RRR Motion Poster: ಯುಗಾದಿ ಉಡುಗೊರೆಯಾಗಿ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಯ್ತು ಮೋಷನ್​ ಪೋಸ್ಟರ್​..!

ಸಿನಿಮಾದ ಹೆಸರು 'ಆರ್​ಆರ್​ಆರ್'​ ಎಂಬುದರ ಅರ್ಥ ಹುಡುಕುತ್ತಿದ್ದ ಪ್ರೇಕ್ಷಕರಿಗೆ ಈಗ ಉತ್ತರ ಸಿಕ್ಕಿದೆ. 'ರೌದ್ರಂ ರಣಂ ರುಧಿರಂ' ಎಂದು ಪ್ರತಿ ಅಕ್ಷರದ ಅರ್ಥವನ್ನೂ ಈ ಸಿನಿಮಾ ಟೈಟಲ್​ ಲೊಗೊದಲ್ಲಿ ರಿವೀಲ್ ಮಾಡಲಾಗಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಚಿತ್ರೀಕರಣ ನಡೆಯುತ್ತಿಲ್ಲ. ಹಾಗೆಯೇ ವಿಎಫ್​ಎಕ್ಸ್​ ಕೆಲಸಗಳು ಬಾಕಿ ಉಳಿದಿವೆ. ಹೀಗೆ ಮುಂದುವರೆದರೆ ಜನವರಿ 8 ರಂದು ಚಿತ್ರ ರಿಲೀಸ್ ಆಗುವುದು ಡೌಟ್. ಬದಲಾಗಿ ಮುಂದಿನ ವರ್ಷ ಸಂಕ್ರಾಂತಿಗೆ ರೌದ್ರ ರಣ ರುಧಿರ ಬಿಡುಗಡೆಯಾಗಬಹುದು ಎಂದು ಆರ್​ಆರ್​ಆರ್ ನಿರ್ಮಾಪಕರು ತಿಳಿಸಿದ್ದಾರೆ. ಅಲ್ಲಿಗೆ ಬಹುನಿರೀಕ್ಷಿತ ಸಿನಿಮಾವನ್ನು ಮತ್ತೆ ಮುಂದೂಡುವ ಸಾಧ್ಯತೆಯ ಸುಳಿವು ಸಿಕ್ಕಂತಾಗಿದೆ.

  • Share this:
    ರಾಜಮೌಳಿ ನಿರ್ದೇಶನದ  'ಆರ್​ಆರ್​ಆರ್' ಸಿನಿಮಾದ ಟೈಟಲ್​ ಲೊಗೊ ಹಾಗೂ ಮೋಷನ್​ ಪೋಸ್ಟರ್​ ಯುಗಾದಿ ಹಬ್ಬದ ಕೊಡುಗೆ ರೂಪದಲ್ಲಿ ಸಿಕ್ಕಿದೆ. ರಾಮ್​ಚರಣ್​ ಹಾಗೂ ಜೂನಿಯರ್ ಎನ್​ಟಿಆರ್​ ಅವರ ಲುಕ್​ ಸಹ ಔಟಾಗಿದೆ.

    ಎಲ್ಲದಕ್ಕಿಂತ ಹೆಚ್ಚಾಗಿ ಈ ಸಿನಿಮಾದ ಹೆಸರು 'ಆರ್​ಆರ್​ಆರ್'​ ಎಂಬುದರ ಅರ್ಥ ಹುಡುಕುತ್ತಿದ್ದ ಪ್ರೇಕ್ಷಕರಿಗೆ ಈಗ ಉತ್ತರ ಸಿಕ್ಕಿದೆ. 'ರೌದ್ರಂ ರಣಂ ರುಧಿರಂ' ಎಂದು ಪ್ರತಿ ಅಕ್ಷರದ ಅರ್ಥವನ್ನೂ ಈ ಸಿನಿಮಾ ಟೈಟಲ್​ ಲೊಗೊದಲ್ಲಿ ರಿವೀಲ್ ಮಾಡಲಾಗಿದೆ.

    'ಬಾಹುಬಲಿ' ನಂತರ ಎಸ್​ ಎಸ್​ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದ್ದು, ಇದರ ಬಗ್ಗೆ ಸಿನಿ ಪ್ರಿಯರಲ್ಲಿ ಸಾಕಷ್ಟು ಕುರೂಹಲವಿದೆ. ಅದರಲ್ಲೂ ರಾಮ್​ಚರಣ್​ ಹಾಗೂ ಜೂನಿಯರ್​ ಎನ್​ಟಿಆರ್​ ತೆರೆ ಹಂಚಿಕೊಂಡಿರುವುದು ಪ್ರೇಕ್ಷಕರಲ್ಲಿನ ಕೂತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

    ದೊಡ್ಡ ಬಜೆಟ್​ ಹಾಗೂ ದೊಡ್ಡ ಸ್ಟಾರ್ ಕಾಸ್ಟ್​ ಇರುವ ಈ ಸಿನಿಮಾ ಮುಂದಿನ ವರ್ಷ ಜನವರಿ 8ಕ್ಕೆ ತೆರೆಕಾಣಲಿದೆ. ಇದರಲ್ಲಿ ಬಾಲಿವುಡ್​ ಸಿನಿಮಾ ನಟರೂ ಬಣ್ಣ ಹಚ್ಚಿದ್ದಾರೆ. ಅದರಲ್ಲೂ ಅಜಯ್​ ದೇವಗನ್​ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಮೋಷನ್​ ಪೋಸ್ಟರ್ ಅನ್ನು ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಅಲಿಯಾ ಭಟ್​ ಹಾಗೂ ಒಲಿವಿಯಾ ಮೊರಿಸ್​ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    Pranitha Subash: ಸೋಶಿಯಲ್ ಡಿಸ್ಟೆನ್ಸಿಂಗ್​ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ಕನ್ನಡತಿ ಪ್ರಣೀತಾ..!

    First published: