Rashmika Mandanna: ಅದೊಂದು ಪೂಜೆ ಮಾಡಿಸಿ ಅದೃಷ್ಟ ಲಕ್ಷ್ಮೀಯನ್ನು ಪಕ್ಕದಲ್ಲೇ ಕೂರಿಸಿಕೊಂಡ ರಶ್ಮಿಕಾ: ಈಕೆ ಮುಟ್ಟಿದ್ದೆಲ್ಲ ಚಿನ್ನವಂತೆ!

ದಕ್ಷಿಣ ಭಾರತ ಸಿನಿಮಾರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಶ್ಮಿಕಾ ವಿರಾಜಮಾನಳಾಗಿದ್ದಾಳೆ. ಅದೃಷ್ಟ ದೇವತೆ ಇವಳ ಪಕ್ಕದಲ್ಲಿ ಕೂತಿರುವಂತೆ ಕಾಣುತ್ತೆ ಹೀಗಾಗಿಯೇ ಯಶಸ್ಸು, ಹಣ, ಕೀರ್ತಿ ಇದೆಲ್ಲವನ್ನು ಕೂಡ ಕೆಲವೇ ಕೆಲವು ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ತನ್ನದಾಗಿಸಿಕೊಂಡಿದ್ದಾಳೆ.

ರಾಜಶ್ಯಾಮಲಾ ಭಗಳಮುಖಿ ಪೂಜೆ ಮಾಡಿಸಿದ್ದ ನಟಿ

ರಾಜಶ್ಯಾಮಲಾ ಭಗಳಮುಖಿ ಪೂಜೆ ಮಾಡಿಸಿದ್ದ ನಟಿ

  • Share this:
ಕರುನಾಡ ಕ್ರಶ್​, ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna) ಅವರ ರೇಂಜ್ (Range)​ ಈಗ ಬದಲಾಗಿದೆ. ಕಿರಿಕ್​ ಪಾರ್ಟಿ (Kirik Party) ಸಿನಿಮಾ ಮೂಲಕ ತೆರೆಗೆ ಬಂದ ನಟಿ ರಶ್ಮಿಕಾ, ಈಗ ಭಾರತದ ಟಾಪ್​ ಹೀರೋಯಿನ್ (Top Heroin)​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದೊಡ್ಡ ದೊಡ್ಡ ಹೆಸರಾಂತ ನಟಿಯರಿಗೆ ಸೆಡ್ಡು ಹೊಡೆದು, ತಮ್ಮ ಸ್ಥಾನವನ್ನು ಬಿಗಿ ಪಡಿಸಿಕೊಂಡಿದ್ದಾರೆ. ಕರುನಾಡ ಕ್ರಶ್​ ಆಗಿದ್ದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್​ ಕ್ರಶ್ (National Crush)​. ಈಕೆ ಸಿನಿಮಾ ಮಾಡಲು ನಿರ್ಮಾಪಕರು ತಾ ಮುಂದೆ.. ನಾ ಮುಂದೆ ಎಂದು ಕ್ಯೂನಲ್ಲಿ ಕಾಯುತ್ತಿದ್ದಾರಂತೆ. ಅಷ್ಟರ ಮಟ್ಟಿಗೆ ರಶ್ಮಿಕಾ ಮಂದಣ್ಣ ಅವರ ಲಕ್ (Luck)​ ಬದಲಾಗಿದೆ. ದೊಡ್ಡ ದೊಡ್ಡ ಸ್ಟಾರ್​ಗಳ ಜೊತೆ  ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೆಚ್ಚಾಗಿ ಹೀರೋಗಳಿಗೆ ಅಭಿಮಾನಿಗಳು ಹೆಚ್ಚು ಇರುತ್ತಾರೆ. ಆದರೆ, ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳ ಬಳಗವೂ ದೊಡ್ಡದಿದೆ. ಈಕೆ ಕನ್ನಡದಿಂದ ಪರ ಭಾಷೆಗೆ ತೆರಳಿದ ಕೂಡಲೇ ಇವರ ಅದೃಷ್ಟ ಬದಲಾಯಿತು. ಎಲ್ಲಾ ಭಾಷೆಗಳಲ್ಲೂ ರಶ್ಮಿಕಾ ಹವಾ ಇದೆ. ಕೆಲವೊಂದು ಸಂದರ್ಭದಲ್ಲಿ ಕನ್ನಡ ವಿಚಾರಕ್ಕಾಗಿ ರಶ್ಮಿಕಾ ಟ್ರೋಲ್ ​(Troll) ಆಗಿದ್ದು ಇದೆ. ಆದರೆ, ಈಕೆ ಎಲ್ಲಿ ಇರುತ್ತಾಳೋ ಅಲ್ಲಿ ಅದೃಷ್ಟ ಲಕ್ಷ್ಮೀ ಇದ್ದೇ ಇರುತ್ತಾರೆ. ಅದಕ್ಕೆಲ್ಲ ಕಾರಣ ಅಂದು ರಶ್ಮಿಕಾ ಮಾಡಿಸಿದ ಅದೊಂದು ಪೂಜೆ (Pooja). ಹೌದು ರಶ್ಮಿಕಾ ಮಂದಣ್ಣ ಅವರಿಗೆ ಅದೊಂದು ಪೂಜೆ ಈಕೆ ಬೇಡಿದ್ದೆಲ್ಲವನ್ನೂ ನೀಡಿದೆ. ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಮಾಡಿಸಿದ ಪೂಜೆಯಾದರು ಯಾವುದು ಗೊತ್ತಾ? ಮುಂದೆ ನೋಡಿ.. 

ದೇವರ ಮೊರೆ ಹೋಗಿದ್ದ ಕೊಡಗಿನ ಕುವರಿ!

ದಕ್ಷಿಣ ಭಾರತ ಸಿನಿಮಾರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಶ್ಮಿಕಾ ವಿರಾಜಮಾನಳಾಗಿದ್ದಾಳೆ. ಅದೃಷ್ಟ ದೇವತೆ ಇವಳ ಪಕ್ಕದಲ್ಲಿ ಕೂತಿರುವಂತೆ ಕಾಣುತ್ತೆ ಹೀಗಾಗಿಯೇ ಯಶಸ್ಸು, ಹಣ, ಕೀರ್ತಿ ಇದೆಲ್ಲವನ್ನು ಕೂಡ ಕೆಲವೇ ಕೆಲವು ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ತನ್ನದಾಗಿಸಿಕೊಂಡಿದ್ದಾಳೆ. ದಿನದಿಂದ ದಿನಕ್ಕೆ ಹೆಸರು ಕೀರ್ತಿ ಹಣಗಳಿಸುತ್ತಿರುವ ರಶ್ಮಿಕಾ ದೈವಕ್ಕೆ ಮೊರೆಹೋಗಿದ್ದರು. ಹೌದು, ಕೆಲ ತಿಂಗಳುಗಳ ಹಿಂದೆ  ಖ್ಯಾತ ಜೋತಿಷಿ ವೇಣು ಸ್ವಾಮಿ ಅವರು ಸೂಚಿಸಿದ ಪೂಜೆಯೊಂದನ್ನು ಮಾಡಿಸಿದ್ದಾರೆ. ಆ ಪೂಜೆಯಿಂದಲೇ ರಶ್ಮಿಕಾ ಇಷ್ಟೊಂದು ಹೆಸರು, ಹಣಗಳಿಸಲು ಸಾಧ್ಯವಾಯ್ತು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ : Rashmika Mandanna-Vijay Deverakonda ನಡುವೆ ಸಂಥಿಂಗ್.. ಸಂಥಿಂಗ್​? ಒಟ್ಟಿಗೆ ಗೋವಾದಲ್ಲಿ ಇವ್ರು ಮಾಡಿದ್ದೇನು ನೀವೇ ನೋಡಿ...!

ವೇಣು ಸ್ವಾಮಿ ಹೇಳಿದಂತೆ ಪೂಜೆ ಮಾಡಿಸಿದ್ದ ರಶ್ಮಿಕಾ!

ಆಂಧ್ರ ಮತ್ತು ತೆಲಂಗಾಣದ ರಾಜಕಾರಣಿಗಳು ಮತ್ತು ಸಿನಿತಾರೆಯರು, ಉದ್ಯಮಪತಿಗಳು ಅತಿಯಾಗಿ ವಿಶ್ವಾಸ ಇರಿಸಿಕೊಂಡಿರುವ ಜ್ಯೋತಿಷಿಗಳಾದ ವೇಣು ಸ್ವಾಮಿ ಹಿಂದೆ ಸಮಂತಾ ನಾಗಚೈತನ್ಯ ವಿಚ್ಛೇದನ ಪಡೆಯುವ ಸಂಗತಿಯನ್ನು ಹೇಳಿದ್ದರು. ಅವರು ಹೇಳಿದಂತೆ ಇವರಿಬ್ಬರು ವಿಚ್ಛೇದನ ಪಡೆದುಕೊಂಡರು. ಕೆಲವು ತಿಂಗಳ ಹಿಂದೆ ಇದೆ ವೇಣು ಸ್ವಾಮಿಯವರು ರಶ್ಮಿಕಾಳ ಜಾತಕ ರೀತ್ಯ ವಿಶೇಷವಾದ ಪೂಜೆ ಒಂದನ್ನು ಮಾಡಿಸಿದ್ದಾರೆ. ಈ ಪೂಜೆಯಲ್ಲಿ ರಶ್ಮಿಕಾಳ ಜೊತೆಗೆ ಅವರ ಇಡೀ ಕುಟುಂಬದ ಸದಸ್ಯರು ಕೂಡ ಭಾಗಿಯಾಗಿದ್ದಾರೆ. ಆಗ ನಡೆದಿರುವ ಪೂಜೆ ರಾಜಶ್ಯಾಮಲಾ ಶಾಮಲಾ ಭಗಳಮುಖಿ ಎಂದು ಹೇಳಲಾಗುತ್ತಿದ್ದು, ಈಗ ಆ ಪೂಜೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನು ಓದಿ : Ramya ಸ್ಯಾಂಡಲ್​ವುಡ್​ಗೆ ಕಮ್​ಬ್ಯಾಕ್​ ಮಾಡುವಂತೆ ರಚ್ಚು ರಿಕ್ವೆಸ್ಟ್​: ಡಿಂಪಲ್​ ಕ್ವೀನ್​ ಮನವಿಗೆ ಏನಂದ್ರು ನೋಡಿ ಮೋಹಕ ತಾರೆ!

ಈ ಪೂಜೆ ಮಾಡಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಂತೆ!

ಕಳೆದ ಕೆಲವು ತಿಂಗಳ ಹಿಂದೆ ವೇಣು ಸ್ವಾಮಿ ರಶ್ಮಿಕಾಳ ಕೈಯಲ್ಲಿ ವಿಶೇಷವಾದ ಪೂಜೆ ಮಾಡಿಸಿದರು. ಆದರೆ ಆ ಸಮಯದಲ್ಲಿ ಇದನ್ನು ಯಾರು ಹೆಚ್ಚಿಗೆ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಯಾವಾಗ 'ಪುಷ್ಪ' ಚಿತ್ರ ಭಾರಿ ಗೆಲುವು ದಾಖಲಿಸುವುದರ ಜೊತೆಗೆ ರಶ್ಮಿಕಾಗೆ ದೊಡ್ಡ ಹೆಸರನ್ನು ತಂದುಕೊಟ್ಟಿತು. ಸಾಲುಸಾಲು ಹಿಂದಿ ಚಿತ್ರಗಳಲ್ಲಿ ಅವಕಾಶ, ತಮಿಳು ಸೂಪರ್ ಸ್ಟಾರ್ ವಿಜಯ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕ ಬಳಿಕ ಚರ್ಚೆಯಾಗುತ್ತಿದೆ. ವೇಣು ಸ್ವಾಮಿ ಮಾಡಿಸಿದ ಪೂಜಾಫಲ ಈಗ ರಶ್ಮಿಕಾಗಳಿಗೆ ದೊಡ್ಡಮಟ್ಟದಲ್ಲಿ ಸಿಗುತ್ತಿದೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.
Published by:Vasudeva M
First published: