಿ ನಿಜ ಬಣ್ಣ ಬಯಲಾಗುತ್ತಾ?


"ಆರೋಪಗಳ ಬಗ್ಗೆ ಆಕೆಯ ಬಳಿ ಯಾವುದೇ ಪುರಾವೆಗಳಿಲ್ಲ, ಆದರೆ ಅವಳ ಅಹಂ ತುಂಬಾನೇ ಹೆಚ್ಚಾಗಿದೆ. ಆಕೆ ನೀಡಿದ ಈ ಚಿತ್ರಹಿಂಸೆ ಮತ್ತು ಅವಮಾನಕ್ಕಾಗಿ ನಾನು ಅವಳನ್ನು ಎಂದಿಗೂ ಕ್ಷಮಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.


ರಾಜೀವ್ ತನ್ನ ಮೇಲೆ ಕೈ ಎತ್ತಿದ್ದಾನೆ ಎಂದು ಚಾರು ಆರೋಪಿಸಿದ್ದು,  ಇಡೀ ಕುಟುಂಬಕ್ಕೆ ಪರಿಸ್ಥಿತಿಯ ಬಗ್ಗೆ ತಿಳಿದಿದೆ ಎಂದು ಹೇಳಿದ್ದಾರೆ. ಆದರೆ, ರಾಜೀವ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ,  "ಚಾರುಗೆ ಪ್ರಮುಖವಾಗಿ ವಿಶ್ವಾಸದ ಸಮಸ್ಯೆ ಇದೆ. ನಂಬಿಕೆ ಇಲ್ಲ ನ್ನ ಮೇಲೆ. .ನಾನು ಕೋಪಗೊಳ್ಳಬಹುದು, ಆದರೆ ಆ ಕೋಪ ಬರಲು ನಿಮ್ಮನ್ನು ಪ್ರಚೋದಿಸುವ ವ್ಯಕ್ತಿ  ಹೆಚ್ಚು ಅಪಾಯಕಾರಿ" ಎಂದು ಹೇಳಿದ್ದಾರೆ.


ಚಾರು ಮತ್ತು ನಟ ಕರಣ್ ಮೆಹ್ರಾ ನಡುವೆ ಸಂಬಂಧವಿದೆಯಂತೆ!


ನಟ ಕರಣ್ ಮೆಹ್ರಾ ಅವರೊಂದಿಗೆ ಚಾರು ಅವರ ಸಂಬಂಧದ ಬಗ್ಗೆ ರಾಜೀವ್ ಆಶ್ಚರ್ಯಕರ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಚಾರು ಅವರ ತಾಯಿ ಕಳುಹಿಸುವ ವಾಯ್ಸ್ ರೆಕಾರ್ಡ್​   ಬಗ್ಗೆ ಮಾತನಾಡಿದ ಅವರು " ಟಿವಿ ನಟ ಕರಣ್ ಮೆಹ್ರಾ ಅವರೊಂದಿಗಿನ ಚಾರು ಲವ್ ಅಫೇರ್​ ಅನ್ನು ಅವರ ತಾಯಿ ಬಹಿರಂಗಪಡಿಸಿದ್ದಾರೆ. ಅವಳು ಕರಣ್ ಜೊತೆ  ರೊಮ್ಯಾಂಟಿಕ್ ರೀಲ್ ಸಹ ಮಾಡಿದ್ದಾರೆ. ಅವಳಿಗೆ ಮೋಸ ಮಾಡಿದ್ದೇನೆ ಮತ್ತು ಅವಳ ಬಗ್ಗೆ ಅನುಮಾನಿಸಿದ್ದೇನೆ ಅಂತ ನನ್ನ ಮೇಲೆ ಆಕೆ ಆರೋಪಗಳನ್ನು ಮಾಡುತ್ತಾರೆ.  ನಾವು ಎಂತಹ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ನೋಡಿ" ಎಂದು ಅವರು ಗೇಲಿ ಮಾಡಿದ್ದಾರೆ.


“ತನ್ನನ್ನು ತಾನು ರಕ್ಷಿಸಿಕೊಳ್ಳಲು ಚಾರು ನಮ್ಮ ಮುದ್ದು ಮಗಳು  ಜಿಯಾನಾಳನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾಳೆ. ನನ್ನ ಮಗಳು ಇದಕ್ಕೆಲ್ಲ ಅರ್ಹಳಲ್ಲ, ಪ್ರತಿಯೊಂದು ವಿಷಯವನ್ನು ಆಕೆ ಮಾಧ್ಯಮಗಳೊಂದಿಗೆ ಮಾತನಾಡದಿದ್ದರೆ ವಿಷಯಗಳು ವಿಭಿನ್ನವಾಗಿರುತ್ತಿದ್ದವು" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಸುದೀಪ್ ಎದುರು ಮಂಡಿಯೂರಿ ಕ್ಷಮೆ ಕೇಳಿದ ರೂಪೇಶ್ ರಾಜಣ್ಣ!


ವಿಚ್ಛೇದನದ ಬಗ್ಗೆ ಏನ್ ಹೇಳ್ತಾರೆ ರಾಜೀವ್


ಅವರ ಮುಂಬರುವ ವಿಚ್ಛೇದನದ ಬಗ್ಗ ಮಾತನಾಡಿದ ಅವರು, ಈ ಬಗ್ಗೆ ನಿಧಾನ ಮಾಡುವುದಿಲ್ಲ.  ನಾನು ಅವಳೊಂದಿಗೆ ಒಟ್ಟಾಗಿ ಜೀವಿಸಲು ಇನ್ಮುಂದೆ ಸಾಧ್ಯವೇ ಇಲ್ಲ. ತನ್ನ ಗಂಡನ ವಿರುದ್ಧ ಪದೇ ಪದೇ ಆರೋಪಗಳನ್ನು ಮಾಡುವ ಮಹಿಳೆಯೊಂದಿಗೆ ನಾನು ವಾಸಿಸಲು ಸಾಧ್ಯವಿಲ್ಲ. ನನ್ನ ಪುಟ್ಟ ಮಗಳ ಸುರಕ್ಷತೆಯ ಬಗ್ಗೆ ನಾನು  ಚಿಂತಿತನಾಗಿದ್ದೇನೆ" ಎಂದು ಹೇಳಿದ್ದಾರೆ.

Published by:Sandhya M
First published: