ಸೂಪರ್ ಸ್ಟಾರ್ Rajanikanth ಅಭಿನಯದ Annaatthe ಚಿತ್ರದ ಟೀಸರ್ ಇಂದು ಬಿಡುಗಡೆ

Trailer Release: ಅನ್ನತ್ತೆ ಚಿತ್ರದಲ್ಲಿ ರಜನಿಕಾಂತ್ ಜೊತೆ ನಟಿಯರಾದ ನಯನತಾರಾ, ಮೀನಾ, ಖುಷ್ಬೂ, ಕೀತಿ ಸುರೇಶ್ ಸೇರಿದಂತೆ ಜಗಪತಿ ಬಾಬು ಮತ್ತು ಪ್ರಕಾಶ್ ರಾಜ್ ಮತ್ತು ಇತರ ನಟರು ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಇಮ್ಮಾನ್ ಸಂಗೀತ ನೀಡಿದ್ದು, ವೆಟ್ರಿ ಛಾಯಾಗ್ರಹಣ ಮಾಡಿದ್ದಾರೆ. 

ನಟ ರಜನಿಕಾಂತ್

ನಟ ರಜನಿಕಾಂತ್

  • Share this:
ದಕ್ಷಿಣ ಚಿತ್ರರಂಗದ(South Film Industry) ಸೂಪರ್ ಸ್ಟಾರ್ ನಟ ರಜನಿಕಾಂತ್(Rajanikanth) ಅವರನ್ನು ತಮಿಳು(Tamil) ಮತ್ತು ತೆಲುಗಿನಲ್ಲಿ(Telugu) ದೇವರಂತೆ ಪೂಜಿಸಲಾಗುತ್ತದೆ. ಅವರ ಯಾವುದೇ ಚಿತ್ರ ಬಂದರೆ, ರಾಜ್ಯದಲ್ಲಿ ಜಾತ್ರೆ ನಡೆಯುತ್ತದೆ. ಈ ದಿನಗಳಲ್ಲಿ ಅವರು ತಮ್ಮ ಮುಂಬರುವ ' ಅನ್ನತ್ತೆ'(Annaatthe) ಚಿತ್ರದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.  ಕೆಲ ಮೂಲಗಳ ಪ್ರಕಾರ, ಬಿಡುಗಡೆಗೂ ಮುನ್ನವೇ, ಸಿನಿಮಾದ ಹಕ್ಕುಗಳನ್ನು ಏಷ್ಯನ್ ಸಿನಿಮಾಸ್ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಮಾಡಲು ಖರೀದಿಸಿದೆ ಎಂಬ ಸುದ್ದಿ ಇದೆ.

ರಜನಿಕಾಂತ್ ಅವರ ' ಅನ್ನತ್ತೆ ' ಚಿತ್ರವನ್ನು ಶಿವ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವು ಒಂದು ಆಕ್ಷನ್  ಚಿತ್ರವಾಗಿದ್ದು,  ಈ ವರ್ಷ ದೀಪಾವಳಿಯ ಸಂದರ್ಭದಲ್ಲಿ ಇದನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅನ್ನತ್ತೆ ಹಕ್ಕುಗಳನ್ನು ಪ್ರಮುಖ ವಿತರಣಾ ಕಂಪನಿ ಏಷ್ಯನ್ ಸಿನಿಮಾಸ್ ಖರೀದಿಸಿದ್ದು, ಇದರ ತೆಲುಗು ಮತ್ತು ತಮಿಳು ಹಕ್ಕುಗಳನ್ನುಏಷ್ಯನ್ ಸಿನಿಮಾಸ್ ಪಾಲಾಗಿದೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ತೆಲುಗು ಪ್ರೇಕ್ಷಕರಿಗೆ ನಾರಾಯಣದಾಸ್ ನಾರಂಗ್ ಮತ್ತು ಸುರೇಶ್ ಬಾಬು ತರುತ್ತಿದ್ದಾರೆ. ಈ ಚಿತ್ರ ತೆಲುಗು ರಾಜ್ಯಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಅನ್ನತ್ತೆ ಚಿತ್ರದಲ್ಲಿ ರಜನಿಕಾಂತ್ ಜೊತೆ ನಟಿಯರಾದ ನಯನತಾರಾ, ಮೀನಾ, ಖುಷ್ಬೂ, ಕೀತಿ ಸುರೇಶ್ ಸೇರಿದಂತೆ ಜಗಪತಿ ಬಾಬು ಮತ್ತು ಪ್ರಕಾಶ್ ರಾಜ್ ಮತ್ತು ಇತರ ನಟರು ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಇಮ್ಮಾನ್ ಸಂಗೀತ ನೀಡಿದ್ದು, ವೆಟ್ರಿ ಛಾಯಾಗ್ರಹಣ ಮಾಡಿದ್ದಾರೆ.  ಇದರ ಹೊರತಾಗಿ, ರಜನಿಕಾಂತ್ ಅವರ 'ಅನ್ನತ್ತೆ' ಚಿತ್ರದ ಟೀಸರ್ ವಿಡಿಯೋ ಇಂದು ಬಿಡುಗಡೆಯಾಗಲಿದೆ. ಅದರ ವೀಡಿಯೊವನ್ನು ಸನ್ ಟಿವಿಯ ಅಧಿಕೃತ ಯೂಟ್ಯೂಬ್ ಚಾನೆಲ್ ನಿಂದ ಸಂಜೆ 6 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ;ಹೊಸ ಪೋಸ್ಟರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್: ಬದಲಾದ್ರು Kotigobba 3 ಸಿನಿಮಾದ ವಿತರಕರು

ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಅದರ ಜೊತೆಗೆ ರಜನಿಕಾಂತ್ ಅವರ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ನಡಿ ಕಲಾನಿಥಿ ಮಾರನ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಟೀಸರ್ ಬಿಡುಗಡೆ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡ ಹಂಚಿಕೊಂಡಿದೆ.

ಈ ಬಹುನಿರೀಕ್ಷಿತ ಸಿನಿಮಾ ಅಣ್ಣಾತ್ತೆಯ ಮತ್ತೊಂದು ಲಿರಿಕಲ್ ಹಾಡಿನ ವಿಡಿಯೋ ಇತ್ತೀಚೆಗಷ್ಟೇ ರಿಲೀಸ್​ ಆಗಿದ್ದು, ಬಿಡುಗಡೆಯಾಗಿರುವ ಸಾರಾ ಕಾಟ್ರೆ... ಲಿರಿಕಲ್ ಹಾಡಿನಲ್ಲಿ ರಜಿನಿಕಾಂತ್ ಮತ್ತು ನಯನತಾರಾ ಕಾಂಬಿನೇಷನ್ ಸಖತ್ತಾಗಿ ವರ್ಕೌಟ್ ಆಗಿದೆ. ಗಾಯಕರಾದ ಶ್ರೇಯಾ ಘೋಷಾಲ್ ಮತ್ತು ಸಿದ್ ಶ್ರೀರಾಮ್ ಹಾಡಿಗೆ ಜೀವದ ಜೊತೆ ಚೈತನ್ಯ ತುಂಬಿದ್ದಾರೆ.

ಅಕ್ಟೋಬರ್ 4ರಂದು ಅಣ್ಣಾತ್ತೆ ಚಿತ್ರದ ಟೈಟಲ್ ಟ್ರ್ಯಾಕ್ ಔಟ್ ಆಗಿತ್ತು. ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ರಜಿನಿಕಾಂತ್ ಜೋಡಿಯ ಹಾಡಾಗಿತ್ತು. ಎಸ್ಪಿಬಿ ಅವರ ಕಂಠದಿಂದ ಬಂದ ಮಾಸ್ ಹಾಡಿನಲ್ಲಿ ರಜಿನಿಕಾಂತ್ ವೈಟ್ ಆ್ಯಂಡ್ ವೈಟ್ ಪಂಚೆ-ಶರ್ಟ್ ಧರಿಸಿ, ಕನ್ನಡಕ ಧರಿಸಿ ಸಾಂಪ್ರದಾಯಿಕ ಲುಕ್​ನಲ್ಲಿ ಮಾಸ್ ಆಗಿ ಮಿಂಚಿದ್ದರು. ಈ ಹಾಡು ಇದುವರೆಗೂ 70 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
Published by:Sandhya M
First published: