ಲೀಕ್​ ಆಯ್ತು ನಿರ್ದೇಶಕ ರಾಜಮೌಳಿ ಕನಸಿನ ಪ್ರಾಜೆಕ್ಟ್​ RRR ಟೈಟಲ್​

RajaMouli: RRR ರಾಜಮೌಳಿ ಅವರ ಮತ್ತೊಂದು ಕನಸಿನ ಕೂಸು. ರಾಮ್‍ಚರಣ್, ಜೂನಿಯರ್ ಎನ್​ಟಿಆರ್​ ಮೊದಲ ಬಾರಿ ಒಟ್ಟಾಗಿ ಅಭಿನಯಿಸ್ತಿರೋ ಸಿನಿಮಾ. ಸೈರಾ, ಸಾಹೋ ಚಿತ್ರಗಳನ್ನೂ ಮೀರಿಸುವಂತಹ ಬಜೆಟ್‍ನಲ್ಲಿ ನಿರ್ಮಾಣವಾಗಲಿರೋ ಸಿನಿಮಾ. ಇಂತಹ ಈ ಸಿನಿಮಾ RRR ಅನ್ನೋ ವರ್ಕಿಂಗ್ ಟೈಟಲ್‍ನಲ್ಲಿ ಶೂಟಿಂಗ್ ಅಡ್ಡಾದಲ್ಲಿದೆ. ಆದರೆ ಆರ್​ಆರ್​ಆರ್​ ಅಂದ್ರೆ ಏನು ಅಂತ ಯಾರಿಗೂ ಗೊತ್ತಿರಲಿಲ್ಲ. 

Anitha E | news18-kannada
Updated:October 9, 2019, 8:45 AM IST
ಲೀಕ್​ ಆಯ್ತು ನಿರ್ದೇಶಕ ರಾಜಮೌಳಿ ಕನಸಿನ ಪ್ರಾಜೆಕ್ಟ್​ RRR ಟೈಟಲ್​
ರಾಜಮೌಳಿ ಜತೆ ರಾಮ್​ಚರಣ್​ ಹಾಗೂ ಜೂನಿಯರ್​ ಎನ್​ಟಿಆರ್​
  • Share this:
'ಆರ್​ಆರ್​ಆರ್​'... ಟಾಲಿವುಡ್‍ನ ಬಿಗ್ ಬಜೆಟ್ ಸಿನಿಮಾ. ರಾಮಚರಣ್, ಜೂನಿಯರ್ ಎನ್‍ಟಿಆರ್​ ಹಾಗೂ ರಾಜಮೌಳಿ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಚಿತ್ರ. ಈ ಸಿನಿಮಾದ ಟೈಟಲ್ ಅಧಿಕೃತವಾಗಿ ಪ್ರಕಟಿಸುವ ಮೊದಲೇ  ಲೀಕ್​ ಆಗಿದೆ.

'RRR' ರಾಜಮೌಳಿ ಅವರ ಮತ್ತೊಂದು ಕನಸಿನ ಕೂಸು. ರಾಮ್‍ಚರಣ್, ಜೂನಿಯರ್ ಎನ್​ಟಿಆರ್​ ಮೊದಲ ಬಾರಿ ಒಟ್ಟಾಗಿ ಅಭಿನಯಿಸ್ತಿರೋ ಸಿನಿಮಾ. 'ಸೈರಾ', 'ಸಾಹೋ' ಚಿತ್ರಗಳನ್ನೂ ಮೀರಿಸುವಂತಹ ಬಜೆಟ್‍ನಲ್ಲಿ ನಿರ್ಮಾಣವಾಗಲಿರೋ ಸಿನಿಮಾ. ಇಂತಹ ಈ ಸಿನಿಮಾ 'RRR' ಅನ್ನೋ ವರ್ಕಿಂಗ್ ಟೈಟಲ್‍ನಲ್ಲಿ ಶೂಟಿಂಗ್ ಅಡ್ಡಾದಲ್ಲಿದೆ. ಆದರೆ 'ಆರ್​ಆರ್​ಆರ್​' ಅಂದ್ರೆ ಏನು ಅಂತ ಯಾರಿಗೂ ಗೊತ್ತಿರಲಿಲ್ಲ.

