`ರಾಜಣ್ಣನ ಮಗ' ಚಿತ್ರದ ಮಾಸ್ ಟೀಸರ್ ರಿಲೀಸ್: ರಾಜಣ್ಣನ ಪಾತ್ರದಲ್ಲಿ ಚರಣ್​ರಾಜ್​!

news18
Updated:July 21, 2018, 2:25 PM IST
`ರಾಜಣ್ಣನ ಮಗ' ಚಿತ್ರದ ಮಾಸ್ ಟೀಸರ್ ರಿಲೀಸ್: ರಾಜಣ್ಣನ ಪಾತ್ರದಲ್ಲಿ ಚರಣ್​ರಾಜ್​!
news18
Updated: July 21, 2018, 2:25 PM IST
ಓಂ ಸಕಲೇಶಪುರ,  ನ್ಯೂಸ್ 18 ಕನ್ನಡ

ಇತ್ತೀಚೆಗೆ ನೀವು ಕೇಳೋ ಟೈಟಲ್‍ಗಳೇ ವಿವಾದದ ಮೂಲಕವೇ ಸುದ್ದಿ ಮಾಡುತ್ತವೆ. 'ದಚ್ಚು-ದೀಪು', 'ವಜ್ರಮುನಿ', ಈಗ ಇನ್ನೊಂದು ಸೇರ್ಪಡೆ 'ರಾಜಣ್ಣನ ಮಗ'. ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಸಿಕ್ಕಿದೆ, ಜೊತೆಗೆ ಟೀಸರ್ ಕೂಡ ಹೊರಬಂದಿದೆ. ಹಾಗಾದರೆ ಚಿತ್ರದಲ್ಲಿರೋ ರಾಜಣ್ಣ ಯಾರು..? ಇದೂ ಮತ್ತೊಂದು ವಿವಾದಕ್ಕೆ ಕಾರಣವಾಗುತ್ತಾ ಇಲ್ಲಿದೆ ಒಂದು ಕಲರ್​ಫುಲ್​ ವರದಿ.

ಕನ್ನಡ ಚಿತ್ರರಂಗದಲ್ಲಿ ರಾಜಣ್ಣ ಎಂದ ಕೂಡಲೆ ನೆನಪಾಗೋದು ಡಾ.ರಾಜ್. ರಾಜಣ್ಣನ ಮಕ್ಕಳು ಅಂದರೆ ಕಣ್ಮುಂದೆ ಬರೋದು ಅಣ್ಣಾವರ ಮಕ್ಕಳು. ಈಗ 'ರಾಜಣ್ಣನ ಮಗ' ಅನ್ನೋ ಹೊಸ ಸಿನಿಮಾ ಚಿತ್ರೀಕರಣ ಮುಗಿಸುತ್ತಿದೆ. ಕೋಲಾರ ಸೀನು ನಿರ್ದೇಶನದ ಈ ಚಿತ್ರದ ಟೀಸರ್ ನೋಡಿದರೆ ಸದ್ಯಕ್ಕಂತೂ ರಾಜಣ್ಣ ಪಾತ್ರಧಾರಿಯ ಒಂದು ಫ್ರೇಂ ಕೂಡ ಇಲ್ಲ. ಇಲ್ಲಿ ಸಂಪೂರ್ಣ ನಾಯಕನದ್ದೇ ಹವಾ.

ಟೀಸರ್ ನೋಡುತ್ತಿದ್ದರೆ 'ರಾಜಣ್ಣನ ಮ' ಸರಿಯಾಗೇ ಠಕ್ಕರ್ ಕೊಡೋ ಖಡಕ್ ಫೈಟರ್ ಅನಿಸುತ್ತಿದ್ದಾನೆ. ಆದರೆ ಇಲ್ಲಿರೋ ಅಸಲಿ ರಾಜಣ್ಣನ ಕಥೆ ಮಾತ್ರ ಬೇರೆಯದ್ದೆ ಇದೆ. ರಾಜಣ್ಣ ಚಿತ್ರರಂಗದ ಮೇರು ನಟ ರಾಜಣ್ಣನಂತೆಯೇ ಅತ್ಯಂತ ಸರಳ ಸದ್ಗುಣ ಸಂಪನ್ನ ಪಾತ್ರವಂತೆ.ಆದರೆ ಇಲ್ಲಿರೋ ರಾಜಣ್ಣನ ಪಾತ್ರಧಾರಿ ಚರಣ್‍ರಾಜ್. ಆದರೆ ನೆನಪಿಟ್ಟುಕೊಳ್ಳಿ ಸ್ಯಾಂಡಲ್‍ವುಡ್‍ನ ವರ ನಟ ನಟಸಾರ್ವಭೌಮ ರಾಜಣ್ಣನಿಗೂ ಈ ರಾಜಣ್ಣನಿಗೂ ಯಾವ ಸಂಬಂಧವೂ ಇಲ್ಲ. 'ರಾಜಣ್ಣನ ಮಗ' ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರ. ಐದು ಹಾಡುಗಳಿರೋ ಚಿತ್ರದ ಡಾನ್ಸ್ ಕೊರಿಯೋಗ್ರಫಿಯನ್ನು ಆನಂದ್ ನೋಡಿಕೊಂಡಿದ್ದಾರೆ.

'ಜಸ್ಟ್ ಮದ್ವೇಲಿ' ಅನ್ನೋ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟಿದ್ದ ನಾಯಕ ನಟ ಹರೀಶ್ ಆರಡಿಯ ಅಜಾನುಬಾಹು. ಮೊದಲ ಸಿನಿಮಾದಲ್ಲಿ ಲವರ್​ ಬಾಯ್ ಆಗಿ ಕಾಣಿಸಿಕೊಂಡಿದ್ದ ಹರೀಶ್ ಇಲ್ಲಿ  ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಟಿ ಅಕ್ಷತಾ ಕೂಡ ಒಳ್ಳೆಯ ಪಾತ್ರ ಸಿಕ್ಕ ಖುಷಿಯಲ್ಲಿದ್ದಾರೆ.
Loading...

ಕೋಲಾರ ಸೀನು ನಿರ್ದೇಶನದ ಚಿತ್ರವನ್ನು ನಾಯಕನಟ ಹರೀಶ್ ಸ್ವತಃ ನಿರ್ಮಾಣ ಮಾಡಿದ್ದು, 'ರಾಜಣ್ಣನ ಮಗ' ಚಿತ್ರ ಆಗಸ್ಟ್ ಕೊನೆಯಲ್ಲಿ ತೆರೆಗೆ ಬರಲಿದ್ದು, ಟೈಟಲ್‍ನ ಬಗ್ಗೆ ಯಾವುದೇ ವಿವಾದ ಇಲ್ಲ ಅನ್ನೋದನ್ನು ಚಿತ್ರತಂಡ ಖಚಿತಪಡಿಸಿದೆ.

 

 
First published:July 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