RRR
'ಆರ್​ ಆರ್​ ಆರ್​' ಸಿನಿಮಾದ ಪೋಸ್ಟರ್​


'RRR' ಅಂದರೆ ಏನು ಅಂತ ಚಿತ್ರಪ್ರೇಮಿಗಳು ಸಾಕಷ್ಟು ಕುತೂಹಲದಿಂದ ಇದ್ದರು.  ಏನಿರಬಹುದು ಅಂತ ತಮ್ಮ ತಮ್ಮಲ್ಲೇ ಚರ್ಚೆಯನ್ನ ಕೂಡ ನಡೆಸುತ್ತಿದ್ದರು. ಆದರೆ ಚಿತ್ರತಂಡವಂತೂ ಈ ಬಗ್ಗೆ ಅಧಿಕೃತವಾಗಿ ಯಾವುದೇ ಸುಳಿವನ್ನ ಬಿಟ್ಟುಕೊಟ್ಟಿರಲಿಲ್ಲ. ಹೀಗಿರುವಾಗಲೇ ಈ ಸಿನಿಮಾದ ಟೈಟಲ್​ ಲೀಕ್​ ಆಗಿದೆ.

ಆರ್​ ಆರ್​ ಆರ್​ ಅಂದ್ರೆ `ರಾಮ ರುದ್ರ ರುಶಿತಂ' ಅಂತೇಳಿ ಟಾಲಿವುಡ್‍ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಇದು ನಿಜಾನಾ ಅಥವಾ ಸುಳ್ಳಾ ಅನ್ನೋದರ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಆದರೂ ಟೈಟಲ್ ಏನೋ ಒಂಥರಾ ವಿಶೇಷವಾಗಿರುವುದರಿಂದ, ಇದು ಇದ್ದರೂ ಇರಬಹುದು ಅಂತ ಚಿತ್ರಪ್ರೇಮಿಗಳು ಮಾತಾಡಿಕೊಳ್ತಿದ್ದಾರೆ.

Ajay Devagan and AliaBhat in RRR Movie
RRR ಸಿನಿಮಾದಲ್ಲಿ ಬಾಲಿವುಡ್​ ನಟ ಅಜಯ್​ ದೇವಗನ್​ ಹಾಗೂ ಅಲಿಯಾ ಭಟ್​


ಆರ್​ಆರ್​ಆರ್​ ಸಿನಿಮಾವನ್ನ ಸಹ ವೈಭವಯುತವಾಗಿ ಚಿತ್ರಿಸಲು ಹೊರಟಿದ್ದಾರೆ ರಾಜಮೌಳಿ. ಅದ್ರಂತೆ ಚಿತ್ರದ ಪ್ರತಿ ದೃಶ್ಯದಲ್ಲೂ ಅದ್ಧೂರಿತನವನ್ನ ಮೆರೆಸಲಿದ್ದಾರೆ. ಹಾಗೆ ರಾಜಮೌಳಿ ಸಿನಿಮಾದಲ್ಲಿ  ಆ್ಯಕ್ಷನ್ ಸೀಕ್ವೆನ್ಸ್​ಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತೆ. ಅದು ಈ ಸಿನಿಮಾದಲ್ಲೂ ಮುಂದುವರೆದಿದ್ದು, ಒಂದೇ ಒಂದು ಫೈಟ್‍ಗೆ ಸುಮಾರು 45 ಕೋಟಿ ಖರ್ಚು ಮಾಡ್ತಿದ್ದಾರಂತೆ.ಅಂದಹಾಗೆ ಈ ಸಿನಿಮಾ ಇಬ್ಬರು ಕ್ರಾಂತಿಕಾರಿಗಳ ಜೀವನವನ್ನ ಆಧರಿಸಿದ್ದು, ದೃಶ್ಯರೂಪ ಪಡೆದುಕೊಳ್ತಿದೆ. ರಾಮ್‍ಚರಣ್ ಈ ಚಿತ್ರದಲ್ಲಿ ಸೀತರಾಮರಾಜು ಪಾತ್ರದಲ್ಲಿ ಕಾಣಿಸಿಕೊಳ್ತಿದ್ರೆ, ಕೊಮರಂ ಭೀಮನ ಪಾತ್ರದಲ್ಲಿ ಎನ್‍ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ತಮ್ಮದೇ ಆದ ವಿಶಿಷ್ಟ ಶೈಲಿಯ ಮೇಕಿಂಗ್‍ನಿಂದಲೇ, ಜಗತ್ತಿನಾದ್ಯಂತ ಅಭಿಮಾನಿ ಬಳಗ ಹೊಂದಿರೋ ರಾಜಮೌಳಿ ಈ ಸಿನಿಮಾವನ್ನ ಹೇಗೆ ಕಟ್ಟಿಕೊಡಲಿದ್ದಾರೆ ಎಂಬ ನಿರೀಕ್ಷೆ ಚಿತ್ರರಸಿಕರಲ್ಲಿ ಮನೆ ಮಾಡಿದೆ.

 

Rashmika Mandanna: ರಾಯಲ್​ ಲುಕ್​ನಲ್ಲಿ ಮಿಂಚಿದ ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ..!First published:October 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading